Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
2023ರಲ್ಲಿ ಗ್ರಹಗಳ ಸಂಚಾರಗಳು ಧನು ರಾಶಿಯ ಮೇಲೆ ಬೀರಲಿದೆ ಈ ಪ್ರಭಾವ
2023 ರಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾಗುತ್ತಿರುವ ಚಲನೆಗಳು, ಗ್ರಹಗಳ ಸಾಗಣೆ ಮತ್ತು ಅವುಗಳ ವಿಶೇಷ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಧನು ರಾಶಿಯವರ ಈ ಭವಿಷ್ಯ ಸಿದ್ಧಪಡಿಸಲಾಗಿದೆ. ಈ ಲೇಖನದಲ್ಲಿ ಧನು ರಾಶಿಯವರ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ, 2023 ರ ವರ್ಷವು ನಿಮ್ಮ ಜೀವನದಲ್ಲಿ ಯಾವ ರೀತಿಯ ವಿಶೇಷ ಬದಲಾವಣೆಗಳನ್ನು ತರಲಿದೆ ಎಂಬುದನ್ನು ತಿಳಿದುಕೊಳ್ಳುವ...

ಧನು ರಾಶಿಯಲ್ಲಿ ಗುರು-ಶನಿ ಪ್ರಭಾವ
ಈ ವರ್ಷದ ಆರಂಭದ ತಿಂಗಳುಗಳಲ್ಲಿ ನಿಮ್ಮ ರಾಶಿಯ ಅಧಿಪತಿಯಾಗಿರುವ ಗುರುವು ನಿಮ್ಮ ನಾಲ್ಕನೇ ಮನೆಯಲ್ಲಿ ಇರಲಿದೆ. ಗುರುವು ಏಪ್ರಿಲ್ 22, 2023 ರಂದು, ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿ ಪ್ರವೇಶಿಸಿದಾಗ ನಿಮ್ಮ ಐದನೇ ಮನೆಯಲ್ಲಿದ್ದು ನಿಮ್ಮ ಒಂಬತ್ತನೇ ಮನೆ, ಹನ್ನೊಂದನೇ ಮನೆ ಮತ್ತು ಮೊದಲ ಮನೆಯನ್ನು ನೋಡುತ್ತಿರುತ್ತದೆ.
ಅದರಂತೆ ನಮ್ಮ ಕರ್ಮಕ್ಕೆ ತಕ್ಕಂತೆ ಫಲ ನೀಡುವ ಕುಂಭ ರಾಶಿಗೆ ಸಂಚಾರ ಮಾಡಿದಾಗ ನಿಮ್ಮ ಐದನೇ ಮನೆಯ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ.
ಇನ್ನು ರಾಹು ಮತ್ತು ಕೇತುಗಳು. ನಿಮ್ಮ ಐದನೇ ಮತ್ತು ಹನ್ನೊಂದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲಾ ಗ್ರಹಗತಿಗಳ ಕಾರಣ ಜೀವನದಲ್ಲಿ ಏರಳಿತ ಇರುತ್ತದೆ. ಈ ಗ್ರಹಗತಿಗಳಿಂದಾಗಿ ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭ ಪರಿಣಾಮಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ.
ಈ ವರ್ಷ ನಿಮ್ಮ ಜೀವನದಲ್ಲಿ ಅನೇಕ ಮಂಗಳಕರ ಘಟನೆಗಳು ಕೂಡ ನಡೆಯುತ್ತದೆ. ಈ ವರ್ಷ ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ನೀವು ಕೆಲವು ವಿಶೇಷ ಸಾಧನೆಗಳನ್ನು ಪಡೆಯಬಹುದು. ನೀವು ವಿದ್ಯಾರ್ಥಿಯಾಗಿದ್ದರೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತೀರಿ. ಪ್ರೇಮಿಗಳಿಗೆ ಈ ವರ್ಷ ವಿಶೇಷವಾಗಲಿದೆ. ಅಪೇಕ್ಷಿತ ದಂಪತಿಗೆ ಸಂತಾನ ಪ್ರಾಪ್ತಿಯಾಗುವುದು. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನ ಸಫಲವಾಗಲಿದೆ. ನಿಮ್ಮ ಮಾನಸಿಕ ಶಕ್ತಿ ಬೆಳೆಯುತ್ತದೆ.
ಜನವರಿ -ಮಾರ್ಚ್ ಹೇಗಿರಲಿದೆ
ಜನವರಿ ತಿಂಗಳು ವೈವಾಹಿಕ ಜೀವನದಲ್ಲಿ ಕೆಲವು ಏರಿಳಿತಗಳನ್ನು ತರಬಹುದು. ನಿಮ್ಮ ಕೆಲಸದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು ಮತ್ತು ರಾಹು ನಿಮ್ಮ ಐದನೇ ಮನೆಯಲ್ಲಿರುವುದರಿಂದ ನಿಮ್ಮ ಆಲೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯದಲ್ಲಿ ಕೆಲವು ಸಮಸ್ಯೆಗಳನ್ನು ತರಬಹುದು. ಒಂದು ರೀತಿಯಲ್ಲಿ ಗೊಂದಲದ ಸ್ಥಿತಿಯಲ್ಲಿರುತ್ತೀರಿ. ಸರಿ ಮತ್ತು ತಪ್ಪು ಅರ್ಥ ಮಾಡಿಕೊಳ್ಳಲು ಎಡವಿ ತೊಂದರೆಯಾಗಬಹುದು, ಆದರೆ ಆರ್ಥಿಕತೆ ಬಗ್ಗೆ ಚಿಂತೆ ಇರಲ್ಲ, ಆದಾಯ ಹೆಚ್ಚಲಿದೆ.
ಫೆಬ್ರವರಿ ತಿಂಗಳಿನಲ್ಲಿ ನಿಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಕೂಡ ಸಿಗುವುದು.
ಮಾರ್ಚ್ ತಿಂಗಳು ವೈವಾಹಿಕ ಜೀವನದಲ್ಲಿ ಒತ್ತಡದಿಂದ ಕೂಡಿರುತ್ತದೆ. ಈ ಸಮಯದಲ್ಲಿ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಹೊಂದಾಣಿಕೆ ಕೊರತೆ , ವಾದ-ಪ್ರತಿವಾದಗಳು ಬರಬಹುದು. ಪಾಲುದಾರಿಕೆ ವ್ಯವಹಾರ ಮಾಡುವವರಿಗೂ ತೊಂದರೆಯಾಗಬಹುದು.
ಏಪ್ರಿಲ್-ಆಗಸ್ಟ್: ಸ್ವಲ್ಪ ಜಾಗ್ರತೆವಹಿಸಿ
ಏಪ್ರಿಲ್ ತಿಂಗಳು ನಿಮಗೆ ಮಧ್ಯಮ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ಐದನೇ ಮನೆಯಲ್ಲಿ ಸೂರ್ಯ, ರಾಹು ಮತ್ತು ಗುರುಗಳ ಉಪಸ್ಥಿತಿಯು ಒಂದು ರೀತಿಯಲ್ಲಿ ಗ್ರಹಣ ದೋಷದ ಪರಿಸ್ಥಿತಿಯನ್ನು ಉಂಟುಮಾಡುತ್ತದೆ ಮತ್ತು ಪಿತ್ರಾ ದೋಷದ ಪರಿಣಾಮವೂ ಗೋಚರಿಸುತ್ತದೆ. ನಿಮ್ಮ ಜಾತಕದಲ್ಲಿ ಪಿತೃದೋಷವಿದ್ದರೆ ಈ ಅವಧಿಯಲ್ಲಿ ಅಶುಭ ಫಲಗಳನ್ನು ನೀಡುವುದು, ಪಿತೃದೋಷ ಪರಿಹಾರಗಳನ್ನು ಮಾಡಿಸಬೇಕು.
ಮೇ ಮತ್ತು ಆಗಸ್ಟ್ ನಡುವೆ ವಿಶೇಷವಾಗಿ ರಾಹು - ಗುರುವಿನ ಗುರು - ಚಂಡಾಲ ದೋಷದ ಪರಿಣಾಮವು ನಿಮ್ಮ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುವುದು, ಕೆಲವೊಂದು ತಪ್ಪು ನಿರ್ಧಾರಗಳು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಸಂಬಂಧದಲ್ಲೂ ಸಾಕಷ್ಟೂ ಏರಳಿತ ಇರುತ್ತದೆ. ಈ ಅವಧಿಯಲ್ಲಿ ಸ್ವಲ್ಪ ಎಚ್ಚರದಿಂದಿರಿ.
ಸೆಪ್ಟೆಂಬರ್ -ಡಿಸೆಂಬರ್
ಸೆಪ್ಟೆಂಬರ್‌ನಲ್ಲಿ ಅದೃಷ್ಟ ಮತ್ತೆ ಕೈ ಹಿಡಿಯುತ್ತದೆ. ನಿಮ್ಮ ಕೆಲಸ-ಕಾರ್ಯಗಳನ್ನು ಹುರುಪಿನಿಂದ ಪ್ರಾರಂಭಿಸುತ್ತೀರಿ. ವ್ಯವಹಾರದಲ್ಲಿ ಏರಿಳಿತದ ಪರಿಸ್ಥಿತಿಗಳು ಕಂಡುಬರುತ್ತವೆ, ನಿಮ್ಮ ವಿರುದ್ಧ ನಡೆಯುವ ಪಿತೂರಿ ಬಗ್ಗೆ ಜಾಗ್ರತೆವಹಿಸಬೇಕು.
ಬರುತ್ತವೆ ಆದರೆ ಸ್ವಲ್ಪ ಆಕ್ರಮಣಕಾರಿಯಾಗಿ ನಿಮ್ಮ ಕೆಲಸವನ್ನು ಮಾಡಲು ನೀವು ಬಯಸುತ್ತೀರಿ. ಈ ಕಾರಣದಿಂದಾಗಿ ನಿಮ್ಮ ವಿರುದ್ಧ ಪಿತೂರಿ ಇರಬಹುದು.
ಅಕ್ಟೋಬರ್ ತಿಂಗಳು ಆರ್ಥಿಕ ಬಲವನ್ನು ತರುತ್ತದೆ. ನೀವು ಮಾಡಿದ ಪ್ರಯತ್ನಗಳಿಗೆ ಹಣಕಾಸಿನ ಲಾಭ ಸಿಗಲಿದೆ. ನಿಮ್ಮ ದೈಹಿಕ ಶಕ್ತಿಯಲ್ಲಿ ಹೆಚ್ಚಳ ಕಂಡುಬರುವುದು. ಈ ಸಮಯವು ಕುಟುಂಬ ಜೀವನದಲ್ಲಿ ಉತ್ತಮವಾಗಿರುತ್ತದೆ ಆದರೆ ಪ್ರೇಮ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ.
ಇನ್ನು ವರ್ಷದ ಎರಡು ತಿಂಗಳು ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ತುಂಬಾ ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ಆರ್ಥಿಕ ಬಲ ಮತ್ತಷ್ಟು ಹೆಚ್ಚಾಗುವುದು. ನೀವು ತೆಗೆದಕೊಳ್ಳುವ ನಿರ್ಧಾರಗಳು ಉತ್ತಮವಾಗಿರುತ್ತದೆ, ಮಕ್ಕಳ ವಿಷಯದಲ್ಲೂ ಖುಷಿ ಇರುತ್ತದೆ.



Click it and Unblock the Notifications













