Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಜೂನ್ 2022 ಈ 3 ರಾಶಿಯವರಿಗೆ ಅದೃಷ್ಟಕರ, ಇನ್ನೂ ಈ 3 ರಾಶಿಯವರು ಹುಷಾರಾಗಿರಬೇಕು
ಜೂನ್ 2022 ಹಲವು ವಿಷಯಗಳಲ್ಲಿ ಬಹಳ ವಿಶೇಷವಾದ ತಿಂಗಳಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮಾಸದಲ್ಲಿ 5 ಪ್ರಮುಖ ಗ್ರಹಗಳ ರಾಶಿ ಬದಲಾವಣೆಯಾಗಲಿವೆ. ನ್ಯಾಯದ ದೇವರಾದ ಶನಿಯು ಈ ತಿಂಗಳಿನಿಂದ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತಾನೆ.

ಇದಲ್ಲದೇ ಸೂರ್ಯ, ಚಂದ್ರ, ಶುಕ್ರ ಮೊದಲಾದ ಗ್ರಹಗಳ ರಾಶಿ ಬದಲಾವಣೆಯಾಗಲಿದೆ. ಈ ಗ್ರಹಗಳ ಸಂಚಾರವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಇವುಗಳ ಕಾರಣದಿಂದಾಗಿ ಈ 3 ರಾಶಿಯವರಿಗೆ ಈ ಸಮಯವು ತುಂಬಾ ಒಳ್ಳೆಯದಿದೆ. ಈ ಅವಧಿಯಲ್ಲಿ ಈ 3 ರಾಶಿಯವರು ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಹಣದ ಸ್ಥಿತಿ ಚೆನ್ನಾಗಿರಲಿದೆ.
ಅದೇ ಸಮಯದಲ್ಲಿ ಈ ತಿಂಗಳಿನಲ್ಲಿ ಇನ್ನು ಮೂರು ರಾಶಿಯವರು ತುಂಬಾ ಹುಷಾರಾಗಿರಬೇಕು. ಈ ತಿಂಗಳು ಯಾವೆಲ್ಲಾ ರಾಶಿಯವರಿಗೆ ಒಳ್ಳೆಯದು, ಯಾವ ರಾಶಿಯವರು ಹುಷಾರಾಗಿರಬೇಕು ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರಿಗೆ ಜೂನ್ 2022 ತುಂಬಾ ಒಳ್ಳೆಯದಿದೆ. ಉದ್ಯೋಗಿಗಳು ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳೂ ಈ ತಿಂಗಳು ದೊಡ್ಡ ಯಶಸ್ಸನ್ನು ಪಡೆಯಬಹುದು. ನೀವು ವಿದೇಶದಲ್ಲಿ ಉದ್ಯೋಗಕ್ಕಾಗಿ ಶ್ರಮಿಸುತ್ತಿದ್ದರೆ ಕನಸು ನನಸಾಗಬಹುದು. ಹಣದ ಸ್ಥಿತಿ ತುಂಬಾ ಅನುಕೂಲಕರವಾಗಿರಲಿದೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಲಿದೆ. ವೈಯಕ್ತಿಕ ಜೀವನದಲ್ಲೂ ಖುಷಿ ಇರುತ್ತದೆ. ಒಟ್ಟಿನಲ್ಲಿ ಜೂನ್ ತಿಂಗಳು ನಿಮಗೆ ತುಂಬಾನೇ ಚೆನ್ನಾಗಿದೆ.

ವೃಷಭ ರಾಶಿ
ಜೂನ್ 2022 ವೃಷಭ ರಾಶಿಯವರಿಗೆ ದೊಡ್ಡ ಆರ್ಥಿಕ ಲಾಭಗಳನ್ನು ನೀಡುತ್ತದೆ. ನೀವು ಅನೇಕ ರೀತಿಯಲ್ಲಿ ಹಣವನ್ನು ಗಳಿಸುವರು. ಆದಾಯ ಹೆಚ್ಚಾಗಲಿದೆ, ಬರಬೇಕಾಗಿದ್ದ ಹಣ ಸಿಗುತ್ತದೆ. ಈ ತಿಂಗಳು ನಿಮಗೆ ಹಣದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಹೊಸ ಉದ್ಯೋಗ ದೊರೆಯಬಹುದು. ಬಡ್ತಿ ಕೂಡ ಸಿಗಬಹುದು. ಕುಟುಂಬ ಜೀವನ ಕೂಡ ಚೆನ್ನಾಗಿರುತ್ತದೆ.

ಮಿಥುನ ರಾಶಿ:
ಜೂನ್ ತಿಂಗಳು ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನೀವು ಉದ್ಯೋಗವನ್ನು ಬದಲಾಯಿಸಬಹುದು ಅಥವಾ ಬಯಸಿದ ವರ್ಗಾವಣೆಯನ್ನುಪಡೆಯಬಹುದು. ಆದಾಯ ಹೆಚ್ಚಾಗಬಹುದು. ಪ್ರೇಮ ಜೀವನ, ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಆದರೂ ಮಾನಸಿಕ ಗೊಂದಲ ಕಾಡಬಹುದು.

ಯಾವ ರಾಶಿಯವರು ಹುಷಾರಾಗಿರಬೇಕು
ಸಿಂಹ ರಾಶಿ: ಜೂನ್ ತಿಂಗಳಿನಲ್ಲಿ ನಿಮಲ್ಲಿ ಅಸಮಧಾನ ಹೆಚ್ಚಬಹುದು, ಸಂಬಂಧದಲ್ಲೂ ಕೆಲ ಸಮಸ್ಯೆ ಕಂಡು ಬರಬಹುದು. ಈ ತಿಂಗಳು ಆರೋಗ್ಯದಲ್ಲಿ ಕೆಲ ವ್ಯತ್ಯಾಸ ಕಂಡು ಬರಬಹುದು, ಈ ತಿಂಗಳು ತಾಳ್ಮೆಯಿಂದ ಹೆಜ್ಜೆ ಇಡುವುದು ಒಳ್ಳೆಯದು.

ಮಕರ ರಾಶಿ:
ಈ ತಿಂಗಳು ಬುಧ ಮಾರ್ಗಿಯಾಗುತ್ತಾನೆ, ಶನಿಯು ಹಿಮ್ಮುಖವಾಗಿ ಚಲಿಸಲಿದೆ ಈ ಬದಲಾವಣೆ ಮಕರ ರಾಶಿಯವರಿಗೆ ಅಷ್ಟು ಒಳ್ಳೆಯದಲ್ಲ. ಅಧಿಕ ಹಣ ಖರ್ಚಾಗಬಹುದು, ಹಣದ ವಿಷಯದಲ್ಲಿ ಬಜೆಟ್ ಪ್ಲ್ಯಾನ್ ಮಾಡುವುದು ಒಳ್ಳೆಯದು.

ಕುಂಭ ರಾಶಿ
ಕುಂಭ ರಾಶಿಯವರು ಈ ಜೂನ್ ತಿಂಗಳು ಹುಷಾರಾಗಿರಬೇಕು. ಹಲವು ಸಮಸ್ಯೆಗಳು ಎದುರಾಗಬಹುದು, ಎಲ್ಲವನ್ನು ಜಾಗ್ರತೆಯಿಂದ ನಿಭಾಯಿಸಿ.



Click it and Unblock the Notifications
