Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಕನ್ಯಾ ರಾಶಿಯಲ್ಲಿ ಬುಧದ ಹಿಮ್ಮುಖ ಚಲನೆ ಈ 5 ರಾಶಿಗಳಿಗೆ ಅದೃಷ್ಟಕರ
ಜ್ಯೋತಿಷ್ಯದಲ್ಲಿ ಯಾವುದೇ ಗ್ರಹದ ಹಿಮ್ಮೆಟ್ಟುವಿಕೆಯನ್ನುಶುಭ ಎಂದು ಪರಿಗಣಿಸುವುದಿಲ್ಲ. ಗ್ರಹಗಳ ಹಿಮ್ಮುಖ ಚಲನೆ ನಕರಾತ್ಮಕ ಪ್ರಭಾವ ಬೀರುವುದು, ಆದರೆ ಗ್ರಹ ಹಿಮ್ಮುಖ ಚಲನೆಯಲ್ಲಿದ್ದಾಗ ರಾಶಿಯಲ್ಲಿ ಉಚ್ಛ ಸ್ಥಾನದಲ್ಲಿದ್ದರೆ ಅನುಕೂಲಕರ ಫಲಿತಾಂಶವನ್ನೇ ನೀಡುತ್ತದೆ. ಇದೀಗ ಸೆಪ್ಟೆಂಬರ್ 10ರಿಂದ ಬುಧ ಗ್ರಹವು ಕನ್ಯಾ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಅಕ್ಟೋಬರ್ 2ಕ್ಕೆ ಮತ್ತೆ ನೇರವಾಗಿ ಚಲಿಸಲಿದೆ.

ಕನ್ಯಾ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ ಕೆಲ ರಾಶಿಗಳ ಮೇಲೆ ಅನುಕೂಲಕರ ಫಲಿತಾಂಶ ನೀಡಿದೆ, ಈ ಅವಧಿಯಲ್ಲಿ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ ಬನ್ನಿ:

ಮಿಥುನ ರಾಶಿ:
ಬುಧನು ನಿಮ್ಮ ನಾಲ್ಕನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾನೆ. ಆದ್ದರಿಂದ ಮಿಥುನ ರಾಶಿಯವರಿಗೆ ಬುಧದ ಪ್ರಭಾವವು ತುಂಬಾ ಶುಭವಾಗಿರುತ್ತದೆ. ಬುಧ ಗ್ರಹದ ಅನುಗ್ರಹದಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಲಿದೆ. ಕೌಟುಂಬಿಕ ಜೀವನದಲ್ಲಿಯೂ ಖುಷಿ, ನೆಮ್ಮದಿ ಎಲ್ಲವೂ ಇರುತ್ತದೆ. ಮನೆಗೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಮನೆಯವರ ಅಭಿಪ್ರಾಯ ಕೂಡ ಕೇಳಿ. ಈ ಅವಧಿಯಲ್ಲಿ ಕುಟುಂಬದ ವಿಷಯದಲ್ಲಿ ಹೆಚ್ಚಿನ ಕಾಳಜಿವಹಿಸಬೇಕಾಗಿದೆ.
ಮನೆಯನ್ನು ನಿರ್ಮಿಸಲು ಅಥವಾ ನವೀಕರಿಸಲು ಯೋಚಿಸುತ್ತದ್ದರೆ ಬುಧನುಫಲದಿಂದಾಗಿ ಯಶಸ್ಸು ಸಿಗಲಿದೆ. ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ.ಕೆಲಸದಲ್ಲಿ ಸವಾಲುಗಳಿದ್ದರೂ ಮಂಗಳನ ಶುಭ ಪ್ರಭಾವದಿಮದಾಗಿ ನಿಮ್ಮ ಎಲ್ಲಾ ಸಮಸ್ಯೆಗಳು ದೂರಾಗುವುದು.

ಕನ್ಯಾ ರಾಶಿ:
ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಕನ್ಯಾ ರಾಶಿಯವರಲ್ಲಿ ಬುಧನು ಮೊದಲನೇ ಮನೆಯಲ್ಲಿ ಹಿಮ್ಮೆಟ್ಟಲಿದ್ದು ತುಂಬಾ ಅನುಕೂಲಕರ ಫಲಿತಾಂಶ ಪಡೆಯುವಿರಿ. ಈ ವಕ್ರೀಯ ಚಲನೆ ನಿಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಅನೇಕ ಅವಕಾಶಗಳನ್ನು ನೀಡುತ್ತದೆ. ವೈಯಕ್ತಿಕ ಜೀವನದಲ್ಲಿ ಸುಧಾರಣೆಯನ್ನು ಕಾಣುವಿರಿ. ಆದರೆ ನಿಮ್ಮ ಶತ್ರುಗಳು ಈ ಸಮಯದಲ್ಲಿ ನಿಮಗೆ ಹಾನಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ನೀವು ಅವರ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ವೈಯಕ್ತಿಕ ಜೀವನದಲ್ಲಿ ಬದಲಾಗುತ್ತಿರುವ ಸಂದರ್ಭಗಳತ್ತ ನೀವು ಗಮನ ಹರಿಸಬೇಕು. ವೈವಾಹಿಕ ಜೀವನದಲ್ಲಿ ಮೂರನೇಯ ವ್ಯಕ್ತಿಯ ಮಾತನ್ನು ಕೇಳುವುದನ್ನು ಬಿಡಬೇಕು. ನಿಮ್ಮಲ್ಲಿ ಏನಾದರೂ ಸಮಸ್ಯೆಯಿದ್ದರೆ ನೀವಿಬ್ಬರೇ ಕೂತು ಪರಿಹರಿಸಿಕೊಳ್ಳಿ. ಜಾಹೀರಾತು ಅಥವಾ ಮಾಧ್ಯಮ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರಿಗ ಈ, ಅವಧಿಯು ಹೆಚ್ಚು ಅನುಕೂಲಕರವಾಗಿರುತ್ತದೆ. ಆದರೆ ನೀವು ಈಗ ವೃತ್ತಿಗೆ ಸಂಬಂಧಿಸಿದ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು.

ವೃಶ್ಚಿಕ ರಾಶಿ:
ಬುಧ ಕನ್ಯಾ ರಾಶಿಯಲ್ಲಿ ಹಿಮ್ಮೆಟ್ಟುವಾಗ ವೃಶ್ಚಿಕ ರಾಶಿಯ ಹನ್ನೊಂದನೇ ಮನೆಯಲ್ಲಿ ಹಿಮ್ಮುಖವಾಗುತ್ತಿದೆ. ಆದ್ದರಿಂದ ಬುಧ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣವಿರುತ್ತದೆ. ವೃತ್ತಿ ಜೀವನದಲ್ಲಿಯೂ ಅಷ್ಟೆ ಬಾಕಿ ಉಳಿ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ . ವ್ಯಾಪಾರಸ್ಥರು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಬುಧವು ನಿಮ್ಮನ್ನು ಅನೇಕ ಹೊಸ ಜನರನ್ನು ಭೇಟಿಯಾಗುವಂತೆ ಮಾಡುತ್ತದೆ ಮತ್ತು ಇದರೊಂದಿಗೆ ನೀವು ಹೊಸ ಸ್ನೇಹಿತರನ್ನು ಮಾಡಿಕಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಈ ಸಮಯದಲ್ಲಿ, ಯಾವುದೇ ವ್ಯಕ್ತಿಯೊಂದಿಗೆ ನಿಮ್ಮ ಸ್ನೇಹವನ್ನು ಪ್ರಾರಂಭಿಸುವಾಗ ತಪ್ಪಾದ ಸಂಗ ಬೆಳೆಸದಂತೆಯೂ ಎಚ್ಚರವಹಿಸಬೇಕು.

ಧನು ರಾಶಿ:
ಧನು ರಾಶಿಯವರ ಹತ್ತನೇ ಮನೆಯಲ್ಲಿ ಬುಧ ಹಿಮ್ಮೆಟ್ಟಿದೆ. ಈ ಸಮಯದಲ್ಲಿ ನೀವು ಕೆಲಸದ ಸ್ಥಳದಲ್ಲಿ ಪ್ರಯೋಜನಗಳನ್ನು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಈ ಸಮಯವು ಮಂಗಳಕರವಾಗಿರುತ್ತದೆ. ಆದರೆ ನಿಮ್ಮ ಯಾವುದೇ ಹೊಸ ಯೋಜನೆ ಯಶಸ್ವಿಯಾದರೆ ಅದಕ್ಕಾಗಿ ಅಹಂಕಾರ ಪಡಬೇಡಿ. ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರಿಗೂ ಈ ಸಮಯ ಉತ್ತಮವಾಗಿದೆ. ಕೌಟುಂಬಿಕ ಜೀವನದ ವಿಷಯದಲ್ಲಿ, ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದೆ ಈ ಅವಧಿಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಯಲಿದೆ.

ಮಕರ ರಾಶಿ: ವೃತ್ತಿಪರ ಜೀವನದಲ್ಲಿ ನೀವು ತುಂಬಾ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ
ಮಕರ ರಾಶಿಯವರಲ್ಲಿ ಬುಧ ನಿಮ್ಮ 9 ನೇ ಮನೆಯಲ್ಲಿ ಹಿಮ್ಮೆಟ್ಟುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಬುಧದ ಈ ಸ್ಥಾನವು ನಿಮಗೆ ಅನುಕೂಲಕರ ಫಲಿತಾಂಶಗಳ ನೀಡಲಿದೆ. ಏನಾದರೂ ಕಾನೂನು ಸಂಬಂಧಿತ ಕೇಸ್ ನಡೆಯುತ್ತಿದ್ದರೆ ತೀರ್ಪು ನಿಮ್ಮ ಪರ ಬರಲಿದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಪ್ರಯಾಣ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬಹುದು. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ವೃತ್ತಿಜೀವನದ ಬಗ್ಗೆ ನೋಡುವುದಾದರೆ , ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಫಲಿತಾಂಶ ಸಿಗುತ್ತದೆ. ಈ ಸಮಯದಲ್ಲಿ, ನಿಮ್ಮ ಇಚ್ಛೆಯಂತೆ ಬಡ್ತಿ ಅಥವಾ ವರ್ಗಾವಣೆ ಪಡೆಯುವ ಸಾಧ್ಯತೆಯಿದೆ. ರಿಯಲ್ ಎಸ್ಟೇಟ್‌ನಲ್ಲಿರುವವರು ಈ ಅವಧಿಯಲ್ಲಿ ಉತ್ತಮ ಹಣವನ್ನು ಗಳಿಸುವ ಸಾಧ್ಯತೆ ಇದೆ.



Click it and Unblock the Notifications











