Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
Lucky Colour for Zodiac Signs : 2023ರಲ್ಲಿ ನಿಮ್ಮ ರಾಶಿಗೆ ಲಕ್ಕಿ ಬಣ್ಣ ಯಾವುದು ಗೊತ್ತೇ?
ಪ್ರತಿಯೊಬ್ಬರಿಗೂ ಒಂದು ಅದೃಷ್ಟದ ಬಣ್ಣ ಅಂತ ಇರುತ್ತದೆ. ನಾವು ಆ ಬಣ್ಣದ ಮೇಲೆ ತುಂಬಾನೇ ನಂಬಿಕೆ ಇಡುತ್ತೇವೆ. ಒಂದು ಗಾಡಿ ಖರೀದಿಸುವಾಗ ಅಥವಾ ಏನಾದರೂ ವಿಶೇಷ ಸಂದರ್ಶನಕ್ಕೆ ಹೋಗುವಾಗ ನಾವು ಆ ಬಣ್ಣಕ್ಕೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತೇವೆ. ನಮ್ಮ ಲಕ್ಕಿ ಬಣ್ಣದ ಡ್ರೆಸ್ ಹಾಕಿಯೇ ಹೊರ ಹೋಗುವುದು ಅಲ್ವಾ?

ವೈದಿಕ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಕೆಲವೊಂದು ಬಣ್ಣಗಳು 2023ರಲ್ಲಿ ಅದೃಷ್ಟದ ಬಣ್ಣಗಳಾಗಿವೆ. ನಿಮ್ಮ ರಾಶಿಗೆ ಅದೃಷ್ಟದ ಬಣ್ಣ ಯಾವುದು ಎಂದು ನೋಡೋಣ:

ಮೇಷ ರಾಶಿ ಅದೃಷ್ಟದ ಬಣ್ಣ
ಮೇಷ ರಾಶಿಯವರಿಗೆ ಕೆಂಪು, ಬಿಳಿ, ಹಳದಿ ಅದೃಷ್ಟದ ಬಣ್ಣಗಳು. ಈ ವರ್ಷ ಯಾವುದಾದರೂ ಶುಭ ಕಾರ್ಯ ಅಥವಾ ಜಾಬ್ ಇಂಟರ್‌ವ್ಯೂಗೆ ಅಥವಾ ಇನ್ಯಾವುದೋ ಒಳ್ಳೆಯ ಕಾರ್ಯಕ್ಕೆ ಹೋಗುವಾಗ ನೀವು ನಿಮ್ಮ ಅದೃಷ್ಟದ ಬಣ್ಣದವಾದ ಬಿಳಿ, ಹಳದಿ, ಕೆಂಪು ಬಣ್ಣದಲ್ಲಿ ಯಾವ ವಸ್ತ್ರಗಳನ್ನು ಬೇಕಾದರೂ ಹಾಕಬಹುದು. ಬಿಳಿ ಹಾಗೂ ಹಳದಿ ನಿಮಗೆ ತುಂಬಾನೇ ಲಕ್ಕಿ ಕಲರ್ಸ್.

ವೃಷಭ ರಾಶಿಯವರಿಗೆ ಅದೃಷ್ಟದ ಬಣ್ಣಗಳು
ವೃಷಭ ರಾಶಿಯವರಿಗೆ ಪಿಂಕ್ ಹಾಗೂ ಹಸಿರು ಅದೃಷ್ಟದ ಬಣ್ಣಗಳು. ನಿಮಗೆ ಪಿಂಕ್ ಹಾಗೂ ಬಿಳಿ ಬಣ್ಣ ತುಂಬಾ ಇಷ್ಟವಾಗುವುದು ಆದರೆ ಹಸಿರು ನಿಮಗೆ ಸಮೃದ್ಧಿಯನ್ನು ನೀಡುವ ಬಣ್ಣವಾಗಿದೆ.
ನಿಮಗೆ ಹಳದಿ ಹಾಗೂ ಕೆಂಪು ಬಣ್ಣ ಅದೃಷ್ಟಕರವಲ್ಲ.

ಮಿಥುನ ರಾಶಿಯವರ ಅದೃಷ್ಟದ ಬಣ್ಣ
ಮಿಥುನ ರಾಶಿಯವರ ಅದೃಷ್ಟದ ಬಣ್ಣ ಹಳದಿ, ಹಸಿರು, ಬಿಳಿ, ಪಿಂಕ್
ಈ ನಾಲ್ಕು ಬಣ್ಣಗಳು ನಿಮಗೆ ಯಶಸ್ಸು ದೊರೆಯುತ್ತದೆ. ಈ ಬಣ್ಣಗಳು ನಿಮ್ಮನ್ನು ಶಾಂತವಾಗಿಸುವುದು. ನೀವು ಹಸಿರು ಬಣ್ಣದ ಆಭರಣಗಳನ್ನು ಧರಿಸುವುದು ಒಳ್ಳೆಯದು.

ಕರ್ಕ ರಾಶಿಯವರ ಅದೃಷ್ಟದ ಬಣ್ಣ
ಕರ್ಕ ರಾಶಿಯವರ ಅದೃಷ್ಟದ ಬಣ್ಣಗಳೆಂದರೆ ಬಿಳಿ, ಕೆಂಪು, ಸಿಲ್ವರ್, ಗೋಲ್ಡ್, ಹಳದಿ, ನಿಂಬೆಹಣ್ಣಿನ ಬಣ್ಣ
ಈ ಬಣ್ಣಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದು. ನೀವು ತುಂಬಾ ಕಡು ಬಣ್ಣದ ಹಾಗೂ ತೆಳು ಬಣ್ಣದ ವಸ್ತ್ರಗಳನ್ನು ಧರಿಸಬೇಡಿ.

ಸಿಂಹ ರಾಶಿಯವರಿಗೆ ಅದೃಷ್ಟದ ಬಣ್ಣಗಳು
ಕಿತ್ತಳೆ, ಹಳದಿ ಹಾಗೂ ಕಡು ಕೆಂಪು ಬಣ್ಣ ನಿಮ್ಮ ಅದೃಷ್ಟದ ಬಣ್ಣಗಳಾಗಿವೆ. ಈ ಬಣ್ಣಗಳು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ, ವೃತ್ತಿ ಜೀವನದಲ್ಲಿ ಯಶಸ್ಸು ನೀಡುತ್ತದೆ. ಆರೇಂಜ್, ರಾಯಲ್ ಪರ್ಪಲ್, ಗೋಲ್ಡ್ ಬಣ್ಣ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.
ನೀವು ಕಡು ಬಣ್ಣದ ಅಥವಾ ಗ್ರೇ ಬಣ್ಣದ ವಸ್ತ್ರಗಳನ್ನು ಧರಿಸಬೇಡಿ. ಏಕೆಂದರೆ ಇವುಗಳು ನಿಮಗೆ ನೆಗೆಟಿವ್ ಫಲ ನೀಡುವುದು.

ಕನ್ಯಾ ರಾಶಿಯವರ ಅದೃಷ್ಟದ ಬಣ್ಣಗಳು
ಕನ್ಯಾ ರಾಶಿಯವರ ಅದೃಷ್ಟದ ಬಣ್ಣಗಳೆಂದರೆ ಹಸಿರು, ನೀಲಿ, ತೆಳು ಹಳದಿ. ಇದು ವೃತ್ತಿ ಜೀವನದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವುದು. ನೀವು ಕೆಂಪು ಬಣ್ಣ ಧರಿಸದಿದ್ದರೆ ಒಳ್ಳೆಯದು.

ತುಲಾ ರಾಶಿಯವರ ಅದೃಷ್ಟದ ಬಣ್ಣ
ತುಲಾ ರಾಶಿಯವರ ಅದೃಷ್ಟದ ಬಣ್ಣಗಳೆಂದರೆ ಕಿತ್ತಳೆ, ಬಿಳಿ, ತೆಳು ನೀಲಿ. ನೀವು ಕಿತ್ತಳೆ, ಬಿಳಿಗಿಂತ ತೆಳು ನೀಲಿ ಬಣ್ಣ ಆಯ್ಕೆ ಮಾಡಿದರೆ ತುಂಬಾನೇ ಅದೃಷ್ಟ.

ವೃಶ್ಚಿಕ ರಾಶಿಯವರ ಅದೃಷ್ಟದ ಬಣ್ಣ
ವೃಶ್ಚಿಕ ರಾಶಿಯವರಿಗೆ ಬಿಳಿ, ಕೆಂಪು, ಕಿತ್ತಳೆ ಅದೃಷ್ಟ ಬಣ್ಣಗಳಾಗಿವೆ. ಈ ಬಣ್ಣಗಳು ನಿಮಗೆ ಒಳ್ಳೆಯ ಅದೃಷ್ಟವನ್ನು ತರಲಿದೆ.

ಧನು ರಾಶಿಯವರ ಅದೃಷ್ಟದ ಬಣ್ಣ
ಕಡು ಹಳದಿ, ಕಿತ್ತಳೆ, ಹಳದಿ, ಹಸಿರು ಹಾಗೂ ನೀಲಿ ಅದೃಷ್ಟದ ಬಣ್ಣಗಳಾಗಿವೆ. ಅದರಲ್ಲೂ ನೀಲಿ ತುಂಬಾನೇ ಅದೃಷ್ಟದ ಬಣ್ಣವಾಗಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ಕಪ್ಪು ಹಾಗೂ ನೇರಳೆ ಅದೃಷ್ಟದ ಬಣ್ಣವಾಗಿದೆ. ಅದರಲ್ಲೂ ಕಪ್ಪು ನಿಮಗೆ ತುಂಬಾನೇ ಲಕ್ಕಿ ಕಲರ್ ಆಗಿದೆ. ಕೆಂಪು ಬಣ್ಣ ನಿಮಗೆ ಅದೃಷ್ಟಕರವಲ್ಲ.

ಕುಂಭ ರಾಶಿಯ ಅದೃಷ್ಟದ ಬಣ್ಣ 2023
ಹೊಸ ವರ್ಷದಲ್ಲಿ ಕುಂಭ ರಾಶಿಯವರ ಅದೃಷ್ಟದ ಬಣ್ಣ ತೆಳು ನೀಲಿ ಹಾಗೂ ನೇರಳೆ. ಈ ಬಣ್ಣಗಳು ನಿಮಗೆ ಯಶಸ್ಸು, ಆತ್ಮವಿಶ್ವಾಸ ನೀಡಲಿದೆ.

ಮೀನ ರಾಶಿ
ಮೀನ ರಾಶಿಯವರ ಅದೃಷ್ಟದ ಬಣ್ಣ ಕಿತ್ತಳೆ ಮತ್ತು ಹಳದಿ. ಈ ಎರಡೂ ಬಣ್ಣಗಳು ನಿಮಗೆ ತುಂಬಾನೇ ಲಕ್ಕಿ ತರಲಿದೆ. ಮದುವೆ ಪ್ರಪೋಸಲ್ ಅಥವಾ ವೃತ್ತಿ ಜೀವನದ ಸಂದರ್ಶನ ಹೀಗೆ ನಿಮ್ಮ ಅದೃಷ್ಟ ಪರೀಕ್ಷೆಯ ಸಮಯದಲ್ಲಿ ಈ ಬಣ್ಣಗಳು ನಿಮಗೆ ನೆರವಾಗುವುದು.



Click it and Unblock the Notifications
