Latest Updates
-
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ!
ಜನವರಿ 2023: ಈ 5 ರಾಶಿಯವರಿಗೆ ವರ್ಷದ ಆರಂಭ ತುಂಬಾ ಮಂಗಳಕರವಾಗಿದೆ
ವೈದಿಕ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಯವರಿಗೆ ವರ್ಷದ ಮೊದಲ ತಿಂಗಳು ತುಂಬಾನೇ ಮಂಗಳಕರವಾಗಿದೆ.
5 ರಾಶಿಯವರು ಈ ತಿಂಗಳಿನಲ್ಲಿ ಆರ್ಥಿಕ ಲಾಭ ಗಳಿಸುತ್ತಾರೆ, ಆದಾಯ ಹೆಚ್ಚಾಗುವುದು ಇದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಉದ್ಯೋಗದಲ್ಲೂ ಪ್ರಗತಿ ಕಾಣುವಿರಿ. ಕೆಲಸವನ್ನು ಬದಲಾಯಿಸಲು ಬಯಸುವವರಿಗೆ ಈ ತಿಂಗಳು ಅನುಕೂಲಕಕರವಾಗಿದೆ ಒಟ್ಟಿನಲ್ಲಿ ಈ ರಾಶಿಯವರಿಗೆ ವರ್ಷದ ಆರಂಭ ಅದೃಷ್ಟದಿಂದ ಕೂಡಿದೆ.
ವರ್ಷದ ಆರಂಭದ ಅದೃಷ್ಟದ ರಾಶಿಗಳ ಕುರಿತು ವಿವರವಾಗಿ ನೋಡೋಣ:

ಮೇಷ ರಾಶಿ
ಈ ತಿಂಗಳು ಮೇಷ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ತಂದಿದೆ. ಈ ಅವಧಿಯಲ್ಲಿ ನಿಮ್ಮ ಯೋಜನೆಯಂತೆ ಕೆಲಸವನ್ನು ಪೂರ್ಣನಗೊಳಿಸಲು ಸಾಧ್ಯವಾಗುವುದು. ಈ ತಿಂಗಳಿನಲ್ಲಿ ಹೌಟುಂಬಿಕ ಹಾಗೂ ವೈಯಕ್ತಿಕ ಸಮಸ್ಯೆಳು ಬಗೆಹರಿಯುವುದು. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು ದೊರೆಯಲಿದೆ. ವ್ಯವಹಾರಸ್ಥರಿಗೆ ಈ ಅವಧಿ ಅನುಕೂಲಕರವಾಗಿದೆ, ಈ ಅವಧಿಯಲ್ಲಿ ಲಾಭ ಗಳಿಸಲು ಸಾಧ್ಯವಾಗುವುದು. ರಾಜಕೀಯ ವ್ಯಕ್ತಿಗಳಿಗೂ ಈ ಅವಧಿ ಅನುಕೂಲಕರವಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ, ವರ್ಷದ ಮೊದಲ ತಿಂಗಳು ಎಲ್ಲಾ ರೀತಿಯಲ್ಲೂ ಮಂಗಳಕರವಾಗಿದೆ. ಈ ಅವಧಿಯಲ್ಲಿ ನೀವು ನಿರೀಕ್ಷಿತ ಲಾಭ ಪಡೆಯುವಿರಿ. ಆರಂಭದಿಂದಲೇ ಒಳ್ಳೆಯ ಲಾಭ ಪಡೆಯುವಿರಿ.
ಈ ಅವಧಿಯಲ್ಲಿ ಸಂಬಂಧಗಳು ಉತ್ತಮವಾಗಿರುತ್ತದೆ. ಈ ರಾಶಿಯ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲಕರವಾಗಿದೆ. ಹೊಸ ಯೋಜನೆಗೆ ಕೈ ಹಾಕುವುದಾದರೆ ಅಥವಾ ವ್ಯವಹಾರ ವಿಸ್ತರಿಸಲು ಬಯಸುವುದಾದರೆ ಈ ಸಮಯ ಅನುಕೂಲಕರವಾಗಿದೆ.
ನವ ದಂಪತಿ ತಿಂಗಳ ಮಧ್ಯದಲ್ಲಿ, ಮಗುವಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ ಈ ತಿಂಗಳಿನಲ್ಲಿ ಮನೆಯ ದುರಸ್ತಿ ಮಾಡಬಹುದು. ಈ ತಿಂಗಳಿನಲ್ಲಿ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಧನು ರಾಶಿ
ಧನು ರಾಶಿಯವರಿಗೆ ಈ ತಿಂಗಳು ತುಂಬಾನೇ ಮಂಗಳಕರವಾಗಿದೆ. ಆರ್ಥಿಕವಾಗಿ, ಈ ತಿಂಗಳಿನಲ್ಲಿ ನಿರೀಕ್ಷಿತ ಲಾಭ ಗಳಿಸುತ್ತೀರಿ. ಉದ್ಯೋಗಿಗಳು ಹೆಚ್ಚುವರಿ ಆದಾಯದ ಮೂಲಗಳನ್ನು ಪಡೆಯುವ ಸಾಧ್ಯತೆ ಇದೆ.
ವ್ಯಾಪಾರಸ್ಥರು ಒಳ್ಳೆಯ ಲಾಭವನ್ನು ನೀವು ಪಡೆಯುವಿರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ಸಮಯವು ಹೆಚ್ಚು ಮಂಗಳಕರ ಮತ್ತು ಲಾಭವನ್ನು ತರಲಿದೆ.
ಈ ಸಮಯದಲ್ಲಿ, ಕುಟುಂಬಕ್ಕೆ ಸಂಬಂಧಿಸಿದ ಚಿಂತೆ ದೂರಾಗಲಿದೆ. ಈ ತಿಂಗಳಿನಲ್ಲಿ ಸೌಕರ್ಯ ಹೆಚ್ಚಿಸುವ ವಸ್ತುಗಳನ್ನು ಖರಿದಿಸುವಿರಿ. ಮಕ್ಕಳ ಕಡೆಯಿಂದ ಸಿಹಿ ಸುದ್ದಿ ಪಡೆಯುತ್ತೀರಿ. ವಿವಾಹಿತರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಮಕರ ರಾಶಿ :
ಮಕರ ರಾಶಿಯವರಿಗೆ ವರ್ಷದ ಮೊದಲ ತಿಂಗಳು ಹಣ, ಆರೋಗ್ಯ ಮತ್ತು ಸಂಬಂಧಗಳಲ್ಲಿ ಒಳ್ಳೆಯ ಸುಧಾರಣೆಯನ್ನು ತರಲಿದೆ. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆ ಹೊಂದಿರುವವರು ಈ ಅವಧಿಯಲ್ಲಿ ಸುಧಾರಣೆ ಕಾಣುವಿರಿ. ನಿಮಗೆ ಒಪ್ಪಿಸಿರುವ ಕೆಲಸವನ್ನು ಸಮಯೋಚಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದು, ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ.
ತಿಂಗಳ ಮಧ್ಯದಲ್ಲಿ, ಉದ್ಯೋಗಿಗಳ ವರ್ಗಾವಣೆ ಅಥವಾ ಬಡ್ತಿಯಲ್ಲಿ ಬರುವ ಯಾವುದೇ ಪ್ರಮುಖ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಗುರಿ ಮುಟ್ಟುಲು ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಸಹಾಯ ಮಾಡುತ್ತಾರೆ. ಕಮಿಷನ್ ಮತ್ತು ಗುತ್ತಿಗೆಯ ಮೇಲೆ ಕೆಲಸ ಮಾಡುವವರಿಗೆ ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ.
ಈ ಅವಧಿಯಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡುವ ಪ್ರಯಾಣವು ಪ್ರಯೋಜನಕಾರಿಯಾಗಲಿದೆ. ವ್ಯಾಪಾರ ವಿಷಯಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದು. ಪ್ರೇಮಿಗಳಿಗೆ, ವಿವಾಹಿತರಿಗೆ ಈ ಅವಧಿ ಅನುಕೂಲಕರ.

ಮೀನ ರಾಶಿ:
ಮೀನ ರಾಶಿಯವರಿಗೆ ವರ್ಷದ ಪ್ರಾರಂಭ ಶುಭವಾಗಿದೆ. ಜಮೀನು-ಕಟ್ಟಡ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವುದೇ ವಿವಾದವಿದ್ದರೆ, ಈ ತಿಂಗಳ ಅಂತ್ಯದ ವೇಳೆಗೆ, ಅದಕ್ಕೆ ಸಂಬಂಧಿಸಿದ ನಿರ್ಧಾರವು ನಿಮ್ಮ ಪರವಾಗಿ ಬರಬಹುದು.
ಈ ಅವಧಿಯಲ್ಲಿ ಮನೆ ಅಥವಾ ಆಸ್ತಿ ಖರೀದಿಸಲು ಬಯಸಿದರೆ ನಿಮ್ಮ ಆಸೆ ನೆರವೇರಲಿದೆ. ಆರ್ಥಿಕವಾಗಿ, ಜನವರಿಯ ಮೊದಲಾರ್ಧವು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಬಲವಾಗಿರುತ್ತ.
ತಿಂಗಳ ದ್ವಿತೀಯಾರ್ಧದಲ್ಲಿ, ವೃತ್ತಿ-ವ್ಯಾಪಾರಕ್ಕೆ ಸಂಬಂಧಿಸಿದಂತೆ ಮಾಡುವ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟರೆ, ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ಸಾಮಾನ್ಯವಾಗಿರುತ್ತದೆ. ಪ್ರೇಮಿಗಳ ನಡುವೆ ಪ್ರೀತಿ ಮತ್ತಷ್ಟು ಹೆಚ್ಚುವುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ



Click it and Unblock the Notifications






