Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Mangal Gochar 2022: ಆ. 10ಕ್ಕೆ ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ದ್ವಾದಶ ಮೇಲೆ ಬೀರಲಿರುವ ಪ್ರಭಾವವೇನು?
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹ ಸಂಚಾರಕ್ಕೂ ತುಂಬಾನೇ ಮಹತ್ವವಿದೆ. ಏಕೆಂದರೆ ಪ್ರತಿಯೊಂದು ಗ್ರಹ ಸಂಚಾರವೂ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಈ ಆಗಸ್ಟ್ 10ಕ್ಕೆ ಮಂಗಳ ಗ್ರಹವು ವೃಷಭ ರಾಶಿಗೆ ಪ್ರವೇಶಿಸಲಿದೆ. ಮಂಗಳನ ಸ್ಥಾನ ನಮ್ಮ ರಾಶಿಯಲ್ಲಿ ಚೆನ್ನಾಗಿದ್ದರೆ ಎಲ್ಲವೂ ಮಂಗಳಕರವಾಗಿರುತ್ತದೆ, ಅದೇ ದುರ್ಬಲ ಸ್ಥಾನದಲ್ಲಿದ್ದರೆ ಆ ಅವಧಿ ಅನುಕೂಲಕರವಾಗಿರಲ್ಲ.

ಆಗಸ್ಟ್ 10ಕ್ಕೆ ಮಂಗಳ ಗ್ರಹ ವೃಷಭ ರಾಶಿಗೆ ಪ್ರವೇಶಿಸಲಿದೆ. ಈ ಮಂಗಳ ಗೋಚಾರ ಫಲ ದ್ವಾದಶ ರಾಶಿಗಳ ಮೇಲೆ ಬೀರಿರುವ ಪ್ರಭಾವವೇನು ಎಂದು ನೋಡೋಣ:

ಮೇಷ ರಾಶಿ: ಆರ್ಥಿಕ ವಿಷಯದಲ್ಲಿ ಜಾಗ್ರತೆವಹಿಸಿ
ಮೇಷ ರಾಶಿಯವರ ಲಗ್ನ ಹಾಗೂ 8ನೇ ಮನೆಯ ಅಧಿಪತಿ ಮಂಗಳ. ಈ ಸಂಕ್ರಮಣ ಸಮಯದಲ್ಲಿ ನಿಮ್ಮ 2ನೇ ಮನೆಯಲ್ಲಿ ಇರಲಿದೆ. ಈ ಸಂಕ್ರಮಣ ನಿಮ್ಮ ಸಂವಹನದ ಮೇಲೆ ನೇರವಾಗಿ ಪ್ರಭಾವ ಬೀರಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಏರಳಿತ ಇರಬಹುದು, ಆದ್ದರಿಂದ ಇದರ ಬಗ್ಗೆ ಜಾಗ್ರತೆ ವಹಿಸಿ. ವಿವಾಹಿತರಿಗೆ ಅತ್ತೆ-ಮಾವನಿಂದ ಸಹಾಯ ದೊರೆಯಲಿದೆ.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸವನ್ನು 7 ಬಾರಿ ಪಠಿಸಿ.

ವೃಷಭ ರಾಶಿ: ಖರ್ಚುಗಳ ಬಗ್ಗೆ ಜಾಗ್ರತೆ
ವೃಷಭ ರಾಶಿಯ 12ನೇ ಮತ್ತು 7ನೇ ಮನೆಯ ಅಧಿಪತಿಯಾಗಿರುವ ಮಂಗಳ ಗ್ರಹ ಈ ಸಂಕ್ರಮಣ ಸಮಯದಲ್ಲಿ ಮೊದಲ ಮನೆಯಲ್ಲಿ ಇರಲಿದೆ. ಆಸ್ತಿಯಿಂದ ಲಾಭ ಗಳಿಸುವಿರಿ. ಆದರೆ ಈ ಸಮಯದಲ್ಲಿ ಖರ್ಚು ಕೂಡ ಹೆಚ್ಚಲಿದೆ, ಆದ್ದರಿಂದ ಈ ಬಗ್ಗೆ ಕೂಡ ಜಾಗ್ರತೆವಹಿಸಬೇಕಾಗಿದೆ. ವಿವಾಹಕ್ಕೆ ಯೋಗ್ಯ ಜೋಡಿಯನ್ನು ಹುಡುಕುತ್ತಿದ್ದರೆ ಈ ಸಮಯದಲ್ಲಿ ಸಿಗಲಿದೆ. ಈ ಸಮಯದಲ್ಲಿ ಪ್ರಯಾಣ ಮಾಡುವಾಗ ಜಾಗ್ರತೆವಹಿಸಬೇಕಾಗಿದೆ.
ಪರಿಹಾರ: ದುರ್ಗೆ ಮಾತೆಗೆ ಕೆಂಪು ಬಣ್ಣದ ಹೂಗಳನ್ನು ಅರ್ಪಿಸಿ.

ಮಿಥುನ ರಾಶಿ: ಈ ಅವಧಿಯಲ್ಲಿ ಹುಷಾರಾಗಿರಿ
ಮಿಥುನ ರಾಶಿಯ 6ನೇ ಮತ್ತು 11ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 12ನೇ ಮನೆಯಲ್ಲಿ ಇರಲಿದೆ. ಇದು ವಿದೇಶ ಪ್ರಯಾಣ, ವಿದೇಶ ವ್ಯವಹಾರ, ಆಸ್ಪತ್ರೆ, ಒಂಟಿತನದ ಮನೆಯೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನಿಮಗೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಸಂಬಂಧದಲ್ಲಿ ಅನಗ್ಯತ ಈಗೋ ಪ್ರಾಬ್ಲಂ ಬರಬಹುದು. ಈ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚಾಗದಂತೆ ತಡೆಯಲು ನೀವು ಹೆಚ್ಚು ಶ್ರಮವಹಿಸಬೇಕು.
ಪರಿಹಾರ : ಪ್ರತಿದಿನ ಸುಬ್ರಹ್ಮಣ್ಯನನ್ನು ಪೂಜಿಸಿ.

ಕರ್ಕ ರಾಶಿ: ಈ ಅವಧಿ ಒಳ್ಳೆಯದಿದೆ
ಕರ್ಕ ರಾಶಿಯ5ನೇ ಮತ್ತು 10ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 11ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ಬಯಕೆಗಳು ನೆರವೇರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರ್ಥಿಕ ಜೀವನದಲ್ಲಿ ಪ್ರಗತಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಗುಣವಾಗಲಿದೆ. ಅವಧಿಯಲ್ಲಿ ಕರ್ಕ ರಾಶಿಯವರ ಕನಸು ನನಸಾಗಲಿದೆ.
ಪರಿಹಾರ: ಹನುಮಂತನನ್ನು ಪೂಜಿಸಿ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ಸಂಕ್ರಮಣ ಅನುಕೂಲಕರವಾಗಿದೆ
ಸಿಂಹ ರಾಶಿಯ 4ನೇ ಮತ್ತು9ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 10ನೇ ಮನೆಯಲ್ಲಿ ಇರಲಿದೆ. ಸಿಂಹ ರಾಶಿಯವರು ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುವಿರಿ. ನಿಮ್ಮ ಆರೋಗ್ಯ ಹಾಗೂ ವ್ಯಕ್ತಿತ್ವದ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆಗೆ ತೊಂದರೆಯಾಗಲಿದೆ. ಒಟ್ಟಿನಲ್ಲಿ ನೋಡುವುದಾದರೆ ಸಿಂಹ ರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಬಲಗೈಗೆ ತಾಮ್ರದ ಖಡ್ಗ ಧರಿಸಿ.

ಕನ್ಯಾ ರಾಶಿ: ಅನಗ್ಯತ ಖರ್ಚುಗಳು ಹೆಚ್ಚಾಗಬಹುದು
ಕನ್ಯಾರಾಶಿಯ 4ನೇ ಮತ್ತು 8ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 9ನೇ ಮನೆಯಲ್ಲಿ ಇರಲಿದೆ. ಈ ಸಂಕ್ರಮಣ ನಿಮಗೆ, ನಿಮ್ಮ ತಂದೆಯವರಿಗೆ ಒಳ್ಳೆಯದಾಗಲಿದೆ. ಈ ಸಮಯದಲ್ಲಿ ಅನಗ್ಯತ ಖರ್ಚುಗಳು ಹೆಚ್ಚಾಗಬಹುದು. ನಿಮ್ಮ ಒಡಹುಟ್ಟಿದವರ ಬಂಬಲ ಸಿಗಲಿದೆ. ಆದರೆ ನಿಮ್ಮ ತಾಯಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆವಹಿಸಬೇಕು.
ಪರಿಹಾರ: ದೇವಾಲಯಕ್ಕೆ ಬೆಲ್ಲ ಮತ್ತು ನೆಲಗಡಲೆ ದಾನ ಮಾಡಿ.

ತುಲಾ ರಾಶಿ: ತುಲಾ ರಾಶಿಯವರಿಗೆ ಚಾಲೆಂಜಿಂಗ್ ಟೈಮ್
ತುಲಾ ರಾಶಿಯ 3ನೇ ಮತ್ತು 7ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 8ನೇ ಮನೆಯಲ್ಲಿ ಇರಲಿದೆ. ಈ ಸಂಕ್ರಮಣ ಸಮಯ ತುಲಾ ರಾಶಿಯವರಿಗೆ ಚಾಲೆಂಜಿಂಗ್ ಆಗಿದೆ. ಕೆಲವೊಂದು ಘಟನೆಗಳು ಮಾನಸಿಕ ಒತ್ತಡ ಹೆಚ್ಚಿಸಬಹುದು, ಆರ್ಥಿಕ ವಿಷಯದಲ್ಲಿ ಏರಳಿತ ಉಂಟಾಗಬಹುದು. ಪ್ರಯಾಣ ಮಾಡುವಾಗ ಎಚ್ಚರವಹಿಸಿ. ಕೋಪದಲ್ಲಿ ನೀವು ಪ್ರಯೋಗಿಸುವ ಮಾತಿನ ಮೇಲೂ ಹಿಡಿತ ಇರಬೇಕು.
ಪರಿಹಾರ: ಬಡವರಿಗೆ ಬೆಲ್ಲ ಮತ್ತು ನೆಲಗಡಲೆ ದಾನ ಮಾಡಿ.

ವೃಶ್ಚಿಕ ರಾಶಿ: ಮಂಗಳ ನಿಮ್ಮ ಸಂಬಂಧದಲ್ಲಿ ಪ್ರಭಾವ ಬೀರಲಿದೆ
ವೃಶ್ಚಿಕ ರಾಶಿಯ 2ನೇ ಮತ್ತು 6ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 7ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ಈಗೋ ಸಮಸ್ಯೆ ಹೆಚ್ಚಾಗಬಹುದು, ಇಬ್ಬರು ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳುವುದು ಒಳ್ಳೆಯದು, ಆದರೆ ವೃತ್ತಿ ಜೀವನಕ್ಕೆ ಅನುಕೂಲಕರವಾಗಿದೆ, ಈ ಸಮಯದಲ್ಲಿ ಆರೋಗ್ಯ ಚೆನ್ನಾಗಿರುತ್ತದೆ.
ಪರಿಹಾರ: ಲಕ್ಷ್ಮಿ ದೇವಿಗೆ ಕೆಂಪು ಹೂಗಳನ್ನು ಅರ್ಪಿಸಿ.

ಧನು ರಾಶಿ: ಆರೋಗ್ಯದ ದೃಷ್ಟಿಯಿಂದ ಈ ಸಂಕ್ರಮಣ ಉತ್ತಮವಾಗಿದೆ
ಧನು ರಾಶಿಯ 1ನೇ ಮತ್ತು 5ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 6ನೇ ಮನೆಯಲ್ಲಿ ಇರಲಿದೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಶತ್ರುಗಳಿಗೆ ಈ ಅವಧಿಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೂ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಪ್ರತಿದಿನ ಸ್ವಲ್ಪ ಬೆಲ್ಲ ತಿನ್ನಿ.

ಮಕರ ರಾಶಿ: ಈ ಸಂಕ್ರಮಣ ಅನುಕೂಲಕರವಾಗಿದೆ
ಮಕರ ರಾಶಿಯ 12ನೇ ಮತ್ತು 4ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 5ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ಗುರಿ ಸಾಧಿಸಲು ಸಾಧ್ಯವಾಗುವುದು, ಈ ಅವಧಿಯಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಕೆಲಸದಲ್ಲಿ ಪ್ರಗತಿ, ಲಾಭ ಕಾಣುವಿರಿ, ನೀವು ಬಯಸಿದಷ್ಟು ಆದಾಯ ಗಳಿಸಲು ಸಾಧ್ಯವಾಗಬಹುದು, ಆದರೆ ಈ ಅವಧಿಯಲ್ಲಿ ಮಕ್ಕಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.
ಪರಿಹಾರ: ಅಗ್ಯತವಿರುವ ಮಕ್ಕಳಿಗೆ ಕೆಂಪು ಉಡುಪುಗಳನ್ನು ದಾನ ಮಾಡಿ.

ಕುಂಭ ರಾಶಿ: ಈ ಅವಧಿಯಲ್ಲಿ ತಾಳ್ಮೆ ಮುಖ್ಯ
ಕುಂಭ ರಾಶಿಯ 11ನೇ ಮತ್ತು 3ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 4ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ಸಂಗಾತಿ ಬಗ್ಗೆ ಸ್ವಲ್ಪ ಪೊಸೆಸಿವ್ ಆಗಬಹುದು. ಕೆಲಸದ ವಿಷಯದಲ್ಲಿ ತಜ್ಞರು ನೀಡಿರುವ ಅಭಿಪ್ರಾಯವನ್ನು ಸ್ವೀಕರಿಸಿ, ಕೆಲಸದ ಜಾಗದಲ್ಲಿ ಕೆಲ ಬದಲಾವಣೆಗಳನ್ನು ಕಾಣಬಹುದು.
ಪರಿಹಾರ: ತಾಯಿಗೆ ಬೆಲ್ಲದಿಂದ ತಯಾರಿಸಿದ ಸಿಹಿ ತಿನಿಸು ನೀಡಿ.

ಮೀನ ರಾಶಿ:ಈ ಅವಧಿ ಅನುಕೂಲಕರವಾಗಿದೆ
ಕುಂಭ ರಾಶಿಯ 9ನೇ ಮತ್ತು1ನೇ ಮನೆಯ ಅಧಿಪತಿಯಾಗಿರುವ ಬುಧ, ಈ ಸಂಕ್ರಮಣದ ಅವಧಿಯಲ್ಲಿ ನಿಮ್ಮ 3ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ಆರೋಗ್ಯ ಚೆನ್ನಾಗಿರುತ್ತದೆ. ಏನಾದರೂ ಆರೋಗ್ಯ ಸಮಸ್ಯೆ ಇದ್ದಿದ್ದರೆ ಈ ಸಮಯದಲ್ಲಿ ಗುಣಮುಖರಾಗುವಿರಿ. ನೀವು ಧಾರ್ಮಿಕ ಕಾರ್ಯಗಳ ಕಡೆ ಹೆಚ್ಚಿನ ಗಮನ ಕೊಡುತ್ತೀರಿ. ಒಟ್ಟಿನಲ್ಲಿ ಈ ಅವಧಿ ಅನುಕೂಲಕರವಾಗಿದೆ.
ಪರಿಹಾರ: ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications
