Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಈ 5 ರಾಶಿಚಕ್ರದವರು ಎಮೋಷನಲಿ ತುಂಬಾ ಸ್ಟ್ರಾಂಗ್
ಪ್ರತಿಯೊಬ್ಬರೂ ಜೀವನದಲ್ಲಿ ಏರಿಳಿತವನ್ನು ಅನುಭವಿಸಿರುತ್ತಾರೆ. ಸಾಕಷ್ಟು ಪರೀಕ್ಷೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಭಾವನೆಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಕೆಲವರು ಮಾತ್ರ ಅರಿತಿರುತ್ತಾರೆ. ಭಾವನಾತ್ಮಕವಾಗಿ ಬಲಿಷ್ಠರಾಗಿರುವವರು ಸಾಮಾನ್ಯವಾಗಿ ತಮ್ಮ ನ್ಯೂನತೆಗಳನ್ನು ಸ್ವೀಕರಿಸಲು ಪ್ರಬುದ್ಧತೆಯನ್ನು ಹೊಂದಿರುತ್ತಾರೆ. ಅವರಿಗೆ ತಮ್ಮ ಭಾವನೆಗಳು ಅದನ್ನು ನಿಭಾಯಿಸುವ ಕಲೆ ಚೆನ್ನಾಗಿಯೇ ತಿಳಿದಿರುತ್ತದೆ. ತಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸಿ, ಎಲ್ಲಿ ಮತ್ತು ಯಾವಾಗ ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂಬ ಪ್ರಬುದ್ಧ ಮನೋಭಾವ ಹೊಂದಿರುತ್ತಾರೆ.

ಭಾವನಾತ್ಮಕವಾಗಿ ಬಲಿಷ್ಠವಾಗುರುವ ಗುಣ ಆ ವ್ಯಕ್ತಿಯಲ್ಲಿರುವ ಪ್ಲಸ್ ಪಾಯಿಂಟ್. ಈ ಗುಣವಿರುವ ವ್ಯಕ್ತಿ ಎಂಥದ್ದೇ ಸವಾಲಿನ ಪರಿಸ್ಥಿತಿಯನ್ನೂ ಸುಲಭವಾಗಿ ಎದುರುಸುತ್ತಾರೆ, ಭಯ ಪಟ್ಟು ಕುಗ್ಗಿ ಹೋಗುವ ಗುಣ ಇವರಲ್ಲಿ ಇರುವುದೇ ಇಲ್ಲ, ಆದ್ದರಿಂದಲೇ ಇಂಥ ವ್ಯಕ್ತಿಗಳು ಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಫೀನಿಕ್ಸ್ ಪಕ್ಷಿಯಂತೆ ಎದ್ದು ಬರುತ್ತಾರೆ. ಆದರೆ ಇಂಥ ಗುಣಕ್ಕೂ ಜನ್ಮ ರಾಶಿಗಳಿಗೂ ಏನಾದರೂ ಸಂಬಂಧವಿದೆಯೇ? ಇದೆ ಎನ್ನುತ್ತಿದೆ ವೈದಿಕ ಶಾಸ್ತ್ರ.
ಒಬ್ಬ ವ್ಯಕ್ತಿಯ ಗುಣ ಹೇಗಿರುತ್ತದೆ ಎಂಬುವುದು ಆ ವ್ಯಕ್ತಿಯ ರಾಶಿಯನ್ನು ಅವಲಂಭಿಸಿರುತ್ತದೆ. ನಾವಿಲ್ಲಿ ಭಾವನಾತ್ಮಕವಾಗಿ ಪ್ರಬಲವಾಗಿರುವ ರಾಶಿಗಳು ಯಾವುವು ಎಂದು ಹೇಳಿದ್ದೇವೆ ನೋಡಿ:

ಮೇಷ ರಾಶಿ:
ಮೇಷ ರಾಶಿಯವರು ಇತರರಿಗೆ ಏನು ಅನಿಸುತ್ತದೆ ಎಂದು ಯೋಚಿಸುವುದಕ್ಕಿಂತ ತನಗೆ ಏನು ಅನಿಸುತ್ತದೆಯೋ ಅದನ್ನು ಮಾಡುವವರು. ಇವರು ತಮಗೇ ಹೆಚ್ಚಿನ ಆದ್ಯತೆ ನೀಡುತ್ತಾರೆ. ತಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸಿರುತ್ತಾರೆ. ತಮ್ಮ ಅಗ್ಯತವೇನು ಎಂಬುವುದು ಇವರಿಗೆ ಸ್ಪಷ್ವವಾಗಿ ತಿಳಿದಿರುತ್ತದೆ. ಅಷ್ಟೇ ಅಲ್ಲ, ಜನರನ್ನು ಮೆಚ್ಚಿಸಲು ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಜನರ ಮಾತಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಮನಸ್ಸಿಗೆ ಸರಿಹೊಂದುವಂತಹ ಕಾರ್ಯ ಮಾಡುತ್ತಾರೆ. ಮನಸ್ಸಿಗೆ ಬೇಸರವಾದರೂ ಅದನ್ನು ಹೊರಗಡೆ ತೋರ್ಪಡಿಸುವುದಿಲ್ಲ, ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ.

ವೃಷಭ ರಾಶಿ:
ಈ ರಾಶಿಯವರು ಸುಲಭವಾಗಿ ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಕೆಲವೇ ಕೆಲವು ಜನರನ್ನು ಮಾತ್ರ ನಂಬುತ್ತಾರೆ, ನಂಬಿಕೆ ಇಟ್ಟ ಜನರ ಬಳಿ ಮಾತ್ರವೇ ತಮ್ಮ ಭಾವನೆಗಳನ್ನು -ನೋವುಗಳನ್ನ ಹಂಚಿಕೊಳ್ಳುತ್ತಾರೆ. ಇದರಿಂದ ಅವರು ಮಾನಸಿಕವಾಗಿ ಸದೃಢವಾಗಿರುತ್ತಾರೆ. ಅವರು ಭಾವನೆಗಳ ಏರಿಳಿತವನ್ನು ತೀವ್ರವಾಗಿ ಅನುಭವಿಸುತ್ತಿದ್ದರೂ ಸಹ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಎಲ್ಲಾ ಭಾವನೆಗಳನ್ನು ತಮ್ಮ ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತಾರೆ.

ಮಿಥುನ ರಾಶಿ:
ಇವರು ಭಾವನಾತ್ಮಕವಾಗಿ ಪ್ರಬಲರಾಗಿರುತ್ತಾರೆ, ತಮಗಾದ ನೋವುಗಳಿಂದ ಬೇಗನೇ ಚೇತರಿಸಿಕೊಳ್ಳುತ್ತಾರೆ. ಏನೇ ಕಷ್ಟ ಬಂದರೂ ಸಹ ಅದನ್ನು ಎದುರಿಸುವಂತಹ ಮನಸ್ಥಿತಿ ಇವರದು. ಯಾವುದೇ ಬಾಹ್ಯ ಅಂಶಗಳು ತಮ್ಮ ಭಾವನೆಗಳನ್ನು ನಿರ್ಧರಿಸಲು ಬಿಡುವುದಿಲ್ಲ. ತಮ್ಮ ಸುತ್ತಮುತ್ತ ಆಗುವ ನಕಾರಾತ್ಮಕ ಅಂಶಗಳು ಅವರ ಮೇಲೆ ಯಾವುದೇ ರೀತಿಯ ಪ್ರಭಾವ ಬೀರದಂತೆ ನೋಡಿಕೊಳ್ಳುತ್ತಾರೆ. ತನ್ನ ಕಷ್ಟಗಳನ್ನು ಇತರರ ಬಳಿ ಹೇಳಿಕೊಂಡು ಕೊರಗುವ ಗುಣ ಇವರಲ್ಲಿ ಇರಲ್ಲ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಇವರ ಆಪ್ತರಿಗೆ ಇವನಿಗೆ/ಇವಳಿಗೆ ಯಾವುದೇ ಭಾವನೆಯೇ ಇಲ್ಲವೇ ಎಂದು ಅನಿಸುವುದು. ಅದರರ್ಥ ಅವರು ಯಾವುದೇ ಭಾವನೆಗಳನ್ನು ಹೊಂದಿಲ್ಲ ಎಂದಲ್ಲ. ಅವರು ಅಪಾರ ಭಾವನಾತ್ಮಕ ಶಕ್ತಿಯನ್ನು ಹೊಂದಿರುವುದರಿಂದ ಯಾವುದೇ ಸಂದರ್ಭಗಳಲ್ಲೂ ತುಂಬಾ ಕೋಪಗೊಳ್ಳದೆ ಅಥವಾ ತುಂಬಾ ಕುಗ್ಗದೆ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುತ್ತಾರೆ. ಎಲ್ಲವನ್ನೂ ಸಮಾನವಾಗಿ ಸರಿತೂಗಿಸಿಕೊಂಡು ಹೋಗುತ್ತಾರೆ. ತಮ್ಮ ಮನದೊಳಗೆ ಎಲ್ಲವನ್ನೂ ಲೆಕ್ಕಾಚಾರ ಹಾಕಿಕೊಂಡು ಭಾವನೆಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ.

ಧನು ರಾಶಿ
ಈ ರಾಶಿಯವರು ತಮ್ಮ ಭಾವನೆಗಳನ್ನು ಚೆನ್ನಾಗಿ ಬಲ್ಲರು. ತಮ್ಮ ಭಾವನೆಗಳು ಮತ್ತು ಆಲೋಚನೆಗಳ ಬಗ್ಗೆ ತಿಳಿದಿರುತ್ತಾರೆ. ಯಾವಾಗ ಏನು ಬೇಕು, ಯಾವ ಸಂದರ್ಭದಲ್ಲಿ ಹೇಗೆ ಇರುತ್ತೇವೆ ಎಲ್ಲವನ್ನೂ ಅರಿತಿರುತ್ತಾರೆ. ಅವರು ಬಯಸಿದಾಗ ಮಾತ್ರ ಆ ಭಾವನೆಗಳು ಕಾರ್ಯರೂಪಕ್ಕೆ ಬರುತ್ತವೆ. ತಮ್ಮ ಭಾವನೆಗಳನ್ನು ಅವರ ಬಳಿಯೇ ಇಟ್ಟುಕೊಂಡು, ತಮಗೆ ಸರಿ ಎನಿಸಿದ ವ್ಯಕ್ತಿಗಳ ಜೊತೆ ಹಂಚಿಕೊಳ್ಳುತ್ತಾರೆ. ಆದ್ದರಿಂದ ಇವರಿಗೆ ಜೀವನದಲ್ಲಿ ಬರುವ ಸವಾಲುಗಳನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗಲು ಇವರಿಗೆ ಗೊತ್ತಿರುತ್ತದೆ.



Click it and Unblock the Notifications