Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜುಲೈನಲ್ಲಿ 2021ರಲ್ಲಿ ಇದೆ ನಾಲ್ಕು ಗ್ರಹಗಳ ಸಂಚಾರ: ಇದರಿಂದ ಯಾವ ರಾಶಿಗಳಿಗೆ ಅದೃಷ್ಟ
ಪ್ರತಿಯೊಂದು ತಿಂಗಳಿನಲ್ಲೂ ಹಲವಾರು ವಿಶೇಷ ದಿನಗಳಿರುತ್ತದೆ, ಹಬ್ಬಗಳಿರುತ್ತದೆ, ವ್ರತಗಳಿರುತ್ತದೆ, ಗ್ರಹ ಸಂಚಾರಗಳು ಇರುತ್ತದೆ. ಅದೇ ರೀತಿ ಈ ಜುಲೈ ತಿಂಗಳಿನಲ್ಲಿ ನಾಲ್ಕು ಗ್ರಹ ಸಂಚಾರಗಳಿವೆ. ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹ ಸಂಚಾರಕ್ಕೆ ಅದರದ್ದೇ ಆದ ಮಹತ್ವವಿದೆ.

ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅದರ ಪ್ರಭಾವ ವ್ಯಕ್ತಿಯ ಮೇಲಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಆದ್ದರಿಂದ ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಈ ಗ್ರಹಗಳ ಸಂಚಾರದಿಂದ ಉಂಟಾಗುವ ಪ್ರಭಾವಗಳ ಮೇಲೂ ನಂಬಿಕೆ ಇಟ್ಟಿರುತ್ತಾರೆ.
ಈ ತಿಂಗಳಿನಲ್ಲಿ ನವ ಗ್ರಹಗಳಲ್ಲಿ ನಾಲ್ಕು ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದು. ಯಾವ ಗ್ರಹ -ಯಾವ ರಾಶಿಗೆ ಸಂಚರಿಸಲಿದೆ, ಇದರಿಂದ ಯವ ರಾಶಿಗಳಿಗೆ ಅದೃಷ್ಟ?ಬನ್ನಿ ಅವುಗಳ ಬಗ್ಗೆ ತಿಳಿಯೋಣ:

ಮಿಥುನದಲ್ಲಿ ಬುಧ ಸಂಚಾರ
ಬುಧನು ಮಿಥುನದಲ್ಲಿ ಪ್ರವೇಶಿಸಿದಾಗ ಸ್ವಲ್ಪ ತಮಾಷೆ ಸ್ವಭಾವದವನಾಗುತ್ತಾನೆ. ಈ ಸಮಯದಲ್ಲಿ ಕುತೂಹಲ ಹೆಚ್ಚುವುದು, ಅಲ್ಲದೆ ಹೊಸತನ್ನು ಕಲಿಯಲು ಹೆಚ್ಚು ಆಸಕ್ತಿ ತೋರುತ್ತೀರಿ. ಏನೇ ಆಗಲಿ ಮೊದಲು ತಿಳಿಯಬೇಕೆಂಬ ಆಸಕ್ತಿ ಇರುತ್ತದೆ, ಆದರೆ ವಿಷಯದ ಆಳಕ್ಕೆ ಇಳಿಯುವುದಿಲ್ಲ. ಈ ಸಮಯದಲ್ಲಿ ಹೊಸ ಗೆಳೆತನ ಉಂಟಾಗುವುದು. ಆರೋಗ್ಯದ ಕಡೆಯೂ ಗಮನ ಹರಿಸುತ್ತೀರಿ.
ಬುಧ ಜುಲೈ 7 ಬೆಳಗ್ಗೆ 10:59ಕ್ಕೆ ವೃಷಭದಿಂದ ಮಿಥುನಕ್ಕೆ ಪ್ರವೇಶಿಸಲಿದೆ. ಜುಲೈ 25ರವೆಗೆ ಇದೇ ರಾಶಿಯಲ್ಲಿ ಇರಲಿದೆ. ಈ ಸಂಚಾರ ಅವಧಿ ಕನ್ಯಾ, ಧನು ಹಾಗೂ ಮೀನ ರಾಶಿಯವರಿಗೆ ತುಂಬಾ ಒಳ್ಳೆಯದಿದೆ.

ಸಿಂಹ ರಾಶಿಗೆ ಮಂಗಳ ಗ್ರಹದ ಪ್ರವೇಶ
ಜುಲೈನಲ್ಲಿ ಸಿಂಹ ರಾಶಿಗೆ ಮತ್ತೊಂದು ಗ್ರಹ ಕೂಡ ಸಂಚರಿಸುತ್ತಿದೆ. ಮಂಗಳ ಗ್ರಹವು ಸಿಂಹ ರಾಶಿಗೆ ಜುಲೈ 20 ಮಂಗಳವಾರ ಸಂಜೆ 05:31ಗೆ ಸಂಚರಿಸಲಿದೆ. ಸೆಪ್ಟೆಂಬರ್ 6ರವರೆಗೆ ಇದೇ ರಾಶಿಯಲ್ಲಿ ಇರಲಿದೆ.
ಮಂಗಳ ಹಾಗೂ ಸೂರ್ಯ ಎರಡೂ ಕೂಡ ಸಿಂಹ ರಾಶಿಯ ಅಧಿಪತಿ, ಒಬ್ಬರೂ ಸ್ನೇಹಿತರು, ಆದ್ದರಿಂದ ಈ ಸಂಚಾರ ಸಿಂಹ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ನಿಮಗೆ ಮಂಗಳ ಹಾಗೂ ಸೂರ್ಯ ಎರಡರಿಂದಲೂ ಅನುಕೂಲ ಸಿಗುವುದು. ಈ ಅವಧಿಯಲ್ಲಿ ನಿಮ್ಮಲ್ಲಿ ಗುರಿ ಮುಟ್ಟುವ ಛಲ ಅಧಿಕವಿರುತ್ತದೆ. ಏನೇ ರಿಸ್ಕ್ ತೆಗೆಯಲು ಮುಂದಾಗುತ್ತೀರಿ. ಹೀಯಾಳಿಕೆ, ನಿಂದನೆ ಸಹಿಸುವುದಿಲ್ಲ. ಈ ಸಂಚಾರ ಮಿಥುನ ರಾಶಿ, ವೃಶ್ಚಿಕ ರಾಶಿ ಹಾಗೂ ಮೀನ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ

ಕರ್ಕದಲ್ಲಿ ಸೂರ್ಯ ಸಂಚಾರ
ಜುಲೈ 16, ಶುಕ್ರವಾರ ಸಂಜೆ 4:41ಕ್ಕೆ ಸೂರ್ಯನು ಕರ್ಕ ರಾಶಿಗೆ ಪ್ರವೇಶಿಸಲಿದೆ. ಆಗಸ್ಟ್ 17ರವರೆಗೆ ಸೂರ್ಯನು ಇದೇ ರಾಶಿಯಲ್ಲಿ ಇರಲಿದೆ.
ಕರ್ಕದ ಅಧಿಪತಿ ಚಂದ್ರ, ಸೂರ್ಯ-ಚಂದ್ರ ಸ್ನೇಹಿತರು. ಕರ್ಕದಲ್ಲಿ ಸೂರ್ಯ ಸಂಚಾರದ ಅವಧಿಯಲ್ಲಿ ಭಾವನೆಗಳಲ್ಲಿ ಏರಳಿತ ಉಂಟಾಗುವುದು, ಯಾರನ್ನೂ ಈ ಸಮಯದಲ್ಲಿ ನಂಬಲು ಸಾಧ್ಯವಾಗುವುದಿಲ್ಲ. ಹೊರಗಡೆ ಹೋಗುವುದಕ್ಕಿಂತ ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯ ಬಯಸುತ್ತೀರಿ. ಹೋಟೆಲ್, ಹಾಸ್ಪಿಟಲಿಟಿ ಇಂಡೆಸ್ಟ್ರಿಯಲ್ಲಿ ಇರುವವರಿಗೆ, ವಿಜ್ಞಾನಿಗಳಿಗೆ ಯಶಸ್ಸು ಸಿಗುವುದು. ಈ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಖುವ ಸಾಮರ್ಥ್ಯ ಸ್ವಲ್ಪ ಕಡಿಮೆಯಾಗುವುದು. ಆದರೆ ವೃಷಭ ರಾಶಿಯವರಿಗೆ ಹಾಗೂ ಮಿಥುನ ರಾಶಿಯವರಿಗೆ ಈ ಸಂಚಾರ ತುಂಬಾ ಒಳ್ಳೆಯದಿದೆ.

ಸಿಂಹ ರಾಶಿಯಲ್ಲಿ ಶುಕ್ರ ಸಂಚಾರ
ಶುಕ್ರನು ಕರ್ಕ ರಾಶಿಯಿಂದ ಸಿಂಹ ರಾಶಿಗೆ ಜುಲೈ 17, ಶನಿವಾರ ಬೆಳಗ್ಗೆ 9:13ಕ್ಕೆ ಸಂಚರಿಸಲಿದೆ. ಆಗಸ್ಟ್ 11ರವರೆಗೆ ಇದೇ ರಾಶಿಯಲ್ಲಿದೆ.
ಸಿಂಹ ರಾಶಿಯ ಚಿಹ್ನೆ ಬೆಂಕಿ, ಶುಕ್ರ ಗ್ರಹವೆಂದರೆ ಪ್ರೀತಿ ಹಾಗೂ ರೊಮ್ಯಾನ್ಸ್. ಶುಕ್ರನು ಸಿಂಹ ರಾಶಿಯವರಲ್ಲಿ ಇರುವಾಗ ನೀವು ತುಂಬಾ ಡ್ರಾಮಾಟಿಕ್ ಹಾಗೂ ರಾಯಲ್ ಆಗಿರುತ್ತೀರಿ, ಇದೇ ಸಮಯದಲ್ಲಿ ನಿಮ್ಮ ಸಂಗಾತಿಯಿಂದ ಇದನ್ನೇ ಬಯಸುತ್ತೀರಿ. ನೀವು ತುಂಬಾ ಖರ್ಚು ಮಾಡುತ್ತೀರಿ, ಆದರೆ ಪ್ರೀತಿ ಜೀವನದಲ್ಲಿ ನೀವು ಊಹಿಸದಂತೆ ಇರಲ್ಲ. ಈ ಸಮಯದಲ್ಲಿ ನೀವು ಬೇರೆಯವರಿಂದ ಹೊಗಳಿಕೆ ಬಯಸುತ್ತೀರಿ. ಜೂಜಿನಲ್ಲಿ ಹಣ ವ್ಯರ್ಥವಾಗುವುದು, ಆದ್ದರಿಂದ ಅಂಥ ಕಾರ್ಯಕ್ಕೆ ಹೋಗಬೇಡಿ. ಈ ಸಂಚಾರ ಮೇಷ, ಸಿಂಹ, ಕರ್ಕ, ಮಿಥುನ ರಾಶಿಯವರಿಗೆ ಅನುಕೂಲಕರವಾಗಿದೆ.



Click it and Unblock the Notifications