Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಜ್ಯೋತಿಷ್ಯ: ಮೇ ತಿಂಗಳು ಈ ರಾಶಿಗಳಿಗೆ ತುಂಬಾ ಅದೃಷ್ಟ ತರಲಿದೆ..!
ಅದೃಷ್ಟ ಎನ್ನುವುದು ಗ್ರಹಗತಿಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಆದರೆ ನಮ್ಮ ಕುಂಡಲಿ ಹಾಗೂ ರಾಶಿಚಕ್ರಗಳ ಅನುಸಾರ ನಮ್ಮ ಜೀವನದ ಆಗು ಹೋಗುಗಳು ನಿರ್ಧಾರವಾಗುತ್ತದೆ. ಕೆಲವು ರಾಶಿಚಕ್ರದವರಿಗೆ ಅದೃಷ್ಟವನ್ನು ತಂದರೆ ಇನ್ನೂ ಕೆಲವು ರಾಶಿಚಕ್ರಗಳಿಗೆ ದುರಾದೃಷ್ಟ ಕಾಡುವ ಸಾಧ್ಯತೆಗಳಿರುತ್ತವೆ. ಕೆಲವು ರಾಶಿಚಕ್ರದವರಿಗೆ ಮೇ ತಿಂಗಳು ಅಧಿಕ ಮಟ್ಟದ ಅದೃಷ್ಟವನ್ನು ನೀಡುತ್ತದೆ. ಕೆಲವರಿಗೆ ಜೀವನದಲ್ಲಿ ಅದ್ಭುತವಾದ ತಿರುವನ್ನು ನೀಡಲಿದೆ. ಇನ್ನೂ ಕೆಲವರಿಗೆ ಸಮಾಧಾನಕರವಾದ ಸ್ಥಿತಿ ಮುಂದುವರಿಯುವುದು ಎಂದು ಹೇಳುತ್ತದೆ.

ಜ್ಯೋತಿಷ್ಯಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಮೇ ತಿಂಗಳಲ್ಲಿ 5 ಗ್ರಹಗಳ ಸಂಚಾರ ಇರಲಿದ್ದು ಇದು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಚಲನೆಯಲ್ಲಿನ ಈ ಬದಲಾವಣೆಗಳು ಮೇ ಮಾಸದಲ್ಲಿ ಯಾವ ರಾಶಿಯ ಮೇಲೆ ಶುಭ ಪರಿಣಾಮ ಬೀರಲಿದೆ, ಯಾರಿಗೆಲ್ಲಾ ಅದೃಷ್ಟ ಇರಲಿದೆ ಮುಂದೆ ನೋಡೋಣ:

ವೃಷಭ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ ತಿಂಗಳು ವೃಷಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ರಾಶಿಯ ಜನರು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಉದ್ಯೋಗಿಗಳಿಗೆ ಬಡ್ತಿ ಸಿಗುವ ಎಲ್ಲ ಸಾಧ್ಯತೆಗಳೂ ಇವೆ. ಅದೃಷ್ಟ ಕೂಡ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ವ್ಯಾಪಾರಸ್ಥರು ಪ್ರಗತಿಯನ್ನು ಪಡೆಯಬಹುದು. ಇಷ್ಟೇ ಅಲ್ಲ, ವಿದ್ಯಾರ್ಥಿಗಳು ಅನುಕೂಲಕರ ಫಲಿತಾಂಶಗಳನ್ನು ಸಹ ಪಡೆಯಬಹುದು. ಮಾರ್ಚ್‌ನಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು.

ತುಲಾ ರಾಶಿ
ತುಲಾ ರಾಶಿಯ ಜನರು ಮೇ ತಿಂಗಳಲ್ಲಿ ಅನೇಕ ವಿಷಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ಅದೇ ಸಮಯದಲ್ಲಿ, ಕೆಲವು ತುಲಾ ರಾಶಿಯವರು ಪ್ರಶಂಸೆಗೆ ಒಳಗಾಗಬಹುದು ಮತ್ತು ಬಾಸ್ ಸಹ ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ವ್ಯಾಪಾರದಲ್ಲಿ ಲಾಭವಾಗಬಹುದು. ನೀವು ಅಧ್ಯಯನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಮನೆಯಲ್ಲಿ ಶಾಂತಿಯ ವಾತಾವರಣ ಉಳಿಯುತ್ತದೆ. ಲಕ್ಷ್ಮಿಯ ಅನುಗ್ರಹದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ಧನು ರಾಶಿ
ಧನು ರಾಶಿ ಉದ್ಯಮಿಗಳಿಗೆ ಮೇ ಉತ್ತಮವೆಂದು ಸಾಬೀತುಪಡಿಸುತ್ತದೆ. ಧನು ರಾಶಿಯವರ ಇಷ್ಟಾರ್ಥಗಳು ಈಡೇರಬಹುದು. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಇಷ್ಟೇ ಅಲ್ಲ, ಪ್ರೇಮ ಸಂಬಂಧದಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕ ಭಾಗವು ಬಲವಾಗಿರುತ್ತದೆ. ಅನೇಕ ವಿಧಾನಗಳಿಂದ ಹಣವನ್ನು ಪಡೆಯಬಹುದು. ಹೂಡಿಕೆಗೆ ಈ ತಿಂಗಳು ಸೂಕ್ತವಾಗಿದೆ. ಕೋಪ ಮತ್ತು ಅಹಂಕಾರದಿಂದ ದೂರವಿರಲು ಪ್ರಯತ್ನಿಸಿ.

ಮಕರ ರಾಶಿ
ಮಕರ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಲಕ್ಷ್ಮಿಯ ಕೃಪೆ ಉಳಿಯುತ್ತದೆ. ಪ್ರತಿಯೊಂದು ಕೆಲಸದಲ್ಲೂ ವಿಶೇಷ ಲಾಭಗಳಿರುತ್ತವೆ. ಇತರ ತಿಂಗಳುಗಳಿಗೆ ಹೋಲಿಸಿದರೆ ಮೇ ತಿಂಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಕೆಲವರು ಪ್ರಯಾಣಿಸಬಹುದು ಮತ್ತು ಈ ಪ್ರಯಾಣದಿಂದ ನಿಮಗೆ ಆರ್ಥಿಕ ಲಾಭ ಸಿಗಲಿದೆ. ಉದ್ಯೋಗ ಬದಲಾವಣೆಗೆ ಇದು ಉತ್ತಮ ಸಮಯ.



Click it and Unblock the Notifications