Latest Updates
-
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ
ಭಾರತೀಯ ಋತುಗಳು 2023: ಆರು ಋತುಗಳ ಆರಂಭ ಮತ್ತು ಅಂತ್ಯದ ಸಮಯ ಹಾಗೂ ಮುಹೂರ್ತ
ಭಾರತದಲ್ಲಿ ಒಂದು ವರ್ಷದಲ್ಲಿ 6 ಋತುಗಳು ಇದೆ. ಋತುಗಳನ್ನು ಆರು ಭಾಗಗಳಾಗಿ ವರ್ಗೀಕರಿಸುವುದು ಪುರಾತನ ಪದ್ಧತಿಯಾಗಿದ್ದು ಮತ್ತು ವೈದಿಕ ಕಾಲದಲ್ಲಿಯೂ ಈ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗಿದೆ. ಹಿಂದೂ ಪಂಚಾಂಗವು ಮೂಲವಾಗಿ ವರ್ಷದಲ್ಲಿ ಆರು ಋತುಗಳನ್ನು ಆಧರಿಸಿದೆ.

ಒಂದು ವರ್ಷ ಅವಧಿಯಲ್ಲಿ ದಕ್ಷಿಣಾಯನ ಹಾಗೂ ಉತ್ತರಾಯಣ ಎಂಬ ಎರಡು ಆಯನಗಳಿದೆ. ಮತ್ತು ಎರಡು ಮಾಸಗಳಿಗೊಂದರಂತೆ ಆರು ಋತುಗಳಿದೆ. ಈ ಆರು ಋತುಗಳಲ್ಲಿ ಸಾಮಾನ್ಯವಾಗಿ ಶಿಶಿರ, ವಸಂತ, ಗ್ರೀಷ್ಮ, ಋತುಗಳು ಉತ್ತರಾಯಣಕ್ಕೂ ವರ್ಷ, ಶರತ್, ಹೇಮಂತ ಋತುಗಳು ದಕ್ಷಿಣಾಯಣಕ್ಕೂ ಬರುತ್ತದೆ. ಹೀಗೆ ಶುಕ್ಲ ಪಕ್ಷಾದ ಆಗಿಯಿಂದ ಅಮಾವಾಸ್ಯೆಯವರೆಗಿನ ಕಾಲಗಣನೆ ಮಾಡುವ ಋತುವಿಗೆ ಚಾಂದ್ರ ಋತುಗಳೆಂದು ಹೆಸರು.
2023ರಲ್ಲಿ ಆರು ಋತುಗಳಾದ ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ ಯಾವ ದಿನದಿ ಯಾವ ಮುಹೂರ್ತದಲ್ಲಿ ಆರಂಭವಾಗುತ್ತದೆ, ಯಾವಾಗ ಅಂತ್ಯವಾಗುತ್ತದೆ ಇದರ ಬಗ್ಗೆ ಸವಿವರ ಮಾಹಿತಿ ತಿಳಿಯೋಣ:

ವಸಂತ ಋತು 2023
ವಸಂತ ಋತು ಆರಂಭ - ಫೆಬ್ರವರಿ 19, 2023 - ಭಾನುವಾರ ಬೆಳಗ್ಗೆ 04:03 ಕ್ಕೆ
ವಸಂತ ಋತು ಅಂತ್ಯ - ಏಪ್ರಿಲ್ 20, 2023, ಗುರುವಾರ ಮಧ್ಯಾಹ್ನ 01:42 ಕ್ಕೆ
ವಸಂತ ಋತುವಿನ ರಾಶಿಚಕ್ರ - ಮೀನ ಮತ್ತು ಮೇಷ
ವಸಂತ ಋತುವಿನ ವಿಷುವತ ಸಂಕ್ರಾಂತಿಯು ವಸಂತ ಋತುವಿನ ಮಧ್ಯದಲ್ಲಿ ಸಂಭವಿಸುತ್ತದೆ

ಗ್ರಿಷ್ಮಾ ಋತು 2023
ಬೇಸಿಗೆ ಕಾಲ
ಗ್ರಿಷ್ಮಾ ಋತು ಆರಂಭ - ಏಪ್ರಿಲ್ 20, 2023, ಗುರುವಾರ ಮಧ್ಯಾಹ್ನ 01:42ಕ್ಕೆ
ಗ್ರಿಷ್ಮಾ ಋತು ಅಂತ್ಯ - ಜೂನ್ 21, 2023, ಬುಧವಾರ 08:26ಕ್ಕೆ
ಗ್ರಿಷ್ಮಾ ಋತುವಿನ ರಾಶಿಚಕ್ರ - ವೃಷಭ ಮತ್ತು ಮಿಥುನ
ಗ್ರೀಷ್ಮಾ ಋತು ಬೇಸಿಗೆಯ ಅಯನ ಸಂಕ್ರಾಂತಿಯೊಂದಿಗೆ ಕೊನೆಗೊಳ್ಳುತ್ತದೆ

ವರ್ಷ ಋತು 2023
ಮಾನ್ಸೂನ ಕಾಲ (ಮಳೆಗಾಲ)
ವರ್ಷ ಋತು ಆರಂಭ - ಜೂನ್ 21, 2023, ಬುಧವಾರ ರಾತ್ರಿ 08:26 ಕ್ಕೆ
ವರ್ಷ ಋತು ಅಂತ್ಯ - ಆಗಸ್ಟ್ 23, 2023, ಬುಧವಾರ ಮಧ್ಯಾಹ್ನ 02:30 ಕ್ಕೆ
ವರ್ಷ ಋತುವಿನ ರಾಶಿಚಕ್ರ - ಕರ್ಕ ಮತ್ತು ಸಿಂಹ
ವರ್ಷ ಋತು ಬೇಸಿಗೆಯ ಅಯನ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗುತ್ತದೆ

ಶರದ್ ಋತು 2023
ಶರತ್ಕಾಲ
ಶರದ್ ಋತು ಆರಂಭ - ಆಗಸ್ಟ್ 23, 2023, ಬುಧವಾರ ಮಧ್ಯಾಹ್ನ 02:30 ಕ್ಕೆ
ಶರದ್ ಋತು ಅಂತ್ಯ - ಅಕ್ಟೋಬರ್ 23, 2023, ಸೋಮವಾರ ರಾತ್ರಿ 09:50 ಕ್ಕೆ
ಶರದ್ ಋತುವಿನ ರಾಶಿಚಕ್ರ - ಕನ್ಯಾ ಮತ್ತು ತುಲಾ
ಶರದ್ ಋತುವಿನ ಮಧ್ಯದಲ್ಲಿ ಶರತ್ಕಾಲದ ವಿಷುವತ್ ಸಂಕ್ರಾಂತಿ ಸಂಭವಿಸುತ್ತದೆ

ಹೇಮಂತ ಋತು 2023
ಚಳಿಗಾಲದ ಮುನ್ನಾ ಕಾಲ
ಹೇಮಂತ ಋತು ಆರಂಭ - ಅಕ್ಟೋಬರ್ 23, 2023, ಸೋಮವಾರ ರಾತ್ರಿ 09:50 ಕ್ಕೆ
ಹೇಮಂತ ಋತು ಅಂತ್ಯ - ಡಿಸೆಂಬರ್ 22, 2023, ಶುಕ್ರವಾರ ಬೆಳಗ್ಗೆ 08:56 ಕ್ಕೆ
ಹೇಮಂತ ಋತುವಿನ ರಾಶಿಚಕ್ರ - ವೃಶ್ಚಿಕ ಮತ್ತು ಧನು
ಹೇಮಂತ ಋತು ಚಳಿಗಾಲದ ಅಯನ ಸಂಕ್ರಾಂತಿಯೊಂದಿಗೆ ಕೊನೆಗೊಳ್ಳುತ್ತದೆ

ಶಿಶಿರ ಋತು 2023
ಚಳಿಗಾಲದ ಅವಧಿ
ಶಿಶಿರ ಋತು ಆರಂಭ - ಡಿಸೆಂಬರ್ 22, 2023, ಶುಕ್ರವಾರ ಬೆಳಗ್ಗೆ 08:56 ಕ್ಕೆ
ಶಿಶಿರ ಋತು ಅಂತ್ಯ - ಫೆಬ್ರವರಿ 19, 2024, ಸೋಮವಾರ ಬೆಳಗ್ಗೆ 09:42 ಕ್ಕೆ
ಶಿಶಿರ ಋತುವಿನ ರಾಶಿಚಕ್ರ - ಮಕರ ಮತ್ತು ಕುಂಭ
ಶಿಶಿರ ಋತು ಚಳಿಗಾಲದ ಅಯನ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗುತ್ತದೆ



Click it and Unblock the Notifications