Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಅ. 22ಕ್ಕೆ ತುಲಾ ರಾಶಿಯಲ್ಲಿ ಮಂಗಳ ಗ್ರಹದ ಸಂಚಾರ: ಈ 5 ರಾಶಿಗಳಿಗೆ ಅದೃಷ್ಟ
ಮಂಗಳ ನಮ್ಮ ರಾಶಿಯ ಉನ್ನತ ಸ್ಥಾನದಲ್ಲಿದ್ದರೆ ನಮಗೆ ಮಂಗಳಕರ, ಅದೇ ಮಂಗಳ ಪೀಡಿತನಾಗಿದ್ದಾಗ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು ಜೊತೆಗೆ ಹಣದ ಸಮಸ್ಯೆ, ವೃತ್ತಿ ಜೀವನದಲ್ಲಿ ಸಮಸ್ಯೆ ಹೀಗೆ ಅನೇಕ ತೊಂದರೆಗಳು ಉಂಟಾಗುವುದು.
ಅ.22ಕ್ಕೆ ಮಂಗಳನು ತುಲಾ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಮಂಗಳ ಮೇಷ ಹಾಗೂ ವೃಶ್ಚಿಕ ರಾಶಿಗಳ ಅಧಿಪತಿ. ಈ ಸಂಚಾರ ಸಮಯದಲ್ಲಿ ಮಂಗಳ ತುಲಾ ರಾಶಿ ಮೊದಲ ಮನೆಯಲ್ಲಿ ಇರಲಿದೆ.
ಮಂಗಳ ತುಲಾ ರಾಶಿಯಲ್ಲಿ ಸಂಚಾರ ಮಾಡಿದಾಗ ಉಳಿದ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತೆ ಎಂದು ನೋಡೋಣ ಬನ್ನಿ:

ಮಿಥುನ ರಾಶಿ:
ಮಂಗಳ ತುಲಾ ರಾಶಿಯಲ್ಲಿ ಸಂಚರಿಸಿರುವುದರಿಂದ ಮಿಥುನ ರಾಶಿಯವರಿಗೆ ಈ ಅವಧಿ ಒಳ್ಳೆಯ ಸಮಯವಾಗಿದೆ. ಈ ಸಮಯದಲ್ಲಿ ಉತ್ತಮ ಆದಾಯ ಗಳಿಸಬಹುದು. ವೃತ್ತಿ ಜೀವನದಲ್ಲಿ ಏಳಿಗೆ ಕಾಣುವಿರಿ. ಇನ್ನು ಅವಾಹಿತರಾಗಿದ್ದರೆ ಈ ಸಮಯದಲ್ಲಿ ಒಳ್ಳೆಯ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೂ ಈ ಅವಧಿ ಅನುಕೂಲಕರವಾಗಿದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಅವಧಿ ಶುಭ ಸಮಯವಾಗಿದೆ. ಈ ಸಮಯದಲ್ಲಿ ಅದೃಷ್ಟ ನಿಮ್ಮ ಜೊತೆಗಿರುವುದು. ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಸುಲಭದಲ್ಲಿ ಎದುರಿಸಲು ಸಾಧ್ಯವಾಗುವುದು. ಈ ಸಮಯದಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ವೈವಾಹಿಕ ಜೀವನದ ಬಗ್ಗೆ ಸ್ವಲ್ಪ ಜಾಗೂರಕರಾಗಿರಿ

ತುಲಾ ರಾಶಿ
ತುಲಾ ರಾಶಿಯಲ್ಲಿ ಮಂಗಳ ಸಂಚರಿಸಿದ್ದು, ನಿಮ್ಮ ಮನೆಯ ಮೊದಲನೇ ಮನೆಯಲ್ಲಿ ಮಂಗಳ ಇರುವುದರಿಂದ ಈ ಅವಧಿ ನಿಮಗೆ ಒಳ್ಳೆಯದಿದೆ. ನಿಮ್ಮ ಖ್ಯಾತಿ ಹೆಚ್ಚುವುದು, ಆರೋಗ್ಯ ಉತ್ತಮವಾಗಿರುವುದು. ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಈ ಅವಧಿಯಲ್ಲಿ ಇತರರ ಮೇಲೆ ಸುಲಭವಾಗಿ ಪ್ರಭಾವ ಬೀರಲು ಸಾಧ್ಯವಾಗುವುದು. ಅಹಂ ಕೂಡ ಹೆಚ್ಚಾಗಬಹುದು, ಇದು ನಿಮ್ಮ ಮೇಲೆ ಪ್ರಭಾವ ಬೀರದಂತೆ ಎಚ್ಚರವಹಿಸಿ.

ಮಕರ ರಾಶಿ
ಮಕರ ರಾಶಿಯವರಿಗೆ ಈ ಸಾಗಣೆ ಅವಧಿ ಅನುಕೂಲಕರವಾಗಿದೆ. ವೃತ್ತಿ ಜೀವನ ಹಾಗೂ ವ್ಯಾಪಾರದಲ್ಲಿ ಯಶಸ್ಸು ಕಾಣಬಹುದು. ಈ ಅವಧಿಯಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬಹುದು. ಇನ್ನು ನೀವೇನಾದರೂ ಹೂಡಿಕೆ ಮಾಡಲು ಬಯಸುವುದಾದರೆ ಈ ಅವಧಿ ಒಳ್ಳೆಯದಿದೆ. ಹಣದ ಸ್ಥಿತಿ ತೃಪ್ತಕರವಾಗಿರುತ್ತದೆ.

ಕುಂಭ ರಾಶಿ
ಕುಂಭ ರಾಶಿಯಲ್ಲಿ ಮಂಗಳ ಒಂಭತ್ತನೇ ಮನೆಯಲ್ಲಿ ಇರುವುದರಿಂದ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗಸ್ಥರು ತಮ್ಮ ಹಿಂದಿನ ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ಪಡೆಯುವಿರಿ. ಸಾಮಾಜಿಕ ವಲಯದಲ್ಲಿ ನಿಮ್ಮ ಖ್ಯಾತಿ ಹೆಚ್ಚುವುದು. ಆದಾಯ ಚೆನ್ನಾಗಿರುತ್ತದೆ.



Click it and Unblock the Notifications