Latest Updates
-
ದಕ್ಷಿಣ ದೆಹಲಿಯಲ್ಲಿ ಮದುವೆಗಳ ಅಬ್ಬರ: ಟ್ರಾಫಿಕ್ ಜಾಮ್ ತಪ್ಪಿಸಲು ಈ ಪ್ಲಾನ್ ಫಾಲೋ ಮಾಡಿ! -
ಹಕ್ಕಿ ಜ್ವರದ ಭೀತಿ: ಚಿಕನ್ ಮತ್ತು ಮೊಟ್ಟೆ ತಿನ್ನಬಹುದೇ? ಸುರಕ್ಷಿತವಾಗಿ ಸೇವಿಸಲು ಈ ನಿಯಮ ಪಾಲಿಸಿ -
ಬಿಗ್ ಬಾಸ್ ಕನ್ನಡ ಎಲಿಮಿನೇಷನ್: ವೋಟಿಂಗ್ ಟ್ರೆಂಡ್ನಲ್ಲಿ ಭಾರೀ ಬದಲಾವಣೆ, ಸುದೀಪ್ ಕ್ಲಾಸ್ನಲ್ಲಿ ಯಾರಿಗೆ ಶಾಕ್? -
ಶಬರಿಮಲೆ ಯಾತ್ರೆ: ಜನದಟ್ಟಣೆಯ ನಡುವೆ ಸುಲಭವಾಗಿ ಬೆಟ್ಟ ಹತ್ತುವುದು ಹೇಗೆ? ಇಲ್ಲಿದೆ ಸುರಕ್ಷಿತ ಪಾದಯಾತ್ರೆಯ ಟಿಪ್ಸ್ -
ನವೆಂಬರ್ 21ರ ಮದುವೆ ಸಂಭ್ರಮ: ಒತ್ತಡವಿಲ್ಲದೆ ಕಾರ್ಯಕ್ರಮ ನಿರ್ವಹಿಸಲು ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ಇಂದಿನ ಮೊಟ್ಟೆ ದರ ಎಷ್ಟು? ₹40ರಲ್ಲಿ ಸಿಗುವ ಬೆಸ್ಟ್ ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು -
ದೆಹಲಿಯಲ್ಲಿ ಕಳಪೆ ಗಾಳಿ: AQI ಹೆಚ್ಚಿದ್ದಾಗ ಹೊರಾಂಗಣ ವ್ಯಾಯಾಮ ಅಪಾಯ, ಮನೆಯಲ್ಲೇ ಫಿಟ್ ಆಗಿರುವುದು ಹೇಗೆ? -
ಮದುವೆ ಸೀಸನ್ ಶುರು: 2026ರ ಶುಭ ಮುಹೂರ್ತಗಳು ಮತ್ತು ಬಜೆಟ್ ಉಳಿತಾಯದ ಸೀಕ್ರೆಟ್ ಟಿಪ್ಸ್! -
ಈರುಳ್ಳಿ ಬೆಲೆ ಏರಿಕೆ ಚಿಂತೆಯೇ? ₹500ರ ಪ್ರೋಟೀನ್ ಬಾಸ್ಕೆಟ್ ಮತ್ತು ಈರುಳ್ಳಿ ಇಲ್ಲದ ಅಡುಗೆ ಟಿಪ್ಸ್ ಇಲ್ಲಿದೆ! -
ಕರ್ನಾಟಕದ ಚಳಿ: ಬೈಕ್-ಮೆಟ್ರೋ ಪ್ರಯಾಣದಲ್ಲಿ ಬೆಚ್ಚಗಿರಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್!
ಗುರು ಪೂರ್ಣಿಮಾ 2022: ಗುರುಗಳ ಕೃಪೆಗೆ ಪಾತ್ರರಾಗಲು ರಾಶಿಚಕ್ರದ ಪ್ರಕಾರ ಈ ಮಂತ್ರ ಪಠಿಸಿ
ಜೀವನಕ್ಕೆ ಗುರಿ ನಿಗದಿಗೊಳಿಸಿಕೊಳ್ಳಲು ಕಾರಣೀಭೂತರಾದ ನಮ್ಮ ಜೀವನದ ಪ್ರತ್ಯಕ್ಷ ದೈವ ಗುರು. ಗುರುಗಳು ನಮಗೆ ಶಿಕ್ಷಣ ನೀಡುವುದು ಮಾತ್ರವಲ್ಲ, ನಮ್ಮ ವ್ಯಕ್ತಿತ್ವ ರೂಪಿಸುತ್ತಾರೆ, ಸುಗಮ ಜೀವನಕ್ಕೆ ಅಡಿಪಾಯ ಹಾಕುತ್ತಾರೆ.
ಇಂಥಾ ಪ್ರತ್ಯಕ್ಷ ದೈವ ಗುರುಗಳನ್ನು ಪೂಜಿಸಲು, ಆರಾಧಿಸಲು, ಗೌರವಿಸಿ ನಮನಗಳನ್ನು ಸಲ್ಲಿಸಲು ಹಿಂದೂ ಸಂಪ್ರದಾಯದಲ್ಲಿ ಗುರು ಪೂರ್ಣಿಮಾವನ್ನು ಆಚರಿಸುತ್ತೇವೆ. ಈ ವರ್ಷ ಅಂದರೆ 2022ರಲ್ಲಿ ಜುಲೈ 13ರಂದು ಗುರು ಪೂರ್ಣಿಮಾ ಆಚರಿಸಲಾಗುತ್ತಿದೆ.
ಜ್ಯೋತಿಶಾಸ್ತ್ರದ ಪ್ರಕಾರ ಈ ವರ್ಷದ ಗುರು ಪೂರ್ಣಿಮೆಯಂದು ಯಾವ ರಾಶಿಯವರು ಯಾವ ಮಂತ್ರವನ್ನು ಹೇಳಿದರೆ ನಮಗೆ ಗುರುವಿನ ಆಶೀರ್ವಾದ ಸಿಗುತ್ತದೆ ಹಾಗೂ ಗುರುಗಳಿಗೆ ಯಾವ ಉಡುಗೊರೆ ಅಥವಾ ಯಾವ ಬಣ್ಣದ ವಸ್ತ್ರವನ್ನು ಅರ್ಪಿಸಿದರೆ ನಿಮಗೆ ಶುಭ ಪ್ರಾಪ್ತಿಯಾಗುತ್ತದೆ ಮುಂದೆ ತಿಳಿಸಲಿದ್ದೇವೆ:

ಮೇಷ ರಾಶಿ
ಮೇಷ ರಾಶಿಯವರು "ಅವಯ್ಯ ನಮಃ" ಎಂದು ಪಠಿಸಿದರೆ ಒಳ್ಳೆಯದಾಗುತ್ತದೆ. ನಿಮ್ಮ ಗುರುಗಳಿಗೆ ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಿ.

ವೃಷಭ ರಾಶಿ
ವೃಷಭ ರಾಶಿಯವರು 'ಓಂ ಜೀವಾಯ ನಮಃ'' ಎಂದು ಜಪಿಸಿದರೆ ಶುಭ ಪ್ರಾಪ್ತಿಯಾಗುತ್ತದೆ. ನಿಮ್ಮ ಶಿಕ್ಷಕರಿಗೆ ಬಿಳಿ ಬಣ್ಣದ ಬಟ್ಟೆಗಳನ್ನು ನೀಡಿ.

ಮಿಥುನ ರಾಶಿ
ಮಿಥುನ ರಾಶಿಯವರು 'ಓಂ ಧೀವರಾಯ ನಮಃ' ಎಂದು ಜಪಿಸಿ, ಹಸಿರು ಬಣ್ಣದ ಬಟ್ಟೆಗಳನ್ನು ನಿಮ್ಮ ಮಾರ್ಗದರ್ಶಕರಿಗೆ ಉಡುಗೊರೆ ನೀಡಿ.

ಕರ್ಕ ರಾಶಿ
ಕರ್ಕ ರಾಶಿಯವರು "ಓಂ ವರಿಷ್ಠಾಯ ನಮಃ" ಎಂದು ಜಪಿಸಿದರೆ ಶುಭ. ಗುರುಗಳಿಗೆ ಕೆನೆ ಬಣ್ಣದ ಬಟ್ಟೆಗಳನ್ನು ಅರ್ಪಿಸಿ.

ಸಿಂಹ ರಾಶಿ
ಸಿಂಹ ರಾಶಿಯವರು "ಓಂ ಸ್ವರ್ಣಕಾಯಯ ನಮಃ" ಎಂದು ಜಪಿಸಿ. ಗುಲಾಬಿ ಬಣ್ಣದ ಬಟ್ಟೆಗಳನ್ನು ಗುರುಗಳಿಗೆ ಅರ್ಪಿಸಿ.

ಕನ್ಯಾ ರಾಶಿ
ಕನ್ಯಾ ರಾಶಿಯವರು "ಓಂ ಹರಾಯ ನಮಃ" ಎಂದು ಜಪಿಸಿ. ಶಿಕ್ಷಕರಿಗೆ ಹಸಿರು ಮತ್ತು ಹಳದಿ ಮಿಶ್ರ ಬಣ್ಣದ ಬಟ್ಟೆಗಳನ್ನು ಉಡುಗೊರೆ ನೀಡಿ.

ತುಲಾ ರಾಶಿ
ತುಲಾ ರಾಶಿಯವರು ''ಓಂ ವಿವಿಕ್ತಾಯ ನಮಃ" ಎಂದು ಜಪಿಸಿದರೆ ಒಳ್ಳೆಯದಾಗಲಿದೆ. ಗುರುಗಳಿಗೆ ಖಾದಿ ಬಟ್ಟೆಗಳನ್ನು ಅರ್ಪಿಸಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಗುರುಗಳ ಆಶೀರ್ವಾದಕ್ಕಾಗಿ "ಓಂ ಜೀವಾಯ ನಮಃ" ಎಂದು ಪಠಿಸಿ ಮತ್ತು ನಿಮ್ಮ ಗುರುಗಳಿಗೆ ಧೋತಿಯನ್ನು ಗೌರವ ಪೂರ್ವಕವಾಗಿ ನೀಡಿ.

ಧನು ರಾಶಿ
ಧನು ರಾಶಿಯವರಿಗೆ "ಓಂ ಜೆಟ್ರೆ ನಮಃ" ಎಂದು ಜಪಿಸಿ, ನಿಮ್ಮ ಗುರುಗಳಿಗೆ ದುಬಾರಿಯಾದರೂ ಚಿನ್ನವನ್ನು ಅರ್ಪಿಸಿದರೆ ನಿಮಗೆ ಶೈಕ್ಷಣಿಕ ಜೀವನ ಚೆನ್ನಾಗಿರಲಿದೆ.

ಮಕರ ರಾಶಿ
ಮಕರ ರಾಶಿಯವರು "ಓಂ ಗುಣಿಯೇ ನಮಃ" ಎಂದು ಜಪಿಸಿ. ಪಂಚಧಾತು ಮತ್ತು ಯಾವುದೇ ಬಟ್ಟೆಯನ್ನು ಗುರುಗಳಿಗೆ ಅರ್ಪಿಸಿ.

ಕುಂಭ ರಾಶಿ
ಕುಂಭ ರಾಶಿಯವರು "ಓಂ ಧಿವರಾಯ ನಮಃ" ಎಂದು ಜಪಿಸಿದರೆ ಉತ್ತಮವಾಗಲಿದೆ. ಉಣ್ಣೆಯ ಬಟ್ಟೆಗಳನ್ನು ಶಿಕ್ಷಕರಿಗೆ ಉಡುಗೊರೆ ನೀಡಿ.

ಮೀನ ರಾಶಿ
ಮೀನ ರಾಶಿಯವರು "ಓಂ ದಯಾಸರಾಯ ನಮಃ" ಎಂದು ಜಪಿಸಿ ಮತ್ತು ನಿಮ್ಮ ಗುರುಗಳಿಗೆ ನೀಲಿ ಬಣ್ಣದ ಬಟ್ಟೆಗಳನ್ನು ಅರ್ಪಿಸಿ.



Click it and Unblock the Notifications
