Mangal Gochar March 2023 Effects : ಮಂಗಳ ಗೋಚಾರ ಫಲ: ಮಿಥುನ ರಾಶಿಯಲ್ಲಿ ಈ ಸಂಚಾರ ಯಾವ ರಾಶಿಗಳಿಗೆ ಅದೃಷ್ಟಕರ, ಯಾರಿಗಲ್ಲ

Mars Transit In Gemini on 13 March 2023 Effects and Remedies on 12 Zodiac Signs in Kannada

ಮಂಗಳ ನಮ್ಮ ವೃತ್ತಿ, ವೈವಾಹಿಕ ಜೀವನ, ಸಂಬಂಧ, ನಡವಳಿಕೆ, ಆರ್ಥಿಕ ಸ್ಥಿತಿ ಮೇಲೆ ಪ್ರಭಾವ ಬೀರುವುದು. ಮಂಗಳ ಮಿಥುನ ರಾಶಿಗೆ ಮಾರ್ಚ್ 13ಕ್ಕೆ ಸಂಚರಿಸಿದೆ. ಈ ಸಂಚಾರ ಕೆಲವೊಂದು ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಿದರೆ , ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪ್ರಭಾವ ಬೀರಿದೆ. ಈ ಸಂಚಾರ 12 ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗಲ್ಲ ನೋಡೋಣ ಬನ್ನಿ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಲ್ಲಿ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಅಪೂರ್ಣವಾಗಿದ್ದ ಕೆಲಸಗಳು ಪೂರ್ಣವಾಗಲಿದೆ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ. ಈ ಅವಧಿ ವಿದ್ಯಾರ್ಥಿಗಳಿ ಫಲಪ್ರದವಾಗಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ನಿಮಗೆ ಹೊಸ ಉದ್ಯೋಗ ಅವಕಾಶಗಳನ್ನು ಪಡೆಯಲಿದೆ.

ಪರಿಹಾರ- ಮಂಗಳ ದೇವನ ಆಶೀರ್ವಾದ ಪಡೆಯಲು ಬಲಗೈಯ ಉಂಗುರದ ಬೆರಳಿಗೆ ಹವಳವನ್ನು ಧರಿಸಿದರೆ ಒಳ್ಳೆಯದು.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರಲ್ಲಿ ಮಂಗಳ 2ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಮಾತಿನ ಮೇಲೆ ಗಮನ ಹರಿಸಬೇಕಾಗಿದೆ. ನಿಮ್ಮ ನಡವಳಿಕೆಯಿಂದ ಬೇರೆಯವರಿಗೆ ಬೇಸರವಾಗದಂತೆ ನೋಡಿಕೊಳ್ಳಿ. ಸಂಬಂಧದಲ್ಲಿ ಸಮಸ್ಯೆ ಬರದಂತೆ ನೋಡಿಕೊಳ್ಳಿ. ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಕೂಡ ಹೆಚ್ಚಿನ ಗಮನಹರಿಸಿ.

ಪರಿಹಾರ -ಮಂಗಳವಾರ ದುರ್ಗೆ ಮಾತೆಗೆ ಕೆಂಪು ಹೂಗಳನ್ನು ಅರ್ಪಿಸಿ.

ಮಿಥುನ ರಾಶಿ

ಮಿಥುನ ರಾಶಿ

ಮಂಗಳ ಮಿಥುನ ರಾಶಿಗೆ ಪ್ರವೇಶಿಸಲಿದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಈ ಸಮಯದಲ್ಲಿ ಆರ್ಥಿಕ ಲಾಭ ಪಡೆಯುವಿರಿ. ನೀವು ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮ್ಮ ಮಾತುಗಳು ಸಂಬಂಧದ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆವಹಿಸಬೇಕಾಗಿದೆ.

ಪರಿಹಾರ- ಮಂಗಳ ಬೀಜ ಮಂತ್ರ ಪಠಿಸಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ 12ನೇ ಮನೆಯಲ್ಲಿ ಇರಲಿದೆ. ಹನ್ನೆರಡನೇ ಮನೆಯಲ್ಲಿ ಲಾಭದಾಯಕ ಗ್ರಹದ ಉಪಸ್ಥಿತಿಯು ಕರ್ಕ ರಾಶಿಯವರಿಗೆ ಅನುಕೂಲಕರ ಪರಿಸ್ಥಿತಿಯಲ್ಲ. ಈ ಸಮಯದಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ಕೆಲವು ಬದಲಾವಣೆಗಳಾಗಬಹುದು ಕೆಲವರಿಗೆ ವರ್ಗಾವಣೆ ಕೂಡ ಆಗಬಹುದು. ವಿದೇಶಕ್ಕೆ ಹೋಗ ಬಯಸುವವರಿಗೆ ಈ ಅವಧಿ ಅನುಕೂಲಕರವಾಗಿದೆ.

ನೀವು ನಿಮ್ಮ ಸಂಬಂಧ ಹಾಗೂ ಆರೋಗ್ಯದ ಮೇಲೆ ಗಮನಹರಿಸಬೇಕಾಗಿದೆ.

ಪರಿಹಾರ - ಹನುಮಾನ್ ಚಾಲೀಸಾವನ್ನು ದಿನಕ್ಕೆ 7 ಬಾರಿ ಪಠಿಸಿ.

ಸಿಂಹ ರಾಶಿ

ಸಿಂಹ ರಾಶಿ

ಮಿಥುನ ರಾಶಿಯಲ್ಲಿ 11ನೇ ಮನೆಯಲ್ಲ ಇರಲಿದೆ. ಈ ಅವಧಿಯಲ್ಲಿ ನೀವು ಹೂಡಿಕೆಯಿಂದ ವಿತ್ತೀಯ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನೀವು ಹಣಕಾಸಿನ ವಿಷಯಗಳ ಬಗ್ಗೆ ಯೋಜನೆ ಮಾಡಿದರೆ ಅದು ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ. ಈ ಸಮಯ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲಕರವಾಗಿದೆ.

ಪರಿಹಾರ- ಮಂಗಳವಾರದಂದು ಹನುಂತನನ್ನು ಪೂಜಿಸಿ.

ಕನ್ಯಾರಾಶಿ

ಕನ್ಯಾರಾಶಿ

ಕನ್ಯಾ ರಾಶಿಯವರಲ್ಲಿ ಮಂಗಳ 10ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ವೃತ್ತಿಪರ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಕುಟುಂಬದಲ್ಲಿ ಸ್ವಲ್ಪ ಸಮಸ್ಯೆಗಳು ಕಂಡು ಬರಬಹುದು. ಆದರೆ ಸಮಸ್ಯೆಗಳು ಉಂಟಾಗದಂತೆ ಎಚ್ಚರವಹಿಸಿ. ಈ ಅವಧಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆಯೂ ಚಿಂತೆ ಕಾಡಬಹುದು.

ಪರಿಹಾರ- ಮಂಗಳವಾರದಂದು ಮಂಗಳ ಯಂತ್ರವನ್ನು ಸ್ಥಾಪಿಸಿ, ಪೂಜಿಸಿ , ಮಂಗಳವಾರ ಹನುಮಂತನನ್ನು ಆರಾಧಿಸಿ.

ತುಲಾ ರಾಶಿ

ತುಲಾ ರಾಶಿ

ಮಂಗಳವು ನಿಮ್ಮ 9ನೇ ಮನೆಯಲ್ಲಿ ಇರಲಿದೆ. ಈ ಅವಧಿ ಪ್ರೇಮಿಗಳಿಗೆ ಅನುಕೂಲಕರವಾಗಿದೆ. ಅವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಖರ್ಚುಗಳು ಹೆಚ್ಚಾಗಲಿದೆ. ತಾಯಿಯ ಆರೋಗ್ಯದ ಕಡೆಗೆ ಗಮನಹರಿಸಿ.

ಪರಿಹಾರ- ಪ್ರತಿನಿತ್ಯ ಹನುಮಾನ್ ಚಾಲೀಸ ಪಠಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಮಂಗಳವು ನಿಮ್ಮ ರಾಶಿಯ 8ನೇ ಮನೆಯಲ್ಲಿ ಇರಲಿದೆ. ಈ ಸಾಗಣೆಯು ನಿಮಗೆ ಹೆಚ್ಚು ಫಲಪ್ರದವಾಗದಿರುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಚಾಲನೆ ಮಾಡುವಾಗ ಜಾಗ್ರತೆವಹಿಸಿ. ಆರ್ಥಿಕವಾಗಿ, ಈ ಸಮಯವು ನಿಮಗೆ ಲಾಭದಾಯಕವಾಗಿದೆ. ಈ ಹಿಂದೆ ಮಾಡಿದ ಹೂಡಿಕೆಯಿಂದ ಲಾಭ ಗಳಿಸುತ್ತೀರಿ.

ಪರಿಹಾರ- ಬಲಗೈಯಲ್ಲಿ ತಾಮ್ರದ ಬಳೆಯನ್ನು ಧರಿಸಿ.

ಧನು ರಾಶಿ

ಧನು ರಾಶಿ

ಧನು ರಾಶಿಯವರಲ್ಲಿ 7ನೇ ಮನೆಯಲ್ಲಿ ಇರಲಿದೆ. ಈ ಮನೆ ವ್ಯಾಪಾರ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ. ಈ ಅವಧಿ ಪ್ರೇಮಿಗಳಿಗೆ ಒಳ್ಳೆಯದಿದೆ. ಆದರೆ ವಿವಾಹಿತರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಬರಬಹುದು. ಈ ಅವಧಿಯಲ್ಲಿ ನಿಮ್ಮಿಬ್ಬರ ನಡುವೆ ಜಗಳಗಳು ಉಂಟಾಗಬಹುದು. ಕೆಲಸದಲ್ಲಿ ಅಭದ್ರತೆ ಉಂಟಾಗುವುದು.

ಈ ಅವಧಿಯಲ್ಲಿ ನಿಮ್ಮಲ್ಲಿ ಕೋಪ ಅಧಿಕವಿರುತ್ತದೆ.

ಈ ಸಮಯದಲ್ಲಿ ಗಂಟಲಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು.

ಪರಿಹಾರ- ದೇವಸ್ಥಾನಕ್ಕೆ ಬೆಲ್ಲ ಮತ್ತು ಕಡಲೆಕಾಯಿಯನ್ನು ಅರ್ಪಿಸಿ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರಲ್ಲಿ 6ನೇ ಮನೆಯಲ್ಲಿ ಇರಲಿದೆ. ಮಿಥುನ ರಾಶಿಯಲ್ಲಿ ನಿಮ್ಮ ಆರನೇ ಮನೆಯಲ್ಲಿ ಮಂಗಳ ಸಂಚಾರವು ಅನುಕೂಲಕರವಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣಲಿದೆ. ಈ ಸಮಯದಲ್ಲಿ ತಂದೆಯ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಸಮಯ ಅನುಕೂಲಕರವಾಗಿದೆ.

ಪರಿಹಾರ - ಪ್ರತಿದಿನ ಬೆಲ್ಲವನ್ನು ಸೇವಿಸಿ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಲ್ಲಿ ಮಂಗಳ 5ನೇ ಮನೆಯಲ್ಲಿ ಇರಲಿದೆ. ಐದನೇ ಮನೆಯಲ್ಲಿ ಮಂಗಳನ ಸಂಚಾರದಿಂದಾಗಿ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆಗಳಾಗಬಹುದು, ಅವರ ವರ್ತನೆಯೂ ಬದಲಾಗುವುದು. ಗರ್ಭಿಣಿಯರು ಈ ಅವಧಿಯಲ್ಲಿ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.

ಈ ಅವಧಿಯಲ್ಲಿ ಪ್ರೇಮಿಗಳು ಪರಸ್ಪರ ನಂಬಿಕೆ ಇಡಬೇಕು, ಇಲ್ಲದಿದ್ದರೆ ಸಂಬಂಧ ಹಾಳಾಗುವುದು. ಈ ಸಮಯ ವಿದ್ಯಾರ್ಥಿಗಳಿಗೆ ಈ ಸಮಯವು ಫಲಪ್ರದವಾಗಲಿದೆ. ಐದನೇ ಮನೆಯಿಂದ, ಮಂಗಳವು ನಿಮ್ಮ ಜಾತಕದ ಎಂಟು, ಹನ್ನೊಂದು ಮತ್ತು ಹನ್ನೆರಡನೇ ಮನೆಗಳನ್ನು ನೋಡುತ್ತಿದೆ. ಅದರ ಪರಿಣಾಮದಿಂದಾಗಿ, ನಿಮ್ಮ ವೃತ್ತಿಪರ ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳಾಗಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಹೆಚ್ಚು ಪ್ರಯಾಣಿಸಬೇಕಾಗಬಹುದು. ವ್ಯಾಪಾರಸ್ಥರು, ಉದ್ಯಮಿಗಳು ಅಪಾಯದ ನಿರ್ಧಾರಗಳನ್ನು ಗೆದುಕೊಳ್ಳುವುದನ್ನು ತಪ್ಪಿಸಬೇಕು.

ಪರಿಹಾರ- ಕೆಂಪು ಬಣ್ಣದ ಬಟ್ಟೆಗಳನ್ನು ಅಗತ್ಯವಿರುವ ಮಕ್ಕಳಿಗೆ ದಾನ ಮಾಡಿ.

12. ಮೀನ ರಾಶಿ

12. ಮೀನ ರಾಶಿ

ಮೀನ ರಾಶಿಯವರಲ್ಲಿ ಮಂಗಳ 3ನೇ ಮನೆಯಲ್ಲಿ ಇರಲಿದೆ. ಈ ಮನೆಯು ತಾಯಿ, ಮನೆಯ ಜೀವನ, ಆಸ್ತಿ ಮತ್ತು ವಾಹನವನ್ನು ಪ್ರತಿನಿಧಿಸುತ್ತದೆ. ಈ ಅವಧಿಯಲ್ಲಿ ಕುಟುಂಬದಲ್ಲಿ ಸಮಸ್ಯೆಗಳಾಗದಂತೆ ಎಚ್ಚರವಹಿಸಿ.

ನೀವು ವ್ಯವಹಾರವನ್ನು ಮಾಡುತ್ತಿದ್ದರೆ, ಈ ಸಮಯವು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರಗತಿ ಆಗಲಿದೆ. ಈ ಸಮಯದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ನೀವು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗದಂತೆ ನೋಡಿಕೊಳ್ಳಿ.

ಪರಿಹಾರ - ನಿಮ್ಮ ತಾಯಿಗೆ ಬೆಲ್ಲದ ಸಿಹಿತಿಂಡಿಗಳನ್ನು ನೀಡಿ.

English summary

Mars Transit In Gemini on 13 March 2023 Effects and Remedies on 12 Zodiac Signs in Kannada

Mangal Rashi Parivartan March 2023 in Mithuna Rashi ; Mars Transit In Gemini Effects on Zodiac Signs : The Mars Transit In Gemini will take place on 13 March 2023. Learn about remedies to perform in Kannada,
X
Desktop Bottom Promotion