Latest Updates
-
10 ನಿಮಿಷದ ಸಬ್ಜಿ.. ಕ್ಯಾಪ್ಸಿಕಂ ಇಷ್ಟಪಡದವರೂ ಫಿದಾ ಆಗ್ತಾರೆ! ಬೆರಳು ಚೀಪುವಷ್ಟು ರುಚಿ.. ಮಾಡೋದು ಹೇಗೆ? -
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು
Happy Independence Day: 76ನೇ ಸ್ವಾತಂತ್ರ್ಯ ದಿನಾಚರಣೆ: ದೇಶಭಕ್ತಿ ಸಾರುವ ವಿಶೇಷ ಶುಭಾಶಯಗಳು
ಭಾರತದ 2022ನೇ ಸಾಲಿನ ಆಗಸ್ಟ್ 15ರಂದು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಈ ವರ್ಷದ ವಿಶೇಷತೆ ಕೇಂದ್ರ ಸರ್ಕಾರದ "ಹರ್ ಘರ್ ತಿರಂಗಾ" ಅಭಿಯಾನ.
75ನೇ ವರ್ಷದ ಸ್ವಾತಂತ್ರೋತ್ಸವ ಸಂಪೂರ್ಣವಾಗಿ 76ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸುಸಂದರ್ಭದಲ್ಲಿ ಭಾರತದಲ್ಲಿ 'ಹರ್ ಘರ್ ತಿರಂಗಾ' ಅಭಿಯಾನ ಶುರುವಾಗಿದೆ. ಈ ಅಭಿಯಾನದಡಿ ಆಗಸ್ಟ್ 13, 14, 15ರಂದು ಎಲ್ಲಾ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಸಾಕಷ್ಟು ಹೋರಾಟದ ನಂತರ ಬ್ರಿಟೀಷರಿಂದ ಸಿಕ್ಕ ಸ್ವಾತಂತ್ರ್ಯದ ಮೌಲ್ಯ ದೇಶದ ಪ್ರತಿ ಪ್ರಜೆಗೂ ತಿಳಿದಿದೆ. ಇದಕ್ಕಾಗಿ, ದೇಶಕ್ಕಾಗಿ ಮಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ ನಾವೆಲ್ಲಾ ಹೆಮ್ಮೆ, ಗೌರವದಿಂದ ಸ್ವಾತಂತ್ರ್ಯ ದಿನವನ್ನು ಆಚರಿಸೋಣ.
ಸ್ವಾತಂತ್ರೋತ್ಸವದ ಈ ಶುಭ ಸಂದರ್ಭದಲ್ಲಿ ದೇಶಭಕ್ತಿ ಸಾರುವ ಅಪ್ಪಟ ದೇಶಪ್ರೇಮಿ ಕೋಟ್ಸ್‌ಗಳು, ವ್ಯಾಟ್ಸಪ್, ಫೇಸ್‌ಬುಕ್ ಸಂದೇಶಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಿದ್ದೇವೆ.
ಈ ಸಂದೇಶಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಮೂಲಕ ಈ ವರ್ಷದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸೋಣ.

ತ್ಯಾಗವನ್ನು ಸ್ಮರಿಸೋಣ
1. ನಮ್ಮ ದೇಶ ಈ ದಿನವನ್ನು ಆಚರಿಸಲು ಸಾವಿರಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು. ಅವರೆಲ್ಲರನ್ನು ಸ್ಮರಿಸುತ್ತಾ ಹೆಮ್ಮೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ.
ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು

ಯೋಧರಿಗೆ ಅರ್ಪಣೆ
2. ನಮ್ಮ ದೇಶಕ್ಕಾಗಿ ಈವರೆಗೂ ಮಡಿದ ಪ್ರತಿಯೊಬ್ಬ ಯೋಧನನ್ನೂ ನೆನೆಯುತ್ತಾ, ಈ ವರ್ಷದ ಸಾತಂತ್ರ್ಯ ದಿನವನ್ನು ಯೋಧರಿಗೆ ಅರ್ಪಿಸೋಣ.
ನಾಡಿನ ಸಮಸ್ತ ಜನತೆಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಐಕ್ಯತೆಯನ್ನು ರಕ್ಷಿಸುವ ಪ್ರತಿಜ್ಞೆ
3. ಈ ಸ್ವಾತಂತ್ರ್ಯ ದಿನ ನಮ್ಮ ರಾಷ್ಟ್ರದ ಮಹಾನ್ ನಾಯಕರ ಹೋರಾಟಕ್ಕೆ ಗೌರವಿಸುತ್ತಾ, ನಮ್ಮ ದೇಶದ ಶಾಂತಿ ಮತ್ತು ಐಕ್ಯತೆಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ಈ ವಿಶೇಷ ದಿನದಂದು ಹೊಸ ನಾಳೆಯ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇವೆ!
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಸ್ವಾತಂತ್ರ್ಯ ಜೀವನದ ಉಸಿರು
4. "ಯಾವುದೇ ಬೆಲೆಗೆ ಸ್ವಾತಂತ್ರ್ಯವು ಎಂದಿಗೂ ಪ್ರಿಯವಲ್ಲ, ಇದು ಜೀವನದ ಉಸಿರು. ಮನುಷ್ಯನು ಜೀವನಕ್ಕಾಗಿ ಏನನ್ನೂ ಪಾವತಿಸುವುದಿಲ್ಲ ನೆನಪಿರಲಿ". - ಮಹಾತ್ಮ ಗಾಂಧಿ
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಸ್ವಾತಂತ್ರ್ಯ ದೊಡ್ಡ ಪವಾಡ
5. ನಮಗೆ ದಕ್ಕಿರುವ ಸ್ವಾತಂತ್ರ್ಯವನ್ನು ಸಾಧ್ಯವಾಗಿಸಿದವರನ್ನು ಇಂದು ನಾವು ಗೌರವಿಸೋಣ. ಸ್ವಾತಂತ್ರ್ಯವನ್ನು ಪಡೆಯುವುದು ಕಷ್ಟ, ಆದರೆ ಅಷ್ಟು ಹೋರಾಟ ನಡೆಸಿ ಸಿಕ್ಕಿದ ಸ್ವಾತಂತ್ರ್ಯವನ್ನು ಅನುಭವಿಸಲು ನಾವೆಲ್ಲಾ ಆಶೀರ್ವದಿಸಲ್ಪಟ್ಟಿದ್ದೇವೆ. ನಮ್ಮ ದೇಶಕ್ಕಾಗಿ ಮಾಡಿದ ಎಲ್ಲವನ್ನೂ ಪ್ರಶಂಸಿಸೋಣ, ಸ್ವಾತಂತ್ರ್ಯ ಎಂಬ ದೊಡ್ಡ ಪವಾಡವನ್ನು ಆಚರಿಸೋಣ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಜವಾಬ್ದಾರಿ ನೆನಪಿನಲ್ಲಿರಲಿ
6. ಭಾರತದ ಪ್ರತಿಯೊಬ್ಬ ಪ್ರಜೆಯೂ ಒಬ್ಬ ಭಾರತೀಯ ಮತ್ತು ಅವನಿಗೆ ಈ ದೇಶದಲ್ಲಿ ಎಲ್ಲ ಹಕ್ಕಿದೆ. ಆದರೆ ಕೆಲವು ಕರ್ತವ್ಯಗಳು ಸಹ ಅವನ ಜವಾಬ್ದಾರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. -ಸರ್ದಾರ್ ವಲ್ಲಭಾಯ್ ಪಟೇಲ್
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಮನಸ್ಸಿನ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ
7. ಮನಸ್ಸಿನ ಸ್ವಾತಂತ್ರ್ಯವೇ ನಿಜವಾದ ಸ್ವಾತಂತ್ರ್ಯ. ಸರಪಳಿಯಲ್ಲಿಲ್ಲದಿದ್ದರೂ ಮನಸ್ಸು ಮುಕ್ತವಾಗಿರದ ವ್ಯಕ್ತಿ ಗುಲಾಮ, ಸ್ವತಂತ್ರ ಮನುಷ್ಯನಲ್ಲ.
ಯಾರ ಮನಸ್ಸು ಸ್ವತಂತ್ರವಾಗಿಲ್ಲ, ಅವನು ಜೈಲಿನಲ್ಲಿಲ್ಲದಿದ್ದರೂ ಖೈದಿಯೇ. ಜೀವಂತವಾಗಿದ್ದರೂ ಮನಸ್ಸು ಮುಕ್ತವಾಗಿಲ್ಲದವನು ಸತ್ತವರಿಗಿಂತ ಉತ್ತಮನಲ್ಲ. ಮನಸ್ಸಿನ ಸ್ವಾತಂತ್ರ್ಯವು ಒಬ್ಬರ ಅಸ್ತಿತ್ವದ ಪುರಾವೆಯಾಗಿದೆ. -ಡಾ. ಬಿ. ಆರ್ ಅಂಬೇಡ್ಕರ್
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಸ್ವಾತಂತ್ರ್ಯವನ್ನು ಸ್ವೀಕರಿಸುವುದಿಲ್ಲ
8. ನಾನು ಎಲ್ಲಿದ್ದರೂ ಯಾವಾಗಲೂ ಹೆಮ್ಮೆಯಿಂದ ಇರುತ್ತೇನೆ. ನಾನು ಮುಕ್ತ ದೇಶದಲ್ಲಿ ವಾಸಿಸುತ್ತಿದ್ದೇನೆ ಎಂದು ನನಗೆ ತಿಳಿದಿದೆ, ಅದಕ್ಕಾಗಿಯೇ ತಲೆ ಎತ್ತಿಕೊಂಡು ನಡೆಯುತ್ತೇನೆ. ದೇಶದ ಸ್ವಾತಂತ್ರ್ಯವನ್ನು ಹುತಾತ್ಮರ ರಕ್ತದಿಂದ ಖರೀದಿಸಿದ್ದು, ಅದನ್ನು ಅಷ್ಟು ಲಘುವಾಗಿ ನಾನು ಸ್ವೀಕರಿಸುವುದಿಲ್ಲ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಅಪ್ಪಟ ದೇಶಭಕ್ತ
9. ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ವೀರಯೋಧರು ವೈಯಕ್ತಿಕ ಕುಟುಂಬ, ಜೀವನ, ಪ್ರೀತಿ ಅಂತಿಮವಾಗಿ ತಮ್ಮ ಪ್ರಾಣವನ್ನೂ ತ್ಯಾಗ ಮಾಡಿದ್ದಾರೆ. ಈ ದೇಶದ ಸ್ವಾತಂತ್ರ್ಯದ ಬೆಲೆ ನನಗೆ ತಿಳಿದಿದೆ. ನಾನೊಬ್ಬ ಅಪ್ಪಟ ದೇಶಭಕ್ತ, ನನ್ನ ದೇಶ, ನನ್ನ ಹೆಮ್ಮೆ.
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ತಾಯ್ನಾಡಿಗಾಗಿ ಸೇವೆ
10. ನಿಮ್ಮ ದೇಹದಲ್ಲಿರುವ ರಕ್ತದಲ್ಲಿ ಕ್ರೋಧ ಇಲ್ಲವಾದರೆ ಅದು ರಕ್ತವಲ್ಲ, ಕೇವಲ ನರಗಳಲ್ಲಿ ಹರಿಯುತ್ತಿರುವ ನೀರಷ್ಟೇ. ಯುವಜನತೆ ತಾಯ್ನಾಡಿಗಾಗಿ ಸೇವೆ ಸಲ್ಲಿಸುವುದಿಲ್ಲ ಎಂದಾದರೆ ಅವರಲ್ಲಿರುವ ಚೈತನ್ಯ ಇದ್ದು ಏನು ಪ್ರಯೋಜನ?. - ಚಂದ್ರಶೇಖರ ಆಜಾದ್
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಶ್ರೀಮಂತ ರಾಷ್ಟ್ರ
11. ಭಾರತ ಬಹಳ ಶ್ರೀಮಂತ ರಾಷ್ಟ್ರ. ಈ ರಾಷ್ಟ್ರದಲ್ಲಿ ಪ್ರತಿಯೊಂದು ಧರ್ಮವು ತನ್ನ ನೆಲೆಯನ್ನು ಕಂಡುಕೊಳ್ಳಬಹುದಾಗಿದೆ. - ಅನ್ನಿ ಬೆಸೆಂಟ್
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ದೇಶಪ್ರೇಮ ಒಂದು ಧರ್ಮ
12. ದೇಶಪ್ರೇಮ ಎಂಬುದು ಒಂದು ಧರ್ಮ. ಧರ್ಮ ಎಂಬುದು ಭಾರತದ ಮೇಲಿನ ಪ್ರೀತಿ. - ಬಂಕಿಮ್ ಚಂದ್ರ ಚಟರ್ಜಿ
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ನೀವೇ ಗೆಲ್ಲುತ್ತೀರಿ
13. ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ನಂತರ ಅವರು ನಿಮ್ಮೊಂದಿಗೆ ಹೋರಾಡುತ್ತಾರೆ, ನಂತರ ನೀವೇ ಗೆಲ್ಲುತ್ತೀರಿ. -ಮಹಾತ್ಮ ಗಾಂಧಿ
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಯಶಸ್ಸು ನಿಮ್ಮ ನಡುವಿನ ಹೋರಾಟ
14. ಇತರರು ನಿಮಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಬೇಡಿ, ನಿಮ್ಮ ಸ್ವಂತ ದಾಖಲೆಗಳನ್ನು ಸೋಲಿಸಿದೈನಂದಿನ, ಏಕೆಂದರೆ ಯಶಸ್ಸು ನಿಮ್ಮ ನಡುವಿನ ಹೋರಾಟವಾಗಿದೆ. - ಚಂದ್ರಶೇಖರ್ ಆಜಾದ್
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು



Click it and Unblock the Notifications











