Latest Updates
-
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು
ವಿಶ್ವ ಅಪ್ಪಂದಿರ ದಿನಾಚರಣೆ 2024: ಅಪ್ಪನಿಗೆ ಮಗಳಿಂದ ವಿಶೇಷ ಶುಭಾಶಯ
ಅಪ್ಪನ ಬೆರಳ ತುದಿಯಲ್ಲಿ ಮಗಳ ಭರವಸೆ ಅಡಗಿರುತ್ತದೆ ಈ ಮಾತು ಅಕ್ಷರಶಹ ಸತ್ಯ. ಒಬ್ಬ ಮಾದರಿ ಹಾಗೂ ಉತ್ತಮ ಆದರ್ಶ ಇರುವ ಅಪ್ಪ ಎಂದಿಗೂ ಮಕ್ಕಳ ಭರವಸೆಯಾಗಿರುತ್ತಾರೆ. ಆದರೆ ಮಗಳಿಗೆ ಮಾತ್ರ ಅಪ್ಪ ಎಂದರೆ ಅದೇನೋ ವಿಶೇಷ ಕಾಳಜಿ, ಪ್ರೀತಿ, ಮಮತೆ ಎಲ್ಲವೂ. ಮಗಳಿಗೆ ತನ್ನ ಅಪ್ಪನ ಮೇಲಿರುವ ಈ ಪ್ರೀತಿಗೆ ಕಾರಣ ಗೊತ್ತಿಲ್ಲ, ಈ ಪ್ರೀತಿಯನ್ನು ವರ್ಣಿಸಲು ಸಹ ಅಸಾಧ್ಯ. ಈ ಬಾಂಧವ್ಯ ಅಪ್ಪ ಮತ್ತು ಮಗಳ ನಡುವಿಗೆ ಮಾತ್ರ ಸೀಮಿತವಾಗಿರುತ್ತದೆ.

2024ನೇ ಸಾಲಿನ ಜೂನ್ 16ರಂದು ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ದಿನದ ವಿಶೇಷ ಎಲ್ಲ ಹೆಣ್ಣು ಮಕ್ಕಳ ಹೆಮ್ಮೆಯ ಅಪ್ಪಂದಿರಿಗೆ ಈ ಶುಭಾಶಯಗಳು ಅರ್ಪಣೆ.

ಮಗಳನ್ನು ನೋಯಿಸದ ಏಕೈಕ ಪುರುಷ
ಹೆಣ್ಣು ಮಕ್ಕಳು ತಂದೆಯನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಈ ಪ್ರಪಂಚದಲ್ಲಿ ತನ್ನನ್ನು ನೋಯಿಸದ ಏಕೈಕ ಪುರುಷ ತಂದೆ ಮಾತ್ರ.
ನಲ್ಮೆಯ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು

ನಿಮ್ಮ ಕನಸುಗಳನ್ನು ಸಾಕಾರ ಮಾಡುವೆ
ಯಾರೂ ಕೊಡಲಾಗದ ಅತ್ಯುತ್ತಮ ಉಡುಗೊರೆಯನ್ನು ನೀವು ನನಗೆ ನೀಡಿದ್ದೀರಿ. ನೀವು ನಾನು ಬಯಸಿದಂತೆಯೇ ಇರುವ ಪ್ರೀತಿಯ ತಂದೆ, ನಾನು ನಿಮ್ಮ ಕನಸುಗಳನ್ನು ಸಾಕಾರ ಮಾಡುವ ನಲ್ಮೆಯ ಮಗಳಾಗಲು ಬಯಸುತ್ತೇನೆ.
ಪ್ರೀತಿಯ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು

ಹೃದಯಲ್ಲಿ ತಂದೆ ಜೀವನಪರ್ಯಂತ ಜೀವಂತ
ತಂದೆ ಮಗಳ ಕೈಯನ್ನು ಹಿಡಿಯುವುದು ಕೆಲವು ವರ್ಷಗಳು ಮಾತ್ರವೇ, ಆದರೆ ಅವಳ ಹೃದಯಲ್ಲಿ ಮಾತ್ರ ತಂದೆ ಜೀವನಪರ್ಯಂತ ಜೀವಂತ.
ಮುದ್ದಿನ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು

ನನ್ನ ಜೀವನದಲ್ಲಿ ಎಂದಿಗೂ ಮೊದಲಿಗನೇ!.
ಪ್ರೀತಿಯ ಅಪ್ಪ ಮುಂದೆ ಜೀವನದಲ್ಲಿ ನಾನು ಎಲ್ಲಿ ಹೋಗುತ್ತೇನೋ ಗೊತ್ತಿಲ್ಲ, ಆದರೆ ನೀನು ಮಾತ್ರ ನನ್ನ ಜೀವನದಲ್ಲಿ ಎಂದಿಗೂ ಮೊದಲಿಗನೇ!.
ಅಕ್ಕರೆಯ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು

ಮಾದರಿ ತಂದೆ
ತನ್ನ ತಂದೆಯನ್ನು ಮಾದರಿಯಾಗಿಟ್ಟುಕೊಂಡು ಇತರ ಪುರುಷರನ್ನು ತೀರ್ಮಾನಿಸುವಂಥ ತಂದೆ ನನ್ನವರಾಗಬೇಕು ಎಂಬುದು ಎಲ್ಲ ಹೆಣ್ಣು ಮಕ್ಕಳ ಆಸೆ.
ಪ್ರೀತಿಯ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು

ನೀನೇ ಪ್ರಪಂಚ
ಪ್ರೀತಿಯ ಅಪ್ಪ, ಇಡೀ ಪ್ರಪಂಚಕ್ಕೆ ನೀನು ತಂದೆ ಆದರೆ, ನಮ್ಮ ಇಡೀ ಕುಟುಂಬಕ್ಕೆ ನೀನೇ ಪ್ರಪಂಚ.
ನಲ್ಮೆಯ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು

ಧನ್ಯವಾದ ಪದ ಬಹಳ ಚಿಕ್ಕದು
ಅಪ್ಪಾ.... ನಿಮ್ಮ ಎಲ್ಲಾ ಪರಿಶ್ರಮ, ತ್ಯಾಗ ಹಾಗೂ ನೋವಿನ ಫಲವೇ ನಾನಿಂದು ಸಂತೋಷದಿಂದ, ನೆಮ್ಮದಿಯಾಗಿ ಜೀವನವನ್ನು ಅನುಭವಿಸಲು ಸಾಧ್ಯವಾಗಿದೆ. ನಿಮಗೆ ಧನ್ಯವಾದ ಎಂಬ ಹೇಳಿದರೆ ಪದ ಬಹಳ ಚಿಕ್ಕದು.
ಅಕ್ಕರೆಯ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು

ಈ ಕ್ಷಣದ ಸಂತೋಷಕ್ಕೆ ಕಾರಣ ನೀನು
ನನ್ನ ಇಂದಿನ ಈ ಕ್ಷಣದ ಸಂತೋಷಕ್ಕೆ ನೀನು ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣ ಅಪ್ಪಾ.
ಮುದ್ದು ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು

ಹಣೆಗೆ ಮತ್ತಿಟ್ಟ ಆ ದಿನ
ನನ್ನ ಜೀವನದ ಅತ್ಯುತ್ತಮ ದಿನ ಅಥವಾ ಘಳಿಗೆ ಎಂದರೆ ನೀನು ನನ್ನನ್ನು ಮೊದಲು ನಿನ್ನ ಅಂಗೈಗಳಲ್ಲಿ ಎತ್ತಿಕೊಂಡು ಹಣೆಗೆ ಮತ್ತಿಟ್ಟ ಆ ದಿನ.
ಅಪ್ಪಂದಿರ ದಿನದ ಶುಭಾಶಯಗಳು ಡಿಯರ್ ಡ್ಯಾಡಿ

ಅದ್ಭುತ ತಂದೆ
ಅತ್ಯುತ್ತಮ ಗುಣಗಳುಳ್ಳ ಪ್ರತಿ ಹೆಣ್ಣು ಮಗುವಿನ ಹಿಂದೆ ಒಬ್ಬ ಮಾದರಿ ಮತ್ತು ಅದ್ಭುತ ತಂದೆ ಇರುತ್ತಾರೆ.
ಪ್ರೀತಿಯ ಮಗಳಿಂದ ಅಪ್ಪಂದಿರ ದಿನದ ಶುಭಾಶಯಗಳು



Click it and Unblock the Notifications