Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಶುಕ್ರವಾರ ಲಕ್ಷ್ಮಿ ಪೂಜೆ ಮಾಡುವಾಗ ಈ ತಪ್ಪುಗಳಾಗದಂತೆ ಎಚ್ಚರವಹಿಸಿ
ಶುಕ್ರವಾರ ಲಕ್ಷ್ಮಿಯನ್ನು ಆರಾಧಿಸುವುದರಿಂದ ಲಕ್ಷ್ಮಿ ಕೃಪೆ ಸಿಗುವುದು. ಈ ದಿನದಂದು ಲಕ್ಷ್ಮಿಯನ್ನು ನಿಯಮಗಳ ಪ್ರಕಾರ ಪೂಜಿಸಬೇಕು. ಲಕ್ಷ್ಮಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
ಲಕ್ಷ್ಮಿ ಪೂಜೆಯಲ್ಲಿ ತಪ್ಪಾದರೆ ಲಕ್ಷ್ಮಿಗೆ ಕೋಪ ಬರುತ್ತದೆ, ಇದರಿಂದ ಪೂಜೆಯ ಫಲ ಸಿಗುವಿದಿಲ್ಲ ಎಂದು ಹೇಳಲಾಗುವುದು.
ಲಕ್ಷ್ಮಿ ಪೂಜೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು? ಲಕ್ಷ್ಮಿಯ ಪೂಜೆಯ ವಿಧಗಳೇನು ಎಂದು ನೋಡೋಣ:
ಲಕ್ಷ್ಮಿ ಪೂಜೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ:
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು ಒಪ್ಪವಾಗಿ ಇಟ್ಟುಕೊಳ್ಳಬೇಕು. ಅಡುಗೆ ಮನೆಯನ್ನು ಸ್ವಚ್ಛವಾಗಿಡಬೇಕು, ಒಡೆದ ಪಾತ್ರೆಗಳು ಅಡುಗೆ ಮನೆಯಲ್ಲಿ ಇರಬಾರದು. ಇಲ್ಲದಿದ್ದರೆ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಕೃಪೆ ಸಿಗಲ್ಲ.
* ನಡೆಯುವಾಗ ಜೋರು ಪಾದ ಶಬ್ದ ಮಾಡಿ ನಡೆಯಬಾರದು. ಹೀಗೆ ನಡೆಯುವುದು ಶುಭವಲ್ಲ. ಇನ್ನು ಕೆಲವರಿಗೆ ಉಗುರು ಕಚ್ಚುವ ಅಭ್ಯಾಸವಿರುತ್ತದೆ, ಈ ಕೆಟ್ಟ ಅಭ್ಯಾಸದಿಂದ ವ್ಯಕ್ತಿಯ ಗೌರವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು.
* ಮನೆಯಲ್ಲಿ ಅಲ್ಲಲ್ಲಿ ಬೂಟು, ಚಪ್ಪಲಿ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ಮನೆಗೆ ನುಗ್ಗುತ್ತದೆ. ಈ ಕಾರಣದಿಂದಾಗಿ, ಮಾಡಿದ ಕೆಲಸವು ಹಾಳಾಗಲು ಪ್ರಾರಂಭಿಸುತ್ತದೆ.

ಶುಕ್ರವಾರ ಲಕ್ಷ್ಮಿ ಪೂಜೆ ಹೇಗೆ ಮಾಡಬೇಕು?
* ಶುಕ್ರವಾರದಂದು ಸ್ತ್ರೀಯರು ಬ್ರಹ್ಮಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು.
* ದೇವರ ಕೋಣೆ ಮತ್ತು ಇಡೀ ಮನೆಯನ್ನು ಸ್ವಚ್ಛಗೊಳಿಸಿ. ಇದರ ನಂತರ, ಲಕ್ಷ್ಮಿ ದೇವಿಯನ್ನು ಧ್ಯಾನಿಸುವಾಗ, ಉಪವಾಸ ಮಾಡಬೇಕು.
* ದೇವರಿಗೆ ಹಣ್ಣುಗಳನ್ನು ಅರ್ಪಿಸಿ, ನೈವೇದ್ಯ ಅರ್ಪಿಸಿ.
* ಸಂಜೆ ಮತ್ತೆ ಸ್ನಾನ ಮಾಡಿ ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡಿ.
* ಹಲಗೆ ಮೇಲೆ ಕೆಂಪು ಬಟ್ಟೆ ಹಾಸಿ ಅದರಲ್ಲಿ ಲಕ್ಷ್ಮಿ ಫೋಟೋ ಇಟ್ಟು ಅವಳನ್ನು ಪ್ರತಿಷ್ಠಾಪಿಸಿ ನಂತರ ಪೂಜೆ ಪ್ರಾರಂಭಿಸಿ.
* ಕಳಸ ಇಟ್ಟು ಪೂಜಿಸಿ.
* ಲಕ್ಷ್ಮಿ ಮಂತ್ರಗಳನ್ನು ಪಠಿಸಿ.



Click it and Unblock the Notifications
