Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ.26ಕ್ಕೆ ರಕ್ತ ಚಂದ್ರಗ್ರಹಣ: ನಿಮ್ಮ ರಾಶಿಗೆ ಇದರ ಪ್ರಭಾವ ಹೇಗಿರಲಿದೆ?
ಮೇ. 26ರಂದು 2021 ವರ್ಷದ ಮೊದಲ ಚಂದ್ರಗ್ರಹಣ. ಜ್ಯೋತಿಷ್ಯದಲ್ಲಿ ಗ್ರಹಣದ ಲೆಕ್ಕಾಚಾರ ತುಂಬಾನೇ ಇರುತ್ತದೆ. ಗ್ರಹಣದ ಪ್ರಭಾವ ದೇಶದ ಮೇಲೆ ಹೇಗೆ ಇರಲಿದೆ, ವ್ಯಕ್ತಿಯ ಮೇಲೆ ಹೇಗೆ ಇರಲಿದೆ ಎಂಬುವುದನ್ನು ವೈದಿಕ ಶಾಸ್ತ್ರ ಹೇಳುತ್ತದೆ.

ಗ್ರಹಣದ ಪ್ರಭಾವ ಪ್ರತಿಯೊಂದು ರಾಶಿಯ ಮೇಲೆ ಇರುತ್ತದೆ, ಕೆಲ ರಾಶಿಯ ಮೇಲೆ ಗ್ರಹಣದ ಪ್ರಭಾವ ಒಳ್ಳೆಯದಿದ್ದರೆ ಇನ್ನು ಕೆಲವು ರಾಶಿಯ ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ವಿಶ್ವಾಸ ಇರುವವರು ಇವುಗಳನ್ನು ಬಲವಾಗಿ ನಂಬುತ್ತಾರೆ.
ಇಲ್ಲಿ ಜ್ಯೋತಿಷ್ಯ ಪ್ರಕಾರ ಮೇ 26, 2021ರ ರಕ್ತ ಚಂದ್ರಗ್ರಹಣ ನಿಮ್ಮ ರಾಶಿಯ ಮೇಲೆ ಬೀರುವ ಪ್ರಭಾವದ ಬಗ್ಗೆ ಹೇಳಲಾಗಿದೆ ನೋಡಿ:
ಮೇ. 26 ಚಂದ್ರಗ್ರಹಣ
ಗ್ರಹಣ ಪ್ರಾರಂಭ: ಮಧ್ಯಾಹ್ನ 2:17ಕ್ಕೆ
ಗ್ರಹಣ ಮುಕ್ತಾಯ ಸಂಜೆ 7: 19ಕ್ಕೆ
ಎಲ್ಲೆಲ್ಲಿ ನೋಡಬಹುದು: ಭಾರತ, ಪೂರ್ವ ಏಷ್ಯಾ. ಆಷ್ಟ್ರೇಲಿಯಾ, ಹಿಂದೂ ಮಹಾ ಸಾಗರ, ಪೆಸಿಫಿಕ್ ಸಾಗರ, ಅಮೆರಿಕ

ಮೇಷ ರಾಶಿ
ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಿ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ನಿಮ್ಮ ಮಕ್ಕಳನ್ನು ನಿಯಂತ್ರಿಸುವ ಬದಲಿಗೆ ಅವರ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿ. ಈ ಗ್ರಹಣ ನಿಮ್ಮ ಸಾಮರ್ಥ್ಯದ ಅರಿವು ನಿಮಗೆ ಮೂಡಿಸುತ್ತದೆ. ನಿಮ್ಮ ಆರೋಗ್ಯದ ಕಡೆ ಗಮನ ನೀಡಿ.

ವೃಷಭ ರಾಶಿ
ನಿಮ್ಮ ಆಸೆ ಎಲ್ಲವೂ ನೆರವೇರಲಿದೆ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು. ನಿಮ್ಮ ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ, ಅದೇ ಸಮಯದಲ್ಲಿ ಉಳಿತಾಯದ ಕಡೆಯೂ ಗಮನ ಹರಿಸಬೇಕು. ನಿಮ್ಮ ಮಾತುಗಳು ಇತರರನ್ನು ನೋಯಿಸದಂತೆ ಎಚ್ಚರವಹಿಸಿ.

ಮಿಥುನ ರಾಶಿ
ಈ ಗ್ರಹಣ ಮಿಥುನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುವುದು, ಮಾನಸಿಕ ಒತ್ತಡ ಕಡಿಮೆಯಾಗುವುದು. ಧ್ಯಾನಕ್ಕೆ ಸ್ವಲ್ಪ ಸಮಯ ನೀಡಿ. ಕೆಲವೊಂದು ಅನಿರೀಕ್ಷಿತ ಘಟನೆ ಸಂಭವಿಸಬಹುದು.

ಕರ್ಕ ರಾಶಿ
ಮೊದಲು ನಿಮ್ಮ ಮನಸ್ಸು ಏನು ಹೇಳುತ್ತದೆ ಅದಕ್ಕೆ ಗಮನ ನೀಡಿ, ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಿರಿ. ನೀವು ಆಧ್ಯಾತ್ಮದ ಕಡೆ ಹೆಚ್ಚಿನ ಒಲವು ತೋರುತ್ತೀರಿ. ಮಾನಸಿಕ ಒತ್ತಡ, ಹೊಟ್ಟೆಗೆ ಸಂಬಂಧಿಸಿದ ನೋವು ದೂರವಾಗುವುದು. ಉದ್ಯಮ, ವ್ಯವಹಾರದಲ್ಲೂ ಒಳ್ಳೆಯ ಫಲಿತಾಂಶ ಸಿಗುವುದು. ಆರೋಗ್ಯ ಸಂಬಂಧಿತ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.

ಸಿಂಹ ರಾಶಿ
ಸಂಬಂಧ ಚೆನ್ನಾಗಿರುತ್ತದೆ, ಸ್ವಲ್ಪ ಆರ್ಥಿಕ ನಷ್ಟ ಉಂಟಾದರೂ ನಂತರ ವ್ಯವಹಾರದಲ್ಲಿ ಯಶಸ್ಸು ಬರುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಬದಲಾವಣೆ ಮಾಡಲು ಹೋಗಬೇಡಿ. ತಪ್ಪು ಕಲ್ಪನೆಯಿಂದ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿ. ನಿಮ್ಮ ತಾಯಿಯ ಆರೋಗ್ಯದ ಕಡೆ ಗಮನ ನೀಡಿ.

ಕನ್ಯಾ ರಾಶಿ
ನೀವು ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತೀರಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗುತ್ತೀರಿ, ಆರ್ಥಿಕ ಸ್ಥಿತಿ ತುಂಬಾ ಉತ್ತಮವಾಗುವುದು. ಆತುರದ ನಿರ್ಧಾರ ತಪ್ಪಿಸಿ, ನಿಮ್ಮ ಸುತ್ತಲಿನ ವ್ಯಕ್ತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ.

ತುಲಾ ರಾಶಿ
ತುಲಾ ರಾಶಿಯ ಪ್ರೇಮಿಗಳಿಗೆ ಒಳ್ಳೆಯ ಸಮಯ. ಹಣದ ಹೂಡಿಕೆ ಮಾಡುವುದು ಅಥವಾ ಸಾಲ ನೀಡುವುದು ಮಾಡಬೇಡಿ. ನಿಮ್ಮ ಹಾಗೂ ಸಂಗಾತಿಯ ಆರೋಗ್ಯದ ಕಡೆ ಗಮನ ನೀಡಿ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ.

ವೃಶ್ಚಿಕ ರಾಶಿ
ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆ ಗಮನ ನಿಡಿ. ಸಂಗಾತಿಯೊಂದಿಗೆ ಅನವಶ್ಯಕ ತರ್ಕ ಮಾಡಲು ಹೋಗಬೇಡಿ. ಇನ್ನು ಆರ್ಥಿಕ ನಷ್ಟದ ಸಾಧ್ಯತೆ ಇದೆ. ಆಧ್ಯಾತ್ಮದ ಕಡೆ ಒಲವು ಹೆಚ್ಚುವುದು. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಉತ್ತಮ ಪರಿಹಾರ.

ಧನು ರಾಶಿ
ನಿಮ್ಮ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿ. ಅನವಶ್ಯಕ ತರ್ಕ ಬೇಡ. ಆರ್ಥಿಕ ನಷ್ಟದ ಸಾಧ್ಯತೆ ಇದೆ. ನಿದ್ರಾಹೀನತೆ ಅಥವಾ ಆರೋಗ್ಯ ಸಂಬಂಧಿತ ಸಮಸ್ಯೆ ಕಾಡಬಹುದು.

ಮಕರ ರಾಶಿ
ಅನಿರೀಕ್ಷಿತ ಪ್ರೀತಿ ನಿಮಗೆ ಸಿಗುವುದು. ಆರ್ಥಿಕ ಗಳಿಕೆಗೂ ಸಮಯ ಚೆನ್ನಾಗಿದೆ. ಯಶಸ್ಸು ನಿಮಗೆ ಲಭಿಸುವುದು, ಆದರೆ ಅದಕ್ಕಾಗಿ ವೈಯಕ್ತಿಕ ಬದುಕಿನಲ್ಲಿ ತ್ಯಾಗ ಮಾಡಬೇಕಾಗುವುದು. ಈ ವಿಷಯದಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಸಂಬಂಧದಲ್ಲಿ ಕೆಲ ಸಮಸ್ಯೆಗಳಿರಬಹುದು. ತಾಳ್ಮೆಯಿಂದ ಇರಿ, ಧ್ಯಾನ ಮಾಡಿ.

ಕುಂಭ ರಾಶಿ
ಅವಾಹಿತರೇ ಹೊಸ ಪ್ರೀತಿ ಹುಟ್ಟಬಹುದು. ವ್ಯವಹಾರ, ಉದ್ಯಮದಲ್ಲಿ ಏರಳಿತ ಇರುತ್ತದೆ. ಈ ಸಮಯ ನಿಮಗೆ ಷ್ಟು ಸೂಕ್ತವಾಗಿಲ್ಲ. ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದಿರಿ, ಪ್ರಯಾಣ ತಪ್ಪಿಸಿ, ನಿಮ್ಮ ಆರೋಗ್ಯದ ಕಡೆ ಗಮನ ನೀಡಿ.

ಮೀನ ರಾಶಿ
ದೊಡ್ಡ ಬದಲಾವಣೆಯನ್ನು ತಪ್ಪಿಸಿ. ತಾಯಿ ಮತ್ತು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಅನಗ್ಯತವಾಗಿ ತರ್ಕ ಮಾಡಬೇಡಿ. ಮಾತನಾಡಿ ತಪ್ಪು ಕಲ್ಪನೆಯನ್ನು ತೆಗೆದು ಹಾಕಿ.



Click it and Unblock the Notifications