For Quick Alerts
ALLOW NOTIFICATIONS  
For Daily Alerts

2023ರಲ್ಲಿ ಗ್ರಹಗಳ ಸಂಚಾರಗಳು ತುಲಾ ರಾಶಿಯ ಮೇಲೆ ಬೀರಲಿದೆ ಈ ಪ್ರಭಾವ

|

ತುಲಾ ರಾಶಿಫಲ 2023ರ ಪ್ರಕಾರ, ಈ ವರ್ಷ, ತುಲಾ ರಾಶಿಯವರಿಗೆ, ಲಾಭದಾಯಕ.ಜನವರಿಯಲ್ಲಿ ಕುಂಭದಲ್ಲಿ ಶನಿ ಸಂಕ್ರಮಣ ಸಂಭವಿಸಿದಾಗ ನಿಮ್ಮ ಧೈಯಾವೂ ಕೊನೆಗೊಳ್ಳುತ್ತದೆ. ನಂತರ ಶನಿಯ ಕೃಪೆ ನಿಮ್ಮ ಮೇಲೆ ಇರುವುದರಿಂದ ಎಲ್ಲ ಒಳಿತಾಗುತ್ತದೆ.

How 2023 Planet transit Affects on Libra In 2023

ಗುರು ಪ್ರಭಾವ

ವರ್ಷದ ಆರಂಭದಲ್ಲಿ ಗುರು ನಿಮ್ಮ ಆರನೇ ಮನೆಯಲ್ಲಿ ಇರುತ್ತದೆ. ಈ ಸಮಯವು ನಿಮ್ಮ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ತರಬಹುದು. ಆರೊಗ್ಯ ಸಮಸ್ಯೆಗಳು ಬರಬಹುದು, ಇದರಿಂದಾಗಿ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಕಾರಣದಿಂದಾಗಿ ವರ್ಷದ ಆರಂಭದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟವಾಗಬಹುದು. ಆದರೆ ಏಪ್ರಿಲ್‌ 22ಕ್ಕೆ ಗುರು ಸಂಚಾರವಾದ ಮೇಲೆ ಗುರುವು ನಿಮ್ಮ ಅದೃಷ್ಟದ ಮನೆಯಲ್ಲಿ ಕೂರಲಿದೆ.

ಇದರಿಂದ ನಿಮ್ಮ ಗೌರವ ಹೆಚ್ಚುವುದು, ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಆರೋಗ್ಯ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ.

ನಿಮ್ಮ ಏಳನೇ ಮನೆಯಲ್ಲಿ ಗುರು-ರಾಹು ಜೊತೆ ಸೇರುವುದರಿಂದ ಮೇ ತಿಂಗಳಿನಲ್ಲಿ ಗುರು-ಚಂಡಾಲ ದೋಷ ಉಂಟಾಗಲಿದೆ. ಇದು ವ್ಯವಹಾರ ಮತ್ತು ವೈವಾಹಿಕ ಜೀವನದಲ್ಲಿ ಸ್ವಲ್ಪ ಒತ್ತಡವನ್ನು ನೀಡುತ್ತದೆ, ಆದರೆ ನಂತರ ಪರಿಸ್ಥಿತಿ ಕ್ರಮೇಣ ಬದಲಾಗುತ್ತದೆ.

ರಾಹು ಪ್ರಭಾವ

ಅಕ್ಟೋಬರ್ 30 ರಾಹು ಮೀನ ರಾಶಿಗೆ ಸಾಗಿದಾಗ ನಿಮ್ಮ 6ನೇ ಮನೆಯಲ್ಲಿ ಇರಲಿದೆ, ರಾಹುವಿನ ಈ ಸ್ಥಾನವೂ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಈ ಸಂಚಾರದ ಸಮಯದಲ್ಲಿ ನೀವು ನಿಮ್ಮ ವಿರೋಧಿಗಳ ಮೇಲೆ ವಿಜಯವನ್ನು ಸಾಧಿಸುತ್ತೀರಿ. ನಿಮ್ಮ ಶತ್ರುಗಳಿಗೆ ನಿಮ್ಮನ್ನು ಏನೂ ಮಾಡಲು ಸಾಧ್ಯವಾಗಲ್ಲ. ಯಾವುದೇ ಪ್ರಕರಣವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ಅದರಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ. ವಿದೇಶಕ್ಕೆ ಹೋಗ ಬಯಸುವವರಿಗೆ ವಿದೇಶಕ್ಕೆ ಹೋಗಲು ಅವಕಾಶಗಳು ಕೂಡಿ ಬರಲಿದೆ.

ಜನವರಿ-ಏಪ್ರಿಲ್

ಜನವರಿ ತಿಂಗಳು ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಕೆಲವು ಏರಿಳಿತಗಳು ಕಂಡು ಬಂದರೂ ನಿಮ್ಮ ಕೆಲಸವನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗುವುದು. ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ, ನಿಮ್ಮ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಉದ್ಯೋಗ ಬದಲಾವಣೆ ಸಾಧ್ಯತೆ ಕೂಡ ಇದೆ. ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ, ಪ್ರೇಮಿಗಳಿಗೂ ಸಮಯ ಅನುಕೂಲಕರವಾಗಿದೆ.

ಫೆಬ್ರವರಿ ತಿಂಗಳು ನಿಮಗೆ ಏರಿಳಿತಗಳಿಂದ ಕೂಡಿರುತ್ತದೆ. ಈ ಸಮಯದಲ್ಲಿ ಆರೋಗ್ಯ ಹದಗೆಡಬಹುದು. ನೀವು ಆಹಾರಕ್ರದ ಕಡೆಗೆ ಗಮನ ನೀಡಿದಿದ್ದರೆ ನಿಮ್ಮ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಲಿದೆ. ಈ ತಿಂಗಳಿನಲ್ಲಿ ಖರ್ಚುಗಳು ಹೆಚ್ಚಾಗಲಿದೆ. ವಿದೇಶಕ್ಕೆ ಹೋಗ ಬಯಸುವವರಿಗೆ ಅವಕಾಶಗಳು ದೊರೆಯಲಿದೆ.

ಮಾರ್ಚ್ ತಿಂಗಳಲ್ಲಿ ನಿಮ್ಮ ವೈವಾಹಿಕ ಜೀವನ ಮತ್ತಷ್ಟು
ಸುಂದರವಾಗುವುದು. ವ್ಯಾಪಾರಸ್ಥರು ಉತ್ತಮ ಲಾಭದ ಗಳಿಸುವ ಸಾಧ್ಯತೆ ಇದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಆರೋಗ್ಯ ಸುಧಾರಿಸಲಿದೆ. ವೆಚ್ಚಗಳು ಕಡಿಮೆಯಾಗುತ್ತವೆ , ಆದಾಯವು ಸ್ಥಿರವಾಗಲು ಪ್ರಾರಂಭಿಸುತ್ತದೆ.

ಏಪ್ರಿಲ್ ತಿಂಗಳು ನಿಮಗೆ ಬಹಳಷ್ಟು ಖರ್ಚು ಬರಲಿದೆ, ಆದರೆ ಒಳ್ಳೆಯ ವಿಷಯಗಳಿಗೆ ಖರ್ಚು ಮಾಡುವಿರಿ. ಉತ್ತಮ ಹಣವನ್ನು ಪಡೆಯುವ ಅವಕಾಶವೂ ಇರುತ್ತದೆ. ಪೂರ್ವಜರ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ಪಡೆಯುವ ಸಾಧ್ಯತೆಯೂ ಇರುತ್ತದೆ.

ಮೇ-ಸೆಪ್ಟೆಂಬರ್‌

ಮೇ ತಿಂಗಳಲ್ಲಿ ಅದೃಷ್ಟದ ಬೆಂಬಲ ನಿಮಗಿರುವುದರಿಂದ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳುವುದು. ಇದು ನಿಮ್ಮ ಆತ್ಮವಿಶ್ವಾಸವನ್ನು ಮರಳಿ ತರುತ್ತದೆ. ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆಗಳಿವೆ. ಪ್ರೇಮ ಸಂಬಂಧಗಳು ಮತ್ತಷ್ಟು ಬಲವಾಗುವುದು.

ಜೂನ್ ತಿಂಗಳಲ್ಲಿ ವೃತ್ತಿಜೀವನದಲ್ಲಿ ಏರಿಳಿತಗಳು ಕಂಡುಬರುತ್ತವೆ. ನೀವು ಯೋಚಿಸದ ಕೆಲವು ಸಂದರ್ಭಗಳನ್ನು ನೀವು ಇದ್ದಕ್ಕಿದ್ದಂತೆ ಎದುರಿಸಬೇಕಾಗಬಹುದು. ಆದರೆ ನೀವು ಆ ಸವಾಲುಗಳನ್ನು ಜಯಿಸುತ್ತೀರಿ, ಕುಟುಂಬದ ವಾತಾವರಣವು ಶಾಂತಿಯುತವಾಗಿರುತ್ತದೆ. ಮನೆಗೆ ಹೊಸ ವಾಹನ ಬರಬಹುದು.

ಜುಲೈ ತಿಂಗಳು ನಿಮಗೆ ಅದ್ಭುತವಾದ ತಿಂಗಳಾಗಲಿದೆ. ಈ ತಿಂಗಳು ಉತ್ತಮ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಎಲ್ಲಿ ಕೈ ಹಾಕಿದರೂ ಕೈಗೆ ಹಣ ಬರುವ ಸಾಧ್ಯತೆ ಇರುತ್ತದೆ. ಈ ಸಮಯವು ನಿಮ್ಮ ಇಷ್ಟಾರ್ಥಗಳನ್ನು ಈಡೇರುವುದು.

ಆಗಸ್ಟ್ ತಿಂಗಳು ಆದಾಯದಲ್ಲಿ ಸ್ವಲ್ಪ ಕುಸಿತವನ್ನು ತರಬಹುದು. ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆ ನಿಮ್ಮ ಚಿಂತೆ ಹೆಚ್ಚಿಸುವುದು.

ಸೆಪ್ಟೆಂಬರ್ ತಿಂಗಳಲ್ಲಿ ನೀವು ಸ್ವಲ್ಪ ಪ್ರಯಾಣ ಮಾಡುವ ಅವಕಾಶವನ್ನು ಪಡೆಯುತ್ತೀರಿ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲು ನೀವು ಹೆಚ್ಚು ಗಮನಹರಿಸುತ್ತೀರಿ. ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮ ಮತ್ತು ಕೆಲಸದ ಒತ್ತಡವಿರಬಹುದು.

ಅಕ್ಟೋಬರ್ -ಡಿಸೆಂಬರ್

ಅಕ್ಟೋಬರ್ ತಿಂಗಳಿನಲ್ಲಿ ಆದಾಯ ಚೆನ್ನಾಗಿ ಹೆಚ್ಚಾಗುತ್ತದೆ. ನಿಮ್ಮ ಆತ್ಮವಿಶ್ವಾಸವು ಮರಳುತ್ತದೆ, ನಿಮ್ಮ ಪ್ರೀತಿಯ ಸಂಬಂಧವು ಗಾಢವಾಗುತ್ತದೆ. ಮದುವೆಗೆ ಸಂಬಂಧಿಸಿದ ಯಾವುದೇ ಶುಭ ಮಾಹಿತಿಯನ್ನು ಪಡೆಯಬಹುದು. ನೀವು ಅಧ್ಯಯನದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ನವೆಂಬರ್ ತಿಂಗಳಲ್ಲಿ, ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದಿದ್ದರೆ, ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಕುಸಿತ ಉಂಟಾಗಬಹುದು. ನಿಮ್ಮ ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಲಕ್ಷುರಿ ವಿಷಯಗಳಿಗೆ ಖರ್ಚು ಮಾಡುವುದನ್ನು ಬಿಡಿ. ವಿದೇಶ ಪ್ರವಾಸದ ಸಾಧ್ಯತೆಯೂ ಇದೆ.

ಡಿಸೆಂಬರ್ ತಿಂಗಳು ನಿಮಗೆ ಉತ್ತಮವಾಗಿರುತ್ತದೆ, ಈ ಸಮಯದಲ್ಲಿ ಆರೋಗ್ಯ ಸುಧಾರಿಸುತ್ತದೆ. ಸ್ಥಗಿತಗೊಂಡ ಕಾಮಗಾರಿಗಳು ಮತ್ತೆ ಪ್ರಾರಂಭವಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತಸ ಹೆಚ್ಚಾಗಲಿದೆ. ನಿಮ್ಮ ವ್ಯಾಪಾರವೂ ಬೆಳೆಯುತ್ತದೆ.

English summary

How 2023 Planet transit Affects on Libra In 2023

Planet transit Affects on Libra zodiac signs read on...
Story first published: Saturday, December 3, 2022, 13:24 [IST]
X
Desktop Bottom Promotion