Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಶನಿಯ ಹಿಮ್ಮುಖ ಚಲನೆ ಈ 5 ರಾಶಿಯವರ ಮೇಲೆ ಹೆಚ್ಚು ಪ್ರಭಾವ ಬೀರುವುದು, ಪರಿಹಾರವೇನು?
ಶನಿಯು ಜೂನ್ 5ರಿಂದ ಹಿಮ್ಮುಖವಾಗಿ ಚಲಿಸಲಾರಂಭಿಸಿದ್ದಾನೆ. 141 ದಿನಗಳ ಹಿಮ್ಮುಖ ಚಲನೆ ಮಾಡಿ ನಂತರ ನೇರವಾಗಿ ಚಲಿಸಲಿದೆ. ಶನಿಯ ಹಿಮ್ಮುಖ ಚಲನೆ ಶನಿ ಧೈಯ್ಯಾ ಹಾಗೂ ಶನಿ ಸಾಡೇಸಾತಿ ನಡೆಯುತ್ತಿರುವ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಶನಿಯು ಕುಂಭ ರಾಶಿಗೆ ಪ್ರವೇಶಿಸಿದಾಗ 5 ರಾಶಿಗಳಿಗೆ ಶನಿ ಸಾಡೇಸಾತಿ ಹಾಗೂ ಹಾಗೂಶನಿ ಧೈಯ್ಯಾ ಪ್ರಾರಂಭವಾಗಿದೆ. ಈಗ ಶನಿಯ ಹಿಮ್ಮುಖ ಚಲನೆಯ ಪ್ರಭಾವ ಕೂಡ ಆ ರಾಶಿಗಳ ಮೇಲೆ ಅಧಿಕವಿರುತ್ತದೆ.

ಈಗ ಕುಂಭ, ಮಕರ ಮತ್ತು ಮೀನ ರಾಶಿಗಳಲ್ಲಿ ಶನಿ ಸಾಡೇಸಾತಿ ಹಾಗೂ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಮೇಲೆ ಶನಿ ಧೈಯನ ಪ್ರಭಾವವಿದೆ. ಶನಿಯ ಹಿಮ್ಮುಖ ಚಲನೆ ಈ ರಾಶಿಗಳ ಮೇಲೆ ಬೀರುವ ಪ್ರಭಾವ ಹಾಗೂ ಶನಿ ದೋಷ ಕಡಿಮೆ ಮಾಡಿ ಶನಿ ಕೃಪೆಗಳಿಸಲು ಪರಿಹಾರವೇನು ಎಂದು ನೋಡೋಣ:

ಶನಿ ಸಾಡೇಸಾತಿ ಇರುವ ರಾಶಿಗಳು
ಮಕರ ರಾಶಿ - ಮಕರ ರಾಶಿಯವರ ಮೇಲೆ ಶನಿ ಸಾಡೇಸಾತಿ ಇರುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಶನಿಯ ಹಿಮ್ಮುಖ ಹಂತದಲ್ಲಿ ನೀವು ಅತ್ಯಂತ ಜಾಗರೂಕರಾಗಿರಬೇಕು. ಕಠಿಣ ಪರಿಶ್ರಮದಲ್ಲಿ ನಂಬಿಕೆ ಇರಲಿ.
ಪರಿಹಾರ:
* ಹನುಮಾನ್ ಚಾಲೀಸಾವನ್ನು ಪ್ರತಿದಿನ ಪಠಿಸಿ
* ಶನಿವಾರ ಶನಿದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆಯ ದೀಪ ಹಚ್ಚಿ, ಬಡವರಿಗೆ ಎಳ್ಳು, ಕಪ್ಪು ಕಂಬಳಿ , ಸಾಸಿವೆಯೆಣ್ಣೆ ದಾನ ಮಾಡಿ.

ಕುಂಭ ರಾಶಿ
ಶನಿ ದೇವನು ಇದೀಗ ನಿಮ್ಮ ಲಗ್ನ ಮನೆಯಲ್ಲಿದ್ದು ಇದೀಗ ನಿಮ್ಮದೇ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಆದ್ದರಿಂದ, ಶನಿಯ ಹಿಮ್ಮುಖ ಚಲನೆಯು ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಣದ ವಿಷಯದಲ್ಲಿ ತಾಳ್ಮೆಯಿಂದಿರಬೇಕು.
ಪರಿಹಾರ
* ಶನಿವಾರದಂದು ಬಡವರು ಅಥವಾ ನಿರ್ಗತಿಕರಿಗೆ ದಾನ ಮಾಡುವ ಮೂಲಕ ಶನಿದೇವನು ಸಂತುಷ್ಟನಾಗುತ್ತಾನೆ.
* ಶನಿವಾರ ಹನುಮಾನ್‌ಗೆ ಸಿಂಧೂರ ಅರ್ಪಿಸಿ

ಮೀನ ರಾಶಿ
ಮೀನ ರಾಶಿಯವರಲ್ಲಿ ಶನಿ ಸಾಡೇಸಾತಿಯ ಮೊದಲ ಘಟ್ಟ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಹಿಮ್ಮುಖ ಶನಿಯು ನಿಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅನಗತ್ಯ ಖರ್ಚುಗಳು ನಿಮಗೆ ಮಾನಸಿಕ ಒತ್ತಡವನ್ನು ಉಂಟುಮಾಡಬಹುದು. ನಿಮ್ಮ ಸಂಗಾತಿಯನ್ನು ಸಂತೋಷವಾಗಿಡಲು ಪ್ರಯತ್ನಿಸಿ. ಪರಿಹಾರ:
* ಶನಿ ಮಂತ್ರಗಳನ್ನು ಪಠಿಸಿ
* ಶನಿವಾರದಂದು ಶನಿ ಚಾಲೀಸವನ್ನು ಪಠಿಸುವುದರಿಂದ ಪ್ರಯೋಜನವಾಗುತ್ತದೆ.

ಶನಿ ಧೈಯ್ಯಾ ನಡೆಯುತ್ತಿರುವ ರಾಶಿಗಳು
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಶನಿಯ ಧೈಯಾ ನಡೆಯುತ್ತಿದೆ. ಶನಿ ದೈಯ್ಯಾ ಸಮಯದಲ್ಲಿ ನೀವು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಹಿಮ್ಮೆಟ್ಟಿಸುವ ಶನಿಯ ಸಮಯದಲ್ಲಿ, ಹಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ.
ಪರಿಹಾರ
* ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ
* ಶನಿವಾರದಂದು ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದರಿಂದ ಪ್ರಯೋಜನವಾಗುತ್ತದೆ.

ವೃಶ್ಚಿಕ ರಾಶಿ
ಹಿಮ್ಮುಖ ಹಂತದಲ್ಲಿರುವ ಶನಿಯು ನಿಮ್ಮ ಸ್ವಭಾವದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಕೋಪ ಹೆಚ್ಚುವುದು, ದುರಹಂಕಾರದಿಂದ ವರ್ತಿಸಬಹುದು. ಇದರಿಂದ ನಿಮ್ಮ ಕೆಲಸ ಹಾಳಾಗಬಹುದು. ವೈವಾಹಿಕ ಜೀವನದಲ್ಲಿ ತೊಂದರೆಗಳಿರಬಹುದು.
ಪರಿಹಾರ
ಶನಿವಾರದಂದು ಹನುಮಂತನ ಆರಾಧನೆಯನ್ನು ಮಾಡಿ

ಶನಿ ಮಂತ್ರಗಳು
ಶನಿ ಏಕಾಶರಿ ಮಂತ್ರ
"ಓಂ ಶಾಮ್ ಶನೇಶ್ಚಾರ ನಮಃ"
ಶನಿ ಬೀಜ ಮಂತ್ರ
ಓಂ ಪ್ರಾಂ ಪ್ರೀಂ ಸಃ ಶನೈಶ್ಚರಾಯ ನಮಃ ಓಂ ಐಂಗ್ ಗ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ ಹಿಂ ಶಂ ಶನಯೇ ನಮಃ ಓಂ ಶನೈಶ್ಚರಾಯ ನಮಃ
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹೀ ತನ್ನೊ ಮಂದಃ ಪ್ರಚೋದಾಯತ್
ಶನಿ ಸಾಡೇಸಾತಿ ಮಂತ್ರ
ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಾರಂ ತಂ ನಮಾಮಿ ಶನೈಶ್ಚರಂ
ಶನಿ ವೈದಿಕ ಮಂತ್ರ
ಓಂ ಶನ್ನೋ ದೇವಿರಭಿಷ್ಟ್ದಾಪೋ ಭವಂತು ಪಿತಯೇ



Click it and Unblock the Notifications
