For Quick Alerts
ALLOW NOTIFICATIONS  
For Daily Alerts

ಮಕರ ಸಂಕ್ರಾಂತಿ: ಈ 3 ರಾಶಿಯವರಿಗೆ ತುಂಬಾನೇ ಅದೃಷ್ಟದ ಅವಧಿ

|

ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನು ಸೂರ್ಯ ಸಂಕ್ರಾಂತಿ ಎಂದು ಕರೆಯಲಾಗುವುದು. ಅದರಲ್ಲಿ ಮಕರ ಸಂಕ್ರಾಂತಿಗೆ ವೈದಿಕ ಶಾಸ್ತ್ರದಲ್ಲಿ ತುಂಬಾನೇ ಮಹತ್ವವಿದೆ. ಏಕೆಂದರೆ ಮಕರ ಸಂಕ್ರಾಂತಿಯಿಂದ ದಕ್ಷಿಣಾಯನ ಮುಗಿದು ಉತ್ತಾರಾಯಣ ಪ್ರಾರಂಭವಾಗುವುದು.

 Makara Sankranti

ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ, ಮಕರ ರಾಶಿಯ ಅಧಿಪತಿ ಶನಿ. ಶನಿ ಸೂರ್ಯನ ಪುತ್ರ. ಸೂರ್ಯನನ್ನು ಧೈರ್ಯ, ಉತ್ಸಾಹ, ಶೌರ್ಯ ಮತ್ತು ಆರೋಗ್ಯ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಶನಿಯನ್ನು ಕರ್ಮದ ದೇವತೆ ಎಂದು ಕರೆಯಲಾಗುವುದು.

ಸೂರ್ಯ ಶನಿಯ ತಂದೆ, ಆದರೂ ಅವರ ನಡುವೆ ದ್ವೇಷದ ಭಾವನೆ ಇದೆ. ಒಂದೇ ರಾಶಿಯಲ್ಲಿ ಇಬ್ಬರು ಶತ್ರುಗಳು ಅಂದರೆ ಶನಿ ಮತ್ತು ಸೂರ್ಯನ ಪ್ರವೇಶವು ಅನೇಕ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಸಂಚಾರ ಕೆಲವು ರಾಶಿಗಳ ತುಂಬಾ ಒಳ್ಳೆಯ ಪ್ರಭಾವ ಬೀರಿದೆ, ಆ ರಾಶಿಗಳೆಂದರೆ....

 ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯವರಿಗೆ ಸೂರ್ಯನು ಮಕರ ರಾಶಿಗೆ ಹೋಗುವುದು ಲಾಭದಾಯಕ. ವೃಷಭ ರಾಶಿಯ ಜನರು ಈ ಅವಧಿಯಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯುವ ಸಾಧ್ಯತೆಯಿದೆ. ಅದೃಷ್ಟದ ಕಾರಣದಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ಸಕ್ಸಸ್‌ ಕಾಣುವಿರಿ. ಪ್ರತಿ ಕೆಲಸದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವಾಗಬಹುದು. ಅದೇ ಸಮಯದಲ್ಲಿ, ವ್ಯಾಪಾರ ವರ್ಗವು ದೊಡ್ಡ ಆದೇಶ ಅಥವಾ ವ್ಯವಹಾರವನ್ನು ಪಡೆಯಬಹುದು. ಪ್ರಯಾಣಿಸುವ ಸಾಧ್ಯತೆಗಳಿವೆ. ಜನರು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮ್ಮನ್ನು ಪ್ರಶಂಸಿಸಲಾಗುತ್ತದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಹೆಚ್ಚಲಿದೆ. ಆರ್ಥಿಕ ಪ್ರಗತಿಯ ಬಲವಾದ ಸಾಧ್ಯತೆಯಿದೆ.

ಸೂರ್ಯನ ರಾಶಿ ಬದಲಾವಣೆಯು ವೃಷಭ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರಕ್ಕೆ ಬಹಳ ಮಂಗಳಕರವಾಗಿರುತ್ತದೆ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಸೂರ್ಯನ ಈ ಸಂಕ್ರಮಣ ಫಲದಾಯಕವಾಗಿರುತ್ತದೆ ನೀವು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವಿಶೇಷವಾಗಿ ಸಂಶೋಧನೆಗೆ ಸಂಬಂಧಿಸಿದ ಕೆಲಸಗಳಲ್ಲಿ ಸಕ್ರಿಯರಾಗಿರುವವರು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಏನಾದರೂ ಕಾಯಿಲೆಯಿದ್ದರೆ ಸುಧಾರಣೆ ಕಾಣುವಿರಿ.

ಮಕರ ರಾಶಿಗೆ ಸೂರ್ಯನ ಪ್ರವೇಶವು ಮಿಥುನ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರವು ಒಂದು ತಿಂಗಳು ಉತ್ತಮವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳೂ ದೂರವಾಗುತ್ತವೆ. ಆರ್ಥಿಕ ರಂಗದಲ್ಲಿ ಪ್ರಗತಿ ಕಾಣಲಿದೆ. ಮಾನಸಿಕ ಒತ್ತಡವನ್ನು ಕಡಿಮೆಯಾಗುವುದು.

ಮಕರ ರಾಶಿ

ಮಕರ ರಾಶಿ

ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಉಂಟಾಗುವುದು, ಶನಿ ಈಗಾಗಲೇ ಆ ರಾಶಿಯಲ್ಲಿದೆ, ಸೂರ್ಯ ಆ ರಾಶಿಗೆ ಸೂರ್ಯ ಸಂಚಾರ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕರ ರಾಶಿಯವರು ಶನಿ ಮತ್ತು ಸೂರ್ಯನ ಸಂಯೋಜನೆಯಿಂದ ವಿಶೇಷ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಇಡೀ ಕುಟುಂಬದ ಬೆಂಬಲ ಸಿಗಲಿದೆ. ಒಳ್ಳೆಯ ಸಮಯವನ್ನು ಕಳೆಯುವಿರಿ, ಹೊಸ ಕೆಲಸದ ಪ್ರಸ್ತಾಪ ಬರಬಹುದು. ಪ್ರಸ್ತುತ ಕೆಲಸದಲ್ಲಿ ನೀವು ಬಡ್ತಿ ಪಡೆಯಬಹುದು. ನೀವು ಮಕ್ಕಳಿಂದ ಸಂತೋಷವನ್ನು ಪಡೆಯುತ್ತೀರಿ.

ಮಕರ ರಾಶಿಯವರಿಗೆ ಕೆಲವು ದೊಡ್ಡ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ಮಕರ ರಾಶಿಯವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗಬಹುದು. ಹಳೆಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ವೃತ್ತಿ ಮತ್ತು ಉದ್ಯೋಗದಲ್ಲಿ ಪ್ರಗತಿಯ ದಾರಿ ತೆರೆಯುತ್ತದೆ.

English summary

Makar Sankranti 2023 Horoscope : These 3 Zodiac Signs are Lucky Ones

Makara Sankranti 2023: 3 Lucky Zodiac Signs, read on...
X
Desktop Bottom Promotion