For Quick Alerts
ALLOW NOTIFICATIONS  
For Daily Alerts

2023ರಲ್ಲಿ ಗ್ರಹಗಳ ಸಂಚಾರಗಳು ಮಕರ ರಾಶಿಯ ಮೇಲೆ ಬೀರಲಿದೆ ಈ ಪ್ರಭಾವ

|

ಮಕರ ರಾಶಿಯವರ ರಾಶಿಫಲ 2023 ರ ಪ್ರಕಾರ ನಿಮ್ಮ ರಾಶಿಯ ಅಧಿಪತಿಯಾಗಿರುವ ಶನಿ ನಿಮ್ಮ ಎರಡನೇ ಮನೆಯಲ್ಲಿರುತ್ತದೆ. ಶನಿಯು ನಿಮ್ಮ ಎರಡನೇ ಮನೆಯಲ್ಲಿ ಕುಳಿತಿರುವಾಗ, ಅಲ್ಲಿಂದ ಅದು ನಿಮ್ಮ ನಾಲ್ಕನೇ ಮನೆ, ಎಂಟನೇ ಮನೆ ಮತ್ತು ಹನ್ನೊಂದನೇ ಮನೆಯನ್ನು ನೋಡುತ್ತದೆ, ಇದರಿಂದಾಗಿ ಈ ಎಲ್ಲಾ ಮನೆಗಳು ಈ ವರ್ಷ ವಿಶೇಷವಾಗಿ ಪ್ರಭಾವ ಬೀರುತ್ತವೆ.

Capricorn horoscope

ಶನಿ-ಗುರುಗಳ ಪ್ರಭಾವ
ನಿಮ್ಮ ಮೂರನೇ ಮತ್ತು ಹನ್ನೆರಡನೆಯ ಮನೆಯ ಅಧಿಪತಿಯಾಗಿರುವ ಗುರುಗ್ರಹವು ಏಪ್ರಿಲ್ 22 ರಂದು ನಿಮ್ಮ ನಾಲ್ಕನೇ ಮನೆಗೆ ಪ್ರವೇಶಿಸುತ್ತದೆ. ಇಲ್ಲಿಂದ ಅದು ನಿಮ್ಮ ಎಂಟನೇ ಮನೆ, ಹತ್ತನೇ ಮನೆ ಮತ್ತು ಹನ್ನೆರಡನೇ ಮನೆಯನ್ನು ನೋಡುತ್ತದೆ. ಹೀಗಾಗಿ, ಶನಿ ಮತ್ತು ಗುರುಗಳ ದ್ವಿಸಂಕ್ರಮಣದಿಂದಾಗಿ, ನಿಮ್ಮ ಹನ್ನೊಂದನೇ ಮನೆ ಜನವರಿ ಮಧ್ಯದಿಂದ ಏಪ್ರಿಲ್ 22 ರವರೆಗೆ ತುಂಬಾನೇ ಪ್ರಭಾವ ಬೀರುತ್ತದೆ.

ಮಕರ ರಾಶಿ ವಾರ್ಷಿಕ ಭವಿಷ್ಯ: 2023ರಲ್ಲಿ ನಿಮ್ಮ ಭವಿಷ್ಯ ಹೇಗಿರಲಿದೆ?

ರಾಹು-ಕೇತು ಪ್ರಭಾವ

ವರ್ಷದ ಆರಂಭದಿಂದ ಅಕ್ಟೋಬರ್ 30 ರವರೆಗೆ, ರಾಹು ನಿಮ್ಮ ನಾಲ್ಕನೇ ಮನೆಯಲ್ಲಿ ಮೇಷ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ ಮತ್ತು ಅದರೊಂದಿಗೆ ಕೇತು ಮಕರ ರಾಶಿಯಲ್ಲಿ ಸಾಗುತ್ತಾನೆ. ಇದರ ನಂತರ ರಾಹು ನಿಮ್ಮ ಮೂರನೇ ಮನೆಯಲ್ಲಿ ಮತ್ತು ಕೇತು ನಿಮ್ಮ ಒಂಬತ್ತನೇ ಮನೆಯಲ್ಲಿ ಸಾಗುತ್ತದೆ

ಈ ವರ್ಷ, ಏಪ್ರಿಲ್ ತಿಂಗಳಲ್ಲಿ, ಸೂರ್ಯನು ಮೇಷ ರಾಶಿಗೆ ಸಮಚರಿಸಲಿದೆ. ಅಲ್ಲಿ ಈಗಾಗಲೇ ರಾಹು ನೆಲೆಸಿದ್ದಾನೆ ಮತ್ತು ಗುರು ಕೂಡ ಏಪ್ರಿಲ್ 22 ರಂದು ಈ ರಾಶಿಗೆ ಬರಲಿದೆ. ಈ ಒಂದು ತಿಂಗಳ ಅವಧಿಯು ತುಂಬಾನೇ ವಿಶೇಷವಾಗಿರುತ್ತದೆ. ಗುರು-ರಾಹುವಿನ ಚಂಡಾಲ ದೋಷವು ಮೇ ಮತ್ತು ಆಗಸ್ಟ್ 2023 ರ ನಡುವೆ ಮಕರ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ.

ಜನವರಿ-ಏಪ್ರಿಲ್
ಜನವರಿ ತಿಂಗಳು ನಿಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತದೆ ಎಂದು ಸೂಚಿಸುತ್ತಿದೆ, ಆದರೆ ಈ ಬದಲಾವಣೆಗಳು ಉತ್ತಮ ರೀತಿಯಲ್ಲಿ ಆಗಲಿದೆ. . ಆದಾಯದಲ್ಲಿ ಹೆಚ್ಚಳ ಮತ್ತು ಸಂಪತ್ತು ಸಂಗ್ರಹವಾಗುವ ಸಾಧ್ಯತೆ ಇರುತ್ತದೆ.

ಫೆಬ್ರವರಿ ತಿಂಗಳು ಕಾರು ಖರೀದಿಸುವ ಯೋಚನೆ ಮಾಡಬಹುದು. ಈ ತಿಂಗಳಿನಲ್ಲಿ ಸ್ನೇಹಿತರ ಜೊಎ ಮೋಜು-ಮಸ್ತಿಯಲ್ಲಿ ಕಳೆಯುತ್ತೀರಿ. ನಿಮ್ಮ ಕೆಲಸದ ಪ್ರದೇಶದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ.

ಮಾರ್ಚ್ ತಿಂಗಳಲ್ಲಿ ಕುಟುಂಬ ಜೀವನದಲ್ಲಿ ಸ್ವಲ್ಪ ಸಂತೋಷ ಇರುತ್ತದೆ. ತಾಯಿಯೊಂದಿಗೆ ಆತ್ಮೀಯತೆ ಹೆಚ್ಚಾಗುತ್ತದೆ. ಈ ಮೊದಲು ಖರೀದಿಸದಿದ್ದರೆ, ಈ ತಿಂಗಳು ನೀವು ಹೊಸ ವಾಹನವನ್ನು ಖರೀದಿಸಬಹುದು ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಈ ತಿಂಗಳಿನಲ್ಲಿ ಆದಾಯ ಚೆನ್ನಾಗಿರುತ್ತದೆ.

ಏಪ್ರಿಲ್ ತಿಂಗಳು ಒತ್ತಡದಿಂದ ಕೂಡಿರುತ್ತದೆ. ಕುಟುಂಬದಲ್ಲಿ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಮನೆಯಲ್ಲಿ ಕಲಹ ಉಂಟಾಗಬಹುದು. ತಾಯಿ ಮತ್ತು ತಂದೆಯ ಆರೋಗ್ಯದಲ್ಲೂ ಏರುಪೇರುಗಳಾಗಬಹುದು. ನೀವು ಸಂಯಮವನ್ನು ಅನುಸರಿಸದಿದ್ದರೆ, ನಿಮ್ಮ ಆರೋಗ್ಯವು ಸಂಪೂರ್ಣವಾಗಿ ಹಾಳಾಗಬಹುದು ಮತ್ತು ನೀವು ಹೃದಯ ಸಂಬಂಧಿ ಸಮಸ್ಯೆ ಅಥವಾ ಎದೆಗೂಡಿನ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಯಂತಹ ಕೆಲವು ಪ್ರಮುಖ ಕಾಯಿಲೆಯ ಹಿಡಿತದಲ್ಲಿರಬಹುದು.

ಮೇ-ಜೂನ್
ಮೇ ತಿಂಗಳಲ್ಲಿ ಉದ್ಯೋಗ ಬಡ್ತಿ ಪಡೆಯುವ ಸಾಧ್ಯತೆ ಇರುತ್ತದೆ. ಖರ್ಚು ಹೆಚ್ಚಾಗಲಿದೆ. ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ಬಯಸಿದರೆ ನಿಮ್ಮ ಕನಸು ನನಸಾಗಬಹುದು.

ಜೂನ್ ತಿಂಗಳಲ್ಲಿ ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜೀವನ ಸಂಗಾತಿಯೊಂದಿಗೆ ಶಾಪಿಂಗ್‌ನಲ್ಲಿ ನಿರತರಾಗಿರುತ್ತಾರೆ. ಮನೆಯಲ್ಲಿ ಸಮಾರಂಭವನ್ನು ಆಯೋಜಿಸಬಹುದು. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಕೆಲವು ಹೊಸ ಜನರೊಂದಿಗೆ ವ್ಯಾಪಾರ ಪಾಲುದಾರಿಕೆ ಇರಬಹುದು.

ಜುಲೈ-ಸೆಪ್ಟೆಂಬರ್
ಜುಲೈ ತಿಂಗಳಲ್ಲಿ ನಿರೀಕ್ಷಿತ ವೆಚ್ಚದಲ್ಲಿ ಹೆಚ್ಚಳ ಕಂಡುಬರಲಿದೆ. ಈ ಸಮಯದಲ್ಲಿ ಅಧ್ಯಯನದಲ್ಲಿ ಇಳಿಕೆ ಕಂಡುಬರಬಹುದು. ಪ್ರೇಮ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ತಿಂಗಳಾಗಿವೆ. ಈ ಸಮಯದಲ್ಲಿ, ಆರೋಗ್ಯ ಸಮಸ್ಯೆಗಳು ಹೆಚ್ಚು ತೊಂದರೆನೀಡಬಹುದು.

ಅಕ್ಟೋಬರ್- ಡಿಸೆಂಬರ್

ಅಕ್ಟೋಬರ್ ತಿಂಗಳು ಉತ್ತಮ ಯಶಸ್ಸನ್ನು ತರುತ್ತದೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ಕೆಲಸದಲ್ಲಿ ಇದ್ದ ಅಡೆತಡೆ ನಿವಾರಣೆಯಾಗುತ್ತದೆ. ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ. ಶಿಕ್ಷಣದಲ್ಲಿ ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಹೊಸ ಮನೆ ಅಥವಾ ವಾಹನವನ್ನು ಪಡೆಯುವ ಅವಕಾಶವಿದೆ.

ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ಅತ್ಯುತ್ತಮ ಪ್ರಗತಿಯನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಕೆಲಸದ ಪ್ರದೇಶದಲ್ಲಿ ನಿಮ್ಮ ಕೆಲಸದ ಕಾರಣದಿಂದಾಗಿ ನೀವು ಗುರುತಿಸಲ್ಪಡುತ್ತೀರಿ. ನಿಮ್ಮ ಹಿರಿಯ ಸಹೋದ್ಯೋಗಿಗಳಿಂದ ನೀವು ಮೆಚ್ಚುಗೆಯನ್ನು ಸಹ ಪಡೆಯುತ್ತೀರಿ. ಕುಟುಂಬದ ವಾತಾವರಣ ಶಾಂತಿಯುತವಾಗಿರುತ್ತದೆ.

ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಪ್ರೇಮ ಸಂಬಂಧಗಳು ಸಹ ಬಲವಾಗಿರುತ್ತವೆ. ಪ್ರಣಯ ಹೆಚ್ಚಲಿದೆ. ಸಂಗಾತಿಯೊಂದಿಗೆ ಆಪ್ತತೆ ಹೆಚ್ಚಲಿದೆ. ವ್ಯವಹಾರದಲ್ಲಿಯೂ ಯಶಸ್ಸಿನ ಅವಕಾಶಗಳು ಕಂಡುಬರುತ್ತವೆ.

English summary

How 2023 Planet transit Affects on Capricorn In 2023

Planet transit Affects on Capricorn zodiac signs read on...
X
Desktop Bottom Promotion