Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಸ್ವಲ್ಪವೂ ಯೋಚಿಸಿದೆ ಏನಾದರೂ ಹೇಳಿ ಬಿಡುವ ರಾಶಿಯವರು ಇವರು
ಕೆಲವರು ಮಾತನಾಡುವಾಗ ತಮ್ಮ ಮನಸ್ಸಿಗೆ ಏನು ತೋಚುತ್ತೋ ಅದನ್ನು ನೇರವಾಗಿ ಹೇಳಿ ಬಿಡುತ್ತಾರೆ. ತಮ್ಮ ಮಾತಿನಿಂದ ಎದುರು ಇರುವವರಿಗೆ ಬೇಜಾರಾಗುತ್ತಾ, ನೋವಾಗುತ್ತಾ ಎಂದು ಯೋಚಿಸುವುದೇ ಇಲ್ಲ, ಅವರು ತುಂಬಾ ಸ್ಟ್ರೈಟ್ ಫಾರ್ವಡ್ ಆದ ವ್ಯಕ್ತಿಯಾಗಿರುತ್ತಾರೆ. ಈ ಸ್ವಭಾವ ಒಂದು ಲೆಕ್ಕದಲ್ಲಿ ಪ್ಲಸ್, ಒನ್ನೊಂದು ಲೆಕ್ಕದಲ್ಲಿ ಮೈನಸ್ ಎಂದು ಹೇಳಬಹುದು.

ಕೆಲವೊಂದು ಸಂದರ್ಭದಲ್ಲಿ ಅವರ ಮಾತುಗಳಿಂದ ಒಂದು ರೀತಿಯ ಗೊಂದಲ ಅಥವಾ ತಪ್ಪಾದ ಅರ್ಥ ಉಂಟಾಗುವುದುಂಟು. ಆಗ ಅವರಿಗೆ ಛೇ... ನಾನು ನನ್ನ ಮಾತನ್ನು ಸ್ವಲ್ಪ ನಿಯಂತ್ರಣ ಮಾಡಿದರೆ ಒಳ್ಳೆಯದಿತ್ತು ಎಂದು ಅನಿಸುತ್ತದೆ, ಆದರೆ ಏನು ಮಾಡುವುದು ಅದು ಅವರ ಸ್ವಭಾವವಾಗಿರುತ್ತದೆ, ಅವರ ಆ ರೀತಿಯ ಸ್ವಭಾವಕ್ಕೆ ಅವರ ರಾಶಿ ಕೂಡ ಕಾರಣ ಎಂಬುವುದು ಗೊತ್ತೇ?
ಹೌದು ಕೆಲವೊಂದು ರಾಶಿಯಲ್ಲಿ ಹುಟ್ಟಿದವರು ಸೀದಾ-ಸಾದ ಹೇಳುವ ಸ್ವಭಾವದರಾಗಿರುತ್ತಾರಂತೆ, ಬನ್ನಿ ಯಾವ ರಾಶಿಯವರಿಗೆ ಆ ರೀತಿಯ ಸ್ವಭಾವ ಇದೆ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಿಗೆ ರಿಸ್ಕ್ ತೆಗೆದುಕೊಳ್ಳುವುದು ಎಂದರೆ ಏನೋ ರಿಸ್ಕ್. ಇವರು ಏನೂ ಚಿಂತಿಸದೆ ಮಾತನಾಡುತ್ತಾರೆ, ಛೇ... ನಾನು ಹಾಗೇ ಹೇಳಬಾರದಿತ್ತು ಎಂದು ಪಶ್ಚಾತಾಪ ಪಡುತ್ತಾರೆ. ಇವರು ಬೋಲ್ಡ್ ಸ್ವಭಾವದರು. ತಮಗೆ ಏನಾದರೂ ಹೇಳಬೇಕೆಂದು ಅನಿಸಿದ್ದನ್ನು ಎದುರಿಗೆ ವ್ಯಕ್ತಿ ಯಾರೇ ಆಗಿರಲಿ, ಹೇಳಿಯೇ ತೀರುವರು.

ಮಿಥುನ ರಾಶಿ
ಮಿಥುನ ರಾಶಿಯವರು ಕೂಡ ಅಷ್ಟೇ ಡೋಂಟ್ ಕೇರ್ ಸ್ವಭಾವದವರು. ಅಲ್ಲದೆ ಯಾರಿಗಾದರೂ ಏನಾದರೂ ಮಾತು ಕೊಟ್ಟರೆ ಅದನ್ನು ನಡೆಸಿಕೊಡುವ ಸ್ವಭಾವದವರು. ಆದರೆ ಅವರು ಕೆಲವೊಮ್ಮೆ ತಮ್ಮ ಪರಿಧಿಗೆ ಮೀರಿದ ರಿಸ್ಕ್ ತೆಗೆದುಕೊಂಡು ಕಷ್ಟ ಪಡುತ್ತಾರೆ. ನೀವು ಮಿಥುನ ರಾಶಿಯವರಾದರೆ ಯಾರಿಗಾದರೂ ಏನಾದರೂ ಪ್ರಾಮಿಸ್ ಮಾಡುವ ಮುನ್ನ ನಿಮಗೆ ಸಾಧ್ಯವಾಗಿದ್ದನ್ನು ಮಾತ್ರ ಯೋಚಿಸಿ ಹೇಳಿದರೆ ರಿಸ್ಕ್ ತೆಗೆದುಕೊಳ್ಳುವ ಅಗ್ಯತವಿರುವುದಿಲ್ಲ.

ಧನು ರಾಶಿ
ಇವರು ಯಾವುದೇ ವಿಷಯವಾಗಲಿ ತಮಾಷೆಯಾಗಿ ಹೇಳುತ್ತಾರೆ. ಅವರ ಆ ಜೋಕ್‌ಗಳು ಕೆಲವೊಮ್ಮೆ ಬೇರೆಯವರಿಗೆ ನೋವು ತರಬಹುದು, ಆದರೆ ಧನು ರಾಶಿಯವರು ನೋವು ನೀಡಬೇಕು ಎಂಬ ಉದ್ದೇಶದಿಂದ ಆ ಮಾತು ಹೇಳಿರುವುದಿಲ್ಲ. ಆದ್ದರಿಂದ ಧನುರಾಶಿಯವರೇ ಜೋಕ್ ಮಾಡುವುದು ಸರಿ, ಆದರೆ ಸ್ವಲ್ಪ ಯೋಚಿಸಿ ಜೋಕ್ ಮಾಡುವುದು ಒಳ್ಳೆಯದು.

ಕುಂಭ ರಾಶಿ
ಕುಂಭ ರಾಶಿಯವರು ಅಷ್ಟೇ ಮರು ಯೋಚನೆ ಮಾಡದೆ ಹೇಳಿ ಬಿಡುತ್ತಾರೆ. ಇವರು ಬೇರೆಯವರ ಬಗ್ಗೆ ಕೇರ್ ಮಾಡಲ್ಲ ಅಂದಲ್ಲ, ತುಂಬಾನೇ ಮಾಡ್ತಾರೆ, ಅಲ್ಲದೆ ಸಹಾಯ ಹಸ್ತ ಚಾಚುವುದರಲ್ಲೂ ಎತ್ತಿದ ಕೈ.
ಕೆಲವೊಮ್ಮೆ ಅವರು ಕಾಳಜಿಯಿಂದ ಹೇಳುವ ಮಾತುಗಳೇ ಬೇರೆಯವರಿಗೆ ಇಷ್ಟವಾಗುವುದಿಲ್ಲ. ಕೆಲವೊಮ್ಮೆ ಅಮ್ಮ... ಮಕ್ಕಳಿಗೆ ಕಾಳಜಿ ಬೈದ್ದಾಗ ಮಕ್ಕಳಿಗೆ ಅದು ಮಕ್ಕಳಿಗೆ ಇಷ್ಟವಾಗುವುದಿಲ್ಲ ನೋಡಿ ಹಾಗೆ.

ಮೀನ ರಾಶಿ
ಮೀನ ರಾಶಿಯವರು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅಷ್ಟು ನಿಸ್ಸೀಮರಲ್ಲ. ಕೆಲವೊಮ್ಮೆ ಗಂಭೀರ ನಿರ್ಧಾರ ತೆಗೆದುಕೊಳ್ಳುವಾಗ ಕೂಡ ಏನೂ ಯೋಚನೆ ಮಾಡದೆ ಹೇಳಿ ಬಿಡುತ್ತಾರೆ. ಆದ್ದರಿಂದ ಇವರ ನಿರ್ಧಾರಗಳು ತಪ್ಪಾಗುವುದೇ ಹೆಚ್ಚು. ಇವರಿಗೆ ತಾನು ಹೇಳಿರುವುದು ತುಂಬಾ ಮಹತ್ವವಾಗಿದ್ದು ಎಂದು ಅನಿಸಿದರೂ ಬೇರೆಯವರಿಗೆ ಸಿಲ್ಲಿಯಾಗಿ ಕಾಣುವುದು.



Click it and Unblock the Notifications
