Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಈ ವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕೋ ಅಥವಾ 15ಕ್ಕೋ ? ನಿಖರ ದಿನಾಂಕ ಹಾಗೂ ಪೂಜೆಗೆ ಶುಭ ಮುಹೂರ್ತದ ಬಗ್ಗೆ ಮಾಹಿತಿ ಇಲ್ಲಿದೆ
ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ವರ್ಷದ ಎಲ್ಲಾ ಹಿಂದೂ ಹಬ್ಬಗಳ ಮುನ್ನುಡಿಯಾಗಿ ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ.
ಪ್ರತಿ ತಿಂಗಳು ಸೂರ್ಯ ತನ್ನ ರಾಶಿ ಬದಲಾಯಿಸುತ್ತಾನೆ. ಸೂರ್ಯ ಮಕರ ರಾಶಿಗೆ ಸಂಚರಿಸಿದಾಗ ಮಕರ ಸಂಕ್ರಾಂತಿ ಆಚರಿಸಲಾಗುವುದು, ವೈದಿಕ ಶಾಸ್ತ್ರದ ಪ್ರಕಾರ ಮಕರ ಸಂಕ್ರಾಂತಿಯಿಂದ ಉತ್ತರಾಯಣ ಕಾಲ ಪ್ರಾರಂಭವಾಗುವುದು. ಕನ್ನಡ ಮಾಸಗಳ ಪ್ರಕಾರ ಉತ್ತರಾಯಣ ಕಾಲ ಮಾಘ ಮಾಸದಿಂದ ಆಷಾಢ ಮಾಸದವರೆಗೆ ಇರುತ್ತದೆ.
ಉತ್ತರಾಯಣ ಕಾಲದಲ್ಲಿ ರಾತ್ರಿ ಅವಧಿ ಕಡಿಮೆ ಇರುತ್ತದೆ, ಹಗಲು ದೀರ್ಘವಾಗಿರುತ್ತದೆ, ಅಲ್ಲದೆ ಮಕರ ಸಂಕ್ರಾಂತಿಯಿಂದ ಚಳಿಯ ತೀವ್ರತೆ ಕೂಡ ಕಡಿಮೆಯಾಗುತ್ತಾ ಬರುತ್ತದೆ.
ಉತ್ತರಾಯಣ ಕಾಲದ ಬಗ್ಗೆ ಇರುವ ನಂಬಿಕೆ
ಉತ್ತರಾಯಣ ಅವಧಿಯು ಮಂಗಳಕರ ಕಾರ್ಯ ಮಾಡಲು ತುಂಬಾ ಶ್ರೇಷ್ಠವಾಗಿದೆ ಎಂದು ಹೇಳಲಾಗುವುದು. ಈ ಅವಧಿಯಲ್ಲಿ ಮಾಡುವ ಪೂಜಾ ಕಾರ್ಯಗಳಿಗೆ, ಒಳ್ಳೆಯ ಕೆಲಸಗಳಿಗೆ ಶುಭ ಫಲ ಸಿಗುವುದು ಎಂದು ಹೇಳಲಾಗುವುದು. ಉತ್ತರಾಯಣ ಕಾಲ ಅಂದರೆ ಮಕರ ಸಂಕ್ರಾಂತಿಯಂದು ಪುಣ್ಯ ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ನಂತರ ಪೂಜಾ ಕಾರ್ಯಗಳನ್ನು ಮಾಡಲಾಗುವುದು.

2023ರಲ್ಲಿ ಮಕರ ಸಂಕ್ರಾಂತಿ 14ಕ್ಕೋ ಅಥವಾ 15ಕ್ಕೋ?
ಸಾಮಾನ್ಯವಾಗಿ ಮಕರ ಸಂಕ್ರಾಂತಿಯನ್ನು ಜನವರಿ 14ಕ್ಕೆ ಆಚರಿಸಲಾಗುವುದು, ಈ ವರ್ಷ ಮಕರ ಸಂಕ್ರಾಂತಿ ಯಾವಾಗ ಎಂಬ ಗೊಂದಲ ಕೆಲವರಲ್ಲಿದೆ.
ಈ ವರ್ಷ ಮಕರ ಸಂಕ್ರಾಂತಿ ಜನವರಿ 15, ಭಾನುವಾರದಂದು ಬಂದಿದೆ.
ಡ್ರಿಕ್ ಪಂಚಾಂಗದ ಪ್ರಕಾರ ಸಂಕ್ರಾಂತಿ ತಿಥಿ ಪ್ರಾರಂಭ: ಜನವರಿ 14, ರಾತ್ರಿ 08:57ಕ್ಕೆ
ಮಕರ ಸಂಕ್ರಾಂತಿ ಪುಣ್ಯ ಕಾಲ: ಬೆಳಗ್ಗೆ 06:46ರಿಂದ ಸಂಜೆ 06:12ರವರೆಗೆ
ಸಮಯ: 11 ಗಂಟೆ 27 ನಿಮಿಷ
ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲ: 06:46ರಿಂದ ರಾತ್ರಿ 08:40ರವರೆಗೆ
ಸಮಯ 1 ಗಂಟೆ 54 ನಿಮಿಷ
ಪೂಜೆಗೆ ಶುಭ ಮುಹೂರ್ತ
ಮಕರ ಸಂಕ್ರಾಂತಿ ಪುಣ್ಯ ಕಾಲ ಹಾಗೂ ಮಹಾ ಪುಣ್ಯ ಕಾಲದಲ್ಲಿ ಪೂಜೆಯನ್ನು ಮಾಡಿ.

ಮಕರ ಸಂಕ್ರಾಂತಿ ಪೂಜಾ ವಿಧಿ
ಮಕರ ಸಂಕ್ರಾಂತಿಯ ದಿನ ಬೆಳಗ್ಗೆ ಬೇಗ ಎದ್ದು ನದಿಯಲ್ಲಿ ಸ್ನಾನ ಮಾಡಬೇಕು, ನದಿಗೆ ಹೋಗಲು ಸಾಧ್ಯವಿಲ್ಲದಿದ್ದರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಸೇರಿಸಿ ಸ್ನಾನ ಮಾಡಿ. ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತುಂಬಿಸಿ, ಕಪ್ಪು ಎಳ್ಳು, ಸಣ್ಣ ತುಂಡು ಬೆಲ್ಲ ಮತ್ತು ಗಂಗಾಜಲವನ್ನು ತೆಗೆದುಕೊಂಡು ಸೂರ್ಯದೇವನ ಮಂತ್ರಗಳನ್ನು ಪಠಿಸುತ್ತಾ ಅರ್ಘ್ಯವನ್ನು ಅರ್ಪಿಸಿ. ಈ ದಿನ, ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದರ ಜೊತೆಗೆ, ಶನಿ ದೇವನಿಗೆ ಕೂಡ ಆರ್ಘ್ಯವನ್ನು ಅರ್ಪಿಸಿ. ಮಕರ ಸಂಕ್ರಾಂತಿಯಿಂದ ಒಂದು ತಿಂಗಳವರೆಗೆ ಸೂರ್ಯ ಹಾಗೂ ಸೂರ್ಯನ ಮಗನಾಗಿರುವ ಶನಿ ಒಂದೇ ರಾಶಿಯಲ್ಲಿ ಇರಲಿದೆ.

ಸೂರ್ಯ ಮಂತ್ರ
।। ನಮಃ ಸೂರ್ಯಾಯ ಶಾನ್ತಾಯ ಸರ್ವರೋಗ ನಿವಾರಿಣೇ
ಆಯುರರೋಗ್ಯ ಮೈಸ್ವೈರ್ಯಂ ದೇಹಿ ದೇವಃ ಜಗತ್ಪತೇ ।।
ಸೂರ್ಯ ಗಾಯತ್ರಿ ಮಂತ್ರ
।। ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾಥಿಕರಾಯಾ ಧೀಮಹಿ ತನಮೋ ಆದಿತ್ಯ ಪ್ರಚೋದಯಾತ ।।
।। ಓಂ ಆದಿತ್ಯಾಯ ವಿದ್ಮಹೇ ಮಾರ್ತ್ತಣ್ಡಾಯ ಧೀಮಹಿ ತನ್ನಃ ಸೂರ್ಯಃ ಪ್ರಚೋದಯಾತ್ ।।
।। ಓಂ ಸಪ್ತ-ತುರಂಗಾಯ ವಿದ್ಮಹೇ ಸಹಸ್ರ-ಕಿರಣಾಯ ಧೀಮಹಿ ತನ್ನೋ ರವಿಃ ಪ್ರಚೋದಯಾತ್ ।।

ಮಕರ ಸಂಕ್ರಾಂತಿ ದಿನ ಏನು ಮಾಡಬೇಕು?
* ಮಕರ ಸಂಕ್ರಾಂತಿಯ ದಿನ ಸ್ನಾನದ ನೀರಿಗೆ ಕಪ್ಪು ಎಳ್ಳು ಮತ್ತು ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ.
* ಇದರಿಂದ ಸೂರ್ಯನ ಕೃಪೆ ಪಡೆಯಬಹುದು ಹಾಗೂ ಜಾತಕದ ಗ್ರಹ ದೋಷಗಳನ್ನು ನಿವಾರಿಸುತ್ತದೆ. ಈ ರೀತಿ ಮಾಡುವುದರಿಂದ ಸೂರ್ಯ ಮತ್ತು ಶನಿಯ ಆಶೀರ್ವಾದವನ್ನು ಪಡೆಯಬಹುದು.
* ಈ ದಿನ ಎಳ್ಳು-ಬೆಲ್ಲ ದಾನ ಮಾಡಬೇಕು ಎಂಬ ನಂಬಿಕೆ ಇದೆ
* ಎಳ್ಳು-ಬೆಲ್ಲದ ಜೊತೆಗೆ ಕಬ್ಬು, ನೆಲಗಡಲೆ, ಅವರೆಕಾಳು ಈ ಬಗೆಯ ಆಹಾರವಸ್ತುಗಳನ್ನೂ ದಾನ ಮಾಡಿದರೆ ಒಳ್ಳೆಯದು.



Click it and Unblock the Notifications
