ಲಾಲ್‌ ಕಿತಾಬ್ ಭವಿಷ್ಯ 2023: ಈ 6 ರಾಶಿಯವರಿಗೆ ಒಳ್ಳೆಯದಿದೆ, 6 ರಾಶಿಯವರಿಗೆ ಮಿಶ್ರಫಲ

ಲಾಲ್‌ ಕಿತಾಬ್‌ ಭವಿಷ್ಯದ ಪ್ರಕಾರ 2023 ವರ್ಷ ದ್ವಾದಶ ರಾಶಿಗಳಿಗೆ ಹೇಗಿರಲಿದೆ? ಈ ವರ್ಷ ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದು, ಯಾವ ರಾಶಿಯವರು ಸ್ವಲ್ಪ ಜಾಗ್ರತೆಯಿಂದಿರಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ:

ಮೇಷ ರಾಶಿ': ಹೊಸ ವರ್ಷ ನಿಮಗೆ ಶುಭವಾಗಿದೆ

ಮೇಷ ರಾಶಿ': ಹೊಸ ವರ್ಷ ನಿಮಗೆ ಶುಭವಾಗಿದೆ

ಲಾಲ್ ಕಿತಾಬ್ ಪ್ರಕಾರ ಮೇಷ ರಾಶಿಯವರಿಗೆ ಹೊಸ ವರ್ಷವು ಉತ್ತಮವಾಗಿರುತ್ತದೆ. ಈ ರಾಶಿಯ ಜನರು ತಮ್ಮ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲಿತಾಂಶವನ್ನು ಪಡೆಯುತ್ತಾರೆ. ವೃತ್ತಿ ಜೀವನದಲ್ಲಿಯೂ ಯಶಸ್ಸು ಸಿಗಲಿದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸ ಈ ವರ್ಷಪೂರ್ಣಗೊಳ್ಳಲಿದೆ. ವ್ಯವಹಾರದ ಬಗ್ಗೆ ಹೇಳುವುದಾದರೆ ಅದರಲ್ಲಿಯೂ ಒಳ್ಳೆಯ ಲಾಭ ಪಡೆಯುತ್ತೀರಿ. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ವರ್ಷ ಲಾಭದಾಯವಾಗಿದೆ.

ವೃಷಭ ರಾಶಿ: ಹೊಸ ವರ್ಷ ನಿಮಗೆ ಮಿಶ್ರಫಲ

ವೃಷಭ ರಾಶಿ: ಹೊಸ ವರ್ಷ ನಿಮಗೆ ಮಿಶ್ರಫಲ

ಈ ರಾಶಿಯವರಿಗೆ ಹೊಸ ವರ್ಷವು ಏರಿಳಿತಗಳಿಂದ ಕೂಡಿರಬಹುದು. ಉದ್ಯೋಗ ಬದಲಾವಣೆಯ ಸಾಧ್ಯತೆಗಳಿವೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಎದುರಿಸಬೇಕಾಗಬಹುದು. ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳುವುದಾದರೆ ನಿಮ್ಮ ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸುವುದು ಒಳ್ಳೆಯದು. ಇಲ್ಲದಿದ್ದರೆ ಅನವಶ್ಯಕ ಖರ್ಚುಗಳಿಂದ ನೀವು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು. ವೃತ್ತಿ ಕ್ಷೇತ್ರದಲ್ಲಿಲ್ಲೂ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ.

ಮಿಥುನ ರಾಶಿ: ಹೊಸ ವರ್ಷ ನಿಮಗೆ ಮಿಶ್ರಫಲ

ಮಿಥುನ ರಾಶಿ: ಹೊಸ ವರ್ಷ ನಿಮಗೆ ಮಿಶ್ರಫಲ

ಲಾಲ್ ಕಿತಾಬ್ ಪ್ರಕಾರ, ಮಿಥುನ ರಾಶಿಯವರಿಗೆ ಹೊಸ ವರ್ಷವು ಮಿಶ್ರಫಲದಿಂದ ಕೂಡಿದೆ. ವರ್ಷದ ಆರಂಭದಲ್ಲಿ ಮಿಥುನ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಆರ್ಥಿಕ ಪರಿಸ್ಥಿತಿಯ ಪ್ರಕಾರ, ವರ್ಷದ ಆರಂಭದಲ್ಲಿ ಸ್ವಲ್ಪ ದುರ್ಬಲವಾಗಿರುತ್ತದೆ, ಆದರೆ ನಂತರ ವಿತ್ತೀಯ ಲಾಭವಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.

ಕರ್ಕ ರಾಶಿ: ಹೊಸ ವರ್ಷ ನಿಮಗೆ ಫಲಪ್ರದ

ಕರ್ಕ ರಾಶಿ: ಹೊಸ ವರ್ಷ ನಿಮಗೆ ಫಲಪ್ರದ

ಲಾಲ್ ಕಿತಾಬ್ ಪ್ರಕಾರ ಕರ್ಕ ರಾಶಿಯವರಿಗೆ ಹೊಸ ವರ್ಷವು ಫಲಪ್ರದವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ವ್ಯಾಪಾರದಲ್ಲಿಯೂ ಅಪಾರ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಕಡಿಮೆ ಒತ್ತಡವಿರುತ್ತದೆ . ಸಂಗಾತ ಹಾಗೂ ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ವರ್ಷ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಹಠಾತ್ ವಿತ್ತೀಯ ಲಾಭದ ಸಾಧ್ಯತೆಗಳಿವೆ.

ಸಿಂಹ ರಾಶಿ: ಹೊಸ ವರ್ಷ ನಿಮಗೆ ವಿಶೇಷವಾಗಿರಲಿದೆ

ಸಿಂಹ ರಾಶಿ: ಹೊಸ ವರ್ಷ ನಿಮಗೆ ವಿಶೇಷವಾಗಿರಲಿದೆ

ಸಿಂಹ ರಾಶಿಯವರಿಗೆ ಹೊಸ ವರ್ಷ ತುಂಬಾ ವಿಶೇಷವಾಗಿರಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ದೊಡ್ಡ ಅಧಿಕಾರಿಗಳೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಲಿವರ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿದೇಶಿ ವ್ಯಾಪಾರದಲ್ಲಿ ಅಪಾರ ಸಂಪತ್ತು ಗಳಿಸಬಹುದು.

ಕನ್ಯಾ ರಾಶಿ: ಹೊಸ ವರ್ಷ ನಿಮಗೆ ಮಿಶ್ರಫಲ

ಕನ್ಯಾ ರಾಶಿ: ಹೊಸ ವರ್ಷ ನಿಮಗೆ ಮಿಶ್ರಫಲ

ಕನ್ಯಾ ರಾಶಿಯವರು ಈ ವರ್ಷ ಸ್ವಲ್ಪ ಹೆಚ್ಚು ಕೆಲಸ ಮಾಡಬೇಕಾಗಬಹುದು. ಆಗ ಮಾತ್ರ ಯಶಸ್ಸು ಸಿಗುತ್ತದೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಬಯಸಿದರೆ, ಹೊಸ ವರ್ಷದ ಆರಂಭದಲ್ಲಿಯೇ ಫಲ ಸಿಗಲಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಆರೋಗ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಉಂಟಾಗುವುದು.

ತುಲಾ ರಾಶಿ:ಹೊಸ ವರ್ಷ ನಿಮಗೆ ಮಿಶ್ರಫಲ

ತುಲಾ ರಾಶಿ:ಹೊಸ ವರ್ಷ ನಿಮಗೆ ಮಿಶ್ರಫಲ

ತುಲಾ ರಾಶಿಯವರಿಗೆ ಹೊಸ ವರ್ಷ ಮಿಶ್ರಿತವಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಬಹುಕಾಲದಿಂದ ಸ್ಥಗಿತಗೊಂಡಿರುವ ಕೆಲಸ ಮತ್ತೊಮ್ಮೆ ಆರಂಭವಾಗಲಿದೆ. ಭವಿಷ್ಯಕ್ಕಾಗಿ ಮಾಡಿದ ಯೋಜನೆಗಳು ಸಹ ಈಡೇರುತ್ತವೆ. ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿರಬಹುದು. ಆರೋಗ್ಯದಲ್ಲೂ ಕೆಲವು ಸಮಸ್ಯೆಗಳನ್ನು ಎದುರಿಸಬಹುದು.

 ವೃಶ್ಚಿಕ ರಾಶಿ:ಹೊಸ ವರ್ಷ ನಿಮಗೆ ಫಲಪ್ರದ

ವೃಶ್ಚಿಕ ರಾಶಿ:ಹೊಸ ವರ್ಷ ನಿಮಗೆ ಫಲಪ್ರದ

ವೃಶ್ಚಿಕ ರಾಶಿಯವರಿಗೆ ಹೊಸ ವರ್ಷ ತುಂಬಾ ಒಳ್ಳೆಯದಾಗಲಿದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ವ್ಯಾಪಾರದಲ್ಲಿ ಹೂಡಿಕೆಯು ಲಾಭದಾಯಕವಾಗಲಿದೆ. ವರ್ಷದ ಮಧ್ಯದಲ್ಲಿ, ನೀವು ವ್ಯವಹಾರದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಿಗಳು ವರ್ಷದ ಮಧ್ಯದಲ್ಲಿ ಒಳ್ಳೆಯ ಬಡ್ತಿ ಸಹ ಪಡೆಯಬಹುದು. ಆದರೆ ಹೊಸ ವರ್ಷದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಏಕೆಂದರೆ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಎದುರಿಸಬೇಕಾಗಬಹುದು. 2023 ರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಧನು ರಾಶಿ: ಹೊಸ ವರ್ಷ ನಿಮಗೆ ಮಿಶ್ರಫಲ

ಧನು ರಾಶಿ: ಹೊಸ ವರ್ಷ ನಿಮಗೆ ಮಿಶ್ರಫಲ

ಹೊಸ ವರ್ಷ 2023 ಧನು ರಾಶಿಯವರಿಗೆ ಮಿಶ್ರಫಲ ತರಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವರ್ಷದ ಮಧ್ಯದಲ್ಲಿ ಉದ್ಯೋಗ ಬಡ್ತಿ ಉಂಟಾಗಬಹುದು. ಈ ವರ್ಷ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಯಾವುದೋ ವಿಚಾರದಲ್ಲಿ ಮನಸ್ತಾಪ ಉಂಟಾಗಬಹುದು. ಆದರೆ ನೀವಿಬ್ಬರೂ ಒಟ್ಟಾಗಿ ಕೂತು ಸಮಸ್ಯೆಗಳನ್ನು ಬಗೆಹರಿಸುವುದು ಒಳ್ಳೆಯದು. ಆರೋಗ್ಯದ ಬಗ್ಗೆ ನೋಡುವುದಾದರೆ ದೊಡ್ಡ ಸಮಸ್ಯೆಗಳಿಲ್ಲ.

ಮಕರ ರಾಶಿ: ಹೊಸ ವರ್ಷ ನಿಮಗೆ ಮಂಗಳಕರ

ಮಕರ ರಾಶಿ: ಹೊಸ ವರ್ಷ ನಿಮಗೆ ಮಂಗಳಕರ

ಲಾಲ್ ಕಿತಾಬ್ ಪ್ರಕಾರ, ಹೊಸ ವರ್ಷವು ಮಕರ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಸಿಗಲಿದೆ. ಮತ್ತೊಂದೆಡೆ, ಪೂರ್ಣ ಸಮರ್ಪಣೆಯೊಂದಿಗೆ ಶ್ರಮಿಸುವವರಿಗೆ ಬಹಳಷ್ಟು ಯಶಸ್ಸು ಸಿಗುತ್ತದೆ. ನಿಮ್ಮ ಕೆಲಸಕ್ಕೆ ಒಳ್ಳೆಯ ಪ್ರಶಂಸೆ ಸಿಗಲಿದೆ. . ವೈವಾಹಿಕ ಜೀವನದಲ್ಲೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿಯ ಪ್ರಕಾರ, ಹೊಸ ವರ್ಷದಲ್ಲಿ ಸ್ವಲ್ಪ ಹೆಚ್ಚು ಖರ್ಚು ಇರುತ್ತದೆ. ಆದರೆ ವರ್ಷದ ಕೊನೆಯಲ್ಲಿ ಉಳಿತಾಯದತ್ತ ಗಮನ ಹರಿಸುತ್ತೀರಿ.

ಕುಂಭ ರಾಶಿ:ಹೊಸ ವರ್ಷ ನಿಮಗೆ ಒಳ್ಳೆಯದಿದೆ

ಕುಂಭ ರಾಶಿ:ಹೊಸ ವರ್ಷ ನಿಮಗೆ ಒಳ್ಳೆಯದಿದೆ

ಕುಂಭ ರಾಶಿಯವರಿಗೆ ಹೊಸ ವರ್ಷವು ಒಳ್ಳೆಯದಾಗಲಿದೆ. ವರ್ಷದ ಆರಂಭದಲ್ಲಿ ಹಣವು ಹೆಚ್ಚು ದುಬಾರಿಯಾಗಲಿದೆ. ಆದರೆ ಆದಾಯವು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ, ಆದ್ದರಿಂದ ತೊಂದರೆಯಿಲ್ಲ. ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ಕಛೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಕೆಲವು ವಿಷಯಗಳ ಬಗ್ಗೆ ಮನಸ್ತಾಪ ಬರಬಹುದು, ಆದರೆ ನೀವು ಇತರ ವಿಷಯಗಳಿಗಿಂತ ನಿಮ್ಮ ಕೆಲಸದಲ್ಲಿ ಗಮನ ಕೊಡಲು ಪ್ರಯತ್ನಿಸಿ. ವಿವಾಹ ಯೋಗ್ಯ ಪ್ರಾಯದವರು ಈ ವರ್ಷ ಮದುವೆಯಾಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ.

ಮೀನ ರಾಶಿ: ಹೊಸ ವರ್ಷ ನಿಮಗೆ ಒಳ್ಳೆಯದಿದೆ

ಮೀನ ರಾಶಿ: ಹೊಸ ವರ್ಷ ನಿಮಗೆ ಒಳ್ಳೆಯದಿದೆ

ಮೀನ ರಾಶಿಯವರಿಗೆ ಹೊಸ ವರ್ಷವು ಒಳ್ಳೆಯದಾಗಲಿದೆ. ಕೆಲಸದ ಸ್ಥಳದಲ್ಲಿ ನೀವು ಹೆಚ್ಚು ಮೆಚ್ಚುಗೆ ಪಡೆಯುತ್ತೀರಿ. ನಿಮ್ಮ ಅನುಭವ ಮತ್ತು ಕಠಿಣ ಪರಿಶ್ರಮದಿಂದ ನೀವು ಬಡ್ತಿ ಪಡೆಯಬಹುದು. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಬಹುದು. ಹಣಕಾಸಿನ ಪರಿಸ್ಥಿತಿಯು ಚೆನ್ನಾಗಿರುತ್ತದೆ, ಆದರೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ.

English summary

Lal Kitab Horoscope 2023 : Lal Kitab Astrology Predictions 2023 in Kannada

Lal Kitab Horoscope 2023 n Kannada : Read the Lal Kitab 2023 Horoscope and remedies to find out what this year bring it for you.
Story first published: Thursday, December 22, 2022, 20:00 [IST]
X
Desktop Bottom Promotion