For Quick Alerts
ALLOW NOTIFICATIONS  
For Daily Alerts

Jyeshta Nakshatra 2023 Predictions : ಹೊಸ ವರ್ಷ ಜ್ಯೇಷ್ಠ ನಕ್ಷತ್ರದ ಪ್ರೇಮಿಗಳಿಗೆ ಅನುಕೂಲಕರ

|

ಜ್ಯೇಷ್ಠ ನಕ್ಷತ್ರದವರ ಅಧಿಪತಿ ಇಂದಿರಾ. ಜ್ಯೇಷ್ಠ ನಕ್ಷತ್ರದವರ ಸ್ವಭಾವ ನೋಡುವುದಾದರೆ
ಜ್ಯೇಷ್ಠ ನಕ್ಷತ್ರದವರು ಶುದ್ಧ ಮನಸ್ಸಿನವರು, ಇವರು ಯಾವುದೇ ರಹಸ್ಯ ಇಟ್ಟುಕೊಳ್ಳುವುದಿಲ್ಲ, ತಮ್ಮ ಒಳ್ಳೆಯ ಗುಣದಿಂದ ಗುರುತಿಸಿಕೊಳ್ಳುತ್ತಾರೆ. ಅದೇ ಈ ನಕ್ಷತ್ರದವರು ತುಂಬಾ ಸೆನ್ಸಿಟಿವ್ ಸ್ವಭಾವದವರು, ಅಲ್ಲದೆ ಸ್ವಲ್ಪ ಹೊಟ್ಟೆ ಕಿಚ್ಚಿನ ಸ್ವಭಾವದರು. ಬೇರೆಯವರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂದು ಕೇಳಲು ತುಂಬಾ ಇಷ್ಟಪಡುವವರು.

ಜ್ಯೇಷ್ಠ ನಕ್ಷತ್ರದವರ 2023ರ ನಕ್ಷತ್ರ ಭವಿಷ್ಯ ನೋಡುವುದಾದರೆ:

Jyeshta Nakshatra Prediction

ಜ್ಯೇಷ್ಠ ನಕ್ಷತ್ರದವರಿಗೆ 2023ರಲ್ಲಿ ಶುಭ ತಿಂಗಳು
ಫೆಬ್ರವರಿ, ಏಪ್ರಿಲ್, ಸೆಪ್ಟೆಂಬರ್ ಶುಭ ತಿಂಗಳಾಗಿದೆ.
ಯಾವ ತಿಂಗಳಿನಲ್ಲಿ ಜಾಗ್ರತೆ
ನೀವು ಮಾರ್ಚ್, ಜುಲೈ, ಆಗಸ್ಟ್, ಡಿಸೆಂಬರ್‌ ತಿಂಗಳಿನಲ್ಲಿ ಜಾಗ್ರತೆವಹಿಸಬೇಕು.
ಜನವರಿ, ಮೇ, ಜೂನ್‌, ನವೆಂಬರ್‌ ಸಾಮಾನ್ಯವಾಗಿರುತ್ತದೆ.

ಜ್ಯೇಷ್ಠ ನಕ್ಷತ್ರದವರ ವೃತ್ತಿ ಜೀವನ ನೋಡುವುದಾದರೆ

ಈ ವರ್ಷದಲ್ಲಿ, ನಿಮ್ಮ ವೃತ್ತಿಜೀವನದ ಭವಿಷ್ಯದ ಬಗ್ಗೆ ನೀವು ಸಾಕಷ್ಟು ಆಶಾವಾದಿಗಳಾಗಿರುತ್ತೀರಿ.ಇದರೊಂದಿಗೆ, ಅನೇಕ ವಿಷಯಗಳನ್ನು ಸಾಧಿಸಲು ನಿಮ್ಮೊಳಗೆ ಸಾಕಷ್ಟು ಸಕಾರಾತ್ಮಕ ಆಲೋಚನೆಗಳು ಇರುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಪ್ರಗತಿ ಉಂಟಾಗಲಿದೆ. ಏಪ್ರಿಲ್ 2023 ರ ಮಧ್ಯಭಾಗದಿಂ ನಿಮ್ಮ ವ್ಯವಹಾರಗಳು ವೇಗವನ್ನು ಪಡೆದುಕೊಳ್ಳುತ್ತದೆ, ಆದರೆ ವರ್ಷವು ಮುಂದುವರೆದಂತೆ ಇದು ಹೆಚ್ಚು ಸವಾಲಾಗಿ ಪರಿಣಮಿಸುತ್ತದೆ, ವಿಶೇಷವಾಗಿ 2023 ರ ಸೆಪ್ಟೆಂಬರ್ ಮಧ್ಯದ ನಂತರ ಸ್ವಲ್ಪ ಅಡೆತಡೆಗಳು ಎದುರಾಗಬಹುದು. ಆದರೂ ನೀವು ಬಹಳಷ್ಟುಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ವರ್ಷಾಂತ್ಯದಲ್ಲಿ ಬಹು ನಿರೀಕ್ಷಿತ ಧನಾತ್ಮಕ ಸುದ್ದಿಗಳನ್ನು ಪಡೆಯುವ ಸಾಧ್ಯತೆಯಿದೆ.

ಹಣಕಾಸು ಜಾತಕ 2023
2023ರ ವರ್ಷವು ನಿಮಗೆ ಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಒದಗಿಸಬಹುದು ಆದರೆ ಕೆಲವೊಮ್ಮೆ ಕೆಲವೊಂದು ಸಮಸ್ಯೆಗಳು ಬಂದು ಆರ್ಥಿಕ ತೊಂದರೆ ಎದುರಾಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಆಪ್ತರ ಮೇಲೂ ಕೋಪಗೊಳ್ಳಬಹುದು. ದುಡುಕಿನಿಂದ ನಿರ್ದಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಯಾರಿಗಾದರೂ ಹಣದ ಬಗ್ಗೆ ಭರವಸೆ ನೀಡುವ ಮೊದಲು ಎರಡು ಬಾರಿ ಯೋಚಿಸಿದರೆ ಒಳ್ಳೆಯದು.

ನಿಮ್ಮ ನೈಜ ಜವಾಬ್ದಾರಿಗಳು ಮತ್ತು ಆದ್ಯತೆಗಳ ಮೇಲೆ ನೀವು ಗಮನ ಹರಿಸುವುದು ಉತ್ತಮ. ಏಪ್ರಿಲ್ 1 ಮತ್ತು ಮೇ 2023 ರ ಆಸುಪಾಸಿನಲ್ಲಿ ನೀವು ಜಾಗರೂಕರಾಗಿರಬೇಕು. ವರ್ಷದ ಅಂತ್ಯದ ಅವಧಿಯು ನಿಮ್ಮನ್ನು ಆರ್ಥಿಕ ಬೆಳವಣಿಗೆಯತ್ತ ಕೊಂಡೊಯ್ಯುತ್ತದೆ , ಈ ಅವಧಿಯಲ್ಲಿ ನೀವು ಉತ್ತಮ ಲಾಭವನ್ನು ಹೊಂದಲು ಸಾಧ್ಯವಾಗುವುದು.

ಪ್ರೀತಿ ಮತ್ತು ಸಂಬಂಧದ ಜಾತಕ 2023
2023 ವರ್ಷದಲ್ಲಿ ನಿಮ್ಮ ಪ್ರೀತಿ ಪಾತ್ರರರ ಬಳಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಉತ್ಸಾಹ ಹಾಗೂ ಆತ್ಮವಿಶ್ವಾಸ ಇರುತ್ತದೆ. ಜೂನ್‌ ಮಧ್ಯಭಾಗದ ನಂತರ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ವೈಯಕ್ತಿಕ ಜೀವನ ಮತ್ತು ಸಂಬಂಧಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ. ಜುಲೈ 2023 ರ ಆಸುಪಾಸಿನ ಅವಧಿಯು ನಿಮ್ಮ ಎಲ್ಲಾ ಸಾಮಾಜಿಕ ಸಂಪರ್ಕಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ವರ್ಷದ ಅಂತ್ಯದ ವೇಳೆಗೆ ನಿಮ್ಮ ಸಂಬಂಧದಲ್ಲಿ ಪ್ರೀತಿ ಮತ್ತು ಆಕರ್ಷಣೆ ಹೆಚ್ಚುವುದು, ನೀವು ಮದುವೆಗೆ ಬಗ್ಗೆ ಚಿಂತೆ ಮಾಡಿದರೆ ಮದುವೆ ನಡೆಯಲಿದೆ. ವಿವಾಹಿತರಿಗೂ ಈ ವರ್ಷ ಅನುಕೂಲಕರವಾಗಿದೆ.

ಆರೋಗ್ಯ ಜಾತಕ 2023
ಈ ವರ್ಷದಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ವರ್ಷದ ಮಧ್ಯದಲ್ಲಿ ಕೆಲವು ಮಾನಸಿಕ ತೊಂದರೆಗಳು ಅಥವಾ ಉದ್ವೇಗಗಳಿಂದಾಗಿ ದೈಹಿಕ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು, ಆದರೆ ನೀವು ಮಾನಸಿಕ ಒತ್ತಡ ಹೊರಹಾಕಿದರೆ ಯಾವುದೇ ತೊಂದರೆಯಿಲ್ಲ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ನಿಮ್ಮ ಆರೋಗ್ಯವನ್ನು ಬಲಪಡಿಸಲು ಇದು ಉತ್ತಮ ವರ್ಷವಾಗಿದೆ.

ಈ ವರ್ಷ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ವಿದೇಶಕ್ಕೆ ಹೋಗಿ ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳು ದೊರೆಯಲಿದೆ.
ಈ ವರ್ಷದಲ್ಲಿ ಅಧಿಕ ಪ್ರಯಾಣ ಮಾಡಿದಿರುವುದು ಅದರಲ್ಲೂ ರಾತ್ರಿ ಹೊತ್ತು ಪ್ರಯಾಣ ಮಾಡಬೇಡಿ.

ಕೆಲವರಿಗೆ ಕುಟುಂಬದಲ್ಲಿನ ಸಮಸ್ಯೆಯಿಂದಾಗಿ ಮದುವೆ ತಡವಾಗಬಹುದು, ಆದರೆ ಪ್ರೇಮಿಗಳಿಗೆ ಅನುಕೂಲಕರವಾಗಿದೆ, ಎರಡನೇ ಮದುವೆಗೆ ಪ್ರಯತ್ನಿಸುತ್ತಿರುವವರಿಗೆ ಈ ವರ್ಷ ಅನುಕೂಲಕರವಲ್ಲ.

English summary

Jyeshta Nakshatra 2023 Predictions : Jyeshta Nakshatra job, family, finance, relationship prediction of 2023

Jyeshta Nakshatra Prediction 2023: Here are Jyeshta Nakshatra job, family, finance, relationship prediction of 2023 read on..
X
Desktop Bottom Promotion