For Quick Alerts
ALLOW NOTIFICATIONS  
For Daily Alerts

ಡಿ. 24ಕ್ಕೆ ಮೇಷ ರಾಶಿಗೆ ಮಂಗಳನ ಸಂಚಾರ: ಯಾವ ರಾಶಿಗಳಿಗೆ ಒಳ್ಳೆಯದು, ಯಾವುದಕ್ಕೆ ಅಷ್ಟು ಒಳಿತಲ್ಲ

|

ಮಂಗಳ ಗ್ರಹವು 24 ಡಿಸೆಂಬರ್ ರಂದು ಮಧ್ಯಾಹ್ನ 11:42 ಗಂಟೆಗೆ ಮೀನಾ ರಾಶಿಯಿಂದ ಹೊರಬಂದು ತನ್ನದೇ ರಾಶಿಯಾದ ಮೇಷದಲ್ಲಿ ಸ್ಥಾನ ಪಡೆಯುತ್ತಿದೆ. ಮೇಷ ರಾಶಿಯು ಬೆಂಕಿಯ ಅಂಶದ ರಾಶಿಯಾಗಿದ್ದು ಇದರ ಅಧಿಪತಿ ಮಂಗಳ. ಇದಲ್ಲದೆ ಮಂಗಳವು ಸ್ವತಃ ಬೆಂಕಿಯ ಅಂಶದ ಗ್ರಹವಾಗಿದೆ. ಆದ್ದರಿಂದ ರಾಶಿಗಳ ಮೇಲೆ ಇದರ ಇದರ ಪ್ರಭಾವ ತ್ವರಿತ ಆಗಿರುತ್ತದೆ. ಅದು ಒಳ್ಳೆಯದಿರಲಿ, ಕೆಟ್ಟದಿರಲಿ ಅವರವರ ರಾಶಿಗೆ ತಕ್ಕಂತೆ ಅದರ ಪ್ರಭಾವ ತುಂಬಾನೇ ಇರುತ್ತದೆ.

Mars Transit in Aries on 24 December 2020 Effects on Zodiac Signs In kannada

ಮಂಗಳ ಗ್ರಹವನ್ನು ದೇವರುಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಮೇಷ ಮತ್ತು ವೃಶ್ಚಿಕ ರಾಶಿಗಳು ಇದರ ಅಧೀನದಲ್ಲಿವೆ. ಇದು ಕರ್ಕ ರಾಶಿಯಲ್ಲಿ ದುರ್ಬಲ ಸ್ಥಿತಿಯಲ್ಲಿ ಮತ್ತು ಮಕರ ರಾಶಿಯಲ್ಲಿ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಪರಿಗಣಿಸಲಾಗಿದೆ. ಸೂರ್ಯ, ಗುರು ಮತ್ತು ಚಂದ್ರ ಅದರ ಆಪ್ತ ಸ್ನೇಹಿತರು. ಮೃಗಶಿರಾ, ಧನಿಷ್ಟಾ ಮತ್ತು ಚಿತ್ರ ನಕ್ಷತ್ರಗಳು ಮಂಗಳ ಗ್ರಹದ ನಕ್ಷತ್ರಪುಂಜಗಳು.

ಇದು ಒಂದು ಉರಿಯುತ್ತಿರುವ ಗ್ರಹವಾಗಿದೆ ಹಾಗೂ ಇದು ಜಾತಕದ ಮೊದಲನೇ, ನಾಲ್ಕನೇ, ಏಳನೇ, ಎಂಟನೇ ಮತ್ತು ಹನ್ನೆರಡನೇ ಮನೆಯಲ್ಲಿದ್ದರೆ ಇದು ದೋಷವನ್ನು ಮಾಡುತ್ತದೆ. ಮಂಗಳ ಗ್ರಹವು ಶೀಘ್ರ ಫಲಿತಾಂಶಗಳನ್ನು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಆದ್ದರಿಂದ ಮೇಷ ರಾಶಿಯಲ್ಲಿ ಮಂಗಳ ಗ್ರಹದ ಸಾಗಣೆಯು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಲಿದ್ದು ನಿಮ್ಮ ರಾಶಿಯ ಮೇಲೆ ಇದರ ಪ್ರಭಾವ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಮಂಗಳನ ಪ್ರತಿಯೊಂದು ಸಂಚಾರವು ನಿಮ್ಮ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಏಕೆಂದರೆ ಇದು ನಿಮ್ಮ ರಾಶಿಯ ಅಧಿಪತಿ. ಇದಲ್ಲದೆ, ಇದು ನಿಮ್ಮ ಎಂಟನೇ ಮನೆಯ ಮೇಲೆ ಅಧಿಕಾರವನ್ನು ಹೊಂದಿರುತ್ತದೆ. ಮೊದಲನೇ ಮನೆಯು ನಿಮ್ಮ ಗುಣಗಳು, ಆರೋಗ್ಯ, ನೋಟ, ಬಣ್ಣ ಮತ್ತು ಉತ್ತಮ ದೇಹದ ಬಗ್ಗೆ ಹೇಳುತ್ತದೆ. ಈ ಎಂಟನೇ ಮನೆ ಅನಿಶ್ಚಿತತೆಯಿಂದ ತುಂಬಿರುವ ಮನೆಯಾಗಿದೆ. ಏಕೆಂದರೆ ಇದು ಜೀವನದಲ್ಲಿ ಇದ್ದಕ್ಕಿದ್ದಂತೆ ಸಂಭವಿಸುವ ಬದಲಾವಣೆಗಳನ್ನು ಹೇಳುತ್ತದೆ. ಮಂಗಳ ಸಂಚಾರವು ನಿಮ್ಮದೇ ರಾಶಿಯಲ್ಲಿ ಅಂದರೆ ನಿಮ್ಮ ಮೊದಲನೇ ಮನೆಯಲ್ಲಿ ಸಂಭವಿಸಲಿದೆ. ಮೊದಲನೇ ಮನೆಯಲ್ಲಿ ಮಂಗಳ ಸಂಚಾರವನ್ನು ಸಾಮಾನ್ಯವಾಗಿ ಶುಭವೆಂದು ಪರಿಗಣಿಸಲಾಗುವುದಿಲ್ಲ. ಆದರೆ ನಿಮ್ಮ ರಾಶಿಯಲ್ಲಿ ಇರುವುದರಿಂದ ಕೆಲವು ಶುಭ ಫಲಿತಾಂಶಗಳನ್ನು ಇದು ಒದಗಿಸುತ್ತದೆ.

ಮಂಗಳ ಗ್ರಹದ ಈ ಸಂಚಾರದ ಪರಿಣಾಮವಾಗಿ ನಿಮ್ಮ ನಡವಳಿಕೆಯಲ್ಲಿ ಬಹು ಬೇಗನೆ ಬದಲಾವಣೆಗಳು ಉಂಟಾಗುತ್ತವೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಆತುರ ತೋರಿದರೆ ಕೆಲವೊಮ್ಮೆ ತೊಂದರೆಗೆ ಸಿಲುಕಿಸಬಹುದು. ಈ ಆತುರ ಬುದ್ಧಿಯಿಂದಾಗಿ ನೀವು ವಿಷಾಧಿಸಬೇಕಾದಂತಹ ಕೆಲವು ಪರಿಸ್ಥಿತಿಗಳು ಸಹ ಉಂಟಾಗಬಹುದು. ಆದ್ದರಿಂದ ತಾಳ್ಮೆ ಅವಶ್ಯಕ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.

ಈ ಸಮಯದಲ್ಲಿ ನೀವು ಸ್ವಲ್ಪ ಹಠಮಾರಿ ಮತ್ತು ನಿಮ್ಮ ವಿಷಯವನ್ನು ಮನವೊಲಿಸುವ ನಡವಳಿಕೆಯನ್ನು ಹೊಂದುವಿರಿ. ಇದು ಹೆಚ್ಚಿನವರಿಗೆ ಇಷ್ಟಪಡುವುದಿಲ್ಲ. ಈ ಸಂಚಾರದ ಪರಿಣಾಮದಿಂದಾಗಿ ಕುಟುಂಬ ಜೀವನದಲ್ಲಿ ಒತ್ತಡವನ್ನು ಕಾಣಲಾಗುತ್ತದೆ. ಈ ಸಮಯದಲ್ಲಿ ನೀವು ಸಂಪತ್ತಿಗೆ ಸಂಬಂಧಿಸಿದ ಯಾವುದೇ ಲಾಭವನ್ನು ಪಡೆಯಬಹುದು. ಈ ಸಾಗಣೆಯ ಪರಿಣಾಮವಾಗಿ ನಿಮ್ಮ ಆರೋಗ್ಯವು ಕ್ಷೀಣಿಸಬಹುದು. ವಿಶೇಷವಾಗಿ ಜ್ವರ ಅಥವಾ ತಲೆ ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು.

ನೀವು ವಾಹನವನ್ನು ಬಹಳ ಎಚ್ಚರಿಕೆಯಿಂದ ಓಡಿಸಬೇಕು. ಯಾವುದೇ ರೀತಿಯ ಶಸ್ತ್ರಾಸ್ತ್ರಗಳಿಂದ ದೂರವಿರಲು ಪ್ರಯತ್ನಿಸಬೇಕು. ಏಕೆಂದರೆ ಇದು ನಿಮಗೆ ಹಾನಿಯನ್ನು ಉಂಟು ಮಾಡಬಹುದು. ಒಂದೆಡೆ ಈ ಸಂಚಾರವು ನಿಮಗೆ ಕೆಲವು ಪ್ರತಿಕೂಲ ಪರಿಸ್ಥಿತಿಗಳನ್ನು ಸೃಷ್ಟಿಸಿದರೆ ಮತ್ತೊಂದೆಡೆ, ಈ ಸಂಚಾರದ ಪರಿಣಾಮದಿಂದಾಗಿ ನೀವು ನಿಮ್ಮ ಗುರಿಗಳನ್ನು ಸಾಧಿಸಲು ಸಧ್ಯವಾಗುತ್ತದೆ. ಈ ರೀತಿಯಾಗಿ ಈ ಸಂಚಾರದ ಫಲವಾಗಿ ಒಳಿತು, ಕೆಡಕು ಎರಡನ್ನೂ ಅನುಭವಿಸುವಿರಿ.

ಪರಿಹಾರ - ಮಂಗಳ ಗ್ರಹದ ಶುಭ ಫಲಿತಾಂಶಗಳನ್ನು ಪಡೆಯಲು ಮಂಗಳ ಗ್ರಹದ "ಓಂ ಹಂ ಅಂಗಾರಕಾಯ ನಮಃ" ಮಂತ್ರವನ್ನು ಮಂಗಳವಾರ ಶುರು ಮಾಡಿ ಪ್ರತಿದಿನ ಜಪಿಸಿ.

ವೃಷಭ ರಾಶಿ

ವೃಷಭ ರಾಶಿ

ಮಂಗಳ ಗ್ರಹವು ವೃಷಭ ರಾಶಿಯ 12ನೇ ಮನೆಗೆ ಸಂಚಾರ ಮಾಡುತ್ತಿದೆ. ಈ ಗ್ರಹವು ವೃಷಭ ರಾಶಿಯ ಏಳನೇ ಮನೆಯ ಮಾಲಿಕ ಕೂಡ ಆಗಿದೆ. ಈ ಮನೆದೀರ್ಘಕಾಲದ ಪಾಲುದಾರಿಕೆಯ ಮನೆಯಾಗಿದೆ ಮತ್ತು ಇದರ ಮೂಲಕ ವಿವಿಧ ರೀತಿಯ ವ್ಯಾಪಾರ, ಆಮದು -ರಫ್ತು , ಸಮಾಜದಲ್ಲಿ ನಿಮ್ಮ ಚಿತ್ರಣ, ಮದುವೆ ಮತ್ತು ಜೀವನ ಸಂಗಾತಿಯ ಬಗ್ಗೆ ಪರಿಗಣಿಸಲಾಗುತ್ತದೆ. ಹನ್ನೆರಡನೇ ಮನೆಯನ್ನು ವೆಚ್ಚಗಳು, ಜೈಲು ಪ್ರಯಾಣ, ಆಸ್ಪತ್ರೆ ಮತ್ತು ವಿದೇಶದ ಮನೆಯೆಂದು ಪರಿಗಣಿಸಲಾಗಿದೆ. ಮಂಗಳ ಸಂಚಾರವು ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಸಂಭವಿಸಲಿದೆ. ಈ ಮನೆಯಲ್ಲಿ ಮಂಗಳನ ಸಂಚಾರವು ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಸಂಚಾರದ ಮಿಶ್ರ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ.

ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಇದರಿಂದ ನೀವು ತೊಂದರೆಕ್ಕೊಳಗಾಗಬಹುದು. ಮಾನಸಿಕವಾಗಿ ನೀವು ಒತ್ತಡವನ್ನು ಅನುಭವಿಸುತ್ತೀರಿ. ಈ ಸಮಯದಲ್ಲಿ ನೀವು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಇದಲ್ಲದೆ ನಿಮ್ಮ ವಿರೋಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸುವ ಸಾಧ್ಯತೆಯೂ ಇದೆ ಮತ್ತು ಅವರು ದುರ್ಬಲಗೊಳ್ಳುತ್ತಾರೆ. ನ್ಯಾಯಾಲಯದಲ್ಲಿ ಯಾವುದೇ ವಿಷಯ ದೀರ್ಘಕಾಲ ದಿಂದ ನಡೆಯುತ್ತಿದ್ದರೆ, ಅದರ ನಿರ್ಧಾರವು ಸಹ ನಿಮ್ಮ ಪರವಾಗಿ ಬರುವ ಸಂಪೂರ್ಣ ಸಾಧ್ಯತೆ ಇದೆ.

ಈ ಸಂಚಾರವು ನಿಮ್ಮ ಕಿರಿಯ ಸಹೋದರ- ಸಹೋದರಿಯರಿಗೆ ಉತ್ತಮವೆಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಈ ಸಮಯದಲ್ಲಿ ನೀವು ನಿಮ್ಮ ಸಾಲದ ಬಗ್ಗೆ ತುಂಬಾ ಚಿಂತೆ ಮಾಡುತ್ತೀರಿ ಮತ್ತು ಅದನ್ನು ಸಾಧ್ಯವಾದಷ್ಟು ಬೇಗನೆ ಮರುಪಾವತಿಸಲು ಪ್ರಯತ್ನಿಸುವಿರಿ.

ಮಂಗಳನ ಈ ಸಂಚಾರವು ನಿಮ್ಮ ದಾಂಪತ್ಯ ಜೀವನದ ದೃಷಿಕೋನದಿಂದ ಶುಭವೆಂದು ಹೇಳಲಾಗುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿ ಮತ್ತು ನಿಮ್ಮ ಮಧ್ಯೆ ವೈಮನಸ್ಸು ಹೆಚ್ಚಾಗುವ ಸಾಧ್ಯತೆ ಇದೆ. ಅವರು ಕೂಡ ಬೇಗನೆ ಕೋಪಗೊಳ್ಳುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವುದು.

ಪರಿಹಾರ - ಶುಭ ಫಲಿತಾಂಶಕ್ಕಾಗಿ ನೀವು ಮಂಗಳವಾರದಂದು ಹನುಮಂತ ದೇವರಿಗೆ ಸಿಹಿ ಎಲೆ ಅಡಿಕೆಯನ್ನು ಅರ್ಪಿಸಬೇಕು.

ಮಿಥುನ ರಾಶಿ ಭವಿಷ್ಯ

ಮಿಥುನ ರಾಶಿ ಭವಿಷ್ಯ

ಮಂಗಳ ಗ್ರಹದ ಸಂಚಾರವು ನಿಮ್ಮ ರಾಶಿಯ ಹನ್ನೊಂದನೇ ಮನೆಯಲ್ಲಿ ಸಂಭವಿಸಲಿದೆ. ಇದು ನಿಮ್ಮ ಜಾತಕದ ಹನ್ನೊಂದನೇ ಮತ್ತು ಆರನೇ ಮನೆಯ ಅಧಿಪತಿ. ಆರನೇ ಮನೆಯು ವಿವಿಧ ರೀತಿಯ ಸಮಸ್ಯೆಗಳು, ತೊಂದರೆಗಳು, ಸ್ಪರ್ಧೆಗಳು, ಚುನಾವಣೆ, ಸಾಲ, ಬ್ಯಾಂಕ್ ಲೋನ್, ರೋಗಗಳು ಮತ್ತು ವಿರೋಧಿಗಳ ಮನೆ ಎಂದು ಪರಿಗಣಿಸಲಾಗಿದೆ. ಆರನೇ ಮನೆಯು ಉದ್ಯೋಗಕ್ಕೆ ಬಹಳ ಮುಖ್ಯವಾಗಿದೆ. ಮತ್ತೊಂದೆಡೆ, ಹನ್ನೊಂದನೇ ಮನೆ ನಮ್ಮ ಸಾಧನೆಗಳ ಮನೆಯಾಗಿದೆ. ಹನ್ನೊಂದನೇ ಮನೆಯಲ್ಲಿ ಮಂಗಳ ಸಂಚಾರವು ಬಹಳಷ್ಟು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ.

ಮಂಗಳ ಗ್ರಹದ ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಆದಾಯದಲ್ಲಿ ಅದ್ಭುತ ಹೆಚ್ಚಳವನ್ನು ಕಾಣಲಾಗುತ್ತದೆ. ನೀವು ಅನೇಕ ಮೂಲಗಳ ಮೂಲಕ ಹಣವನ್ನು ಪಡೆಯುತ್ತೀರಿ. ಇದರಿಂದ ನೀವು ಆರ್ಥಿಕವಾಗಿ ಬಲಗೊಳ್ಳುತ್ತೀರಿ. ಇಷ್ಟೇ ಅಲ್ಲದೆ ನಿಮ್ಮ ಮಹತ್ವಾಕಾಂಕ್ಷೆಗಳು ಪೂರ್ಣಗೊಳ್ಳುವುದರಿಂದ ನಿಮಗೆ ಅತ್ಯಂತ ಸಂತೋಷವಾಗುತ್ತದೆ. ತುಂಬಾ ಸಮಯದಿಂದ ಪೂರ್ಣಗೊಳಿಸಲಾಗದೆ ಸಿಲುಕಿಕೊಂಡಿರುವ ನಿಮ್ಮ ಕೆಲಸಗಳು ಸಹ ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ, ಇದರಿಂದ ನೀವು ಸಂತೋಷಪಡುವುದಲ್ಲದೆ ಆರ್ಥಿಕ ಲಾಭ ಮತ್ತು ಸಾಮಾಜಿಕ ಪ್ರಯೋಜನವನ್ನು ಸಹ ಪಡೆಯುತ್ತೀರಿ.

ಈ ಸಮಯದಲ್ಲಿ ಸಾಮಾಜಿಕ ಕ್ಷೇತ್ರಗಳಿಂದಲೂ ನಿಮಗೆ ಲಾಭವಾಗುತ್ತದೆ. ಹೊಸ ಸ್ನೇಹಿತರ ಸಹಾಯ ದೊರೆಯುವುದು. ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರುವುದು, ಇದರಿಂದ ಮನೆಯ ಅಗ್ಯತದ ಕಡೆಯೂ ಗಮನ ನೀಡಬಹುದು. ಆದರೆ ನಿಮ್ಮ ಪ್ರೀತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ , ಇವು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತದೆ, ಆದ್ದರಿಂದ ನೀವು ನಿಮ್ಮ ಪ್ರೀತಿ ಜೀವನವು ಸರಿಯಾಗಿ ಇರಬೇಕೆಂದು ಬಯಸಿದರೆ, ಯಾವುದೇ ರೀತಿಯ ವಿವಾದದಿಂದ ದೂರವಿರಬೇಕು.

ಈ ಸಮಯದಲ್ಲಿ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆಯೂ ನೀವು ಸ್ವಲ್ಪ ಗಮನ ಹರಿಸಬೇಕು. ಅಧ್ಯಯನದ ವಿಷಯದಲ್ಲಿ ಈ ಸಂಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಆದಾಯವು ಹೆಚ್ಚಾದರೆ, ಸಾಲವನ್ನು ಮರುಪಾವತಿಸುವ ದಿಕ್ಕಿನಲ್ಲಿ ನೀವು ಮುಂದುವರಿಯುತ್ತಿರಿ. ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಮತ್ತು ಉದ್ಯೋಗದಲ್ಲಿ ಸಹ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಸುತ್ತ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.

ಪರಿಹಾರ - ಮಂಗಳವಾರ ಬ್ಲಡ್‌ ಬ್ಯಾಂಕ್‌ಗೆ ರಕ್ತದಾನ ಮಾಡಿ.

ಕರ್ಕ ರಾಶಿ

ಕರ್ಕ ರಾಶಿ

ಮಂಗಳ ಗ್ರಹವು ನಿಮ್ಮ ರಾಶಿಗೆ ಅತ್ಯಂತ ಮುಖ್ಯವಾದ ಗ್ರಹವಾಗಿದೆ. ಏಕೆಂದರೆ ಇದು ನಿಮ್ಮ ಐದನೇ ಮತ್ತು ಹತ್ತನೇ ಮನೆಯ ಅಧಿಪತಿ, ಹಾಗೂ ಈ ಸಂಚಾರ ಸಮಯದಲ್ಲಿ ಮಂಗಳನು ನಿಮ್ಮ ರಾಶಿಯ ಹತ್ತನೇ ಮನೆಗೆ ಪ್ರವೇಶಿಸಲಿದೆ. ಐದನೇ ಮನೆಯ ಮೂಲಕ ನಮ್ಮ ಬುದ್ಧಿವಂತಿಕೆ, ಆಲೋಚನಾ ಸಾಮರ್ಥ್ಯ, ಕಲಾತ್ಮಕತೆ, ನಮ್ಮ ಮಕ್ಕಳು, ಪ್ರೀತಿಯ ಸಂಬಂಧ ಮತ್ತು ಶಿಕ್ಷಣದ ಬಗ್ಗೆ ಪರಿಗಣಿಸಲಾಗುತ್ತದೆ. ಹತ್ತನೇ ಮನೆಯನ್ನು ಅತ್ಯಂತ ಬಲವಾದ ಕೇಂದ್ರ ಮನೆಯೆಂದು ಸಹ ಕರೆಯಲಾಗುತ್ತದೆ. ಇದು ನಮ್ಮ ವ್ಯಾಪಾರವನ್ನು ನಿರ್ಧರಿಸುತ್ತದೆ .

ಹತ್ತನೇ ಮನೆಯಲ್ಲಿ ಮಂಗಳ ಸಂಚಾರವಾಗುವುದರಿಂದ ನಿಮಗೆ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ ಮತ್ತು ನಿಮ್ಮ ಗೌರವ ಹೆಚ್ಚಾಗುತ್ತದೆ. ಕೆಲಸದ ಹೊರೆ ಸ್ವಲ್ಪ ಹೆಚ್ಚಾಗುತ್ತದೆ ಜೊತೆಗೆ ಅಧಿಕಾರ ಕೂಡ ಹೆಚ್ಚಾಗುತ್ತವೆ. ಉನ್ನತ ಸ್ಥಾನ ಮತ್ತು ಬಡ್ತಿ ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಯಾವುದೇ ಕಾರ್ಯಕ್ಕೆ ಆತುರ ತೋರಬೇಡಿ ಹಾಗೂ ಸವಾಲಿನ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯಬೇಕು.

ಮಂಗಳನ ಈ ಸಂಚಾರ ಆರೋಗ್ಯದ ದೃಷ್ಟಿಯಿಂದ ಅಷ್ಟು ಅನುಕೂಲಕರವಾಗಿಲ್ಲ, ಆದ್ದರಿಂದ ಆರೋಗ್ಯದ ಕಡೆಗೆ ವಿಶೇಷ ಕಾಳಜಿವಹಿಸಬೇಕು. ಇಲ್ಲದಿದ್ದರೆ ಅತಿಯಾದ ಕೆಲಸದ ಕಾರಣದಿಂದಾಗಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಮಂಗಳ ಸಂಚಾರವು ನಿಮ್ಮ ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ತರಬಹುದು, ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಮಕ್ಕಳು ಕೆಲವು ಸಮಸ್ಯೆಗಳನ್ನು ಅನುಭವಿಸಬಹುದು. ಅಥವಾ ಅವರೊಂದಿಗಿನ ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೆಚ್ಚಿನ ಕೆಲಸದ ಒತ್ತಡದ ಕಾರಣ ನಿಮಗೆ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ.

ಪ್ರೇಮಿಗಳಿಗೆ ಈ ಸಂಚಾರವು ಸೂಕ್ತವಾಗಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಪ್ರೇಮಿಯನ್ನು ಸಾಧ್ಯವಾದಷ್ಟು ಕಡಿಮೆ ಭೇಟಿ ಮಾಡಲು ಪ್ರಯತ್ನಿಸಿ. ಇದರಿಂದ ಜಗಳ ತಪ್ಪಿಸಬಹುದು. ವಿದ್ಯಾರ್ಥಿಗಳಿಗೆ ಈ ಸಂಚಾರವು ಸಾಮಾನ್ಯವಾಗಿರಲಿದೆ. ನೀವು ನಿಮ್ಮ ಅಧ್ಯಯನದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು.

ಪರಿಹಾರ - ಕೆಂಪು ದಾರದಲ್ಲಿ ಮೂರು ಮುಖ ರುದ್ರಾಕ್ಷವನ್ನು ಮಂಗಳವಾರದಂದು ಧರಿಸಬೇಕು.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಮಂಗಳ ಗ್ರಹವು ಒಂಬತ್ತನೇ ಮತ್ತು ನಾಲ್ಕನೇ ಮನೆಯ ಅಧಿಪತಿಯಾಗಿದ್ದಾನೆ. ನಾಲ್ಕನೇ ಮನೆಯ ಮೂಲಕ ಜೀವನದ ಎಲ್ಲಾ ರೀತಿಯ ಸಂತೋಷ ಸಂಪನ್ಮೂಲಗಳು, ತಾಯಿ, ಸ್ಥಿರ - ಅಸ್ಥಿರ ಸಂಪತ್ತು ಇತ್ಯಾದಿಗಳನ್ನು ನೋಡಲಾಗುತ್ತದೆ. ಒಂಬತ್ತನೇ ಮನೆಯನ್ನು ಅದೃಷ್ಟ ಮತ್ತು ಧರ್ಮದ ಮನೆಯೆಂದು ಕರೆಯಲಾಗುತ್ತದೆ. ಮಂಗಳ ಗ್ರಹವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಸಂಚರಿಸುತ್ತಿರುವುದರಿಂದ ಶುಭವೆಂದು ಹೇಳಬಹುದು.

ಈ ಸಂಚಾರದ ಪರಿಣಾಮದಿಂದಾಗಿ ನೀವು ದೀರ್ಘ ಪ್ರಯಾಣಗಳಿಗೆ ಹೋಗುವ ಅವಕಾಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ನೀವು ವಿದೇಶ ಸಂಪರ್ಕಗಳಿಂದ ಶುಭ ಅವಕಾಶಗಳನ್ನು ಪಡೆಯಬಹುದು. ಈ ಸಂಚಾರವು ನಿಮ್ಮ ಸಹೋದರ ಸಹೋದರಿಯರಿಗೆ ಸಾಮಾನ್ಯವಾಗಿರಲಿದೆ ಹಾಗೂ ಅವರ ಆರೋಗ್ಯವು ಸ್ವಲ್ಪ ದುರ್ಬಲಗೊಳ್ಳಬಹುದು ಆದರೆ ಅವರು ವ್ಯಾಪಾರದಲ್ಲಿ ಉತ್ತಮ ಹಣವನ್ನು ಗಳಿಸುತ್ತಾರೆ.

ಈ ಸಂಚಾರದ ಪರಿಣಾಮದಿಂದಾಗಿ ಕುಟುಂಬದ ಸದಸ್ಯರು ಸಂತೋಷದಿಂದ ಇರುತ್ತಾರೆ ಮತ್ತು ಪರಸ್ಪರರ ಸಂಬಂಧವು ಬಲಗೊಳ್ಳುತ್ತದೆ. ಕುಟುಂಬದಲ್ಲಿ ನಿಮ್ಮ ಮರ್ಯಾದೆ ಹೆಚ್ಚಾಗುತ್ತದೆ ಮತ್ತು ಸಂಪೂರ್ಣ ಗೌರವವನ್ನು ನೀವು ಪಡೆಯುತ್ತೀರಿ. ಕೆಲವರು ತಮ್ಮ ಕೆಲಸದ ಸ್ಥಳದಲ್ಲಿ ವರ್ಗಾವಣೆಯನ್ನು ಪಡೆಯುವ ಸಾಧ್ಯತೆ ಇದೆ.

ಪರಿಹಾರ - ನೀವು ಪ್ರತಿ ಮಂಗಳವಾರ ಹನುಮಂತ ದೇವರಿಗೆ ಮಲ್ಲಿಗೆ ಎಣ್ಣೆ ಅರ್ಪಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಮಂಗಳ ಗ್ರಹವು ನಿಮ್ಮ ಮೂರನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿದ್ದಾನೆ. ಈ ಎರಡೂ ಮನೆಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಎಂಟನೇ ಮನೆಯು ಜೀವನದಲ್ಲಿ ಸಂಭವಿಸುವ ಅನಿಶ್ಚಿತತೆ ಮತ್ತು ಇದ್ದಕ್ಕಿದ್ದಂತೆ ಸಂಭವಿಸುವ ಒಳ್ಳೆಯ ಮತ್ತು ಕೆಟ್ಟ ಬದಲಾವಣೆಗಳ ಬಗ್ಗೆ ತಿಳಿಸುತ್ತದೆ . ಮೂರನೇ ಮನೆಯ ಮೂಲಕ ನಿಮ್ಮ ಧೈರ್ಯ, ಪರಾಕ್ರಮ, ಸಹೋದರ ಸಹೋದರಿಯರು, ಸಣ್ಣ ಪ್ರವಾಸಗಳು, ನಿಮ್ಮ ಸಂವಹನ ಕೌಶಲ್ಯ, ಪರಿಶ್ರಮ, ಹವ್ಯಾಸ ಇತ್ಯಾದಿಗಳ ಬಗ್ಗೆ ತಿಳಿಯಲಾಗುತ್ತದೆ. ಮಂಗಳ ಗ್ರಹವು ನಿಮ್ಮ ರಾಶಿಯಲ್ಲಿ ಎಂಟನೇ ಮನೆಗೆ ಸಂಚರಿಸಲಿದೆ. ಇದನ್ನು ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ಹೆಚ್ಚು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಮೇಷ ರಾಶಿಯಲ್ಲಿ ಮಂಗಳ ಸಂಚಾರವು ಆರೋಗ್ಯದ ದೃಷ್ಟಿಯಿಂದ ಅಷ್ಟು ಅನುಕೂಲಕರವಾಗಿಲ್ಲ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಆಹಾರ ಪಾನೀಯ ಮತ್ತು ದಿನಚರಿಯ ಬಗ್ಗೆ ವಿಶೇಷ ಕಾಳಜಿವಹಿಸಿ. ಈ ಮೂಲಕ ನೀವು ಅರೋಗ್ಯ ಸಮಸ್ಯೆಯನ್ನು ತಪ್ಪಿಸಬಹುದು.

ಮಂಗಳನ ಈ ಸಂಚಾರವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ, ಆದರೆ ಈ ಹಣ ಒಳ್ಳೆಯ ಮಾರ್ಗದಲ್ಲಿ ಬರದಿದ್ದರೆ ಇದರಿಂದ ತೊಂದರೆ ಅನುಭವಿಸಬೇಕಾಗುವುದು.

ಇದಲ್ಲದೆ ಮಂಗಳ ಸಂಚಾರವು ನಿಮ್ಮ ಅತ್ತೆಮನೆಯ ಬದಿಯಿಂದ ಯಾವುದೇ ರೀತಿಯ ಕೆಲವು ಶುಭ ಕಾರ್ಯಗಳನ್ನು ಸಹ ಸೂಚಿಸುತ್ತದೆ ಮತ್ತು ಅತ್ತೆಮನೆಯ ಜನರು ಈ ಸಮಯದಲ್ಲಿ ಹಣವನ್ನು ಪಡೆಯುತ್ತಾರೆ. ಈ ಸಂಚಾರವು ನಿಮ್ಮ ಜೀವನ ಸಂಗಾತಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಕಿರಿಯ ಸಹೋದರ ಸಹೋದರರೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ. ಏಕೆಂದರೆ ಈ ಸಮಯದಲ್ಲಿ ಅವರಿಗೆ ನಿಮ್ಮ ಅಗತ್ಯವಿರಬಹುದು.

ಪರಿಹಾರ - ಮಂಗಳವಾರ ಯಾವುದೇ ದೇವಾಲಯಕ್ಕೆ ಹೋಗಿ ಬೆಲ್ಲ ಮತ್ತು ಗೋಧಿಯ ದಾನ ಮಾಡಬೇಕು.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯ ಸ್ಥಳೀಯರಿಗೆ ಮಂಗಳ ಗ್ರಹವು ಏಳನೇ ಮತ್ತು ಎರಡನೇ ಮನೆಯ ಅಧಿಪತಿಯಾಗಿದ್ದಾನೆ. ಎರಡನೇ ಮನೆಯ ಮೂಲಕ ನಮ್ಮ ಕುಟುಂಬ, ಧ್ವನಿ, ಆಹಾರ ಪಾನೀಯದ ಬಗ್ಗೆ ಹೇಳಲಾಗುವುದು, ಇದಲ್ಲದೆ ಏಳನೇ ಮನೆಯ ಮೂಲಕ ನಮ್ಮ ಮದುವೆ, ಜೀವನ ಸಂಗಾತಿ, ವ್ಯಾಪಾರ ಪಾಲುದಾರಿಕೆ, ಆಮದು ರಾಫ್ತು ಇತ್ಯಾದಿಗಳ ಬಗ್ಗೆ ತಿಳಿಯಲಾಗುವುದು. ಈ ಕಾರಣದಿಂದಾಗಿ ನೀವು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಬಹುದು. ಸಂಚಾರದ ಈ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ರಾಶಿಯಿಂದ ಏಳನೇ ಮನೆಗೆ ಸಾಗುತ್ತದೆ. ಪರಿಣಾಮವಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ಈ ಸಂಚಾರದ ಪರಿಣಾಮವಾಗಿ, ನಿಮ್ಮ ಜೀವನ ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ ಕಾಣುವಿರಿ. ಅವರಲ್ಲಿ ಆತ್ಮವಿಶ್ವಾಸಕೊರತೆ ಮತ್ತು ಅಸಹನೆ ಎರಡೂ ಹೆಚ್ಚಾಗುತ್ತವೆ. ಅವರು ಸ್ವಲ್ಪ ಹಠಮಾರಿಯಾಗುತ್ತಾರೆ ಮತ್ತು ಅವರು ತಮ್ಮ ಮಾತುಗಳೇ ಸರಿಯಂದು ವಾದಿಸುತ್ತಾರೆ. ಆದರೆ ನೀವು ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು. ಜೀವನ ಸಂಗಾತಿಯ ಆರೋಗ್ಯವು ಉತ್ತಮವಾಗುವುದು, ಮೊದಲಿನಿಂದಲೇ ಯಾವುದೇ ಅರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ ಅದರಿಂದಲೂ ಮುಕ್ತರಾಗಬಹುದು.

ನೀವು ಉದ್ಯೋಗದಲ್ಲಿ ತೊಡಗಿದ್ದರೆ, ಈ ಸಂಚಾರವು ಉತ್ತಮವಾಗಿರುತ್ತದೆ ಮತ್ತು ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ಈ ಸ್ಥಾನವು ನಿಮ್ಮನ್ನು ಸಾಕಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ನೀವು ನಿಮ್ಮ ಕಠಿಣ ಪರಿಶ್ರಮವನ್ನು ಮುಂದುವರಿಸಬೇಕು ಮತ್ತು ಮನಸ್ಸನ್ನು ಹೊಂದಿ ಕೆಲಸ ಮಾಡಬೇಕು. ನೀವು ವ್ಯಾಪಾರದಲ್ಲಿ ನಡೆಸುತ್ತಿದ್ದರೆ, ಮಂಗಳ ಸಂಚಾರವು ವ್ಯಾಪಾರ ವಿಸ್ತರಣೆ ಮತ್ತು ಹಣ ಪೂರೈಕೆದಾರರಾಗಬಹುದು. ನಿಮ್ಮ ವ್ಯಾಪಾರ ಬೆಳೆಯುತ್ತದೆ ಮತ್ತು ನಿಮಗೆ ಪ್ರಯೋಜನಗಳು ಸಿಗುವುದು ಆರಂಭವಾಗುತ್ತದೆ. ಆದರೆ ಈ ಸಮಯದಲ್ಲಿ ವ್ಯಾಪಾರ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ಏಕೆಂದರೆ ಈ ಸಂಚಾರವು ನಿಮ್ಮ ದೇಹದಲ್ಲಿನ ಪಿತ್ತರಸದ ಅಂಶವನ್ನು ಹೆಚ್ಚಿಸುತ್ತದೆ, ಈ ಕಾರಣದಿಂದ ದೇಹದ ಜೀರ್ಣ ಕ್ರಿಯೆಯು ತೊಂದರೆಗೊಳಗಾಗುತದೆ. ನೀವು ರಕ್ತದೊತ್ತಡ, ಅಜೀರ್ಣ, ಅಸಿಡಿಟಿ, ಜ್ವರ, ತಲೆ ನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಈ ಸಮಯದಲ್ಲಿ ನೀವು ನಿಮ್ಮ ಜೀವನ ಸಂಗಾತಿಯನ್ನು ಸಂತೋಷಪಡಿಸಲು, ಅವರ ಆಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೀರಿ.

ಪರಿಹಾರ - ತಾಮ್ರದ ಪಾತ್ರದಲ್ಲಿ ಗೋಧಿ ಅಥವಾ ಬೆಲ್ಲವನ್ನು ತುಂಬಿ, ಅದನ್ನು ಯಾವುದೇ ದೇವಾಲಯದಲ್ಲಿ ದಾನ ಮಾಡಬೇಕು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಮಂಗಳ ಗ್ರಹದ ಈ ಸಂಚಾರವು ನಿಮಗೆ ಬಹಳ ಮುಖ್ಯವಾಗಿರಲಿದೆ. ಇದು ನಿಮ್ಮ ಮೊದಲನೇ ಮತ್ತು ಆರನೇ ಮನೆಯ ಅಧಿಪತಿ. ಆರನೇ ಮನೆಯನ್ನು ಕಷ್ಟದ ಮನೆಯೆಂದು ಪರಿಗಣಿಸಲಾಗಿದೆ. ಈ ಮನೆಯು ನಮ್ಮ ಜೀವನದ ಹೋರಾಟವನ್ನು ವ್ಯಾಖ್ಯಾನಿಸುತ್ತದೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ನಾವು ಅದನ್ನು ಎದುರಿಸುತ್ತೇವೆಯೋ ಅಥವಾ ಹೆದರಿಕೊಂಡು ಹೋಡಿಹೋಗುತ್ತೇವೆಯೋ ಎಂಬುದನ್ನು ಸಹ ಹೇಳುತ್ತದೆ. ಮಂಗಳ ಗ್ರಹವು ನಿಮ್ಮ ಆರನೇ ಮನೆಗೆ ಸಂಚರಿಸಲಿದೆ. ಆರನೇ ಮನೆಯಲ್ಲಿ ಮಂಗಳ ಸಂಚಾರವನ್ನು ಸಾಮಾನ್ಯವಾಗಿ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ.

ಈ ಸಂಚಾರದ ಪರಿಣಾಮವಾಗಿ ಉದ್ಯೋಗದಲ್ಲಿ ನೀವು ಅದ್ಭುತ ಬಡ್ತಿಯನ್ನು ಪಡೆಯುವ ಸಾಧ್ಯತೆ ಇದೆ. ನೀವು ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ ಮತ್ತು ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಇದು ನಿಮ್ಮ ಜನಪ್ರಿಯತೆ ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ. ನಿಮ್ಮ ವೆಚ್ಚಗಳನ್ನು ನಿಯಂತ್ರಿಸುತ್ತಿರಿ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ನೀವು ರಾಜಕಾರಣಿ ಅಥವಾ ಕಾನೂನಿಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದರೆ, ಈ ಸಂಚಾರವು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು. ಆರ್ಥಿಕವಾಗಿ ಲಾಭ ಪಡೆಯುವಿರಿ.

ಆದರೆ ಈ ಸಂಚಾರವು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು, ಅರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ನಿಮ್ಮ ತಂದೆ ಸಹ ತಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿ ಪಡೆಯುತ್ತಾರೆ. ಇದು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.

ಪರಿಹಾರ - ನೀವು ಮಂಗಳ ಬೀಜ ಮಂತ್ರ "ಓಂ ಕ್ರಾಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ" ಅನ್ನು ನಿಯಮಿತವಾಗಿ ಜಪಿಸಬೇಕು.

ಧನು ರಾಶಿ

ಧನು ರಾಶಿ

ಮಂಗಳ ಗ್ರಹವು ಧನು ರಾಶಿಚಕ್ರದ ಐದನೇ ಮತ್ತು ಹನ್ನೆರಡನೇ ಮನೆಯ ಮಾಲೀಕ ಮತ್ತು ಮಂಗಳ ಸಂಚಾರವು ನಿಮ್ಮ ಐದನೇ ಮನೆಯಲ್ಲಿ ಸಂಭವಿಸಲಿದೆ. ಪರಿಣಾಮವಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡಯುತ್ತಿರಿ. ಏಕೆಂದರೆ ಐದನೇ ಮನೆಯಲ್ಲಿ ಮಂಗಳ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ಪರಿಗಣಿಸಲಾಗುವುದಿಲ್ಲ.

ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ, ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗುವುದು.ಆದರೆ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಉದ್ಭವಿಸಬಹುದು.

ಈ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಪ್ರೀತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಪ್ರೇಮಿಯ ಕಡೆಯಿಂದ ಮದುವೆಗೆ ಒತ್ತಾಯ ಬರಬಹುದು. ಅದನ್ನು ನೀವು ಇಷ್ಟಪಡುವುದಿಲ್ಲ , ಆದರೆ ನೀವು ಒಳ್ಳೆಯ ರೀತಿಯಲ್ಲಿ ಅವರ ಮನವೊಲಿಸಲು ಪ್ರಯತ್ನಿಸಿ.

ನೀವು ವಿವಾಹಿತರಾಗಿದ್ದರೆ, ಈ ಸಮಯದಲ್ಲಿ ಜೀವನ ಸಂಗಾತಿ ಜೊತೆ ಖುಷಿಯಿಂದ ಕಳೆಯುವಿರಿ ಮತ್ತು ಅವರು ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯಬಹುದು. ನಿಮ್ಮ ಮಕ್ಕಳಿಗೆ ಸಂಚಾರವು ಸಾಮಾನ್ಯವಾಗಿರಲಿದೆ. ಅವರ ಆರೋಗ್ಯವು ಉತ್ತಮಾಗಿರುತ್ತದೆ ಆದರೆ ಅವರು ಸ್ವಲ್ಪ ಹಠಮಾರಿಯಾಗಬಹುದು. ಇದರಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮಂಗಳ ಸಂಚಾರವು ಶಿಕ್ಷಣ ಕ್ಷೇತ್ರಕ್ಕೆ ಸಾಮಾನ್ಯವಾಗಿಲಿದೆ. ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಸ್ವಲ್ಪ ಕಾಳಜಿ ವಹಿಸಿ.

ಪರಿಹಾರ - ಗುರುವಾರದಂದು ಹಸುವಿಗೆ ಬೆಲ್ಲವನ್ನು ತಿನ್ನಿಸಬೇಕು.

ಮಕರ ರಾಶಿ

ಮಕರ ರಾಶಿ

ಮಂಗಳ ಗ್ರಹವು ಮಕರ ರಾಶಿಚಕ್ರದ ನಾಲ್ಕನೇ ಮತ್ತು ಹನ್ನೊಂದನೇ ಮನೆಯ ಮಾಲೀಕ. ಮೇಷ ರಾಶಿಯಲ್ಲಿ ಮಂಗಳ ಸಂಚಾರವು ನಿಮ್ಮ ನಾಲ್ಕನೇ ಮನೆಯಲ್ಲಿ ಸಂಭವಿಸಲಿದೆ. ಆದರೆ ನಾಲ್ಕನೇ ಮನೆಯಲ್ಲಿ ಮಂಗಳ ಸಂಚಾರವನ್ನು ಹೆಚ್ಚು ಶುಭವೆಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.

ನಾಲ್ಕನೇ ಮನೆಯಲ್ಲಿ ಮಂಗಳ ಸಂಚಾರವು ನಿಮಗೆ ಆಸ್ತಿಗೆ ಸಂಬಂಧಿಸಿದ ಲಾಭವನ್ನು ತರುತ್ತದೆ ಅಂದರೆ ಸ್ವಂತ ಮನೆಯನ್ನು ತೆಗೆದುಕೊಳ್ಳುವ ನಿಮ್ಮ ಆಸೆ ಈಡೇರುವುದು. ಕೆಲವರು ಈ ಸಂಚಾರದ ಸಮಯದಲ್ಲಿ ವಾಹನವನ್ನು ಖರೀದಿಸಬಹುದು.

ಮತ್ತೊಂದೆಡೆ ಇದಕ್ಕೆ ವಿರುದ್ಧವಾಗಿ, ನಿಮ್ಮ ತಾಯಿಯ ಆರೋಗ್ಯವನ್ನು ಈ ಸಂಚಾರವು ಕಾಡುತ್ತದೆ. ಅವರ ನಡವಳಿಕೆಯಲ್ಲಿ ತೀಕ್ಷ್ಣತೆಯೂ ಬರುತ್ತದೆ. ಅದು ಕುಟುಂಬದ ಶಾಂತಿಯನ್ನು ದುರ್ಬಲಗೊಳಿಸುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿಸಮಸ್ಯೆಯಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದ ಅವಶ್ಯಕ ಮತ್ತು ಜವಾಬ್ದಾರಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು.

ಮಂಗಳ ಗ್ರಹವು ನಿಮ್ಮ ವೃತ್ತಿ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಉದ್ಯೋಗದಲ್ಲಿ ನಿಮ್ಮಕೋಪದ ನಡವಳಿಕೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಸ್ವಯಂ ನಿಯಂತ್ರಣವನ್ನು ಇಟ್ಟುಕೊಂಡು ನಿಮ್ಮ ಕೆಲಸವನ್ನು ಮಾಡಬೇಕು. ಈ ಸಂಚಾರದ ಪರಿಣಾಮದಿಂದಾಗಿ ದಾಂಪತ್ಯ ಜೀವನದಲ್ಲಿ ಒತ್ತಡ ಹೆಚ್ಚಾಗುತ್ತದೆ. ಜೀವನ ಸಂಗಾತಿಯೊಂದಿಗಿನ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ಸ್ವಲ್ಪ ಜಾಗರೂಕರಾಗಿರಿ. ಈ ಸಂಚಾರವು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ.

ಪರಿಹಾರ - ಮಂಗಳವಾರ ನೀವು ಯಾವುದೇ ದೇವಸ್ಥಾನಕ್ಕೆ ಹೋಗಿ ಕೆಂಪು ಬಣ್ಣದ ಧ್ವಜವನ್ನು ಹಾಕಬೇಕು.

ಕುಂಭ ರಾಶಿ

ಕುಂಭ ರಾಶಿ

ಮಂಗಳ ದೇವ ಕುಂಭ ರಾಶಿಯ ಮೂರನೇ ಮತ್ತು ಹತ್ತನೇ ಮನೆಯ ಅಧಿಪತಿ. ಮಂಗಳನ ಶಕ್ತಿಯಿಂದ ನೀವು ನಿಮ್ಮ ಕೆಲಸದ ಸ್ಥಳವನ್ನು ಬಲಪಡಿಸಲು ಪ್ರಯತ್ನಿಸಬಹುದು. ಮಂಗಳನ ಸಂಚಾರವು ನಿಮ್ಮ ಮೂರನೇ ಮನೆಯಲ್ಲಿ ಸಂಭವಿಸಲಿದೆ, ಆದ್ದರಿಂದ ಶುಭ ಫಲಿತಾಂಶವನ್ನು ನಿರೀಕ್ಷಿಸಬಹುದು.

ಮಂಗಳ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಕಾಗುತ್ತದೆ. ಸವಾಲನ್ನು ಸ್ವೀಕರಿಸುವ ನಿಮ್ಮ ಪ್ರವೃತ್ತಿಯಿಂದಾಗಿ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು.

ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಮತ್ತು ಅವರು ಬಯಸಿದರೂ ನಿಮಗೆ ನೋವು ನೀಡಲು ಸಾಧ್ಯವಾಗುವುದಿಲ್ಲ. ನೀವು ಆಟಗಾರರಾಗಿದ್ದರೆ, ಮಂಗಳ ಸಂಚಾರವು ನಿಮಗೆ ಯಶಸ್ಸು ನೀಡುತ್ತದೆ ಮತ್ತು ನಿಮ್ಮ ಕ್ರೀಡೆಯಲ್ಲಿ ನೀವು ಎತ್ತರವನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.

ಮಂಗಳ ಸಂಚಾರದ ಸಮಯದಲ್ಲಿ ನೀವು ಕೆಲವು ಪ್ರವಾಸಗಳನ್ನು ಸಹ ಮಾಡುತ್ತೀರಿ ಮತ್ತು ಈ ಪ್ರವಾಸಗಳು ನಿಮಗೆ ಲಾಭದ ಮಾರ್ಗವನ್ನು ಮಾಡಿಕೊಡುತ್ತವೆ. ನಿಮ್ಮ ಸ್ನೇಹಿತರ ಸಂಖ್ಯೆಯೂ ಹೆಚ್ಚಾಗುತ್ತದೆ. ಏಕೆಂದರೆ ಈ ಪ್ರಯಾಣಗಳಲ್ಲಿ ನೀವು ಕೆಲವು ಹೊಸ ಜನರನ್ನು ಭೇಟಿಯಾಗುತ್ತೀರಿ ಮತ್ತು ಅವರೊಂದಿಗೆ ನಿಕಟತೆಯನ್ನು ಅನುಭವಿಸುತ್ತೀರಿ.

ನಿಮ್ಮ ಉದ್ಯೋಗದಲ್ಲೂ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನೀವು ವ್ಯಾಪಾರ ನಡೆಸುತ್ತಿದ್ದರೆ ಲಾಭ ಬರುವುದು.

ಪರಿಹಾರ - ಮಂಗಳವಾರದ ದಿನ ದಾಳಿಂಬೆ ಮರಕ್ಕೆ ನೀರನ್ನು ಅರ್ಪಿಸಿ.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಚಕ್ರದ ಜನರಿಗೆ ಮಂಗಳ ಗ್ರಹವು ನಿಮ್ಮ ಎರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದ್ದಾನೆ. ಮಂಗಳ ಎರಡನೇ ಮನೆಯ ಸಂಚಾರ ನಿಮಗೆ ಅನುಕೂಲಕರವಲ್ಲ. ಆದರೂ ಇದು ನಿಮಗೆ ಕೆಲವು ಉತ್ತಮ ಫಲಿತಾಂಶಗಳನ್ನು ತರಲಿದೆ. ಏಕೆಂದರೆ ತನ್ನದೇ ರಾಶಿಯಲ್ಲಿ ಸಾಗಲಿದೆ ಮತ್ತು ನಿಮ್ಮ ಹಣಕಾಸಿನ ಮನೆಯ ಮಾಲೀಕ ಕೂಡ ಆಗಿದೆ.

ಮಂಗಳ ಸಂಚಾರದ ಪರಿಣಾಮದಿಂದಾಗಿ, ನಿಮ್ಮ ಜೀವನದಲ್ಲಿ ನೀವು ಹಣವನ್ನು ಪಡೆಯುತ್ತೀರಿ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಅತ್ಯಂತ ಬಲಗೊಳ್ಳುತ್ತದೆ. ನೀವು ಅದೃಷ್ಟದ ಸಂಪೂರ್ಣ ಸಹಾಯವನ್ನು ಪಡೆಯುತ್ತೀರಿ ಮತ್ತು ಈ ಹಣದ ಮೂಲಕ ಯಾವುದೇ ಕಾರ್ಯವನ್ನು ಉತ್ತಮವಾಗಿ ಪೂರ್ಣಗೊಳಿಸುವಿರಿ. ಈ ಸಂಚಾರವು ಕುಟುಂಬದ ಸ್ಥಾನಮಾನ ಮತ್ತು ಗೌರವವನ್ನು ಹೆಚ್ಚಿಸುತ್ತದೆ ಎಂದು ಸಾಬೀತುಪಠಿಸುತ್ತದೆ. ಆದರೂ ಯಾವುದಾದರೂ ಒಂದು ಕಾರಣದಿಂದ ಕುಟುಂಬದಲ್ಲಿ ಒತ್ತಡದ ಪರಿಸ್ಥಿತಿ ಉಳಿದಿರುತ್ತದೆ ಮತ್ತು ಕುಟುಂಬದ ಜನರು ಪರಸ್ಪರ ವಿವಾದದಲ್ಲಿ ತೊಡಗಬಹುದು.

ನಿಮ್ಮ ಆರೋಗ್ಯದ ದೃಷ್ಟಿಯಿಂದ ಮಂಗಳ ಸಂಚಾರವು ಹೆಚ್ಚು ಅನುಕೂಲಕರವೆಂದು ಹೇಳಲಾಗುವುದಿಲ್ಲ ಮತ್ತು ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ಸಂಚಾರವು ಜೀವನ ಸಂಗಾತಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಅವರ ಬಗ್ಗೆಯೂ ಗಮನ ಹರಿಸಬೇಕು.

ಈ ಸಂಚಾರದ ಪರಿಣಾಮವಾಗಿ, ಶಿಕ್ಷಣದ ಕ್ಷೇತ್ರದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಮಂಗಳನ ಈ ಸಂಚಾರವು ಸಾಕಷ್ಟು ಅನುಕೂಲಕರವಾಗಿರುತ್ತದೆ. ಉನ್ನತ ಶಿಕ್ಷಣವನ್ನು ಗಳಿಸುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಅಧ್ಯಯನದೊಂದಿಗೆ ಅರೆಕಾಲಿಕ ಉದ್ಯೋಗವನ್ನು ಮಾಡಿ ಸ್ವಲ್ಪ ಹಣವನ್ನು ಸಂಪಾದಿಸಲು ಪ್ರಾರಂಭಿಸುತ್ತಾರೆ.

ಈ ಸಂಚಾರದ ಪರಿಣಾಮದಿಂದ ನಿಮ್ಮ ಪ್ರೀತಿ ಜೀವನದಲ್ಲಿ ಸಮಯ ಉತ್ತಮವಾಗಿರುತ್ತದೆ, ಆದರೂ ಈ ಮಧ್ಯೆ ನಿಮ್ಮ ನಡುವೆ ವೈಮನಸ್ಸು ಸಾಧ್ಯತೆ ಇದೆ ಆದರೆ ಅವು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತವೆ ಮತ್ತು ಶೀಘ್ರದಲ್ಲೇ ಮತ್ತೆ ಮಾತುಕತೆ ಆರಂಭವಾಗುತ್ತದೆ.

ಪರಿಹಾರ - ಮೂರು ಮುಖ ರುದ್ರಾಕ್ಷವನ್ನು ಧರಿಸುವುದರಿಂದ ನಿಮ್ಮ ಅದೃಷ್ಟವು ಬಲಗೊಳ್ಳುತ್ತದೆ.

English summary

Mars Transit in Aries on 24 December 2020 Effects on Zodiac Signs In kannada

Mars Transit in Aries Effects on Zodiac Signs in kannada: The Mars Transit in Aries will take place on 24 December 2020 Learn about remedies to perform in kannada...
X
Desktop Bottom Promotion