Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
Chandra Grahan 2021 Effects : ಚಂದ್ರಗ್ರಹಣ: 12 ರಾಶಿಗಳ ಮೇಲೆ ಗ್ರಹಣದ ಪರಿಣಾಮ
ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣ ಇದೇ ನವೆಂಬರ್ 19ರಂದು ಘಟಿಸಲಿದೆ, ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಚಲಿಸುವ ಈ ಭವ್ಯವಾದ ವಿದ್ಯಮಾನ ಶತಮಾನದ ಸುದೀರ್ಘ ಭಾಗಶಃ ಗ್ರಹಣ ಆಗಲಿದೆ. ಅಂದರೆ ಬರೋಬ್ಬರಿ 600 ವರ್ಷಗಳಲ್ಲಿ ಸಂಭವಿಸಲಿರುವ ಸುದೀರ್ಘ ಚಂದ್ರಗ್ರಹಣ ಇದಾಗಿದೆ. ಸಂಪೂರ್ಣ ಗ್ರಹಣವು 6 ಗಂಟೆ 1 ನಿಮಿಷಗಳ ಕಾಲ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಈ ಬಾರಿ ಸಂಭವಿಸುತ್ತಿರುವ ಚಂದ್ರಗ್ರಹಣವು ವೃಷಭ ರಾಶಿಯಲ್ಲಿ ಸಂಭವಿಸಲಿದೆ. ಜ್ಯೋತಿಷಿಗಳ ಪ್ರಕಾರ, ಚಂದ್ರಗ್ರಹಣವು ನಮ್ಮ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಶುಭವಾದರೆ ಇನ್ನು ಕೆಲವು ರಾಶಿಗಳಿಗೆ ಇದು ಅಶುಭ ಎನ್ನಲಾಗುತ್ತದೆ, ಚಂದ್ರಗ್ರಹಣವು ನಿಮ್ಮ ರಾಶಿಚಕ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಗ್ರಹಣವು ನಿಮ್ಮ ಆದಾಯದಲ್ಲಿ ಬದಲಾವಣೆಯನ್ನು ಅನುಭವಿಸಬಹುದು ಆದ್ದರಿಂದ ನೀವು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ನಿಮಗೆ ಕೆಲವು ಅವಕಾಶಗಳು ಬರುವ ಸಾಧ್ಯತೆಯಿದೆ, ಆದ್ದರಿಂದ ಅದನ್ನು ಕಳೆದುಕೊಳ್ಳಬೇಡಿ ಅದು ನಿಮ್ಮ ವೃತ್ತಿಜೀವನವನ್ನು ಅಭಿವೃದ್ಧಿಪಡಿಸುತ್ತದೆ.

ವೃಷಭ ರಾಶಿ
ವರ್ಷದ ಕೊನೆಯ ಈ ಚಂದ್ರಗ್ರಹಣವು ನಿಮ್ಮ ರಾಶಿಚಕ್ರದಲ್ಲಿ ಸಂಭವಿಸುತ್ತದೆ. ಆದ್ದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ಜಾಗರೂಕರಾಗಿರಿ. ಹಣಕಾಸಿನ ವಿಷಯದಲ್ಲಿ, ನೀವು ನಿಷ್ಪ್ರಯೋಜಕ ವಸ್ತುಗಳ ಮೇಲೆ ಖರ್ಚು ಮಾಡಬಹುದು, ಆದ್ದರಿಂದ ನಿಮ್ಮ ವೆಚ್ಚವನ್ನು ನಿಕಟವಾಗಿ ಪರಿಶೀಲಿಸಿ. ಆರೋಗ್ಯದ ವಿಷಯದಲ್ಲಿ ನಿಮ್ಮ ಬಗ್ಗೆ ಹೆಚ್ಚು ಕಾಳಜಿವಹಿಸಿ, ಇಲ್ಲದಿದ್ದರೆ ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗೆ ತುತ್ತಾಗಬಹುದು.

ಮಿಥುನ ರಾಶಿ
ನೀವು ಆಧ್ಯಾತ್ಮಿಕ ವಿಚಾರದಲ್ಲಿ ಒಲವು ತೋರಬಹುದು ಮತ್ತು ಧ್ಯಾನದಲ್ಲಿ ಶಾಂತಿಯನ್ನು ಕಂಡುಕೊಳ್ಳಬಹುದು. ಕೆಲಸದಲ್ಲಿ, ದಿನವು ಶಾಂತಿಯುತ ಮತ್ತು ಆಹ್ಲಾದಕರವಾಗಿರುತ್ತದೆ. ಆರೋಗ್ಯದಲ್ಲಿ, ವಿಷಯಗಳು ಉತ್ತಮವಾಗಿರುತ್ತವೆ, ಆದರೆ ಅನಾರೋಗ್ಯಕರ ಆಹಾರವನ್ನು ಸೇವಿಸದಂತೆ ನಿಮಗೆ ಸಲಹೆ ನೀಡಲಾಗುತ್ತದೆ.

ಕರ್ಕ ರಾಶಿ
ಈ ಚಂದ್ರಗ್ರಹಣವು ನಿಮ್ಮ ಕುಂಡಲಿಯ 11ನೇ ಮನೆಯಲ್ಲಿ ಇರುತ್ತದೆ, ಇದು ಸ್ನೇಹವನ್ನು ಕೇಂದ್ರೀಕರಿಸುತ್ತದೆ. ಆದ್ದರಿಂದ ನೀವು ನಿಮ್ಮ ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಯೋಜಿಸುತ್ತಿದ್ದರೆ ಅದು ಅತ್ಯುತ್ತಮ ದಿನವಾಗಿದೆ. ಅಲ್ಲದೆ, ನೀವು ನಿಮ್ಮ ಸ್ನೇಹಿತರಿಂದ ದೂರವಿದ್ದರೆ, ಸಂಬಂಧವನ್ನು ಸರಿಪಡಿಸಲು ಇದು ಅತ್ಯುತ್ತಮ ದಿನವಾಗಿದೆ.

ಸಿಂಹ ರಾಶಿ
ಈ ಗ್ರಹಣದ ದಿನವು ನಿಮಗೆ ಒಳ್ಳೆಯದಾಗಿರಬಹುದು, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರದಿಂದಿರಿ. ಕೆಲಸದಲ್ಲಿ, ನೀವು ಆಹ್ಲಾದಕರ ದಿನವನ್ನು ಹೊಂದಬಹುದು. ಹಣಕಾಸಿನ ವಿಷಯದಲ್ಲಿ, ಖರ್ಚುಗಳಿಗೆ ಗಮನ ಕೊಡಿ. ಆರೋಗ್ಯದ ವಿಚಾರದಲ್ಲಿ, ನೀವು ಸಂತೋಷ ಮತ್ತು ಒತ್ತಡ ಮುಕ್ತವಾಗಿರಬಹುದು.

ಕನ್ಯಾ ರಾಶಿ
ಈ ಗ್ರಹಣದ ಸಮಯದಲ್ಲಿ ನಿಮ್ಮ ಹೃದಯವನ್ನು ಅನುಸರಿಸಿ ಮತ್ತು ಆ ಮಾರ್ಗದಲ್ಲಿ ನಡೆದರೆ ನೀವು ಯಶಸ್ವಿಯಾಗುತ್ತೀರಿ. ಎಲ್ಲವೂ ನೀವು ಅಂದುಕೊಂಡಂತೆ ನಡೆಯುತ್ತದೆ, ಶುಭ ದಿನ. ಇಂದು ನಿಮಗೆ ಅತ್ಯುತ್ತಮ ಸಮಯ.

ತುಲಾ ರಾಶಿ
ಗ್ರಹಣವು ನಿಮ್ಮ ರಾಶಿಚಕ್ರದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಮತ್ತು ವೃತ್ತಿಪರ ಮುಂಭಾಗದಲ್ಲಿ ನೀವು ಕಠಿಣ ಪರಿಶ್ರಮಕ್ಕೆ ಪ್ರತಿಫಲವನ್ನು ಪಡೆಯಬಹುದು. ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಲಾಭವನ್ನು ಪಡೆಯಬಹುದು. ಆದರೂ, ನಿಮ್ಮ ಮಾತಿನ ಮೇಲೆ ನಿಯಂತ್ರಣವನ್ನು ಇರಿಸಿಕೊಳ್ಳಿ, ಇಲ್ಲದಿದ್ದರೆ ನೀವು ಕೆಲಸದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು.

ವೃಶ್ಚಿಕ ರಾಶಿ
ಗ್ರಹಣದಲ್ಲಿ ನೀವು ದೀರ್ಘಕಾಲದ ಹಳೆಯ ಭಾವನೆಗಳನ್ನು ತೊಡೆದುಹಾಕುವ ಮೂಲಕ ಅಥವಾ ಹೊಸದನ್ನು ಅಳವಡಿಸಿಕೊಳ್ಳುವ ಮೂಲಕ ಸಂಬಂಧಗಳ ಬಲವಾದ ಅರ್ಥವನ್ನು ಅನುಭವಿಸಬಹುದು. ಆರೋಗ್ಯದ ದೃಷ್ಟಿಯಿಂದ, ದಿನವು ಆಹ್ಲಾದಕರವಾಗಿರುತ್ತದೆ, ಆದರೆ ನೀವು ಆಹಾರದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ.

ಧನು ರಾಶಿ
ಕಳೆದ ಕೆಲವು ದಿನಗಳಿಂದ ನೀವು ಸೋಮಾರಿತನವನ್ನು ಅನುಭವಿಸುತ್ತಿದ್ದರೆ ಈ ಗ್ರಹಣವು ಇದನ್ನು ಸರಿಪಡಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುವ ಮತ್ತು ಒತ್ತಡ ನಿರ್ವಹಿಸುವ ಸಾಧ್ಯತೆಯಿದೆ. ಕೆಲಸದಲ್ಲಿ ದಿನವು ಆಹ್ಲಾದಕರವಾಗಿರುತ್ತದೆ.

ಮಕರ ರಾಶಿ
ಈ ಗ್ರಹಣವು ಸೃಜನಶೀಲವಾಗಿ ಹೊರಹೊಮ್ಮುತ್ತದೆ. ಆದ್ದರಿಂದ ನಿಮ್ಮ ಪ್ರಣಯವು ಕಣ್ಮರೆಯಾಗುತ್ತಿದೆ ಎಂದು ನೀವು ಭಾವಿಸುತ್ತಿದ್ದರೆ, ಕಳೆದುಹೋದ ಪ್ರೀತಿಯನ್ನು ಪ್ರಚೋದಿಸಲು ಇದು ಸರಿಯಾದ ಸಮಯ. ಕೆಲಸದಲ್ಲಿ, ವಿಷಯಗಳು ಆಹ್ಲಾದಕರವಾಗಿರುತ್ತವೆ, ಆದರೆ ನಿಮ್ಮ ಮಾತಿನ ಮೇಲೆ ಹಿಡಿತ ಸಾಧಿಸಲು ನಿಮಗೆ ಸಲಹೆ ನೀಡಲಾಗುತ್ತದೆ.

ಕುಂಭ ರಾಶಿ
ಗ್ರಹಣವು ನಿಮ್ಮ ಪರವಾಗಿರುವುದರಿಂದ ನೀವು ಉತ್ತಮ ದಿನವನ್ನು ಹೊಂದಿರಬಹುದು. ಹಣಕಾಸಿನ ವಿಷಯದಲ್ಲಿ, ವಿಷಯಗಳು ಸುಗಮವಾಗಿರುತ್ತವೆ. ಕೆಲಸದಲ್ಲಿ ನೀವು ಹೊಸ ಜವಾಬ್ದಾರಿಗಳನ್ನು ಪಡೆಯಬಹುದು ಮತ್ತು ಕೆಲಸಕ್ಕೆ ಪ್ರಶಂಸೆ ಪಡೆಯಬಹುದು. ಆದಾಗ್ಯೂ, ನೀವು ದೊಡ್ಡ ಬಂಡವಾಳವನ್ನು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ನಿಮ್ಮ ನಿರ್ಧಾರವನ್ನು ಅಂತಿಮಗೊಳಿಸುವ ಮೊದಲು ಎರಡು ಬಾರಿ ಯೋಚಿಸಿ.

ಮೀನ ರಾಶಿ
ಕೆಲಸದಲ್ಲಿ ನಿಮ್ಮ ಅತ್ಯುತ್ತಮವಾದುದನ್ನು ನೀಡಲು ಯತ್ನಿಸಿ, ಬಡ್ತಿ ಪಡೆಯುವ ಸೂಚನೆ ಇದೆ. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ. ಹಣಕಾಸಿನ ಮೇಲೆ ಹಿಡಿತ ಇರಲಿ, ಸಾಲ ಮಾಡದಂತೆ ಪ್ರಯತ್ನಿಸಿ.



Click it and Unblock the Notifications











