ಅ. 11 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವ ಮತ್ತು ಆಚರಣೆಯ ವಿಷಯ

ಹೆಣ್ಣು ಮಕ್ಕಳ ಸಂಖ್ಯೆಯು ಇಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ, ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಮುಂದೊಂದು ದಿನ ಇದು ದೊಡ್ಡ ಮಟ್ಟದಲ್ಲಿ ಲಿಂಗಾನುಪಾತದಲ್ಲಿ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಭಾರತದಲ್ಲೂ ಈ ಸಮಸ್ಯೆಯು ಕಾಡುತ್ತಲಿದೆ. ಇಷ್ಟು ಮಾತ್ರವಲ್ಲದೆ ಹೆಣ್ಣು ಮಕ್ಕಳು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಹೆಣ್ಣುಭ್ರೂಣ ಹತ್ಯೆ, ಲಿಂಗಭೇದ, ಲೈಂಗಿಕ ಕಿರುಕುಳ ಇತ್ಯಾದಿಗಳು. ಇಂತಹ ಸಮಸ್ಯೆ ನಿವಾರಣೆ ಮಾಡಲು ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವುದು ಅತೀ ಅಗತ್ಯವಾಗಿದೆ. ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನ, ಇದನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿಯೂ ಆಚರಿಸಲಾಗುತ್ತದೆ. 2012ರ ಅಕ್ಟೋಬರ್ 11ರಂದು ವಿಶ್ವಸಂಸ್ಥೆಯು ಈ ದಿನವನ್ನು ಆಚರಣೆಗೆ ತಂದಿದೆ.

International Day of The Girl Child

ವಿಶ್ವದಾದ್ಯಂತ ಹೆಣ್ಣು ಮಕ್ಕಳು ಎದುರಿಸುವಂತಹ ಗೃಹ ಹಿಂಸೆ, ಭೇದಭಾವ ಮತ್ತು ಬಾಲ್ಯವಿವಾಹದಂತಹ ಹಲವಾರು ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಅಸಮಾನತೆ ಎನ್ನುವುದು ಹೆಣ್ಣು ಮಕ್ಕಳ ಮೇಲಿನ ಹಿಂಸೆ ಮತ್ತು ಅವರ ಶಿಕ್ಷಣದ ಹಕ್ಕನ್ನು ಒಳಗೊಂಡಿದೆ. ವಿಶ್ವದಾದ್ಯಂತ ಸುಮಾರು 62 ಸಾವಿರ ಹೆಣ್ಣು ಮಕ್ಕಳಿಗೆ ಶಿಕ್ಷಣವು ಲಭ್ಯವಾಗುತ್ತಿಲ್ಲ. ಹೆಣ್ಣು ಮಕ್ಕಳು ಲೈಂಗಿಕ ಹಿಂಸೆಗೂ ಒಳಗಾಗುತ್ತಿದ್ದಾರೆ. ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನವು ಈ ಎಲ್ಲಾ ಸಮಸ್ಯೆಗಳನ್ನು ಎತ್ತಿ ಹಿಡಿಯುವುದು ಹಾಗೂ ಹೆಣ್ಣು ಮಕ್ಕಳ ಹಕ್ಕು ಮತ್ತು ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು.

2019ರ ಧ್ಯೇಯ

2019ರ ಧ್ಯೇಯ

ಪ್ರತೀ ವರ್ಷವು ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನಕ್ಕೆ ಪ್ರತ್ಯೇಕ ಧ್ಯೇಯಗಳನ್ನು ಇಟ್ಟುಕೊಳ್ಳಲಾಗುತ್ತದೆ. 2019ರ ಈ ದಿನಕ್ಕೆ ``ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳ ಸಬಲೀಕರಣ'' ಧ್ಯೇಯ ವಾಕ್ಯವಾಗಿದೆ.

ಮೊದಲ ಧ್ಯೇಯವು `ಬಾಲ್ಯ ವಿವಾಹ ಕೊನೆಗೊಳಿಸುವುದು' ಆಗಿತ್ತು. 2013ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಹೊಸ ಬದಲಾವಣೆ ಮತ್ತು 2014ರಲ್ಲಿ ಈ ಧ್ಯೇಯವು ಹದಿಹರೆಯದ ಹುಡುಗಿಯರನ್ನು ಸಶಕ್ತಗೊಳಿಸುವುದು: ಹಿಂಸೆಗೆ ಅಂತ್ಯ ಹಾಡುವುದು, 2016ರಲ್ಲಿ ಧ್ಯೇಯ ವಾಕ್ಯವು ಹುಡುಗಿಯ ಅಭಿವೃದ್ಧಿ - ಗುರಿಯ ಅಭಿವೃದ್ಧಿ: ಹುಡುಗಿಗೆ ಏನು ಮಹತ್ವದ್ದಾಗಿರುವುದು ಎಂಬ ಧ್ಯೇಯಗಳಡಿ ಆಚರಣೆ ಮಾಡಲಾಗಿತ್ತು.

ಈ ದಿನದಂದು ಹೆಣ್ಣು ಮಕ್ಕಳ ಉಳಿಸಲು, ಬಾಲ್ಯದಲ್ಲಿ ನಡೆಯುವ ಲೈಂಗಿಕ ಕಿರುಕುಳ ತಗ್ಗಿಸಲು ಮತ್ತು ಹೆಣ್ಣು ಮಕ್ಕಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು ಈ ದಿನದಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹರ್ಯಾಣಕ್ಕೆ ಪ್ರಶಸ್ತಿ

ಹರ್ಯಾಣಕ್ಕೆ ಪ್ರಶಸ್ತಿ

ಬೇಟಿ ಬಚಾವೋ ಬೇಟಿ ಪಡಾವೋ ರಾಷ್ಟ್ರೀಯ ಸರ್ಕಾರಿ ಕಾರ್ಯಕ್ರಮ ಉತ್ತಮ ಪ್ರದಹರ್ಯಾಣರ್ಶನಕ್ಕಾಗಿ ಹರ್ಯಾಣವು ಪ್ರಶಸ್ತಿ ಪಡೆದುಕೊಂಡಿದೆ. ರಾಜಸ್ಥಾನ ಕೂಡ ಇದೇ ವಿಭಾಗದಲ್ಲಿ ತನ್ನ ಪ್ರದರ್ಶನವನ್ನು ಉತ್ತಮ ನೀಡಿರುವುದಕ್ಕೆ ಪ್ರಶಸ್ತಿಯ ಗರಿಮೆ ಪಡೆದಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಈ ಎರಡು ರಾಜ್ಯಗಳು ಹೆಚ್ಚು ಒತ್ತು ನೀಡುತ್ತಿರುವುದು ಗಮನಾರ್ಹ.

ಆಚರಣೆಗೆ ಕಾರಣಗಳು

ಆಚರಣೆಗೆ ಕಾರಣಗಳು

ಸಮಾಜದ ಜನರ ಮಧ್ಯೆ ಹೆಣ್ಣು ಮಕ್ಕಳ ಜೀವನ ಮಟ್ಟವನ್ನು ಉತ್ತಮಪಡಿಸಲು ಇದನ್ನು ಆಚರಣೆ ಮಾಡಲಾಗುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವುದು. ಹಲವಾರು ರಾಜಕೀಯ ನಾಯಕರು ಮತ್ತು ಸಮುದಾಯದ ನಾಯಕರು ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸಂವಿಧಾನಿಕ ಹಕ್ಕುಗಳ ಬಗ್ಗೆ ಜನರಿಗೆ ತಮ್ಮ ಭಾಷಣದಿಂದ ತಿಳಿಸಿಕೊಡುವರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವಗಳು

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವಗಳು

1. ಭಾರತದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಹೋಗಲಾಡಿಸುವುದು ಮತ್ತು ಅದನ್ನು ನಿವಾರಣೆ ಮಾಡುವುದು.

2. ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಸೂಕ್ತ ಗೌರವ ಪಡೆಯುವುದು.

3. ಹೆಣ್ಣು ಮಕ್ಕಳ ಸಂಖ್ಯೆಯು ಕಡಿಮೆ ಆಗುತ್ತಿರುವ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಹೆಣ್ಣು ಮಕ್ಕಳ ಬಗ್ಗೆ ಇರುವ ಮನಸ್ಥಿತಿ ಬದಲಾಯಿಸುವುದು.

4. ಹೆಣ್ಣು ಮಕ್ಕಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು.

5. ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಮತ್ತು ಸಂಕಷ್ಟವನ್ನು ದೂರ ಮಾಡುವುದು.

6. ಭಾರತದಲ್ಲಿ ಲಿಂಗ ತಾರತಮ್ಯವನ್ನು ದೂರ ಮಾಡುವ ಬಗ್ಗೆ ಅಭಿಯಾನ ಕೈಗೊಳ್ಳುವುದು. ಲಿಂಗದ ಬಗ್ಗೆ ಇರುತ ತಪ್ಪುಕಲ್ಪನೆ ಮತ್ತು ಮೂಢನಂಬಿಕೆ ದೂರ ಮಾಡುವುದು.

English summary

International Day of The Girl Child 2019: Theme And Significance

In many countries in the world including India, girls face a lot of issues. From female infanticide to gender inequality to sexual abuse, there is no dearth of issues. To curb these menaces, there is a need for awareness on the importance of girl child. International Day of the Girl Child, which is also known as the National Girl Child Day, was launched by the United Nations on October 11, 2012. Every year January 24 is observed to bring focus on gender inequality and creating more opportunities for girl
Story first published: Thursday, October 10, 2019, 18:00 [IST]
X
Desktop Bottom Promotion