ಫೆಬ್ರವರಿ 2020: ನಿಮ್ಮ ಪ್ರೇಮ ಭವಿಷ್ಯ ಹೇಗಿದೆ ನೋಡಿ

ಪ್ರತಿಯೊಬ್ಬರೂ ತಮ್ಮ ಭವಿಷ್ಯದಲ್ಲಿ ಏನೆಲ್ಲಾ ಸಂಭವಿಸಲಿದೆ ಎಂದು ತಿಳಿಯಲು ಯಾವಾಗಲೂ ಉತ್ಸುಕರಾಗಿರುತ್ತಾರೆ. ತಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಕೆಲವು ರಾಶಿಗಳಿಗೆ ಸವಾಲುಗಳಿದ್ದರೆ, ಕೆಲವರಿಗೆ ಅವಕಾಶಗಳೇ ಹೆಚ್ಚಿರುತ್ತದೆ, ಇನ್ನೂ ಕೆಲವರಿಗೆ ಮಿಶ್ರ ಫಲಿತಾಂಶಗಳು ಇರಬಹುದು.

Love Horoscope of February

ಇನ್ನು ಫೆಬ್ರವರಿ ಪ್ರೇಮಿಗಳ ಪ್ರೀತಿಯ ತಿಂಗಳು, ಈ ವೇಳೆ ತಮ್ಮ ಪ್ರೇಮದ ಭವಿಷ್ಯ ಹೇಗಿದೆ, ನನ್ನ ಪ್ರೇಮಕ್ಕೆ ಸಮ್ಮತಿ ಸಿಗಬಹುದೇ, ಇನ್ನೂ ಸ್ವಲ್ಪ ಸಮಯ ಕಾಯಬೇಕೆ, ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಹೇಗಿರಲಿದೆ ಹೀಗೆಲ್ಲಾ ಗೊಂದಲ ನಿಮ್ಮಲ್ಲಿದ್ದರೆ ಈ ಲೇಖನ ನಿಮ್ಮ ಸಂಶಯವನ್ನು ನಿವಾರಿಸಲಿದೆ. ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ನಿಮ್ಮ ಪ್ರೀತಿಯ ಜೀವನ ಹೇಗಿರಲಿದೆ, ಯಾವೆಲ್ಲಾ ಪರಿಣಾಮ ಬೀರುತ್ತವೆ ಎಂಬುದನ್ನು ಬೋಲ್ಡ್‌ ಸ್ಕೈ ಕನ್ನಡ ನಿಮಗೆ ತಿಳಿಸಿಕೊಡಲಿದೆ.

ಮೇಷ ರಾಶಿ

ಮೇಷ ರಾಶಿ

ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ನಿಮ್ಮ ಬಾಂಧವ್ಯ ಉತ್ತಮವಾಗಿರುತ್ತದೆ, ಉತ್ತಮ ಸಮಯವನ್ನು ಹೊಂದಿರುತ್ತೀರಿ. ಈ ತಿಂಗಳಲ್ಲಿ ನಿಮ್ಮ ಪ್ರೇಯಸಿಯ ಬಗ್ಗೆ ನಿಮ್ಮ ನಿಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿ, ಪ್ರೇಮಿಗಳ ನೆಚ್ಚಿನ ಈ ಮಾಸದಲ್ಲಿ ನಿಮ್ಮ ಪ್ರೇಮಿಗೆ ವಿಶೇಷ ಭಾವನೆ ಮೂಡಿಸಿ. ಸಂಬಂಧವು ಸುಗಮವಾಗಿ ಸಾಗಲಿದೆ ಮತ್ತು ವಿಷಯಗಳು ಪರಿಪೂರ್ಣವಾಗಿರಲಿದೆ. ನಿಮ್ಮ ಸಂಗಾತಿ ಕೆಲಸದ ಒತ್ತಡದಲ್ಲಿದ್ದರೆ, ನೀವು ಶಾಂತವಾಗಿರಬೇಕು ಮತ್ತು ಅವರಿಗೆ ಮಾನಸಿಕವಾಗಿ ಬೆಂಬಲವಾಗಿರಬೇಕು. ಸಂಗಾತಿ ನಿಮ್ಮ ನೆಚ್ಚಿನ ಸ್ಥಳಕ್ಕೆ ಕರೆದುಕೊಂಡು ಹೋಗಬಹುದು. ಒಬ್ಬಂಟಿಯಾಗಿರುವವರಿಗೆ ನಕ್ಷತ್ರಗಳು ನಿಮ್ಮ ಪರವಾಗಿದೆ, ಆದ್ದರಿಂದ ಈ ತಿಂಗಳು ನಿಮ್ಮ ಪ್ರೇಮಿ, ಪ್ರೀತಿಯನ್ನು ಕಾಣಬಹುದು. ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುತ್ತಿದ್ದೀರಿ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಇದು ನಿಮ್ಮ ಬಜೆಟ್‌ಗೆ ನಷ್ಟವನ್ನುಂಟು ಮಾಡಬಹುದು.

ವೃಷಭ ರಾಶಿ

ವೃಷಭ ರಾಶಿ

ನಿಮ್ಮ ಮತ್ತು ಸಂಗಾತಿ ನಡುವೆ ಕೆಲವು ವ್ಯತ್ಯಾಸಗಳು ಇದಿದ್ದರಿಂದ ಕಳೆದ ತಿಂಗಳು ನಿಮ್ಮ ಸಂಬಂಧದಲ್ಲಿ ಸಿಹಿ ಇರಲಿಲ್ಲ. ಆದರೆ ಈ ತಿಂಗಳ ಎಲ್ಲಾ ಅಸಮಧಾನಗಳು ಸರಿಯಾಗಿ, ಸಂಬಂಧವು ಸುಧಾರಿಸುತ್ತದೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಹೇಗೆ ಬಲಪಡಿಸಬೇಕು ಮತ್ತು ಪರಸ್ಪರ ಸಂತೋಷಪಡಿಸುವುದು ಹೇಗೆ ಎಂಬುದರ ಬಗ್ಗೆ ಈ ತಿಂಗಳು ಗಮನ ಹರಿಸುತ್ತೀರಿ. ಇಬ್ಬರೂ ಪರಸ್ಪರ ತಿಳುವಕೆಯನ್ನು ಹೊಂದಿರುತ್ತೀರಿ. ಪರಸ್ಪರ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ನಿಮ್ಮ ಸಂಬಂಧದಲ್ಲಿ ಯಾವುದೇ ರೀತಿಯ ತಪ್ಪುಗ್ರಹಿಕೆಯನ್ನು ತಪ್ಪಿಸಿ.

ಮಿಥುನ ರಾಶಿ

ಮಿಥುನ ರಾಶಿ

ಈ ತಿಂಗಳು ನೀವು ಮತ್ತು ನಿಮ್ಮ ಸಂಗಾತಿ ಅಥವಾ ಪ್ರೇಮಿ ಪರಸ್ಪರ ಹೆಚ್ಚು ಸಮಯ ಕಳೆಯುತ್ತೀರಿ ಮತ್ತು ಪರಸ್ಪರ ಬದ್ಧರಾಗಿರುತ್ತೀರಿ. ಆದರೆ ಕೆಲವೊಮ್ಮೆ, ನಿಮ್ಮಿಬ್ಬರ ನಡುವೆ ಕೆಲವು ತಪ್ಪುಗ್ರಹಿಕೆಯಿರಬಹುದು. ಒಬ್ಬರನ್ನೊಬ್ಬರು ದೂಷಿಸುವ ಬದಲು, ನೀವು ತಾಳ್ಮೆ ಮತ್ತು ತಿಳುವಳಿಕೆಯೊಂದಿಗೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ತಮ್ಮ ಜೀವನ ಸಂಗಾತಿ, ಪ್ರೇಮಿಯನ್ನು ಹುಡುಕುತ್ತಿರುವವರು ಇನ್ನಷ್ಟು ದೂರ ಕ್ರಮಿಸಬೇಕಿದೆ. ಆದ್ದರಿಂದ ಈ ಸಮಯದಲ್ಲಿ ಸ್ವಲ್ಪ ತಾಳ್ಮೆ ಹೊಂದಿರಬೇಕು.

ಕರ್ಕ ರಾಶಿ

ಕರ್ಕ ರಾಶಿ

ಈ ರಾಶಿಚಕ್ರದವರು ನಿಮ್ಮ ಮಾಜಿ ಪ್ರೇಮಿಯನ್ನು ಕಾಣುವ ಸಾಧ್ಯತೆಗಳಿವೆ. ಈ ವೇಳೆ ಅತಿಯಾಗಿ ಪ್ರತಿಕ್ರಿಯಿಸುವ ಬದಲು ಪರಿಸ್ಥಿತಿಯನ್ನು ಚುರುಕಾದ ರೀತಿಯಲ್ಲಿ ನಿರ್ವಹಿಸಿ. ನಿಮ್ಮ ಪ್ರೀತಿಯ ಬಗ್ಗೆ ನಿಮ್ಮ ನಿಷ್ಠೆ ಹೇಗಿದೆ ಎಂದು ಪರೀಕ್ಷೆಗೆ ಒಳಗಾಗಬಹುದಾದ ಕೆಲವು ನಿದರ್ಶನಗಳು ಎದುರಾಗಬಹುದು. ಕೆಲವೊಮ್ಮೆ, ನಿಮ್ಮ ಮಾಜಿ ಪ್ರೇಮಿಯ ಬಳಿಗೆ ಹಿಂತಿರುಗಬೇಕು ಎಂದು ನಿಮಗೆ ಎನಿಸಬಹುದು, ಆದರೆ ನೀವು ಸಂಬಂಧವನ್ನು ಏಕೆ ಕೊನೆಗೊಳಿಸಿದ್ದೀರಿ ಮತ್ತು ನಿಮ್ಮ ಪ್ರಸ್ತುತ ಸಂಗಾತಿ ಯೋಗ್ಯರಾಗಿದ್ದಾರೋ ಇಲ್ಲವೋ ಎಂಬುದನ್ನು ನೀವು ನೆನಪಿಸಿಕೊಳ್ಳಬೇಕು. ಈ ಎಲ್ಲಾ ಘಟನೆಗಳಿಂದ ನೀವು ಅನಿಶ್ಚಿತತೆಯ ಭಾವನೆಯನ್ನು ಹೊಂದಿರಬಹುದು ಮತ್ತು ಆದ್ದರಿಂದ, ಬುದ್ಧಿವಂತಿಕೆಯಿಂದ ಯೋಚಿಸಬೇಕು.

ಸಿಂಹ ರಾಶಿ

ಸಿಂಹ ರಾಶಿ

ನೀವು ಮತ್ತು ನಿಮ್ಮ ಸಂಗಾತಿ ಈ ತಿಂಗಳು ಸಮಯವನ್ನು ಚೆನ್ನಾಗಿ ಅನುಭವಿಸುತ್ತೀರಿ. ಸಂಗಾತಿಯೊಂದಿಗೆ ಪ್ರೀತಿಯ ಜೀವನವನ್ನು ನೀವು ಅನ್ವೇಷಿಸುತ್ತೀರಿ ಮತ್ತು ನೀವಿಬ್ಬರೂ ಪರಸ್ಪರ ಇನ್ನಷ್ಟು ಹತ್ತಿರವಾಗುತ್ತೀರಿ. ಅಲ್ಲದೆ, ನಿಮ್ಮ ಸಂಗಾತಿ ನಿಮ್ಮ ತೆರೆಮರೆಯಿಂದ ಬೆಳಕಿಗೆ ತರಬಹುದು, ನಿಮ್ಮ ಜೀವನದಲ್ಲಿರುವ ಪ್ರೀತಿಯನ್ನು ನೋಡಿ ನೀವು ಬಹಳ ಹೆಮ್ಮೆಪಡುತ್ತೀರಿ, ಅವರ ಜೀವನದಲ್ಲಿ ಆದಷ್ಟು ಪ್ರೇಮದಿಂದ ಇರಲು ಪ್ರಯತ್ನಿಸುತ್ತೀರಿ. ಈ ಸಮಯದಲ್ಲಿ ನಿಮ್ಮ ಸಂಗಾತಿಗೆ ಬೆಂಬಲ ಅಗತ್ಯವಿದೆ. ಸಂಗಾತಿಯಿಂದ ನೀವು ಅನೇಕ ವಿಷಯಗಳನ್ನು ಕಲಿಯುವಿರಿ ಮತ್ತು ನಿಮ್ಮ ಸಂಬಂಧವು ಅದ್ಭುತ ಹಂತವನ್ನು ತಲುಪುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿ

ನಿಮ್ಮ ಪ್ರೀತಿಯಲ್ಲಿ ಈ ತಿಂಗಳು ನಿಮಗೆ ಕಠಿಣವಾಗಿರಲಿದೆ. ಸಂಗಾತಿಯ ಕನಸುಗಳನ್ನು ನೀವು ನಂಬಬೇಕು ಮತ್ತು ಬೆಂಬಲಿಸಬೇಕು. ನಿಮ್ಮ ಸಂಬಂಧದಲ್ಲಿ ಎದುರಾಗುವ ಹೊಸ ಹೊಸ ಸಮಸ್ಯೆಗಳನ್ನು ನಿಭಾಯಿಸಲು ನಿಮ್ಮ ಸಂಗಾತಿಯೊಂದಿಗೆ ಪರಿಣಾಮಕಾರಿ ಸಂವಹನವನ್ನು ಹೊಂದಿರಬೇಕು. ಸಂಬಂಧದಲ್ಲಿ ವಿಷಯಗಳನ್ನು ಸುಧಾರಿಸಲು ನೀವು ಶಾಂತವಾಗಿ ಮತ್ತು ತಾಳ್ಮೆಯಿಂದ ಇರಬೇಕು. ಒಳ್ಳೆಯದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ತುಲಾ ರಾಶಿ

ತುಲಾ ರಾಶಿ

ನಿಮ್ಮ ಸಂಬಂಧಕ್ಕೆ ಇದು ಅತ್ಯುತ್ತಮ ತಿಂಗಳಾಗಲಿದೆ. ಸಂಬಂಧದ ಸಿಹಿ ಕ್ಷಣಗಳನ್ನು ಹಾಳುಮಾಡಲು ಯಾರಿಗೂ ಅವಕಾಶ ನೀಡದಿರುವುದು ಒಳ್ಳೆಯದು. ಸಂಗಾತಿ ನಿಮ್ಮ ಬಗ್ಗೆ ಹೆಮ್ಮೆ ಪಡುವಂತೆ ನಿಮ್ಮ ವೃತ್ತಿಪರ ಜೀವನದ ಬಗ್ಗೆಯೂ ಗಮನ ಹರಿಸಬೇಕು. ಪ್ರೇಮಿಗಳ ದಿನದಂದು ನೀವಿಬ್ಬರೂ ಉತ್ತಮ ಸಮಯವನ್ನು ಹೊಂದಿರುತ್ತೀರಿ ಮತ್ತು ಆದ್ದರಿಂದ, ನಿಮ್ಮ ಪ್ರೇಮಿಯನ್ನು ಸಂತೋಷಪಡಿಸುವಂತಹ ಕೆಲಸಗಳನ್ನು ಮಾಡುವ ಬಗ್ಗೆ ಯೋಚಿಸಬಹುದು. ನೀವು ಒಬ್ಬಂಟಿಯಾಗಿದ್ದರೆ, ತಾಳ್ಮೆಯಿಂದಿರಿ, ಶೀಘ್ರದಲ್ಲೇ ನಿಮ್ಮ ಜೀವನದ ಸಂಗಾತಿಯನ್ನು ನೀವು ಕಾಣಬಹುದು. ನೀವು 'ನೀವೇ' ಆಗಿರಿ, ಬದಲಾಗಿ ಇತರ ನಿಮ್ಮ ಆಕರ್ಷಣೆಗೆ ಬಲಿಯಾಗಿ ಬದಲಾಗಬೇಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ನೀವು ತಾಳ್ಮೆಯನ್ನು ಕಾಪಾಡಿಕೊಂಡರೆ ನಿಮ್ಮ ಪ್ರೇಮ ಸಂಬಂಧದಲ್ಲಿ ವಿಷಯಗಳು ಸುಧಾರಿಸುತ್ತವೆ. ನಿಮ್ಮ ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ ಯಾವುದೇ ದೊಡ್ಡ ಘೋಷಣೆ ಮಾಡಲು ಅಥವಾ ನಿಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಯೋಜಿಸುತ್ತಿದ್ದರೆ, ನಿಮ್ಮ ಆಲೋಚನೆಗಳನ್ನು ಮತ್ತೊಮ್ಮೆ ವಿಶ್ಲೇಷಿಸಿ, ಈ ಸಮಯದಲ್ಲಿ ಸ್ವಲ್ಪ ತಾಳ್ಮೆ ಹೊಂದಿರುವುದು ಸೂಕ್ತ. ಹಠಾತ್ ನಿರ್ಧಾರಕ್ಕಿಂತ, ನಿಧಾನ ಮತ್ತು ಸ್ಥಿರವಾದ ಓಟ ಗೆಲುವನ್ನು ನೀಡುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.

ಧನು ರಾಶಿ

ಧನು ರಾಶಿ

ಕೋಪ ಮತ್ತು ಅಹಂ ನಿಮ್ಮ ಸಂಬಂಧದಲ್ಲಿ ಪ್ರತಿಕೂಲವಾಗಿ ಪರಿಣಾಮ ಬೀರುವ ಅಂಶಗಳಾಗಿವೆ. ಭಾವನಾತ್ಮಕವಾಗಿ ದುರ್ಬಲರಾಗುವುದು ನಿಮ್ಮ ಸಂಗಾತಿಗೆ ಕಿರಿಕಿರಿ ಉಂಟುಮಾಡಬಹುದು. ಅಭದ್ರತೆಯ ಮನಸ್ಥಿತಿಯಿಂದ ಹೊರಬರಬೇಕು ಮತ್ತು ನಿಮ್ಮ ಸಂಬಂಧವನ್ನು ಸುಧಾರಿಸುವಂತಹ ಕೆಲಸಗಳನ್ನು ಮಾಡುವತ್ತ ಗಮನ ಹರಿಸಬೇಕು. ವಿಷಯಗಳನ್ನು ಅತಿಯಾಗಿ ಯೋಚಿಸುವ ಮತ್ತು ವಿಶ್ಲೇಷಿಸುವ ಬದಲು ಶಾಂತವಾಗಿರಬೇಕು ಮತ್ತು ನಿಮ್ಮ ಸಂಬಂಧದಲ್ಲಿ ಉತ್ತಮವಾದದ್ದನ್ನು ಹೇಗೆ ಹೊರತರುವುದು ಎಂಬುದರ ಬಗ್ಗೆ ಹೆಚ್ಚು ಚಿಂತಿಸಿ. ಸಂಗಾತಿಯೊಂದಿಗೆ ಸಹ ಅದೇ ರೀತಿ ಚರ್ಚಿಸಬಹುದು ಮತ್ತು ಯಾವುದಾದರೂ ಸಮಸ್ಯೆಗಳು ಇದ್ದರೆ ಪರಿಹರಿಸುವ ಮಾರ್ಗಗಳನ್ನು ಹುಡುಕಿ.

ಮಕರ ರಾಶಿ

ಮಕರ ರಾಶಿ

ನೀವು ಬಹಳ ಕಾರ್ಯನಿರತ ವ್ಯಕ್ತಿಯಾಗಿರುವುದರಿಂದ ಬಹುಶಃ ನಿಮ್ಮ ಸಂಗಾತಿಯೊಂದಿಗೆ ನೀವು ಹೆಚ್ಚು ಸಮಯ ಕಳೆಯದಿರಬಹುದು. ಆದರೆ ನಿಮ್ಮ ಸಂಬಂಧಕ್ಕೆ ಹೆಚ್ಚಿನ ಸಮಯವನ್ನು ನೀಡುವ ಬಗ್ಗೆ ನೀವು ಯೋಚಿಸಬೇಕಿದೆ. ಇದಕ್ಕಾಗಿ ಹೆಚ್ಚಿನ ಪ್ರಯತ್ನಗಳನ್ನು ಮಾಡಲು ನೀವು ಸಿದ್ಧರಾದರೆ ಫೆಬ್ರವರಿ ತಿಂಗಳು ನಿಮ್ಮ ಸಂಬಂಧದಲ್ಲಿ ಸಂತೃಪ್ತಿ ಮತ್ತು ಪರಸ್ಪರ ತಿಳುವಳಿಕೆ ಹೆಚ್ಚುತ್ತದೆ. ನಿಮ್ಮ ಜೀವನದಲ್ಲಿ ಇನ್ನೂ ಅನೇಕ ಪ್ರಮುಖ ವಿಷಯಗಳಿವೆ, ಅದಕ್ಕಾಗಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಿದೆ, ನಿಮ್ಮ ಸಂಗಾತಿಗೆ ಸಮಯವನ್ನು ನೀಡುವುದರಿಂದ ಸಹ ನೀವು ಅವರ ಮಾನಸಿಕ ಬೆಂಬಲವನ್ನು ಪಡೆಯಬಹುದು, ಇದು ನಿಮ್ಮಲ್ಲೂ ಕೆಲಸಕ್ಕೆ ಪ್ರೇರಣೆ ನೀಡುತ್ತದೆ.

ಕುಂಭ ರಾಶಿ

ಕುಂಭ ರಾಶಿ

ಪ್ರತಿಯೊಂದು ಸಂಬಂಧವು ಕೆಲವು ಕಠಿಣ ಹಂತಗಳನ್ನು ದಾಟಿಯೇ ಸಾಗುತ್ತದೆ, ಅಂತೆಯೇ ನಿಮಗೂ ಸಮಸ್ಯೆ ಎದುರಾಗಬಹುದು. ಆದರೆ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವುದು ನಿಮ್ಮ ಮೇಲಿದೆ. ಕೆಲವು ವ್ಯತ್ಯಾಸಗಳಿಂದಾಗಿ ನಿಮ್ಮ ಸಂಬಂಧವನ್ನು ತ್ಯಜಿಸುವ ಬದಲು, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವುದು ಉತ್ತಮ. ಪ್ರೀತಿಯನ್ನು ಹುಡುಕುವವರಾದರೆ ಇನ್ನಷ್ಟು ಅಭಿವ್ಯಕ್ತರಾಗಬೇಕಿದೆ. ವ್ಯಕ್ತಿಯು ನಿಮ್ಮೊಂದಿಗೆ ಚೆನ್ನಾಗಿ ಮಾತನಾಡುತ್ತಾರೆ ಎಂಬ ಆಧಾರದ ಮೇಲೆ ಅವರನ್ನು ನಂಬುವುದನ್ನು ನೀವು ತಪ್ಪಿಸಬೇಕು.

ಮೀನ ರಾಶಿ

ಮೀನ ರಾಶಿ

ನಿಮ್ಮ ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ, ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಂತರ ನೀವು ತಾಳ್ಮೆಯಿಂದ ಆ ಸಮಸ್ಯೆಗಳನ್ನು ನಿವಾರಿಸಬಹುದು. ನಿಮ್ಮ ಪ್ರಸ್ತುತ ಸಂಬಂಧದ ಮೇಲೆ ಪರಿಣಾಮ ಬೀರದಂತೆ ಹಿಂದೆ ಮಾಡಿದ ತಪ್ಪುಗಳಿಂದ ಕಲಿಯುವುದು ಉತ್ತಮ. ನಿಮ್ಮ ಪ್ರೀತಿಯ ಜೀವನವನ್ನು ಮೌಲ್ಯಮಾಪನ ಮಾಡಬೇಕು ಮತ್ತು ನಿಮ್ಮ ಅಭಿಪ್ರಾಯಗಳು ಮತ್ತು ಆಲೋಚನೆಗಳು ನಿಮ್ಮ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆಯೇ ಎಂದು ಪರಿಶೀಲಿಸಬೇಕು.

ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಮೇಲೆ ಹೇಳಿದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತೀರಾ ಎಂದು ನಾವು ಭಾವಿಸುತ್ತೇವೆ. ಪ್ರೇಮಿಗಳ ದಿನದ ಶುಭಾಶಯಗಳು!

English summary

Preethi and Sambandha Bhavishya February 2020 | February Love Horoscope in Kannada

People are always eager to know what lies in their future. For some zodiac signs there will be challenges and for others there will be opportunities. February is the month of love and therefore, if you are interested to know about your love horoscope then you can scroll down the article to know in what ways your stars will be affecting your love life.
Story first published: Thursday, February 6, 2020, 18:30 [IST]
X
Desktop Bottom Promotion