For Quick Alerts
ALLOW NOTIFICATIONS  
For Daily Alerts

ನವೆಂಬರ್ ಯಾವ ರಾಶಿಗಳಿಗೆ ಅದೃಷ್ಟ ಮತ್ತು ದುರಾದೃಷ್ಟ ತರಲಿದೆ ಗೊತ್ತೆ?

|

2019ರ ವರ್ಷದಲ್ಲಿ ಇನ್ನೇನು ಎರಡು ತಿಂಗಳು ಕಳೆದರೆ ವರ್ಷ ಪೂರ್ಣವಾಗುವುದು. ನಿತ್ಯದ ಬದಲಾವಣೆ ಹಾಗೂ ಗ್ರಹಗಳ ಸಂಚಾರವು ದ್ವಾದಶ ರಾಶಿಗಳ ಮೇಲೆ ಗಂಭೀರವಾದ ಪ್ರಭಾವ ಬೀರುತ್ತವೆ. ಅವು ವ್ಯಕ್ತಿಯ ಆರೋಗ್ಯ, ಜೀವನ, ಉದ್ಯೋಗ, ಶಿಕ್ಷಣ, ಆರ್ಥಿಕ ಸ್ಥಿತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಅದೃಷ್ಟ ಹಾಗೂ ದುರಾದೃಷ್ಟವು ಉಂಟಾಗುತ್ತದೆ. ಹಾಗಾಗಿ ಹೊಸ ವರ್ಷದ ಆರಂಭವು ಸಮೀಪದಲ್ಲಿದ್ದರೂ ಕೆಲವು ಮಹತ್ತರವಾದ ಬದಲಾವಣೆಯನ್ನು ನಾವು ನಿರೀಕ್ಷಿಸಬಹುದು.

lucky zodiac signs

ಹಿಂದೂ ಪಂಚಾಂಗದ ಪ್ರಕಾರ ನವೆಂಬರ್ ತಿಂಗಳಲ್ಲಿ ಗ್ರಹಗಳು ತೆಗೆದುಕೊಳ್ಳುವ ಚಲನೆ ಅಥವಾ ಬದಲಾವಣೆಯ ಆಧಾರದ ಮೇಲೆ ಮೂರು ರಾಶಿಚಕ್ರದವರು ಅತ್ಯಂತ ಅದೃಷ್ಟವನ್ನು ಅನುಭವಿಸುವರು. ಅಂತೆಯೇ ಮೂರು ರಾಶಿಚಕ್ರದವರ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಅದೃಷ್ಟವಂತ ರಾಶಿಚಕ್ರದವರು ಜೀವನದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ಕಂಡುಕೊಳ್ಳುವುದರ ಮೂಲಕ ತೃಪ್ತಿಯನ್ನು ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ದುರಾದೃಷ್ಟವನ್ನು ಅನುಭವಿಸುವ ರಾಶಿ ಚಕ್ರದವರು ಕೆಲಸದಲ್ಲಿ ಅಡೆತಡೆ ಹಾಗೂ ಮಾನಸಿಕವಾಗಿಯೂ ಗೊಂದಲಕ್ಕೆ ಒಳಗಾಗುವರು ಎಂದು ಹೇಳಲಾಗುವುದು. ಹಾಗಾದರೆ ಆ ಮೂರು ಅದೃಷ್ಟವಂತ ಹಾಗೂ ದುರಾದೃಷ್ಟವನ್ನು ಹೊಂದಿರುವ ರಾಶಿ ಚಕ್ರಗಳು ಯಾವವು? ಎನ್ನುವ ಕುತೂಹಲ ನಿಮಗಿದ್ದರೆ ಮುಂದಿನ ಲೇಖನವನ್ನು ಪರಿಶೀಲಿಸಿ.

ಅದೃಷ್ಟವನ್ನು ಹೊಂದಿರುವ ರಾಶಿಚಕ್ರಗಳು

ಅದೃಷ್ಟವನ್ನು ಹೊಂದಿರುವ ರಾಶಿಚಕ್ರಗಳು

ಕರ್ಕ ರಾಶಿ: ಈ ರಾಶಿಯ ವ್ಯಕ್ತಿಗಳು ಗ್ರಹಗಳ ಪ್ರಭಾವದಿಂದ ನವೆಂಬರ್ ತಿಂಗಳಲ್ಲಿ ವೈಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ. ಸೂರ್ಯ ಮತ್ತು ಬುಧನು ವೃಶ್ಚಿಕ ರಾಶಿಯನ್ನು ಪ್ರವೇಶಿಸುವುದರಿಂದ ಐದನೇ ಮನೆಗೆ ಸಂಬಂಧಿಸಿದಂತೆ ಕರ್ಕ ರಾಶಿಯವರು ಖ್ಯಾತಿ, ಪ್ರೀತಿ, ಸೃಜನ ಶೀಲತೆ ಹಾಗೂ ಸಂತೋಷದ ಸ್ಥಿತಿಯನ್ನು ಅನುಭವಿಸುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುವರು. ಶುಕ್ರನು ಕ್ರಮಬದ್ಧವಾಗಿ ಆರನೇ ಮನೆಯನ್ನು ಪ್ರವೇಶಿಸುವುದರಿಂದ ಇವರು ದೈನಂದಿನ ಜವಾಬ್ದಾರಿಗಳ ನಿರ್ವಹಣೆ ಹಾಗೂ ಶ್ರದ್ಧೆಯನ್ನು ಪಡೆದುಕೊಳ್ಳುವರು. ಈ ತಿಂಗಳಲ್ಲಿ ಬಹುತೇಕ ವಿಷಯಗಳಲ್ಲಿ ಸಂತೋಷ ಹಾಗೂ ಯಶಸ್ಸನ್ನು ಪಡೆದುಕೊಳ್ಳುವುದರ ಮೂಲಕ ದಿನಗಳನ್ನು ಆನಂದಿಸುವರು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಶ್ರಮ ಜೀವಿಗಳಾದ ವೃಶ್ಚಿಕ ರಾಶಿಯವರಿಗೆ ಈ ತಿಂಗಳು ತಮ್ಮ ಶ್ರಮಕ್ಕೆ ಪ್ರತಿಫಲವಾಗಿ ಬಹುಮಾನವನ್ನು ಪಡೆದುಕೊಳ್ಳುವರು. ಈ ಮಾಸದಲ್ಲಿ ಸೂರ್ಯ ಮತ್ತು ಶುಕ್ರನು ಎರಡನೇ ಮನೆಯನ್ನು ಪ್ರವೇಶಿಸುವರು. ಎರಡನೇ ಮನೆಯು ಆಸ್ತಿ ಹಾಗೂ ಆರ್ಥಿಕ ಸ್ಥಿತಿಗಳ ಬಗ್ಗೆ ತೆರೆದಿಡುವುದು. ಹಾಗಾಗಿ ನಿಮ್ಮ ಆಸ್ತಿ ಹಾಗೂ ಹಣದ ವಿಚಾರದಲ್ಲಿ ನೀವು ಕೊಂಚ ಗೊಂದಲವನ್ನು ಅನುಭವಿಸಬಹುದು. ಅಲ್ಲದೆ ನೀವು ಒಂದಿಷ್ಟು ಹಣವನ್ನು ಖರ್ಚುಮಾಡುವ ಮನಃಸ್ಥಿತಿಯನ್ನು ಹೊಂದುವಿರಿ. ನವೆಂಬರ್ 24ರಂದು ಶುಕ್ರ ಮತ್ತು ಗುರುವು ಮಕರ ರಾಶಿಗೆ ಪ್ರವೇಶ ಪಡೆಯುವರು. ಇದರ ಪರಿಣಾಮವಾಗಿ ನೀವು ಪುನಃ ಆಸ್ತಿ ಮತ್ತು ಹಣದ ವಿಷಯದಲ್ಲಿ ಯಶಸ್ಸನು ಹಾಗೂ ಗಳಿಕೆಯನ್ನು ಪಡೆದುಕೊಳ್ಳುವಿರಿ. ಉತ್ತಮ ಶಕ್ತಿ ಹಾಗೂ ಉಲ್ಲಾಸದಿಂದ ತಿಂಗಳ ದಿನಗಳನ್ನು ಪೂರೈಸುವಿರಿ.

ಧನು ರಾಶಿ

ಧನು ರಾಶಿ

ಸೂರ್ಯ ಮತ್ತು ಶುಕ್ರನು ಈ ತಿಂಗಳಲ್ಲಿ ಧನು ರಾಶಿಯ ಪ್ರವೇಶ ಪಡೆಯುವರು. ಇದು ಧನು ರಾಶಿಯವರಿಗೆ ಅತ್ಯಂತ ಅದೃಷ್ಟದ ಸಂಕೇತ ಎಂದು ಹೇಳಬಹುದು. ಹಾಗಾಗಿ ತಿಂಗಳ ಆರಂಭವು ಧನು ರಾಶಿಯವರಿಗೆ ರೋಚಕ ಸಂಗತಿಗಳಿಂದ ಕೂಡಿರುತ್ತದೆ. ಅದೃಷ್ಟದಿಂದ ಅನುಭವಿಸುವ ಸನ್ನಿವೇಶಗಳು ನಿಮಗೆ ಪುನರುಜ್ಜೀವನವನ್ನು ನೀಡುವುದು. ಪ್ರೀತಿಯ ಜೀವನವು ನಿಮಗೆ ಲಭಿಸುವುದು. ನವೆಂಬರ್ 24ರಂದು ಗುರುವಿನ ಪ್ರವೇಶವು ಆಗುವುದರಿಂದ ಕೈಗೊಂಡ ಕಾರ್ಯಗಳು ಸುಲಭವಾಗಿ ಯಶಸ್ಸನ್ನು ಪಡೆದುಕೊಳ್ಳುತ್ತವೆ. ಗ್ರಹಗಳ ಉತ್ತಮ ಪ್ರಭಾವದಿಂದ ಕೈಗೊಂಡ ಕೆಲಸ ಕಾರ್ಯದಲ್ಲಿ ಯಶಸ್ಸು ಹಾಗೂ ಲಾಭವನ್ನು ಪಡೆದುಕೊಳ್ಳುವರು. ಮಾನಸಿಕವಾಗಿಯೂ ನೆಮ್ಮದಿ ಮತ್ತು ಆರ್ಥಿಕ ಸುಧಾರಣೆಯನ್ನು ಕಂಡುಕೊಳ್ಳುವರು.

ದುರಾದೃಷ್ಟವನ್ನು ಹೊಂದಿರುವ ರಾಶಿಚಕ್ರಗಳು

ದುರಾದೃಷ್ಟವನ್ನು ಹೊಂದಿರುವ ರಾಶಿಚಕ್ರಗಳು

ವೃಷಭ ರಾಶಿ: ಗ್ರಹಗಳ ಸಂಚಾರವು ವೃಷಭ ರಾಶಿ ಚಕ್ರದ ಮೇಲೆ ಗಂಭೀರ ಬದಲಾವಣೆಯನ್ನು ಬೀರುತ್ತವೆ. ಅವು ಋಣಾತ್ಮಕ ಪರಿಣಾಮವಾಗಿರುವುದರಿಂದ ವೃಷಭ ರಾಶಿಯವರಿಗೆ ದುರಾದೃಷ್ಟದ ಸಂಗತಿ ಎನ್ನಬಹುದು. ಕೆಲವು ಗ್ರಹಗಳು ಧನುರಾಶಿಯ ಪ್ರವೇಶ ಪಡೆದುಕೊಳ್ಳುವುದರಿಂದ ಅದು ಮಾನಸಿಕವಾಗಿ ಬೇಸರ ಹಾಗೂ ಒತ್ತಡವನ್ನು ಉಂಟುಮಾಡುವುದು. ಕೈಗೊಂಡ ಕೆಲಸದಲ್ಲಿ ಅನಿರೀಕ್ಷಿತ ಅಡೆತಡೆಗಳು ಸಂಭವಿಸುತ್ತವೆ. ಆರ್ಥಿಕವಾಗಿಯೂ ಯಾವುದೇ ಲಾಭ ದೊರೆಯದು. ಪ್ರತಿಯೊಂದು ವಿಷಯದಲ್ಲೂ ಸೋಲು ಹಾಗೂ ಕಷ್ಟ ಉಂಟಾಗುವುದರಿಂದ ನೀವು ಮಾನಸಿಕವಾಗಿ ದಣಿಯುವ ಸಾಧ್ಯತೆಗಳು ಇವೆ. ಹಾಗಾಗಿ ನಿಮ್ಮ ಭಾವನಾತ್ಮಕ ಚಿಂತನೆಗಳ ಕಡೆಗೆ ಹೆಚ್ಚಿನ ಗಮನ ನೀಡುವುದು ಸೂಕ್ತ. ಯಾವುದೇ ವಿಷಯವಾಗಿ ಹೆಚ್ಚಿನ ಚಿಂತನೆ ಹಾಗೂ ದುಃಖಕ್ಕೆ ಒಳಗಾಗುವ ಅಗತ್ಯವಿಲ್ಲ. ಭವಿಷ್ಯದಲ್ಲಿ ಉತ್ತಮ ಸಮಯ ಎದುರಾಗುವುದು ಎನ್ನುವ ನಂಬಿಕೆಯನ್ನು ನೀವು ಹೊಂದಬೇಕು.

ಕನ್ಯಾ ರಾಶಿ

ಕನ್ಯಾ ರಾಶಿ

ಈ ರಾಶಿಯವರು ಸಾಮಾನ್ಯ ದಿನಗಳಿಗಿಂತ ಇತರ ಚಿಂತನೆ ಹಾಗೂ ಉತ್ಪಾದಕ ವಿಷಯಗಳಲ್ಲಿ ಇನ್ನಷ್ಟು ಅಂತರ್ಮುಖಿ ವರ್ತನೆಯನ್ನು ತೋರಬಹುದು. ಧನು ರಾಶಿಗೆ ಶುಕ್ರನ ಪ್ರವೇಶ ಪಡೆಯುವುದರಿಂದ ಕನ್ಯಾ ರಾಶಿಗೆ ಅದರ ಪ್ರಭಾವವು ಋಣಾತ್ಮಕವಾಗಿ ಪರಿಣಮಿಸುವುದು. ಈ ಬದಲಾವಣೆಯಿಂದ ಇವರು ಕೆಲಸದ ಸ್ಥಳದಲ್ಲಿ ಬಿಗಿಯಾದ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಅಂದುಕೊಂಡ ರೀತಿಯಲ್ಲಿ ಯಾವುದೂ ಸುಲಭವಾಗಿ ನಡೆಯದು. ಮಾನಸಿಕವಾಗಿ ನಿಮ್ಮ ಚಿಂತನೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಆರ್ಥಿಕ ಸ್ಥಿತಿಯಲ್ಲೂ ಯಾವುದೇ ಏರಿಕೆ ಅಥವಾ ಲಾಭ ಉಂಟಾಗದು. ನವೆಂಬರ್ 12ರ ನಂತರ ಕೊಂಚ ವಿಶ್ರಾಂತಿ ಹಾಗೂ ಭಾವನಾತ್ಮಕವಾಗಿ ನಿರಾಳತೆಯನ್ನು ಪಡೆದುಕೊಳ್ಳುವಿರಿ. ಗ್ರಹಗಳು ವೃಷಭ ರಾಶಿಗೆ ಪ್ರವೇಶ ಪಡೆದ ನಂತರ ನಿಮ್ಮ ಶಿಕ್ಷಣ ಮತ್ತು ಪ್ರಯಾಣದಲ್ಲಿ ಸಕ್ರಿಯತೆಯನ್ನು ಪಡೆದುಕೊಳ್ಳುವಿರಿ. ಋಣಾತ್ಮಕ ಪರಿಸ್ಥಿತಿ ಎದುರಾದಾಗ ನೀವು ಆದಷ್ಟು ತಾಳ್ಮೆ ಹೊಂದುವುದು ಅಗತ್ಯವಾಗಿರುತ್ತದೆ.

ಮಕರ ರಾಶಿ

ಮಕರ ರಾಶಿ

ನವೆಂಬರ್ ತಿಂಗಳಲ್ಲಿ ಸೂರ್ಯನು ಧನು ರಾಶಿಗೆ ಪ್ರವೇಶ ಪಡೆಯುವನು. ಅದು ಮಕರ ರಾಶಿಯವರಿಗೆ ಒಂದಿಷ್ಟು ತೊಂದರೆ ಉಂಟಾಗುವುದು. ಭೌಗೋಳಿಕವಾಗಿ ಉಂಟಾಗುವ ಈ ಬದಲಾವಣೆಯು ನಿಮ್ಮ ನಿದ್ರೆ ಮತ್ತು ಕನಸುಗಳಿಗೆ ಭಗ ಉಂಟುಮಾಡುತ್ತದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ಯಾವುದೂ ಸಂಪೂರ್ಣವಾಗಿ ನೆರವೇರದು. ಬಹುತೇಕ ಸಂದರ್ಭದಲ್ಲಿ ನಿಮ್ಮ ಭಾವನೆಗಳೇ ನಿಮಗೆ ಗೊಂದಲವನ್ನು ಸೃಷ್ಟಿಸಬಹುದು. ಸರಿಯಾದ ಗುರಿ ಹಾಗೂ ಯೋಜನೆಯಿಲ್ಲದೆ ಹಲವಾರು ಕಾರ್ಯಗಳು ಸ್ಥಗಿತಗೊಳ್ಳುವುದು. ಆರ್ಥಿಕಾಗಿಯೂ ಯಾವುದೇ ಹೆಚ್ಚಿನ ಲಾಭ ಉಂಟಾಗದು. ನೀವು ನಿಮ್ಮ ಉತ್ತಮ ಸಮಯಕ್ಕಾಗಿ ಹೆಚ್ಚು ಕಾಲ ಕಾಯಬೇಕಾಗುವುದು. ಯೋಗ, ಧ್ಯಾನ ಹಾಗೂ ಉತ್ತಮ ಪುಸ್ತಕಗಳನ್ನು ಓದುವುದರ ಮೂಲಕ ಮಾನಸಿಕ ಶಾಂತಿಯನ್ನು ಪಡೆದುಕೊಳ್ಳಿ.

English summary

Lucky and Unlucky Zodiac Signs for November 2019

Here we are briefing about lucky and unlucky zodiac signs for november 2019. November is here, which means there are only two months left in the decade. Hard to believe, isn't it? My thoughts exactly, but there is always something to look forward to during this time of year. In particular, these zodiac signs will have the best November 2019 — Cancer, Scorpio, and Sagittarius — so they have even more to look forward to during this holiday-filled time.
X
Desktop Bottom Promotion