Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅಸ್ಥಿಪಂಜರದಂತೆ ಕಾಣಿಸಲು ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾದ!
ಹುಚ್ಚುತನ ಮತ್ತು ಫ್ಯಾಷನ್‌ನ ಮಧ್ಯೆ ವ್ಯತ್ಯಾಸವಿದೆ. ಆದರೆ ಇಂದಿನ ದಿನಗಳಲ್ಲಿ ಕೆಲವರು ಜನಪ್ರಯತೆಗಾಗಿ ಹುಚ್ಚುತನಕ್ಕೆ ಇಳಿದಿರುವುದನ್ನು ನಾವು ನೋಡುತ್ತಿದ್ದೇವೆ. ನಿಮಗೆ ಜೀವನದಲ್ಲಿ ಒಂದು ಗುರಿಯಿದ್ದರೆ ಮತ್ತು ನಿಮ್ಮೊಳಗೆ ಆ ಫ್ಯಾಷನ್ ಇದ್ದರೆ ಆಗ ನೀವು ಇದನ್ನು ಹೊರಜಗತ್ತಿಗೆ ತೋರಿಸಿಕೊಳ್ಳಬಹುದು. ಇದು ನಿಮ್ಮೊಳಗೆ ಒಂದು ಹುಚ್ಚುತನ ಉಂಟು ಮಾಡುತ್ತದೆ.
ಈ ಲೇಖನದಲ್ಲಿ ವ್ಯಕ್ತಿಯೊಬ್ಬನಿಗೆ ಅಸ್ಥಿಪಂಜರದ ಬಗ್ಗೆ ತುಂಬಾ ಫ್ಯಾಷನ್ ಇತ್ತು. ಇದರಿಂದಾಗಿ ಆತ ತನ್ನನ್ನು ಕೂಡ ಜೀವಂತ ಅಸ್ಥಿಪಂಜರವಾಗಿ ನೋಡಲು ಬಯಸಿದ. ಈ ನೈಜ ಕಥೆಯ ಬಗ್ಗೆ ನೀವು ತಿಳಿಯಿರಿ.ಕಲಾಕ ಸ್ಕಲ್ ಎಂಬಾತ ಕೊಲಂಬಿಯಾದ 22 ಹರೆಯದ ಜನಪ್ರಿಯ ಟ್ಯಾಟೂ ಕಲಾವಿದ. ತುಂಬಾ ಕೆಲವೊಂದು ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಂಡು ಆತ ವಿಚಿತ್ರವಾಗಿ ಕಾಣಿಸಿಕೊಳ್ಳುವುದಕ್ಕೆ ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾನೆ.
ತನಗೆ ಬಾಲ್ಯದಿಂದಲೇ ಅಸ್ಥಿಪಂಜರಗಳೆಂದರೆ ತುಂಬಾ ಇಷ್ಟವಾಗಿದ್ದವು ಎಂದು ಈ ಯುವ ಕಲಾವಿದ ಹೇಳಿಕೊಂಡಿದ್ದಾನೆ. ಈತ ತನ್ನ ತಾಯಿಯ ಸಾವಿನ ಬಳಿಕ ಮುಖವನ್ನು ಕೂಡ ಅಸ್ಥಿಪಂಜರದಂತೆ ಮಾಡಿಕೊಂಡಿದ್ದಾನೆ. ಯಾಕೆಂದರೆ ತಾಯಿ ಜೀವಂತವಾಗಿದ್ದ ವೇಳೆ ಅವರು ಹೀಗೆ ಮಾಡಲು ಬಿಟ್ಟಿರಲಿಲ್ಲ.

Image Source-Eric Hincapie
ಅಸ್ಥಿಪಂಜರದಂತೆ ಕಾಣಿಸಿಕೊಳ್ಳಲು ಈ ಕಲಾವಿದ ವಿವಿಧ ರೀತಿಯ ಪ್ರಕ್ರಿಯೆಗಳಲ್ಲಿ ಭಾಗಿಯಾಗಬೇಕಾಯಿತು. ಅಸ್ಥಿಪಂಜರಗಳಿಗೆ ಮೂಗು ಇಲ್ಲದೆ ಇರುವ ಕಾರಣದಿಂದಾಗಿ ಆತ ಮೂಗಿನ ಕೆಳಭಾಗವನ್ನು ತೆಗೆಯಬೇಕಾಯಿತು. ಅಸ್ಥಿಪಂಜರಗಳಿಗೆ ಕಿವಿಗಳು ಕೂಡ ಇಲ್ಲದೆ ಇರುವ ಕಾರಣದಿಂದಾಗಿ ಆತ ಕಿವಿಯ ಹೆಚ್ಚಿನ ಭಾಗವನ್ನು ಕತ್ತರಿಸಿಕೊಂಡಿದ್ದಾನೆ. ನಾಲಗೆಯನ್ನು ಎರಡು ಸೀಲುಗಳನ್ನಾಗಿ ಮಾಡಿಕೊಂಡು ಅದಕ್ಕೆ ನೀಲಿ-ಕಪ್ಪು ಬಣ್ಣದಿಂದ ಕೂಡಿರುವಂತಹ ಬಣ್ಣದ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಇನ್ನಷ್ಟು ವಿಕಾರವಾಗಿ ಕಾಣಿಸುವ ಸಲುವಾಗಿ ಆತ ತನ್ನ ಕಣ್ಣುಗಳ ಸುತ್ತಲೂ ದೊಡ್ಡ ಕಣ್ಣಿನ ಆಕಾರ ರಚಿಸಿಕೊಂಡಿದ್ದಾನೆ. ಹಲ್ಲುಗಳನ್ನು ಕೂಡ ದೊಡ್ಡದಾಗಿಸಿಕೊಂಡಿದ್ದಾರೆ. ದವಡೆ ಮೂಳೆ ಮತ್ತು ದವಡೆ ಮೂಳೆ ಸನಿಹದಲ್ಲಿ ಆತ ದೊಡ್ಡ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ವರದಿಗಳು ಹೇಳುವ ಪ್ರಕಾರ ಕಲಾಕ ಸ್ಕಲ್ ಕೊಲಂಬಿಯಾದಲ್ಲಿ ಕಿವಿ ಮತ್ತು ಮೂಗಿನ ಊನಗೊಳಿಸುವ ಮೊದಲ ವ್ಯಕ್ತಿ. ಈ ಎಲ್ಲಾ ನಿರ್ಧಾರಗಳಿಂದಾಗಿ ಆತ ಈಗ ಮಧ್ಯಮಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಾನೆ. ಅಸ್ಥಿಪಂಜರವಾಗಿ ಕಾಣಿಸಿಕೊಳ್ಳುವ ತನ್ನ ಫ್ಯಾಷನ್‌ಗೆ ಜನರಿಗೆ ಆತ ತುಂಬಾ ಟೀಕೆಗೆ ಕೂಡ ಗುರಿಯಾಗಿದ್ದಾನೆ. ಟೀಕೆಗಳು ಬರುತ್ತಲೇ ಇದ್ದರೂ ಆತ ಇನ್ನಷ್ಟು ಬದಲಾವಣೆ ಮಾಡಿಕೊಳ್ಳಲು ಬಯಸಿದ್ದಾನೆ. ಈ ಬದಲಾವಣೆಯು ತನ್ನ ಕನಸನ್ನು ನನಸು ಮಾಡಿದೆ ಎಂದು ಹೇಳಿದ್ದಾನೆ.



Click it and Unblock the Notifications
