Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಎಲ್ಲಾ ಮಹಿಳೆಯರು ಹೋಳಿ ದಹನ ನೋಡುವಂತಿಲ್ಲ! ಏಕೆ
ಹೋಳಿಯು ತುಂಬಾ ಪವಿತ್ರವಾದ ಹಬ್ಬ. ಋಣಾತ್ಮಕತೆಯನ್ನು ತೊಲಗಿಸಿ ಒಳಿತನ್ನು ಸ್ವಾಗತಿಸುವುದೇ ಹೋಳಿಯ ವಿಶೇಷತೆ. ಹೋಳಿಯ ಹಬ್ಬದ ಮತ್ತೊಂದು ಭಾಗವೆಂದರೆ ಹೋಳಿಯ ದಹನ. ಇದನ್ನು ಪೂರ್ಣ ಚಂದಿರ ಕಾಣುವ ದಿನದಂದು ಅಂದರೆ ಈ ಬಾರಿ ಮಾರ್ಚ್ 7 ರಂದು ಈ ಬಾರಿ ಆಚರಣೆ ಮಾಡಲಾಗುತ್ತದೆ.

ಹೋಳಿಯ ದಹನ ಕಾರ್ಯಕ್ರಮ ಯಾವ ರೀತಿ ಇರುತ್ತದೆ? ಮಹಿಳೆಯರು ಹೋಳಿ ದಹನವನ್ನು ಯಾಕೆ ನೋಡಬಾರದು? ಹೋಳಿಯ ದಹನ ನೋಡುವುದರಿಂದ ಮಹಿಳೆಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನೋದನ್ನ ಹೇಳ್ತೀವಿ.
ಹೋಳಿ ದಹನ ಹೀಗಿರುತ್ತೆ
ಮೊದಲಿಗೆ ಹೋಳಿ ಪೈರನ್ನು ತಯಾರಿಸಬೇಕು. ಹೋಳಿ ಪೈರು ತಯಾರಿಸಲು ಬೆರಣಿ, ಕೊಂಬೆ ಹಾಗೂ ಒಣ ಎಲೆ ಬೇಕಾಗುತ್ತದೆ. ನಂತರ ರಾತ್ರಿ ಎಲ್ಲರೂ ಸೇರಿ ಅದನ್ನು ಸುಟ್ಟು ಹಾಕಿ ದೇವರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಭಾರತದ ಉತ್ತರ ಭಾಗದಲ್ಲಿ ಈ ಆಚರಣೆ ಹೆಚ್ಚಾಗಿದ್ದು ದಕ್ಷಿಣ ಭಾರತದಲ್ಲೂ ಕೆಲವು ಕಡೆ ಈ ಪದ್ಧತಿ ಇದೆ. ಇನ್ನೂ ಕರ್ನಾಟಕದ ವಿಚಾರಕ್ಕೆ ಬಂದ್ರೆ ಕರ್ನಾಟಕದ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರ ಈ ಆಚರಣೆ ಇದೆ.
ಹೋಳಿ ದಹನ ಒಂದು ಪವಿತ್ರ ಆಚರಣೆಯಾಗಿದ್ದು, ಇದು ಗ್ರಹಗಳ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಒಂದು ನಂಬಿಕೆಯ ಪ್ರಕಾರ ಹೋಳಿ ದಹನದ ದಿನ ದೇವತೆಗಳು ನಮಗೆ ಆಶೀರ್ವದಿಸುತ್ತಾರಂತೆ.
ಹೋಳಿ ದಹನವನ್ನು ಮಹಿಳೆಯರು ನೋಡಿದ್ರೆ ಏನಾಗುತ್ತೆ?
ಹೋಳಿ ದಹನ ಮಾಡುವ ಕಾರಣ ಏನೆಂದರೆ ಇದು ಒರ್ವ ವ್ಯಕ್ತಿಯ ಬಾಳನಲ್ಲಿರುವ ಋನಾತ್ಮಕತೆಯನ್ನು ತೆಗೆದು ಹಾಕುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಆದ್ರೆ ಅನೇಕ ಜನರಿಗೆ ಗೊತ್ತಿಲ್ಲದ ವಿಚಾರ ಅಂದ್ರೆ ಎಲ್ಲಾ ಮಹಿಳೆಯರು ಹೋಳಿ ದಹನ ಅಥವಾ ಪರಿಕ್ರಮದಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಭಾಗವಹಿಸಿದ್ದೇ ಆದರೆ ಅದರಿಂದಾಗುವ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತಂತೆ.
ನವ ವಿವಾಹಿತೆ ಹೋಳಿಯ ದಹನ ಕಾರ್ಯಕ್ರಮದಲ್ಲಿ ಭಾಗವಹಿಸೋ ಹಾಗಿಲ್ಲ. ಒಂದು ವೇಳೆ ಹೋಳಿ ದಹನವನ್ನು ನೋಡಿದ್ರೆ ಆದ್ರೆ ಇದು ಅವರ ಕುಟುಂಬದ ಮೇಲೆ ಪರಿಣಾಮ ಬೀರುತ್ತಂತೆ. ಗರ್ಭಿಣಿ ಮಹಿಳೆಯರು ಕೂಡ ಹೋಳಿ ದಹನ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ. ಇದರ ಪರಿಣಾಮವನ್ನು ಹೊಟ್ಟೆಯಲ್ಲಿರುವ ಮಗು ಅನುಭವಿಸಬೇಕಾಗುತ್ತಂತೆ. ಇಷ್ಟೆ ಅಲ್ಲದೇ ಅತ್ತೆ-ಸೊಸೆ ಜೊತೆಯಾಗಿ ಹೋಳಿ ದಹನ ಕಾರ್ಯಕ್ರಮ ನೋಡಬಾರದಂತೆ. ಒಂದು ವೇಳೆ ಒಟ್ಟಿಗೆ ಬೆಂಕಿ ಉರಿಯೋದನ್ನ ನೋಡಿದ್ರೆ ಇದು ಅವರಿಬ್ಬರ ಸಂಬಂಧದ ಮೇಲೆ ನೇರ ಪರಿಣಾಮ ಬೀರುತ್ತಂತೆ.
ಆದ್ದರಿಂದ ಯಾರೆಲ್ಲಾ ಈ ಗುಂಪಿಗೆ ಸೇರುತ್ತಿರೋ ಖಂಡಿತ ಅಂತಹ ಮಹಿಳೆಯರು ಹೋಳಿ ದಹನ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಡಿ.



Click it and Unblock the Notifications



