For Quick Alerts
ALLOW NOTIFICATIONS  
For Daily Alerts

Ketu Transit 2023 Effects : ಕೇತು ಸಂಚಾರ: 2023ರಲ್ಲಿ ತುಲಾ-ಮೀನ ರಾಶಿಗಳ ಮೇಲೆ ಕೇತು ಪ್ರಭಾವ ಈ ರೀತಿಯಿದೆ

|

ವೈದಿಕ ಶಾಸ್ತ್ರದಲ್ಲಿ ಕೇತುವನ್ನು ಅತ್ಯಂತ ನಿಗೂಢ ಗ್ರಹವೆಂದು ಪರಿಗಣಿಸಲಾಗಿದೆ. ಇದು ಜೀವನದಲ್ಲಿ ನಿರ್ಲಿಪ್ತತೆಯ ಅಂಶವಾಗಿದೆ ಮತ್ತು ಒಬ್ಬ ವ್ಯಕ್ತಿಯನ್ನು ಲೌಕಿಕ ಭ್ರಮೆಯಿಂದ ದೂರವಿಟ್ಟು ಅವನನ್ನು ದೇವರ ಆಶ್ರಯಕ್ಕೆ ಕರೆದೊಯ್ಯುವ ಕೆಲಸ ಮಾಡುತ್ತದೆ.

Ketu Transit 2023 Effects : ಕೇತು ಸಂಚಾರ: 2023ರಲ್ಲಿ ಮೇಷ-ಕನ್ಯಾ ರಾಶಿಗಳ ಮೇಲೆ ಕೇತು ಪ್ರಭಾವ ಈ ರೀತಿಯಿದೆ

ಕೇತು ಸಂಚಾರ: ತುಲಾ-ಮೀನ ರಾಶಿಗಳ ಮೇಲೆ ಇದರ ಪ್ರಭಾವ

ಕೇತು ಸಂಚಾರ: ತುಲಾ-ಮೀನ ರಾಶಿಗಳ ಮೇಲೆ ಇದರ ಪ್ರಭಾವ

ಕೇತು ಹಾಗೂ ರಾಹು ಒಂದೂವರೆ ವರ್ಷಗಳಿಗೊಮ್ಮೆ ರಾಶಿ ಬದಲಾಯಿಸುತ್ತದೆ. ಕೇತು 2023ರಲ್ಲಿ ಅಕ್ಟೋಬರ್ 30 ಮಧ್ಯಾಹ್ನ 14:13ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಕೇತು ಕನ್ಯಾ ರಾಶಿಯಲ್ಲಿರುವಾಗ ಪ್ರತಿಯೊಂದು ರಾಶಿಯ ಮೇಲೂ ಪ್ರಭಾವ ಬೀರಲಿದ್ದು ಇಲ್ಲಿ ತುಲಾ-ಮೀನ ರಾಶಿಗಳ ಮೇಲೆ ಈ ಕೇತು ಸಂಚಾರ ಹೇಗೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ ನೋಡಿ:

ತುಲಾ ರಾಶಿ

ತುಲಾ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ 2023 ಆರಂಭದಲ್ಲಿ ನಿಮ್ಮ ಮೊದಲ ಮನೆಯಲ್ಲಿ ಕೇತು ಇರುತ್ತದೆ. ಮೊದಲ ಮನೆಯಲ್ಲಿ ಕೇತು ಇದ್ದರೆ, ನೀವು ಜನರ ಮುಂದೆ ಅಂತರ್ಮುಖಿ ಮನೋಭಾವವನ್ನು ಹೊಂದಿರುತ್ತೀರಿ, ನಿಮ್ಮ ವರ್ತನೆಯಿಂದಾಗಿ ನಿಮ್ಮ ಸಂಗಾತಿ, ಸ್ನೇಹಿತರಿಗೆ ನಿಮ್ಮ ಬಗ್ಗೆ ತಪ್ಪು ಕಲ್ಪನೆಗಳು ಬರಬಹುದು. ಅವರಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು. ಇದರಿಂದಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಬಹುದು. ನೀವು ಕೂಡ ನಿಗೂಢ ಜ್ಞಾನದ ಕಡೆ ಹೆಚ್ಚು ಆಸಕ್ತಿ ತೋರಿಸಬಹುದು.

ಅದೇ ಅಕ್ಟೋಬರ್‌ 30ಕ್ಕೆ ಕೇತು ಕನ್ಯಾ ರಾಶಿ ಪ್ರವೇಶಿಸಿದಾಗ ಕೇತು ನಿಮ್ಮ ರಾಶಿ 12ನೇ ಮನೆಯಲ್ಲಿ ಇರಲಿದೆ. ಕೇತು ಈ ಮನೆಯಲ್ಲಿರುವಾಗ ನಿಮ್ಮ ಖರ್ಚುಗಳನ್ನು ಹೆಚ್ಚಿಸುತ್ತದೆ. ಅನಿರೀಕ್ಷಿತ ಖರ್ಚುಗಳು ನಿಮ್ಮ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ. ಇದು ಆರ್ಥಿಕವಾಗಿ ನಿಮ್ಮ ಮೇಲೆ ಸ್ವಲ್ಪ ಒತ್ತಡವನ್ನು ಉಂಟುಮಾಡುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನೀವು ಜಾಗರೂಕರಾಗಿರಬೇಕು.

ನೀವು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯುವುದು.

ಪರಿಹಾರ: ಆರ್ಥಿಕ ಪ್ರಗತಿಗಾಗಿ, ನಿಮ್ಮ ಪರ್ಸ್‌ನಲ್ಲಿ ಒಂದು ಬೆಳ್ಳಿಯ ತುಂಡು ಇಟ್ಟುಕೊಳ್ಳಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ವರ್ಷದ ಆರಂಭದಲ್ಲಿ ನಿಮ್ಮ ರಾಶಿ 12ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ಆಳವಾದ ಯೋಚನೆಯೊಮದು ನಿಮ್ಮನ್ನು ಕಾಡುವುದು. ಕಣ್ಣಿನ ಸಮಸ್ಯೆ ಕೂಡ ಕಾಡಬಹುದು. ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಒತ್ತಡ ಇರುತ್ತದೆ. ನಿಮ್ಮ ಖರ್ಚುಗಳಲ್ಲಿ ಹೆಚ್ಚಳ ಕಂಡು ಬರುವುದು, ನೋಡಿಕೊಂಡು ಹಣ ಖರ್ಚು ಮಾಡಬೇಕು.

ಅಕ್ಟೋಬರ್‌ 30ರ ನಂತರ ನಿಮ್ಮ 11ನೇ ಮನೆಗೆ ಕೇತು ಹೋಗಲಿದೆ. ಆಗ ನಿಮಗೆ ಅದೃಷ್ಟ ಕೈ ಹಿಡಿಲಿದೆ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಇಲ್ಲಿಯವರೆಗೆ ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಆಸೆಗಳು ಈಡೇರುವ ಸಮಯ ಬರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳಲು ಪ್ರಾರಂಭಿಸುತ್ತದೆ. ಇತರ ಮಾರ್ಗಗಳ ಮೂಲಕ ಹಣವನ್ನು ಪಡೆಯುವ ಸುಂದರ ಅವಕಾಶಗಳಿವೆ. ಮಕ್ಕಗೆಈ ಸಮಯವು ಏರಿಳಿತಗಳಿಂದ ತುಂಬಿರುತ್ತದೆ, ಪ್ರೇಮ ಸಂಬಂಧಗಳಲ್ಲಿಯೂ ಏರಿಳಿತಗಳಿರುತ್ತದೆ, ಆದರೆ ನಿಮಗೆ ಹಣದ ಕೊರತೆಯಿಲ್ಲ.

ಪರಿಹಾರ: ಮಂಗಳವಾರ ಮತ್ತು ಶನಿವಾರದಂದು ಆಲದ ಮರಕ್ಕೆ ಹಸಿ ಹಾಲು, ಸಕ್ಕರೆ ಮತ್ತು ಎಳ್ಳನ್ನು ಅರ್ಪಿಸಿ.

ಧನು ರಾಶಿ

ಧನು ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ವರ್ಷದ ಆರಂಭದಲ್ಲಿ ಕೇತು ನಿಮ್ಮ 11ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ಅಪೇಕ್ಷಿತ ಆಸೆಗಳು ಈಡೇರಲು ಪ್ರಾರಂಭಿಸುತ್ತವೆ, ಈ ಅವಧಿಯಲ್ಲಿ ಸಾಕಷ್ಟು ಸಂತೋಷ ದೊರೆಯುತ್ತದೆ. ಈ ಸಮಯದಲ್ಲಿ, ಉತ್ತಮ ಆರ್ಥಿಕ ಲಾಭವನ್ನು ಪಡೆಯುವ ಅವಕಾಶಗಳಿವೆ. ಈ ಸಮಯದಲ್ಲಿ, ಉತ್ತಮ ಆರ್ಥಿಕ ಲಾಭವನ್ನು ಪಡೆಯುವ ಅವಕಾಶಗಳಿವೆ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಕೆಲವು ಹೊಸ ಕೆಲಸಗಳಲ್ಲಿ ನಿಮ್ಮ ಲಕ್ ಪ್ರಯತ್ನಿಸಬಹುದು . ವ್ಯಾಪಾರ ವೃದ್ಧಿಗೆ ಇದು ಸಕಾಲ. ಕೆಲಸ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುವಿರಿ. ವೈಯಕ್ತಿಕ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಪರಸ್ಪರ ಅರ್ಥಮಾಡಿಕೊಳ್ಳದ ಕಾರಣ ಪ್ರೇಮ ಸಂಬಂಧದಲ್ಲಿ ಸಂಘರ್ಷವೂ ಹೆಚ್ಚಾಗಬಹುದು. ವಿದ್ಯಾರ್ಥಿ ವರ್ಗಕ್ಕೆ ನೆನಪಿನ ಶಕ್ತಿಯ ಲಾಭ ದೊರೆಯಲಿದೆ. ನೀವು ಅಧ್ಯಯನದತ್ತ ಗಮನ ಹರಿಸಿದರೆ, ನೀವು ಸಾಕಷ್ಟು ಸಂಪಾದಿಸಲು ಸಾಧ್ಯವಾಗುತ್ತದೆ.

ಅಕ್ಟೋಬರ್ 30 ರ ನಂತರ ಕೇತು ನಿಮ್ಮ 10ನೇ ಮನೆಯಲ್ಲಿ ಇರಲಿದೆ. ಕೇತುವಿನಈ ಸಂಚಾರವು ಮುಖ್ಯವಾಗಿ ಕೆಲಸದ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಕೆಲಸದಲ್ಲಿ ಒತ್ತಡ ಹೆಚ್ಚುವುದು, ಆಸಕ್ತಿ ಕಡಿಮೆಯಾಗುವುದು. ನೀವು ಹೆಚ್ಚು ಕೆಲಸ ಮಾಡಿದಷ್ಟೂ ಪ್ರತಿಫಲ ಸಿಗುವುದಿಲ್ಲ ಎಂದು ನಿಮಗೆ ಅನಿಸುತ್ತದೆ ಮತ್ತು ಕ್ರಮೇಣ ನಿಮ್ಮ ಮನಸ್ಸು ಕೆಲಸದ ಬಗ್ಗೆ ಬೇಸರಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ಕೆಲಸದಲ್ಲಿಯೂ ತೊಂದರೆ ಉಂಟಾಗುತ್ತದೆ. ಈ ಅವಧಿಯಲ್ಲಿ ಶ್ರಮಪಟ್ಟು ಕೆಲಸ ಮಾಡಿ, ಮುಂದೆ ಫಲ ಸಿಗುವುದು. ವೈಯಕ್ತಿಕ ಸಂಬಂಧಗಳಲ್ಲೂ ಸಮಸ್ಯೆ ಇರುತ್ತದೆ.

ಪರಿಹಾರ: ಪ್ರತಿದಿನ ಬೆಳಗ್ಗೆ ಹಣೆಗೆ ಕುಂಕುಮ ಹಚ್ಚಿಕೊಳ್ಳಿ.

ಮಕರ ರಾಶಿ

ಮಕರ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ಮಕರ ರಾಶಿಯರಲ್ಲಿ ಹೊಸ ವರ್ಷದ ಆರಂಭದಲ್ಲಿ ಕೇತು ಕೇತು 10ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ನಾನಾ ತೊಂದರೆಗಳು ಎದುರಾಗುವುದು, ನೀವು ಬಯಸಿದ ಫಲ ಸಿಗದೇ ಹೋಗಬಹುದು. ಇದು ಕೆಲಸದಲ್ಲಿ ನಿಮ್ಮ ಪ್ರಾಬಲ್ಯವನ್ನು ಕಡಿಮೆ ಮಾಡುತ್ತದೆ. ಈ ಸಮಯವು ಕುಟುಂಬ ಜೀವನದಲ್ಲಿ ಒತ್ತಡವನ್ನು ಉಂಟುಮಾಡಬಹುದು.

ಅಕ್ಟೋಬರ್ 30ರ ಬಳಿಕ ಕೇತು ನಿಮ್ಮ 9ನೇ ಮನೆಯಲ್ಲಿ ಇರಲಿದೆ. ಇದು ನಿಮಗೆ ಬಹಳ ಮುಖ್ಯವಾದ ಸಮಯವಾಗಿರುತ್ತದೆ. ದೂರದ ಪ್ರಯಾಣವನ್ನು ಕೈಗೊಳ್ಳುವಿರಿ. ನೀವು ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುವುದು ಮಾತ್ರವಲ್ಲದೆ ನೀವು ಜೀವನದಲ್ಲಿ ಸ್ಥಿರತೆಯನ್ನು ಅನುಭವಿಸುವಿರಿ. ಈ ಅವಧಿಯಲ್ಲಿ ತಂದೆಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಈ ಸಮಯದಲ್ಲಿ ನಿಮ್ಮ ಅದೃಷ್ಟವು ಮೇಲುಗೈ ಸಾಧಿಸುತ್ತದೆ. ನಿಮ್ಮ ಧೈರ್ಯ ಮತ್ತು ಪರಾಕ್ರಮವು ಖಂಡಿತವಾಗಿಯೂ ಹೆಚ್ಚಾಗುತ್ತದೆ . ನೀವು ವ್ಯವಹಾರದಲ್ಲಿಯೂ ಪ್ರಗತಿ ಹೊಂದುತ್ತೀರಿ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ದೃಢವಾಗಿ ಕೆಲಸ ಮಾಡುವುದನ್ನು ಕಾಣಬಹುದು.

ಕುಂಭ ರಾಶಿ

ಕುಂಭ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ವರ್ಷದ ಆರಂಭದಲ್ಲಿ ಕೇತು 9ನೇ ಮನೆಯಲ್ಲಿ ಇರುವುದರಿಂದ ನಿಮಗೆ ಅನುಕೂಲಕರ. ದೂರ ಪ್ರಯಾಣ ಮಾಡುವಿರಿ. ಕೌಟುಂಬಿಕವಾಗಿ, ಈ ಸಮಯವು ಮಧ್ಯಮವಾಗಿರುತ್ತದೆ. ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ನೀವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವಿರಿ. ಈ ಸಮಯದಲ್ಲಿ ನೀವು ಕಠಿಣ ಪರಿಶ್ರಮಿಗಳಾಗುತ್ತೀರಿ ಮತ್ತು ನಿಮ್ಮ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡಲು ಬಯಸುತ್ತೀರಿ.

ಅಕ್ಟೋಬರ್ 30ರ ನಂತರ ಕೇತು ನಿಮ್ಮ 8ನೇ ಮನೆಗೆ ಸಂಚರಿಸಲಿದೆ. ಈ ಮನೆ ಸಾಂಸಾರಿಕ ಜೀವನಕ್ಕೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ, ಆದ್ದರಿಂದ ಈ ಸಮಯದಲ್ಲಿ ನಿಮ್ಮ ಜೀವನ ಸಂಗಾತಿಯಿಂದ ಬೇರ್ಪಡುವ ಸಾಧ್ಯತೆಗಳಿರಬಹುದು, ಆದ್ದರಿಂದ ಸಂಬಂಧದ ವಿಷಯದಲ್ಲಿ ಎಚ್ಚರವಹಿಸಿ. ಸಂಗಾತಿಯ ಆರೋಗ್ಯ ಸಮಸ್ಯೆಗಳು ಮತ್ತು ನಿಮ್ಮ ಆರೋಗ್ಯ ಸಮಸ್ಯೆಗಳು ಸಹ ನಿಮ್ಮನ್ನು ತೊಂದರೆಗೊಳಿಸಬಹುದು. ಹಠಾತ್ ಕಾಯಿಲೆಗಳು ನಿಮ್ಮನ್ನು ಕಾಡುತ್ತವೆ. ಜೀವನದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳಾಗುತ್ತವೆ. ಅತ್ತೆಯೊಂದಿಗಿನ ಸಂಬಂಧಗಳ ಮೇಲೂ ಸಹ ಪರಿಣಾಮ ಬೀರಬಹುದು. ಹಣದ ವಿಷಯದಲ್ಲಿ ಉತ್ತಮವಾಗಿರುತ್ತದೆ. ಧಾರ್ಮಿಕ ವಿಷಯಗಳತ್ತ ಆಸಕ್ತಿ ತೋರುತ್ತೀರಿ. ಇದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ.

ಪರಿಹಾರ: ಪ್ರತಿದಿನ ಬೆಳಗ್ಗೆ ಹಾಲಿಗೆ ಕೇಸರಿ ಹಾಕಿ ಕುಡಿಯಿರಿ.

ಮೀನ ರಾಶಿ

ಮೀನ ರಾಶಿ

ಕೇತು ಗೋಚಾರ ಫಲ 2023 ರ ಪ್ರಕಾರ ಹೊಸ ವರ್ಷದ ಆರಂಭದ ತಿಂಗಳುಗಳಲ್ಲಿ ಕೇತು ನಿಮ್ಮ 8ನೇ ಮನೆಯಲ್ಲಿ ಇರಲಿದೆ. ಇದರಿಂದಾಗಿ ನೀವು ನಿಮ್ಮ ಆರೋಗ್ಯದಲ್ಲಿ ಕುಸಿತವನ್ನು ಎದುರಿಸಬೇಕಾಗುತ್ತದೆ. ಹಠಾತ್ ಸಮಸ್ಯೆಗಳು ಮತ್ತು ದೈಹಿಕ ಕಾಯಿಲೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಸಂಗಾತಿಯ ಆರೋಗ್ಯವೂ ದುರ್ಬಲವಾಗಿರಬಹುದು. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಪರಸ್ಪರ ಸಾಮರಸ್ಯದ ಕೊರತೆ ಇರಬಹುದು. ಅತ್ತಿಗೆಯೊಂದಿಗೂ ವಾಗ್ವಾದದ ಸಾಧ್ಯತೆಗಳಿವೆ. ಈ ಸಮಯವನ್ನು ವ್ಯವಹಾರಕ್ಕೆ ತುಂಬಾ ಸೂಕ್ತವಲ್ಲ. ಆದ್ದರಿಂದ ನೀವು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು.

ಅಕ್ಟೋಬರ್ 30ಕ್ಕೆ ಕೇತು ಕನ್ಯಾ ರಾಶಿಗೆ ಪ್ರವೇಶಿಸಿದಾಗ ನಿಮ್ಮ ರಾಶಿಯ 7ನೇ ಮನೆಯಲ್ಲಿ ಇರಲಿದೆ. ಆಗ ಈ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ, ಆದರೆ ಜೀವನ ಸಂಗಾತಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಾಣಬಹುದು. ಅವರು ನಿಮ್ಮಿಂದ ಕೆಲವು ವಿಷಯಗಳನ್ನು ಮರೆಮಾಚುತ್ತಿದ್ದಾರೆ ಎಂದನಿಸಬಹುದು. ಅನುಮಾನದಿಂದ ಸಂಬಂಧ ಹಾಳಾಗದಂತೆ ಎಚ್ಚರವಹಿಸಿ. ಈ ಸಮಯದಲ್ಲಿ, ವ್ಯವಹಾರದಲ್ಲಿ ಏರುಪೇರಿನ ಪರಿಸ್ಥಿತಿ ಇರುತ್ತದೆ. ನಿಮ್ಮ ವ್ಯಾಪಾರವು ಮೇಲಿನಿಂದ ಕೆಳಕ್ಕೆ ಮತ್ತು ಕೆಲವೊಮ್ಮೆ ಕೆಳಗಿನಿಂದ ಮೇಲಕ್ಕೆ ಚಲಿಸುತ್ತದೆ, ಆದ್ದರಿಂದ ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಹಾಗೂ ಕುಟುಂಬದ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಬೇಕು.

ಪರಿಹಾರ: ನಿಮ್ಮ ದೇಹದ ಮೇಲೆ ಚಿನ್ನದ ಆಭರಣ ಪ್ರತಿದಿನ ಇರಲಿ.

English summary

Ketu Transit 2023 Effects : Know Ketu Transit in Virgo 2023 Date, Impact, Remedies On Libra To pisces zodiac signs in Kannada

Ketu Rashi Parivartan 2023 Predictions in Kannada: Let us now know about Ketu Transit 2023 in Virgo date, time, effects, remedies, and how it will affect all Libra To pisces zodiac signs Signs.
X
Desktop Bottom Promotion