Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
Hasta Nakshatra Prediction 2023: ಹಸ್ತ ನಕ್ಷತ್ರದವರಿಗೆ ಆರ್ಥಿಕ ಪ್ರಗತಿಯಾಗಲಿದೆ
ಹಸ್ತ ಆಕಾರದಲ್ಲಿ 5 ನಕ್ಷತ್ರಗಳಿಂದ ಕೂಡಿದ ಪುಂಜವೇ ಹಸ್ತ ನಕ್ಷತ್ರ. ಹಸ್ತಾ ನಕ್ಷತ್ರದ ದೇವತೆ ರವಿಗ್ರಹ. ಪಾಂಡವರಲ್ಲಿ ನಕುಲ ಸಹದೇವರು ಜನಿಸಿದ ನಕ್ಷತ್ರ ಆಗಿದೆ.
ಹಸ್ತಾ ನಕ್ಷತ್ರದವರ 2023ರ ಭವಿಷ್ಯ ನೋಡುವುದಾದರೆ:

ಹಸ್ತಾ ನಕ್ಷತ್ರ 2023ರ ಭವಿಷ್ಯಪ್ರಕಾರ ಕನ್ಯಾ ರಾಶಿ ಪದ 1ರಲ್ಲಿ ಜನಿಸಿದವರು ಈ ವರ್ಷ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಮಾನಸಿಕ ಒತ್ತಡ ತುಂಬಾನೇ ಕೆಟ್ಟ ಪರಿಣಾಮ ಬೀರಬಹುದು.
ಹಸ್ತಾ ನಕ್ಷತ್ರ ಪದ 2ರಲ್ಲಿ ಜನಿಸಿದವರು ಪ್ರಮುಖವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲದಿಂದ ಇರುತ್ತಾರೆ. ಹಸ್ತಾ ನಕ್ಷತ್ರ ಪದ 3ರಲ್ಲಿ ಇರುವವರಿಗೆ ಹೊಸ ವರ್ಷ ಅನುಕೂಲಕರವಾಗಿದೆ. ಹಸ್ತಾ ನಕ್ಷತ್ರ ಪದ 4ರಲ್ಲಿ ಇರುವ ವೃತ್ತಿ ಸಂಬಂಧಿಸಿದ ವಿಷಯದಲ್ಲಿ ಕೆಟ್ಟ ನಿರ್ಧಾರಗಳು ತೆಗೆದುಕೊಳ್ಳದಂತೆ ಎಚ್ಚರವಹಿಸಿ.
ಹಸ್ತ ನಕ್ಷತ್ರದವರಿಗೆ ಒಳ್ಳೆಯ ಹಾಗೂ ಕೆಟ್ಟ ತಿಂಗಳುಗಳು
ಜನವರಿ, ಏಪ್ರಿಲ್, ಜೂನ್, ಆಗಸ್ಟ್, ಅಕ್ಟೋಬರ್ ತಿಂಗಳು ನಿಮಗೆ ಒಳ್ಳೆಯದಿದೆ. ನವೆಂಬರ್ -ಡಿಸೆಂಬರ್ ತಿಂಗಳು ನಿಮಗೆ ಕೆಟ್ಟದಾಗಿರುವುದರಿಂದ ಈ ಅವಧಿಯಲ್ಲಿ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ, ತಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಫೆಬ್ರವರಿ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ.
ಹಸ್ತಾ ನಕ್ಷತ್ರದವರ ವೃತ್ತಿ ಜೀವನದ ಬಗ್ಗೆ ನೋಡುವುದಾದರೆ
ಈ ವರ್ಷ ನಿಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆಯನ್ನು ಕಾಣುವಿರಿ. ಆದರೆ ಮೇ-ಆಗಸ್ಟ್ ತಿಂಗಳವರೆಗೆ ಕಾಯಬೇಕಾಗುತ್ತದೆ. ಈ ತಿಂಗಳುಗಳ ಅವಧಿಯಲ್ಲಿ ನೀವು ಬಯಸಿದ ಫಲ ಸಿಗದೇ ಹೋಗಬಹುದು. ಉದ್ಯಮಿಗಳು ಹೊಸ ಯೋಜನೆಗೆ ಕೈ ಹಾಕುವ ಮುನ್ನ ಎರಡು ಬಾರಿ ಆಲೋಚನೆ ಮಾಡುವುದು ಒಳ್ಳೆಯದು. ನವೆಂಬರ್ ತಿಂಗಳಿನಲ್ಲಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಹಸ್ತಾ ನಕ್ಷತ್ರ ಆರ್ಥಿಕ ಜೀವನ ನೋಡುವುದಾದರೆ
ಈ ವರ್ಷ ಆರ್ಥಿಕವಾಗಿ ಬೆಳವಣಿಗೆಯಾಗಲು ಹಲವು ಅವಕಾಶಗಳನ್ನು ನೀಡಿದೆ, ಸೆಪ್ಟೆಂಬರ್‌ನಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ಹಲವಾರು ಅವಕಾಶಗಳು ದೊರೆಯಲಿದೆ. ಈ ಸಮಯದಲ್ಲಿ ನೀವು ಆನಂದದಿಂದ ಸಮಯ ಕಳೆಯುವಿರಿ. ನೀವು ಹೊಸ ಕೆಲಸ ಹಾಗೂ ಉದ್ಯೋಗಕ್ಕೆ ಕೈ ಹಾಕಬಹುದು.
ಹಸ್ತ ನಕ್ಷತ್ರ ಸಂಬಂಧ ಭವಿಷ್ಯ
ಸಂಬಂಧದ ವಿಷಯದಲ್ಲಿ ಈ ವರ್ಷ ಧನಾತ್ಮಕವಾಗಲಿದೆ. ಅವಾಹಿತರಿಗೆ ಹೊಸ ಸಂಬಂಧ ದೊರೆಯಲಿದೆ. ಸೆಪ್ಟೆಂಬರ್ ನಂತರ ಮದುವೆ ಮಾತುಕತೆಗೆ ಅನುಕೂಲಕರವಾಗಿದೆ. ವಿವಾಹಿತರು ತಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು.
ಹಸ್ತ ನಕ್ಷತ್ರ ಆರೋಗ್ಯ ಭವಿಷ್ಯ'
ಗ್ರಹಗಳ ಬಲ ಅನುಕೂಲಕರವಾಗಿರುವುದರಿಂದ ಆರೋಗ್ಯ ಚೆನ್ನಾಗಿರಲಿದೆ. ಜುಲೈ-ಸೆಪ್ಟೆಂಬರ್ ತಿಂಗಳಿನಲ್ಲಿ ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ, ಈ ಸಮಯದಲ್ಲಿ ಕೆಲ ಆರೋಗ್ಯ ಸಮಸ್ಯೆಗಳು ಕಾಡಬಹುದು. ಫಿಟ್ನೆಸ್ ಕಡೆ ಗಮನ ನೀಡಿ, ಆರೋಗ್ಯಕರ ಆಹಾರಕ್ರಮ ಸೇವಿಸಿ.



Click it and Unblock the Notifications











