Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಜ್ಯೋತಿಷ್ಯ: ಸೆಪ್ಟೆಂಬರ್ 2022 ಈ 4 ರಾಶಿಗಳಿಗೆ ಆರ್ಥಿಕವಾಗಿ ಅತ್ಯಂತ ಅದೃಷ್ಟದ ಮಾಸ
ಜ್ಯೋತಿಶಾಸ್ತ್ರದ ಪ್ರಕಾರ ಪ್ರತಿ ತಿಂಗಳು ಗ್ರಹಗಳ ಸ್ಥಾನ ಬದಲಾಗುತ್ತಿರುತ್ತದೆ. ಈ ಗ್ರಹಗಳ ಚಲನೆಯು ಪ್ರತಿ ರಾಶಿಗಳ ಮೇಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಹಲವು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಗ್ರಹಗಳ ಈ ಬದಲಾವಣೆಯಿಂದ ಜ್ಯೋತಿಶಾಸ್ತ್ರದ ಪ್ರಕಾರ ಭಾದ್ರಪದ ಮಾಸ ಅಂದರೆ ಸೆಪ್ಟೆಂಬರ್ 2022 ಯಾವ ರಾಶಿಗೆ ಅದೃಷ್ಟವಿದೆ, ಯಾವೆಲ್ಲಾ ರಾಶಿಯವರು ಬಹಳ ಎಚ್ಚದಿಂದಿರಬೇಕು ಮುಂದೆ ನೋಡೋಣ:

2022 ಸೆಪ್ಟೆಂಬರ್ ಕೆಲವು ರಾಶಿಗಳಿಗೆ ಶುಭದ ಸಂಕೇತವನ್ನು ನೀಡುತ್ತಿದೆ. ಅದೃಷ್ಟ ರಾಶಿಗಳಾದ ಮೇಷ, ಮಿಥುನ, ಕರ್ಕ ಮತ್ತು ವೃಶ್ಚಿಕ ರಾಶಿಗಳಿಗೆ ಸೆಪ್ಟೆಂಬರ್ ತಿಂಗಳು ಆರ್ಥಿಕವಾಗಿ ಬಹಳ ಶುಭವನ್ನು ತರುತ್ತದೆ.
ಸೆಪ್ಟೆಂಬರ್ ತಿಂಗಳು ಯಾವ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ ಎಂದು ತಿಳಿಯೋಣ.

ಮೇಷ ರಾಶಿ
ಸೆಪ್ಟೆಂಬರ್ ತಿಂಗಳು ಮೇಷ ರಾಶಿಯವರಿಗೆ ವರದಾನಕ್ಕೇನೂ ಕಡಿಮೆಯಿಲ್ಲ. ಈ ಸಮಯದಲ್ಲಿ, ಅವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಬಡ್ತಿಯನ್ನು ಸಹ ಪಡೆಯುತ್ತಾರೆ. ಅವರು ಆರ್ಥಿಕವಾಗಿ ಬಹಳ ಉತ್ತಮ ಲಾಭ ಇರುತ್ತದೆ. ಹೂಡಿಕೆ ಮಾಡಲು ಬಯಸುವ ಜನರಿಗೆ ಈ ಸಮಯದಲ್ಲಿ ಪ್ರಯತ್ನಿಸಬಹುದು, ಆರ್ಥಿಕ ಸಮಸ್ಯೆ ಆಗುವುದಿಲ್ಲ. ಮೇಷ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ, ಶಾಂತಿ ನೆಲೆಸಲಿದೆ. ನೀವು ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ಮಿಥುನ ರಾಶಿ
ಸೆಪ್ಟೆಂಬರ್ ತಿಂಗಳು ಮಿಥುನ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಅವರು ಉದ್ಯೋಗ ಮತ್ತು ವ್ಯವಹಾರದಿಂದ ಲಾಭವನ್ನು ಪಡೆಯುತ್ತಾರೆ. ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲಸದ ಸ್ಥಳದಲ್ಲಿ ನೀವು ಮಾಡಿದ ಕೆಲಸವು ಪ್ರಶಂಸೆಗೆ ಒಳಗಾಗುತ್ತದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಕರ್ಕ ರಾಶಿ
ಉದ್ಯೋಗಕ್ಕೆ ಸಂಬಂಧಿಸಿದ ಜನರಿಗೆ ಸೆಪ್ಟೆಂಬರ್ ತಿಂಗಳು ಉತ್ತಮವಾಗಿರುತ್ತದೆ. ಅವರು ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ವ್ಯಾಪಾರದ ಹೆಚ್ಚಳವು ಲಾಭವನ್ನು ಹೆಚ್ಚಿಸುತ್ತದೆ.

ವೃಶ್ಚಿಕ ರಾಶಿ
ಸೆಪ್ಟೆಂಬರ್ ತಿಂಗಳು ವೃಶ್ಚಿಕ ರಾಶಿಯವರಿಗೆ ಶುಭಕರವಾಗಿರುತ್ತದೆ. ಈ ಅವಧಿಯಲ್ಲಿ ಅವರು ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅವರ ವೈವಾಹಿಕ ಜೀವನವು ಸಂತೋಷದಿಂದ ಮತ್ತು ಸಹಕಾರದಿಂದ ಕೂಡಿರುತ್ತದೆ. ವ್ಯಾಪಾರದಲ್ಲಿ ಹೆಚ್ಚಳ ಮತ್ತು ಉದ್ಯೋಗದಲ್ಲಿ ಪ್ರಗತಿಯಿಂದಾಗಿ ಆರ್ಥಿಕ ಸ್ಥಿತಿಯು ಉತ್ತಮ ಮತ್ತು ಬಲವಾದ ಸ್ಥಾನದಲ್ಲಿರುತ್ತದೆ. ನೀವು ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಹೆಚ್ಚಿನ ಬೆಂಬಲವನ್ನು ಪಡೆಯುತ್ತೀರಿ.



Click it and Unblock the Notifications