Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2023ರಲ್ಲಿ ಹೋಳಿ ಆಚರಣೆ ಯಾವಾಗ? ಈ ಆಚರಣೆ ಹಿಂದಿರುವ ಧಾರ್ಮಿಕ ಮಹತ್ವವೇನು?
ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲೊಂದು ಹೋಳಿ. ಬಣ್ಣದ ಓಕುಳಿಯ ಹಬ್ಬ ಹೋಳಿ. ಕೆಟ್ಟದ್ದರ ವಿರುದ್ಧ ಒಳ್ಳೆಯದು ವಿಜಯಿಸುತ್ತದೆ ಎಂಬುವುದರ ಸಂಕೇತವಾಗಿದೆ ಹೋಳಿ ಹಬ್ಬ.

ಹೋಳಿಯನ್ನು 2 ದಿನ ಆಚರಿಸಲಾಗುವುದು. ಮೊದಲ ದಿನ ಹೋಲಿಕಾ ದಹನ್ ಎಂದು ಆಚರಿಸಲಾಗುವುದು, ಮಾರನೇಯ ಹೋಳಿಯನ್ನು ಆಚರಿಸಲಾಗುವುದು. ಎಲ್ಲಾ ದ್ವೇಷ ಮರೆತು ಒಟ್ಟಾಗಿ ಹೋಳಿಯನ್ನು ಸಂಭ್ರಮಿಸಲಾಗುವುದು.
ಬಣ್ಣದ ನೀರಿನಲ್ಲಿ ಮಿಂದೇಳುತ್ತಾ ಖುಷಿಯಿಂದ ಕುಣಿದು ಕುಪ್ಪಳಿಸುತ್ತಾರೆ, ಬಣ್ಣವನ್ನು ಎರಚುತ್ತಾ ಖುಷಿಯಿಂದ ಆಚರಿಸುವ ಈ ಹಬ್ಬವೆಂದರೆ ಸಡಗರ-ಸಂಭ್ರಮ. ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಆಚರಿಸಲಿದ್ದೇವೆ. ಈ ವರ್ಷದಲ್ಲಿ ಯಾವ ದಿನದಂದು ಹೋಳಿ ಆಚರಿಸಲಾಗುವುದು, ಹೋಳಿ ಆಚರಣೆಯ ಪೂಜಾ ನಿಯಮಗಳೇನು ಎಂದು ತಿಳಿಯೋಣ ಬನ್ನಿ:
ಹೋಳಿ ಹಬ್ಬದಲ್ಲಿ ಹೋಲಿಕಾ ದಹನ್ ತುಂಬಾ ಮಹತ್ವವಾದದ್ದು, , ಹೋಲಿಕಾ ದಹನ್ ಮುಹೂರ್ತ:
ಡ್ರಿಕ್ ಪಂಚಾಂಗ ಪ್ರಕಾರ ಪೂರ್ಣಿಮಾ ತಿಥಿ ಪ್ರಾರಂಭ: ಮಾರ್ಚ್ 06 ಸಂಜೆ 04:17ಕ್ಕೆ
ಪೂರ್ಣಿಮಾ ತಿಥಿ ಮುಕ್ತಾಯ: ಮಾರ್ಚ್ 07 ಸಂಜೆ 06:09ಕ್ಕೆ
ದಹನದ ಸಮಯ (ಭದ್ರ ಪೂಂಜ್ ಸಮಯದಲ್ಲಿ ಹೋಲಿಕಾ ದಹನ ಮಾಡಲಾಗುವುದು): ಮಧ್ಯಾರಾತ್ರಿ 12:43ರಿಂದ 02:01ರವರೆಗೆ
ಹೋಲಿಕಾ ದಹನ ಆಚರಣೆ
* ಹೋಲಿಕಾ ದಹನದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಉಪವಾಸದ ಸಂಕಲ್ಪ ಮಾಡಲಾಗುವುದು.
* ಹೋಲಿಕಾ ದಹನ ಮಾಡುವ ಸ್ಥಳಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಕಟ್ಟಿಗೆ, ಹಸುವಿನ ಸೆಗಣಿ, ಒಣ ಮುಳ್ಳುಗಳು ಇತ್ಯಾದಿ ಅಗ್ಯತವಿರುವ ವಸ್ತುಗಳನ್ನು ಸಂಗ್ರಹಿಸಲಾಗುವುದು.
* ಈ ದಿನ ಭಕ್ತ ಪ್ರಹ್ಲಾದನ ಮೂರ್ತಿಯನ್ನು ಮಾಡಲಾಗುವುದು
* ರಾತ್ರಿ ಭಾದ್ರ ಪೂಂಚ್ ಸಮಯದಲ್ಲಿ ಹೋಲಿಕಾ ದಹನ ಮಾಡಲಾಗುವುದು.
* ಹೋಲಿಕಾ ದಹನ ಮಾಡಿದ ಬಳಿಕ ನರಸಿಂಹನ ನಾಮವನ್ನು ಪಠಿಸುತ್ತಾ ಪಂಚ ಧಾನ್ಯಗಳನ್ನು ಅಗ್ನಿಗೆ ಅರ್ಪಿಸಬೇಕು.
* ಹೋಲಿಕಾ ದಹನಕ್ಕೆ ಹಸುವಿನ ಸೆಗಣಿಯ ಬೆರಣಿ, ಬಾರ್ಲಿ, ಗೋಧಿಯನ್ನುಅರ್ಪಿಸಬೇಕು.
* ಕೊನೆಗೆ ಬಣ್ಣವನ್ನು ಅರ್ಪಿಸಲಾಗುವುದು.
ಹೋಲಿಕಾ ದಹನದಲ್ಲಿ ಬಳಸಿದ ವಸ್ತುಗಳು ದಹನವಾಗಿ ಬೂದಿಯಾದ ಬಳಿಕ ಆ ಬೂದಿಯಲ್ಲಿ ಸ್ವಲ್ಪ ತೆಗೆದುಕೊಂಡು ಬಂದು ದೇವರ ಕೋಣೆಯಲ್ಲಿ ಇಡಲಾಗುವುದು. ಈ ಬೂದಿ ಮನೆಗೆ ಶುಭ ತರುತ್ತದೆ ಎಂದು ನಂಬಲಾಗಿದೆ.
ಹೋಲಿಕಾ ದಹನದ ಮಹತ್ವವೇನು?
* ಹೋಲಿಕಾ ದಹದನ ನಂತರ ಚಂದ್ರನನ್ನು ನೋಡಿದರೆ ಕಷ್ಟಗಳೆಲ್ಲಾ ದೂರಾಗುವುದು ಎಂದು ಹೇಳಲಾಗುವುದು. ಆದ್ದರಿಂದ ಕುಟುಂಬ ಸಮೇತರಾಗಿ ಚಂದ್ರನನ್ನು ನೋಡುತ್ತಾರೆ. ಅಲ್ಲದೆ ಈ ರೀತಿ ಚಂದ್ರನನ್ನು ನೋಡುವುದರಿಂದ ಅಕಾಲಿಕ ಮರಣ ದೂರಾಗುವುದು ಎಂಬ ನಂಬಿಕೆ ಇದೆ.
ಹೋಳಿ
ಹೋಳಿ ಹಬ್ಬ ಅಂದರೆ ಬಣ್ಣ ಎರಚುವ ಆಟವನ್ನು ಮಾರ್ಚ್ 8ರಂದು ಆಡಲಾಗುವುದು.
ಹೋಳಿ ಆಚರಣೆಯ ಹಿಂದಿರುವ ಧಾರ್ಮಿಕ ಮಹತ್ವ
ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ಹೋಳಿಯು ಹೋಲಿಕಾ ಮತ್ತು ಪ್ರಹ್ಲಾದನ ಕಥೆ ಇದೆ. ಈ ದಿನ ಹೋಲಿಕಾಳು ಭಗವಾನ್ ಶ್ರೀ ವಿಷ್ಣುವಿನ ಪರಮ ಭಕ್ತನನ್ನು ಕೊಲ್ಲಲು ಬೆಂಕಿಯಲ್ಲಿ ಕುಳಿತಾಗ, ಶ್ರೀ ಹರಿಯ ಕೃಪೆಯಿಂದ ಪ್ರಹ್ಲಾದನಿಗೆ ಏನೂ ಆಗಲಿಲ್ಲ ಮತ್ತು ಅವನು ಸುರಕ್ಷಿತವಾಗಿ ಹೊರಬಂದನು ಆದರೆ ಹೋಲಿಕಾ ಅದೇ ಬೆಂಕಿಯಲ್ಲಿ ಬೂದಿಯಾದಳು ಎಂಬ ಪೌರಾಣಿಕ ಕತೆಯಿದೆ.
ಕೆಟ್ಟ ಆಲೋಚನೆಯ ಹೋಲಿಕಾ ದಹನವಾಗುತ್ತಾಳೆ,
ನರಸಿಂಹನಾಗಿರುವ ಪ್ರಹ್ಲಾದ ಬದುಕುತ್ತಾನೆ, ಆದ್ದರಿಂದ ಒಳ್ಳೆತನವಿದ್ದರೆ ಏನೇ ಕಷ್ಟಬಂದರೂ ಜಯಶೀಲರಾಗುತ್ತೀರಿ.
ಹೋಳಿ ಹಬ್ಬಕ್ಕೆ ಹೋಲಾಷ್ಟಕ ಎಂದು ಆಚರಿಸಲಾಗುವುದು, ಅದು ಫೆಬ್ರವರಿ 27ರಿಂದ ಪ್ರಾರಂಭವಾಗಿದೆ. ಈ 8 ದಿನಗಳ ಕಾಲ ಯಾವುದೇ ಶುಭ ಸಮಾರಂಭಗಳನ್ನು ನಡೆಸುವುದಿಲ್ಲ.



Click it and Unblock the Notifications

