For Quick Alerts
ALLOW NOTIFICATIONS  
For Daily Alerts

ಹೇಗೆ ಪ್ರತಿ ರಾಶಿಗಳವರು ತಮಗೆ ಗೊತ್ತಿಲ್ಲದ ಹಾಗೆ ತಾವೇ ತೊಂದರೆ ತಂದುಕೊಳ್ಳುತ್ತಾರೆ ನೋಡಿ?

|

ನಾವೀಗ ಹೇಳಹೊರಟಿರುವ ವಿಚಾರದ ಕುರಿತು ಒಂದು ಉದಾಹರಣೆಯೊಂದಿಗೆ ಆರಂಭಿಸುತ್ತೇವೆ. ಜನರೊಂದಿಗೆ ಅಷ್ಟಾಗಿ ಬೆರೆಯಲು ಇಷ್ಟಪಡದ ಸ್ವಭಾವದವರು ನೀವಾಗಿರುವಿರಿ ಅಂದಿಟ್ಟುಕೊಳ್ಳಿ. ಜನಸಮೂಹದ ನಡುವೆ ಇರುವುದೆಂದರೆ ನಿಮಗದೇನೂ ಕಸಿವಿಸಿ, ಗೊಂದಲ. ಹಾಗಾಗಿ ಯಾರು ಅದೆಷ್ಟೇ ಒತ್ತಾಯಿಸಲೀ, ನೀವಂತೂ ಮನೆಯಲ್ಲಿಯೇ ಉಳಿಯಬಯಸುವವರಾಗಿರುವುದರಿಂದ, ಹೊರಗಡೆ ಹೋಗುವ ಅಂತಹ ಯಾವುದೇ ವಿಚಾರವನ್ನೂ ಯೋಚಿಸಲೂ ನಿಮ್ಮ ಮಟ್ಟಿಗೆ ನೀವು ಸಿದ್ಧರಿಲ್ಲವೆಂದೇ ಅಂದುಕೊಳ್ಳೋಣ. ಬೇಸರವೋ, ನೆಮ್ಮದಿಯೋ ಅದೇನೇ ಇರಲೀ, ಅಂತೂ ನೀವು ನಿಮ್ಮ ಪಾಡಿಗೆ ಮನೆಯಲ್ಲೇ ಉಳಿದುಕೊಳ್ಳಲು ನಿರ್ಧರಿಸಿಬಿಡುವ ಸ್ವಭಾವದವರೇ ಎಂದಿಟ್ಟುಕೊಳ್ಳೋಣ.

ಹೊರಗಡೆ ಹೋಗಬೇಕಾಗಿರುವ ಆ ನಿಗದಿತ ಸಮಯವು ಸಮೀಪಿಸಿದಂತೆಲ್ಲಾ, ನಿಮಗಿರುವುದು ಎರಡೇ ಆಯ್ಕೆಗಳೆಂದು ನಿಮಗೆ ಮನದಟ್ಟಾಗುತ್ತದೆ: ಅವೇನೆಂದರೆ, ಆ ಕಾರ್ಯಕ್ರಮಕ್ಕೆ ಹೋಗಿ, ಜನರೊಂದಿಗೆ ಬೆರೆತು, ಅದರಿಂದಾಗುವ ಎಲ್ಲಾ ಮಾನಸಿಕ ಕಿರಿಕಿರಿ, ಒತ್ತಡಗಳಿಂದ ನರಳುವುದು ಇಲ್ಲವೇ ಆ ಕಾರ್ಯಕ್ರಮಕ್ಕೆ ತೆರಳದೇ, ಕಾರ್ಯಕ್ರಮದ ಆಯೋಜಕರ ಕಣ್ಣಿನಲ್ಲಿ ಅಪ್ರಾಮಾಣಿಕನೆನಿಸಿಕೊಳ್ಳುವುದು. "ಹೇಳೋದು ಒಂದು, ಮಾಡೋದು ಇನ್ನೊಂದು" ಎನ್ನುವ ರೀತಿಯಲ್ಲಿ ಹಾಗೆ ಅಪ್ರಾಮಾಣಿಕತೆಯನ್ನು ತೋರಿ ಆಯೋಜಕರನ್ನು ನಿರಾಶೆಗೊಳಿಸುವ ಸ್ವಭಾವ ನಿಮ್ಮದಲ್ಲ ಮತ್ತು ಹಾಗೇನೇ ಸಲ್ಲದ ಒಣಪ್ರತಿಷ್ಟೆಯನ್ನು ತೋರುವುದೂ ನಿಮ್ಮ ಸ್ವಭಾವವಲ್ಲ. ಇಷ್ಟೆಲ್ಲಾ ಇಬ್ಬಂದಿಯಲ್ಲಿ ಒದ್ದಾಡುವುದರ ಬದಲು ಕೇವಲ "ನನಗೆ ಬರಲಾಗುವುದಿಲ್ಲ" ಎಂದಷ್ಟೇ ನಯವಾಗಿ ಹೇಳಿಬಿಡಲು ನಿಮಗೆ ಸಾಧ್ಯವಾದರೆ ಎಲ್ಲವೂ ನಿರಾಳವಾಗುತ್ತದೆ ಅಲ್ಲವೇ ?

Zodiac Sign

ನೀವು ಮಾಡಿದ ತಪ್ಪು ಇಷ್ಟೇ, ಸಾಧ್ಯವಾಗದೇ ಇರುವಾಗ "ನನ್ನಿಂದ ಆಗೋಲ್ಲ" ಎಂದು ನೇರವಾಗಿ ಹೇಳಲು ನಿಮ್ಮಿಂದ ಆಗದೇ ಇದ್ದುದು. ನಿಮ್ಮ ಈ ಒಂದು ನ್ಯೂನತೆಯಿಂದಾಗಿಯೇ ನೀವು ವಿಲಿವಿಲಿ ಒದ್ದಾಡುವಂತಾಗಿದ್ದು. ನಾವೆಲ್ಲರೂ ಹೀಗೆ ಅಷ್ಟೋ ಇಷ್ಟೋ ಮಾಡಿಯೇ ಇರುತ್ತೇವೆ. ಆದರೆ ನಮಗಿಷ್ಟವಿಲ್ಲದಿದ್ದರೂ ಬಲವಂತವಾಗಿ ನಮ್ಮಿಂದ ಆ ಇಷ್ಟವಲ್ಲದನ್ನು ನಮ್ಮಿಂದ ಮಾಡಿಸುವ ಆ ಶಕ್ತಿಯಾದರೂ ಯಾವುದದು ? ನಮಗೆ ಮೂರುಕಾಸಿನ ಪ್ರಯೋಜನವಿಲ್ಲದ ಕೆಲಸವದು ಎಂದು ಗೊತ್ತಿದ್ದೂ ಪ್ರಜ್ಞಾಪೂರ್ವಕವಾಗಿ ನಾವದರಲ್ಲಿ ತೊಡಗಿಕೊಳ್ಳುವುದು ಯಾಕಾಗಿ ? ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರೂ ತಮಗೆ ತಾವೇ ನೋವುಂಟು ಮಾಡಿಕೊಳ್ಳುವ ಪರಿಸ್ಥಿತಿಗೆ ಸಿಲುಕಿಕೊಳ್ಳಲು ಕಾರಣವೇನೆಂಬುದನ್ನು ಇಲ್ಲಿ ವಿವರಿಸಿದ್ದೇವೆ, ಓದಿ ಅರಿತುಕೊಳ್ಳಿರಿ.

ಮೇಷ (ಮಾರ್ಚ್ 21 - ಏಪ್ರಿಲ್ 19)

ಮೇಷ (ಮಾರ್ಚ್ 21 - ಏಪ್ರಿಲ್ 19)

ತಾವು ಬಹಳಷ್ಟನ್ನೆಲ್ಲಾ ತಿಳಿದುಕೊಂಡಿರುವವರು ಎಂದೇ ತಮ್ಮ ಬಗ್ಗೆ ಅಂದುಕೊಳ್ಳುವ ಮೇಷ ರಾಶಿಯವರು, ವಾಸ್ತವಿಕ್ಕಿಂತಲೂ ಮಿಗಿಲಾಗಿ ತಮ್ಮದೇ ಅನಿಸಿಕೆ, ಅಭಿಪ್ರಾಯಗಳಿಂದ ರೂಪಿತವಾದ ಹಾಗೂ ವಸ್ತುತ: ಅಸ್ತಿತ್ವದಲ್ಲಿಲ್ಲದ ಮಾಹಿತಿಯನ್ನೇ ಕೊಡುವುದು ಹೆಚ್ಚು. ತಾವಂದುಕೊಂಡಿರುವುದೆಲ್ಲವೂ ಶುದ್ಧ ತಪ್ಪೇ ಆಗಿದ್ದು ಆ ತಪ್ಪನ್ನು ಇನ್ನೊಬ್ಬರು ಎತ್ತಿ ತೋರಿಸುವವರೆಗೂ ಈ ಮೇಷ ರಾಶಿಯವರು ತಮ್ಮನ್ನು ತಾವೇ ಸರಿಯೆಂದು ಬಲವಾಗಿ ನಂಬಿರುತ್ತಾರೆಯಾದ್ದರಿಂದ, ಈ ರಾಶಿಯವರು ಕಟ್ಟಕಡೆಗೆ ತೀವ್ರವಾಗಿ ನಿರಾಶೆಗೊಳ್ಳುವ ಪ್ರಸಂಗಗಳೇ ಹೆಚ್ಚಾಗಿರುತ್ತವೆ.

ವೃಷಭ (ಏಪ್ರಿಲ್ 20 - ಮೇ 20)

ವೃಷಭ (ಏಪ್ರಿಲ್ 20 - ಮೇ 20)

ಪ್ರತಿಬಾರಿಯೂ ಪ್ರೀತಿ-ಪ್ರೇಮ-ಪ್ರಣಯದಂತಹ ಸಂಬಂಧಕ್ಕೆ ಕಟ್ಟುಬಿದ್ದಾಗ ಈ ವೃಷಭರಾಶಿಯವರು ತಮಗೆ ತಾವೇ ನೋವುಂಟು ಮಾಡಿಕೊಳ್ಳುವವರಾಗಿರುತ್ತಾರೆ. ಈ ರಾಶಿಯವರನ್ನು ಹದ್ದುಬಸ್ತಿನಲ್ಲಿಡಲು ಯತ್ನಿಸುವುದು ಸರಿಯಲ್ಲ. ಆದರೂ ಸಹ, "ಸರಿಯಾದದ್ದನ್ನೇ ಮಾಡುವ ದಿಶೆಯಲ್ಲಿ" ಇತರರಂತೆ ಈ ರಾಶಿಯವರೂ ಕೂಡಾ ಪ್ರೇಮಪಾಶದಲ್ಲಿ ಬೀಳುವುದಕ್ಕೆ ಮುಂದಾಗುತ್ತಾರೆ.

ಪ್ರಣಯದ ವಿಚಾರದಲ್ಲಿ ಸ್ವಭಾವತ: ಈ ರಾಶಿಯವರು ತುಸು ಹೆಚ್ಚೇ ಸಲುಗೆಯನ್ನು ತೆಗೆದುಕೊಳ್ಳುವವರಾಗಿದ್ದು, ಅಂತಿಮವಾಗಿ ಈ ಕಾರಣಕ್ಕಾಗಿಯೇ ಇವರು ತಮ್ಮ ಸಂಬಂಧದುದ್ದಕ್ಕೂ ನಿರಾಶೆಯನ್ನೇ ಅನುಭವಿಸುವಂತಾಗುತ್ತದೆ. ಯಾಕಾದರೂ ತಮಗೆ ತಾವೇ ಹೀಗೆ ಮಾಡಿಕೊಳ್ಳುತ್ತೇವೆಂದು ತಮ್ಮ ಕುರಿತು ಮತ್ತೊಮ್ಮೆ ತಾವೇ ಚಕಿತಗೊಳ್ಳುವ ಮನೋಭಾವದವರು ಇವರಾಗಿರುತ್ತಾರೆ.

ಮಿಥುನ (ಏಪ್ರಿಲ್ 20 - ಮೇ 20)

ಮಿಥುನ (ಏಪ್ರಿಲ್ 20 - ಮೇ 20)

ಇನ್ನೊಬ್ಬ ವ್ಯಕ್ತಿಯೊಡನೆ ಏನನ್ನಾದರೂ ಮಾಡಬೇಕೆಂದು ನಿರ್ಧರಿಸಿದ ಮರುಕ್ಷಣವೇ ಮಿಥುನ ರಾಶಿಯವರು ತಮಗೆ ತಾವು ನೋವುಂಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಎಲ್ಲರೂ ತಮಗಿಂತ ಕೀಳೆಂದೇ ಈ ಮಿಥುನ ರಾಶಿಯವರು ಬಲವಾಗಿ ನಂಬಿರುತ್ತಾರೆ. ಇಂತಹ ಯೋಚನೆಯು ಇವರದಾಗಿರುವುದರಿಂದ, ಕ್ರೌರ್ಯ ಮನೋಭಾವದರಾಗಿಯೂ ಹಾಗೂ ಯಾವುದೇ ರೀತಿಯ ಕರುಣೆ ತೋರದ ಮನಸ್ಥಿತಿಯವರಾಗಿಯೂ ಇರುವುದು ಇವರ ಪಾಲಿಗೆ ಸರಿಯೆನಿಸುತ್ತದೆ.

ನಿಜ ಹೇಳಬೇಕೆಂದರೆ ಈ ಮಿಥುನ ರಾಶಿಯವರು ಯಾರೋ ಹೊಸಬರೊಂದಿಗೆ ಆಕಸ್ಮಿಕವಾಗಿ ಸ್ನೇಹಹಸ್ತವನ್ನು ಚಾಚುತ್ತಾರೆಂದರೆ ಅದನ್ನು ನಂಬುವುದೇ ಕಷ್ಟವಾಗಿರುತ್ತದೆ ಮತ್ತು ಅವರು ಹಾಗೆ ಮಾಡುವುದೂ ಕೂಡಾ ಅವರ ಪಾಲಿನ ಒಂದು ದೊಡ್ಡ ಪ್ರಮಾದವೇ ಆಗಿಬಿಡುತ್ತದೆ. ಏಕೆಂದರೆ, ಆ ಹೊಸ ಒಡನಾಡಿಗೆ ಇವರು ಯಾವಾಗ ಕೈಕೊಡುತ್ತಾರೆಂದು ಹೇಳಲು ಸಾಧ್ಯವಾಗಲಾರದು.

ಕಟಕ (ಜೂನ್ 21 - ಜುಲೈ 22)

ಕಟಕ (ಜೂನ್ 21 - ಜುಲೈ 22)

ಜನರನ್ನು ಅತಿಯಾಗಿ ನಂಬುವುದೇ ಕಟಕ ರಾಶಿಯವರು ಮಾಡುವ ದೊಡ್ಡ ತಪ್ಪು ಹಾಗೂ ಈ ಅತಿಯಾದ ನಂಬಿಕೆಯೇ ಅವರನ್ನು ದು:ಖದ ಮಡುವಿಗೆ ತಳ್ಳುತ್ತದೆ. ಆದರೆ, ಒಮ್ಮೆ ಅವರಿಗೆ ನಿಮ್ಮ ಬಗ್ಗೆ ಸಂದೇಹ ಉಂಟಾಯಿತೆಂದರೆ, ಅವರು ನಿಮ್ಮನ್ನು ಹುರಿದು ಮುಕ್ಕಿಯಾರು!

ಇತರ ಯಾವತ್ತೂ ರಾಶಿಗಳಿಗೆ ಹೋಲಿಸಿದರೆ, ಕಟಕ ರಾಶಿಯವರಿಗೆ ಕ್ಷಮಿಸುವ ಗುಣವು ತೀರಾ ಕಡಿಮೆ ಹಾಗೂ ಅವರ ಈ ಗುಣದ ಬಗ್ಗೆ ಸ್ವಯಂ ಅವರಿಗೇ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ, ಕಟಕ ರಾಶಿಯವರು ಸ್ನೇಹವಲಯವನ್ನು ವೃದ್ಧಿಸಿಕೊಳ್ಳಲು ಮುಂದಾಗುವುದೆಂದರೆ, ಅವರು ತಮ್ಮನ್ನು ತಾವೇ ದು:ಖದ ಮಡುವಿನಲ್ಲಿ ಕೆಡವಿಕೊಳ್ಳಲು ಮುಂದಾದಂತೆಯೇ ಸರಿ!

ಸಿಂಹ (ಜುಲೈ 23 - ಆಗಸ್ಟ್ 22)

ಸಿಂಹ (ಜುಲೈ 23 - ಆಗಸ್ಟ್ 22)

ಗೆಳೆಯ/ಗೆಳತಿಯರಿಗೆ, ಕುಟುಂಬವರ್ಗದವರಿಗೆ, ಅಥವಾ ಪ್ರೀತಿಪಾತ್ರರಿಗೆ ದ್ರೋಹಬಗೆಯುವ ವಿಚಾರದಲ್ಲಿ ಸಿಂಹರಾಶಿಯವರು ಹೆಚ್ಚೇನೂ ತಲೆಕೆಡಿಸಿಕೊಳ್ಳುವವರಲ್ಲ. ಹಾಗಂತ ಅವರೇನೂ ಈ ವಿಚಾರದಲ್ಲಿ ಹೆಮ್ಮೆಪಡುವವರೇನೂ ಅಲ್ಲ. ಸಂದರ್ಭ, ಪರಿಸ್ಥಿತಿ ಹಾಗೆ ಮಾಡುವಂತೆ ಪ್ರೇರೇಪಿಸಿದರೆ ತಾವು ಹಾಗೆ ಮಾಡಲು ಹಿಂದೇಟು ಹಾಕುವವರಲ್ಲವೆಂದು ಸ್ವಯಂ ಈ ರಾಶಿಯವರಿಗೇ ಗೊತ್ತಿರುತ್ತದೆ. ಜೀವನದಲ್ಲಿ ಎಲ್ಲ ವಿಚಾರಗಳ ಕುರಿತಾಗಿಯೂ ಈ ರಾಶಿಯವರು ನೋವನ್ನು ಅನುಭವಿಸುವವರೇ. ಏಕೆಂದರೆ, ಅವರು ಕೇವಲ ತಮ್ಮ ಕುರಿತಾಗಿಯಷ್ಟೇ ಯೋಚಿಸುವವರು. ಇಷ್ಟಾಗಿಯೂ ಇವರು ತಮ್ಮ ಗೆಳೆಯರ ಬಳಗವನ್ನು ಇನ್ನಷ್ಟು, ಮತ್ತಷ್ಟು ವಿಸ್ತರಿಸುತ್ತಾ ಸಾಗುವವರು. ಇಷ್ಟೆಲ್ಲಾ ಆದರೂ ಸಹ, ಅದೃಷ್ಟವಶಾತ್ ಇವರು ಮತ್ತೂ ಜನರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಉಳಿಸಿಕೊಂಡಿರುತ್ತಾರೆ. ಆದರೆ, ಈ ರಾಶಿಯವರ ವಿಚಾರದಲ್ಲಿ ಸ್ನೇಹವು ಚಿರಕಾಲ ಉಳಿಯಲಾರದು. ಏಕೆಂದರೆ ಈ ರಾಶಿಯವರು ಡಜನ್ ಗಟ್ಟಲೆ ಮಿತ್ರರನ್ನು ಕಳೆದುಕೊಂಡವರಾಗಿರುತ್ತಾರೆ.

ಕನ್ಯಾ (ಆಗಸ್ಟ್ 23 - ಸೆಪ್ಟೆಂಬರ್ 22)

ಕನ್ಯಾ (ಆಗಸ್ಟ್ 23 - ಸೆಪ್ಟೆಂಬರ್ 22)

ಕನ್ಯಾರಾಶಿಯರಿಗೆ ಸ್ವಭಾವತ: ಆತ್ಮಗೌರವದ ಕೊರತೆ ಇದ್ದು ಇದೇ ಅವರಿಗೆ ಯಾವಾಗಲೂ ತೊಂದರೆನ್ನುಂಟು ಮಾಡುವಂತಹದ್ದು. ಇದನ್ನವರು ಮನಗಾಣದಿರುವುದೇ ಅವರಿಗೆ ನೋವನ್ನುಂಟುಮಾಡುವ ಅಂಶವಾಗಿರುತ್ತದೆ. ಆತ್ಮಗೌರವದ ಅಭಾವದ ಕಾರಣದಿಂದಾಗಿ, ಅವರು ತೋರಿಕೆಯ ಒರಟು, ಗಂಭೀರ ಮುಖವಾಡದ ಹಿಂದೆ ತಮ್ಮನ್ನು ತಾವೇ ಅಡಗಿಸಿಕೊಳ್ಳಬೇಕಾಗುತ್ತದೆ. ತಮ್ಮನ್ನು ತಾವೇ ದ್ವೇಷಿಸಿಕೊಳ್ಳುವುದರ ಮೂಲಕ ಕನ್ಯಾ ರಾಶಿಗರು ನೋವನ್ನನುಭವಿಸುತ್ತಾರೆ.

ತುಲಾ (ಸೆಪ್ಟೆಂಬರ್ 23 - ಅಕ್ಟೋಬರ್ 22)

ತುಲಾ (ಸೆಪ್ಟೆಂಬರ್ 23 - ಅಕ್ಟೋಬರ್ 22)

ತುಲಾ ರಾಶಿಯವರದ್ದು 'ಹೌದು' ಅಥವಾ 'ಅಲ್ಲ' ಎಂದು ಸ್ಪಷ್ಟವಾಗಿ ಹೇಳಿಬಿಡುವ ಜಾಯಮಾನವಲ್ಲ. ಬದ್ಧತೆಯಿಲ್ಲದ ಅವರ ಈ ಸ್ವಭಾವವೇ ಅವರ ಪಾಲಿಗೆ ಮುಳುವಾಗುತ್ತದೆ. ಖಚಿತ ಉತ್ತರವನ್ನು ಹೇಳಲು ತುಲಾ ರಾಶಿಯವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ತಮ್ಮ ಸುತ್ತಲಿನ ಎಲ್ಲರಿಗೂ ಇವರು ಸುಳ್ಳನ್ನೇ ಹೇಳಿಕೊಂಡು, ಎಲ್ಲರ ತೀವ್ರಸ್ವರೂಪದ ಅಪನಂಬಿಕೆಗೆ ಗುರಿಯಾಗುವುದರ ಮೂಲಕ ತಮಗೆ ತಾವೇ ತೀವ್ರ ನೋವನ್ನೂ ತಂದುಕೊಳ್ಳುವವರಾಗಿರುತ್ತಾರೆ. ತುಲಾರಾಶಿಯವರನ್ನಂತೂ ಯಾರೂ ನಂಬಲಾರರು. ತುಲಾರಾಶಿಯವರ ಪಾಲಿಗೆ ಹೀಗೆ ಎಲ್ಲರ ಅಪನಂಬಿಕೆಗೆ ಗುರಿಯಾಗುವುದಕ್ಕಿಂತಲೂ ನೋವಿನ ಸಂಗತಿ ಬೇರಿನ್ನೇನು ತಾನೇ ಇದ್ದೀತು ಹೇಳಿ ?

ವೃಶ್ಚಿಕ (ಅಕ್ಟೋಬರ್ 23 - ನವೆಂಬರ್ 21)

ವೃಶ್ಚಿಕ (ಅಕ್ಟೋಬರ್ 23 - ನವೆಂಬರ್ 21)

ವೃಶ್ಚಿಕ ರಾಶಿಯವರು ಸ್ವಭಾವತ: ನಿಷ್ಟುರ, ಒರಟು ಸ್ವಭಾವದವರೇ ಆಗಿದ್ದರೂ ಸಹ, ತಮ್ಮ ಗಡಸು ಮುಖಭಾವವನ್ನು ಶತಾಯ ಗತಾಯ ಕಾಪಿಟ್ಟುಕೊಳ್ಳಲು ಪ್ರಯತ್ನಿಸುವವರಾಗಿದ್ದರೂ ಕೂಡಾ, ದಿನವಿಡೀ ಅದೇ ಭಾವದಿಂದಿರಲು ಇವರಿಗೂ ಸಾಧ್ಯವಾಗುವುದಿಲ್ಲ. ಎಷ್ಟೇ ಆದರೂ ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲೂ, ವಾರದ ಎಲ್ಲಾ ದಿನಗಳಲ್ಲಿಯೂ ಗಡಸು ಮುಖಭಾವದಿಂದಿರುವುದು, ಶಿಸ್ತಿನ ಸಾಕಾರಮೂರ್ತಿಯಂತಿರುವುದು, ಹಾಗೂ ಕ್ರೂರಭಾವದಿಂದಲೇ ವರ್ತಿಸುವುದು ಎಂತಹವರಿಗೂ ಅಸಾಧ್ಯವೇ ಅಲ್ಲವೇ ? ಗುಪ್ತವಾಗಿಯೇ ಆದರೂ ವೃಶ್ಚಿಕ ರಾಶಿಯವರು ಈ ಭಾವದಿಂದ ತುಸು ವಿಮುಖರಾಗಲು ಖಂಡಿತವಾಗಿಯೂ ಬಯಸುವವರೇ ಆಗಿರುತ್ತಾರೆ.

ತಮ್ಮ ಕಠಿಣ ನಿಲುವು, ನಿಷ್ಟುರ ಭಾವದಿಂದಲೇ ಜಗತ್ತನ್ನು ಮೆಚ್ಚಿಸಲು ಮುಂದಾಗುವ ವೃಶ್ಚಿಕ ರಾಶಿಗರು, ತಮ್ಮ ವ್ಯಕ್ತಿತ್ವದ ಮೃದುಭಾವದ ಆಯಾಮವನ್ನು ಅಭಿವ್ಯಕ್ತಿಗೊಳಿಸುವಲ್ಲಿ ಸೋಲುತ್ತಾರೆ. ಹೀಗೆ ಅವರ ಒಳ್ಳೆಯತನವು ಜಗತ್ತಿಗೆ ಗೊತ್ತಾಗದೇ ಅವರು ನೋವನ್ನು ಅನುಭವಿಸುವಂತಾಗುತ್ತದೆ. ಹೀಗಾಗಿ ವೃಶ್ಚಿಕ ರಾಶಿಗರಿಗೆ ಸಲಹೆಯೇನೆಂದರೆ, ನಿಮ್ಮ ಆಂತರ್ಯದ ಮೃದುಭಾವವನ್ನೇ ಆದಷ್ಟು ಅಪ್ಪಿಕೊಳ್ಳಿರಿ. ಹೀಗೆ ಮಾಡುವುದರ ಮೂಲಕ ನಿಮಗೆ ನೀವೇ ನೋವುಂಟು ಮಾಡಿಕೊಳ್ಳುವುದರ ಬದಲು ನಿಮ್ಮನ್ನು ನೀವೇ ಪ್ರೀತಿಸುವಂತಾಗುವುದು.

ಧನು (ನವೆಂಬರ್ 22 - ಡಿಸೆಂಬರ್ 21)

ಧನು (ನವೆಂಬರ್ 22 - ಡಿಸೆಂಬರ್ 21)

ಜನಸಮೂಹದಿಂದ ದೂರ ಉಳಿಯಲು ಬಯಸುವ ಮತ್ತೊಂದು ರಾಶಿಗರು ಅಂದರೆ ಅದು ಧನು ರಾಶಿಗರೇ ಸರಿ. ಈ ರಾಶಿಗರು ಸಾಮಾನ್ಯವಾಗಿ ಯಾವುದೇ ಕೌಟುಂಬಿಕ, ಸಾಮಾಜಿಕ ಜೌತಣಕೂಟವನ್ನೋ ಸಮಾರಂಭವನ್ನೋ ಅಷ್ಟು ಗಂಭೀರವಾಗಿ ಪರಿಗಣಿಸುವವರಲ್ಲ. ಆದರೂ ಕೂಡಾ ಅವರೇಕೆ ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಂದಾಗುವರು ಗೊತ್ತೇ ? ಏಕೆಂದರೆ, ಅವರು ಜನರನ್ನು ಮೆಚ್ಚಿಸುವ ಸ್ವಭಾವದವರು. "ನನಗೆ ಆಗೋಲ್ಲ" ಎಂದು ಹೇಳಲು ಅವರಿಗೆ ಸಾಧ್ಯವಾಗುತ್ತದೆಯಾದರೂ ಸಹ, ಹಾಗೆ ನೇರವಾಗಿ ಹೇಳಿದರೆ ಎಲ್ಲಿ ಆ ಇನ್ನೊಬ್ಬರು ಬೇಸರಿಸಿಕೊಳ್ಳುತ್ತಾರೋ ಎಂಬ ಕಾಳಜಿಯಿಂದ ಒಲ್ಲದ್ದನ್ನು ಒಪ್ಪಿಕೊಂಡು ತಮಗೆ ತಾವೇ ನೋವುಂಟು ಮಾಡಿಕೊಳ್ಳುವ ಸ್ವಭಾವದವರು ಇವರು. ಹಾಗೆ ಇನ್ನೊಬ್ಬರ ಮನಸ್ಸನ್ನು ನೋಯಿಸಲು ಈ ರಾಶಿಯವರಿಗೆ ಸಾಧ್ಯವಾಗದಾದ್ದರಿಂದ ಹಾಗೂ ಜೊತೆಗೆ, ಇದು ಕೊನೆಗೆ ತಮಗೇ ನೋವುಂಟು ಮಾಡುತ್ತದೆ ಎಂದು ತಿಳಿದೂ ಸಹ ಇವರು ಪದೇ ಪದೇ ಇಂತಹ ಸ್ವಯಂ ವೇದನೆಗೆ ಗುರಿಯಾಗುತ್ತಲೇ ಇರುತ್ತಾರೆ.

ಮಕರ (ಡಿಸೆಂಬರ್ 22 - ಜನವರಿ 19)

ಮಕರ (ಡಿಸೆಂಬರ್ 22 - ಜನವರಿ 19)

ಈ ರಾಶಿಯವರು ಏನಾದರೂ ಸರಿಯಾದದ್ದನ್ನೇ ಹೇಳಲು ಮುಂದಾಗುವರಾದರೂ ಕೂಡಾ, ಅವರ ಭಾವೋದ್ವೇಗವು ಇದಕ್ಕೆ ಅಡ್ಡಿಯಾಗುತ್ತದೆ. ಈ ಮಕರರಾಶಿಯವರ ಪಾಲಿಗೆ ಮಾತುಗಾರಿಕೆ ವರವೂ ಹೌದು, ಶಾಪವೂ ಹೌದು. ಅತಿಯಾಗಿ ಮಾತನಾಡುವಾಗ ನಾಲಗೆಯನ್ನು ಹತೋಟಿಯಲ್ಲಿರಿಸದೇ ತಮ್ಮ ಚುಚ್ಚುಮಾತುಗಳಿಂದ ಕ್ಷಣಾರ್ಧದಲ್ಲಿ ಎದುರಾಳಿಯ ಮನಸ್ಸನ್ನು ಹಾಳುಗೆಡವಬಲ್ಲರು. ಯಾವಾಗ ನಾಲಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕೆಂದೇ ಇವರಿಗೆ ತಿಳಿಯುವುದಿಲ್ಲ ಹಾಗೂ ಈ ಮೂಲಕ ಇವರು ತಾವು ಪ್ರೀತಿಸುವ ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಯಾರೇ ಆಗಲೀ ಕೇಳಲು ಇಷ್ಟಪಡಲಾರದಷ್ಟನ್ನೆಲ್ಲಾ ಬಡಬಡಾಯಿಸಿ, ಕಟ್ಟಕಡೆಗೆ ತಮಗೂ ತೀವ್ರಸ್ವರೂಪದ ನೋವುಂಟು ಮಾಡಿಕೊಳ್ಳುವ ಸ್ವಭಾವದವರೇ ಈ ಮಕರ ರಾಶಿಗರು.

ಕುಂಭ (ಜನವರಿ 20 - ಫ಼ೆಬ್ರವರಿ 18)

ಕುಂಭ (ಜನವರಿ 20 - ಫ಼ೆಬ್ರವರಿ 18)

ತಾವು ಸದಾ ಸ್ವೀಕಾರಾರ್ಹರಾಗಿರಬೇಕೆಂಬ ಭಾವವನ್ನು ರಕ್ತದ ಕಣಕಣಗಳಲ್ಲಿಯೂ ತುಂಬಿಕೊಂಡಿರುವವರೆಂದರೆ ಅವರು ಈ ಕುಂಭ ರಾಶಿಗರು. ಹೀಗೆ ಎಲ್ಲರಿಂದಲೂ ಸ್ವೀಕಾರಾರ್ಹರಾಗಿಯೇ ಇರಬಯಸುವ ತವಕದಲ್ಲಿ, ಈ ರಾಶಿಯವರು, ತಮಗೆ ಸರ್ವಥಾ ಇಷ್ಟವಿಲ್ಲವೆಂದು ತಿಳಿದೂ ತಿಳಿದೂ, ತಮಗೆ ಬಗ್ಗದ, ಒಗ್ಗದ ಒಪ್ಪಂದಗಳಿಗೂ ಸಹಿ ಹಾಕಲು ಹಿಂದೇಟು ಹಾಕದವರು ಇವರು!

ಬೇರೊಬ್ಬರನ್ನು ಸಂತೃಪ್ತಿಪಡಿಸುವ, ಅವರನ್ನು ಮೆಚ್ಚಿಸುವ ವಿಚಾರದಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಈ ರಾಶಿಗರು, ಆ ಬೇರೆಯವರಿಗಾಗಿ ತಮ್ಮದೇ ಆದ ಕನಸುಗಳನ್ನು ಬಲಿಕೊಡಲೂ ಹೇಸದವರು. ಈ ಕಾರಣದಿಂದಾಗಿಯೇ ಕಟ್ಟಕಡೆಗೆ ಅವರು ಹೇಳಹೆಸರಿಲ್ಲದಂತಾಗುವ ಸಂಭವವೇ ಹೆಚ್ಚು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವರು ಜನರ ಮೆಚ್ಚಿಗೆಗೆ ಪಾತ್ರರಾಗಬಯಸುವವರು ಮತ್ತು ಸದಾಕಾಲವೂ ಜನರಿಂದ ಭೇಷ್ ಎನಿಸಿಕೊಳ್ಳುವುದಕ್ಕಾಗಿ ತಮ್ಮ ಸ್ವಂತ ಕನಸು, ಗುರಿಗಳನ್ನೂ ತ್ಯಾಗ ಮಾಡುವವರಾಗಿರುತ್ತಾರೆ.

ಮೀನ (ಫ಼ೆಬ್ರವರಿ 19 - ಮಾರ್ಚ್ 10)

ಮೀನ (ಫ಼ೆಬ್ರವರಿ 19 - ಮಾರ್ಚ್ 10)

ಈ ರಾಶಿಯವರು ಭಾವತೀವ್ರತೆಯುಳ್ಳವರಾಗಿದ್ದು, ಇದೇ ಅವರ ಪಾಲಿಗೆ ಘಾತುಕವಾಗಿರುತ್ತದೆ. ಭಾವನೆಗಳನ್ನು ಅದುಮಿಟ್ಟುಕೊಳ್ಳುವುದರಲ್ಲಿ ಈ ರಾಶಿಯವರಿಗೆ ನಂಬಿಕೆ ಇಲ್ಲ. ಹಾಗಾಗಿ, ನಿಜ ಹೇಳಬೇಕೆಂದರೆ, ಭಾವನೆಗಳನ್ನು ವಿಪರೀತವಾಗಿ ಪ್ರಕಟಪಡಿಸುವ ಇವರ ಈ ಸ್ವಭಾವವೇ ಜನರ ತಾಳ್ಮೆ ತಪ್ಪಿಸಿಬಿಡುತ್ತದೆ.

ಹಲವಾರು ಬಾರಿ ಅವರ ಭಾವನೆಗಳು ಪ್ರಾಮಾಣಿಕವಾದವುಗಳೇ ಆಗಿದ್ದರೂ ಕೂಡಾ, ಅವರು ಅದನ್ನು ವಿಪರೀತವಾಗಿ ವ್ಯಕ್ತಪಡಿಸುತ್ತಾರೆ. ಹಾಗೆ ವಿಪರೀತವಾದದ್ದನ್ನು ಯಾರು ತಾನೇ ಸಹಿಸಿಯಾರು ಹೇಳಿ ? ತಮ್ಮ ಮನದಾಳದ ಎಲ್ಲಾ ಭಾವನೆಗಳನ್ನೂ ಹೀಗೇ ಸಿಕ್ಕಾಪಟ್ಟೆ ಹಂಚಿಕೊಳ್ಳುವುದರ ಮೂಲಕ ಅವರು ತಮಗೆ ತಾವೇ ತೀವ್ರವಾಗಿ ನೊಂದುಕೊಳ್ಳುವಂತಾಗುತ್ತದೆ. ಏಕೆಂದರೆ, ಹಾಗೆ ವಿಪರೀತ ತಲೆ ತಿಂದರೆ ಯಾರಿಗೂ ಇಷ್ಟವಾಗದೆಂದು ಅವರಿಗೂ ಚೆನ್ನಾಗಿಯೇ ಗೊತ್ತಿರುತ್ತದೆ.

Read more about: astrology
English summary

How Each Zodiac Sign Unintentionally Harming Themselves

Have You ever thought Why do we knowingly get involved in things we want nothing to do with? This is how each zodiac sign in astrology harming themselves.
X
Desktop Bottom Promotion