Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
2023ರಲ್ಲಿ ಈ 6 ರಾಶಿಯವರಿಗೆ ಸೋಲ್‌ಮೇಟ್ ಸಿಗುವ ಸಾಧ್ಯತೆ ಬಲವಾಗಿದೆ!
ಮದುವೆ ಬಗ್ಗೆ ಎಂಬುವುದು ಬಹುತೇಕ ಜನರಿಗೆ ದೊಡ್ಡ ಕನಸ್ಸಿರುತ್ತದೆ. ನನ್ನ ಬಾಳ ಸಂಗಾತಿಯಾಗಿ ಬರುವವನು/ಳು ಹೇಗಿರಬೇಕು ಎಂದು ಕಲ್ಪಿಸಿಕೊಂಡಿರುತ್ತಾರೆ. 2023ರಲ್ಲಿ ನಿಮ್ಮ ಕಲ್ಪನೆಯ ಬಾಳಸಂಗಾತಿ ಸಿಗಲಿ ಎಂಬುವುದೇ ನಮ್ಮ ಆರೈಕೆ.
ಜ್ಯೋತಿಷ್ಯದಲ್ಲಿ ಯಾರ ಮದುವೆಯಾಗುತ್ತೇವೆ, ಯಾವಾಗ ಮದುವೆಯಾಗುತ್ತೇವೆ ಎಂಬುವುದು ಒಂದು ಯೋಗ ಎಂದು ಹೇಳುತ್ತಾರೆ. ಮದುವೆಯೋಗ ಕೂಡಿ ಬಂದಾಗ ಮಾತ್ರ ಮದುವೆಯಾಗುವುದು ಎಂದು ಹೇಳಲಾಗುವುದು. ಕೆಲವರು ಮದುವೆಗೆ ಎಲ್ಲಾ ಸಿದ್ಧತೆ ಮಾಡಿರುತ್ತಾರೆ ಅಂದ್ರೆ ಮದುವೆಗೆ ಚಿನ್ನ ಖರೀದಿ ಮಾಡಿರುತ್ತಾರೆ, ಮದುವೆ ಖರ್ಚಿಗೆ ಬೇಕಾಗುವ ಹಣ ಇರುತ್ತದೆ, ಲೈಫ್‌ನಲ್ಲೂ ಸೆಟ್ಲ್ ಆಗಿರುತ್ತಾರೆ, ಆದರೆ ಸೂಕ್ತ ಸಂಗಾತಿ ಸಿಗದೆ ಮದುವೆ ನಡೆದಿರಲ್ಲ. ಆದ್ದರಿಂದ ಮದುವೆಗೆ ಗುರುಬಲ ಇರಬೇಕು ಎಂದು ವೈದಿಕ ಶಾಸ್ತ್ರ ಹೇಳುತ್ತದೆ.
ಗುರುಬಲ ಇಲ್ಲದಿದ್ದರೆ ಯಾವುದೋ ಒಂದು ಕಾರಣದಿಂದ ಮದುವೆ ಸಂಬಂಧ ತಪ್ಪಿ ಹೋಗುತ್ತಿರುತ್ತದೆ. ಇನ್ನು ಕೆಲವರು ಪ್ರೀತಿಸುತ್ತಿರುತ್ತಾರೆ, ಆದರೆ ಈ ವರ್ಷ ಮದುವೆಯಾಗಬಹುದೇ ಎಂಬ ಯಾವ ನಿಶ್ಚಯವೂ ಇರಲ್ಲ ಈ ರೀತಿಯೆಲ್ಲಾ ನಿಮಗೂ ಆಗುತ್ತಿದೆಯೇ? ಕೆಲವರು ಮದುವೆ ಬಗ್ಗೆ ಯೋಚಿಸಿಯೇ ಇರಲ್ಲ, ಆದರೆ ಒಂದು ಸಂಬಂಧ ಕೂಡಿ ಬಂದು ಮದುವೆ ನಡೆದೇ ಹೋಗುವುದು.
ಆದ್ದರಿಂದ ಮದುವೆಯಾಗಲು ಯೋಗ ಮುಖ್ಯ. ವೈದಿಕ ಶಾಸ್ತ್ರದ ಪ್ರಕಾರ 2023ರಲ್ಲಿ ಈ ರಾಶಿಯವರಿಗೆ ಸೋಲ್ ಸಿಗುತ್ತಾರಂತೆ, ಅದರಲ್ಲೂ ಮೊದಲ ಈ ಕೆಳಗಿನ ಮೊದಲ ರಾಶಿಯವರಿಗೆ ಗುರು ಬಲ ತುಂಬಾನೇ ಇದೆ:

ವೃಷಭ ರಾಶಿ
ವೃಷಭ ರಾಶಿಯ ಪ್ರೇಮಿಯಾಗಿದ್ದರೆ 2023 ರಲ್ಲಿ ಸಮೃದ್ಧ ಪ್ರೇಮ ಜೀವನವನ್ನು ಹೊಂದಿರುತ್ತಾರೆ. ಫೆಬ್ರವರಿ 15, 2023 ರಂದು, ಶುಕ್ರವು ಮೀನ ರಾಶಿಯಲ್ಲಿ ಸಾಗುತ್ತದೆ ಮತ್ತು ಗುರುಗ್ರಹದೊಂದಿಗೆ ಸಂಯೋಗವಾಗುತ್ತದೆ. ಇದರಿಂದ ಪ್ರೀತಿಯ ಜೀವನದಲ್ಲಿ ಸಂತೋಷವನ್ನು ತರುತ್ತದೆ. ನೀವು ಒಬ್ಬಂಟಿಯಾಗಿದ್ದರೆ, ಆದ್ದರಿಂದ ನೀವು ಯಾರೊಬ್ಬರ ಕಡೆಗೆ ಆಕರ್ಷಿತರಾಗಬಹುದು ಮತ್ತು ಅವರೊಂದಿಗೆ ಸ್ನೇಹವನ್ನು ಪ್ರಾರಂಭಿಸುವ ಉತ್ತಮ ಅವಕಾಶಗಳಿವೆ. ವಾಸ್ತವವಾಗಿ, ಏಪ್ರಿಲ್ 22, 2023 ರವರೆಗೆ, ದೇವ ಗುರು ಗುರುವು ವೃಷಭ ರಾಶಿಯ ಸಂಕ್ರಮಣ ಜಾತಕದಲ್ಲಿ ಉಳಿಯುತ್ತಾನೆ. ಇದರ ಶುಭ ಪರಿಣಾಮದಿಂದಾಗಿ, ವೃಷಭ ರಾಶಿಯವ ಪ್ರೇಮಿಗಳು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳಬಹುದು, ಅವಾಹಿತರಿಗೆ ಮದುವೆ ಕೂಡಿ ಬರುವುದು.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವರ್ಷ ಸಾಮಾನ್ಯಕ್ಕಿಂತ ಸ್ವಲ್ಪ ಉತ್ತಮವಾಗಿರುತ್ತದೆ. ದೇವಗುರು ಗುರು ಗ್ರಹವು 22ನೇ ಏಪ್ರಿಲ್ 2023 ರಿಂದ ನಿಮ್ಮ ಒಂಬತ್ತನೇ ಮನೆಯ ಮೂಲಕ ಸಾಗುತ್ತದೆ ಮತ್ತು ಒಂಬತ್ತನೇ ಮನೆಯಲ್ಲಿ ಈಗಾಗಲೇ ಇರುವ ಸೂರ್ಯನೊಂದಿಗೆ ಸಂಯೋಗವಾಗುವುದರಿಂದ ಅತ್ಯುತ್ತಮ ಯೋಗ ರೂಪುಗೊಳ್ಳುವುದು . ಅಂತಹ ಪರಿಸ್ಥಿತಿಯಲ್ಲಿ ನೀವು ಪ್ರೇಮಿಯಾಗಿದ್ದು ಮದುವೆಯಾಗಲು ಬಯಸಿದ್ದರೆ ಈ ವರ್ಷ ಮದುವೆ ನಡೆಯಲದೆ. ಜೋಡಿ ಹುಡುಕುತ್ತಿರುವ ಅವಾಹಿತರಿಗೆ ಒಳ್ಳೆಯ ಸಂಬಂಧ ಕೂಡಿ ಬರಲಿದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ 2023 ವರ್ಷವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಗುರುವು ನಿಮ್ಮ ಐದನೇ ಮನೆಯಲ್ಲಿ ಅಂದರೆ 22 ಏಪ್ರಿಲ್ 2023 ರವರೆಗೆ ಪ್ರೀತಿಯ ಮನೆಯಲ್ಲಿ ಇರುವುದರಿಂದ, ವರ್ಷದ ಆರಂಭವು ಪ್ರೀತಿಯ ವಿಷಯಗಳಲ್ಲಿ ಪ್ರಯೋಜನಕಾರಿಯಾಗಿದೆ. ನೀವು ಪ್ರೀತಿಯಲ್ಲಿದ್ದರೆ ಮನೆಯವರನ್ನು ಒಪ್ಪಿಸಿ ಮದುವೆಯಾಗಬಹುದು. ಏಕೆಂದರೆ ಪರಿಸ್ಥಿತಿಯು ನಿಮಗೆ ಉತ್ತಮವಾಗಿರುತ್ತದೆ. ಮದುವೆಗೆ ಜೋಡಿಯನ್ನು ಹುಡುಕುತ್ತಿರುವವರಿಗೆ ಅರ್ಹ ಸಂಬಂಧ ಕೂಡಿ ಬರಲಿದೆ.

ತುಲಾ ರಾಶಿ
ತುಲಾ ರಾಶಿಯವರು ಪ್ರೀತಿಯಲ್ಲಿ ತುಂಬಾ ಖುಷಿ ಅನುಭವಿಸುತ್ತೀರಿ. ಕೆಲವೊಂದು ಅಹಂ ಸಮಸ್ಯೆ ಬಂದರೂ ನಂತರ ಎಲ್ಲಾ ಸರಿಯಾಗಿ ನೀವಿಬ್ಬರು ಮದುವೆಯಾಗಬಹುದು. ಹುಡುಗಿ ಅಥವಾ ಹುಡುಗ ಹುಡುಕುತ್ತಿರುವ ತುಲಾ ರಾಶಿಯವರಿಗೂ ಒಳ್ಳೆಯ ಸಂಬಂಧ ಕೂಡಿ ಬರಲಿದೆ.

ಕರ್ಕ ರಾಶಿ
ಕರ್ಕ ರಾಶಿಯವರಿಗೂ 2023 ಅನುಕೂಲಕರವಾಗಿದೆ. ಗುರು ನಿಮ್ಮ ಮನೆಯಲ್ಲಿ ಅನುಕೂಲಕರವಾದ ಮನೆಯಲ್ಲಿ ಇರುವುದರಿಂದ ಗುರುಬಲ ಕೂಡಿ ಬರಲಿದೆ. ಇದರಿಂದಾಗಿ ವಿವಾಹ ಬಂಧಕ್ಕೆ ಒಳಪಡಲು ಬಯಸುವ ಪ್ರೇಮಿಗಳು ಈ ಅವಧಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತೀರಿ. ಅವಾಹಿತರಿಗೂ ಮದುವೆ ಸಂಬಂಧ ಕೂಡಿ ಬರಲಿದೆ.

ಕುಂಭ ರಾಶಿ
ಕುಂಭ ರಾಶಿಯವರಿಗೂ ಈ ವರ್ಷ ಮದುವೆ ವಿಷಯದಲ್ಲಿ ಅನುಕೂಲರವಾಗಿದೆ. ನಿಮಗೆ ಗುರುಬಲ ಕೂಡಿ ಬರಲಿದೆ. ಈ ವರ್ಷದಲ್ಲಿ ನಿಮ್ಮ ಮದುವೆಯಲ್ಲಿರುವ ಎಲ್ಲಾ ಅಡೆತಡೆಗಳು ದೂರಾಗುವುದು. ವಿವಾಹವಾಗಲು ಬಯಸುವ ಕುಂಭ ರಾಶಿಯವರು ವಿವಾಹ ಬಂಧಕ್ಕೆ ಒಳಗಾಗುವಿರಿ.



Click it and Unblock the Notifications











