Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಟೋಬರ್ 2022: ಈ ಮಾಸದಲ್ಲಿರುವ ಪ್ರಮುಖ ಹಬ್ಬ ಹಾಗೂ ವ್ರತಗಳ ಸಂಪೂರ್ಣ ಮಾಹಿತಿ
ವರ್ಷದ ಪ್ರತಿಯೊಂದು ತಿಂಗಳೂ ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅದೇ ರೀತಿ ಅಕ್ಟೋಬರ್ ಸಹ. ಈ ತಿಂಗಳು ಧಾರ್ಮಿಕ ದೃಷ್ಟಿಯಿಂದ ಹೆಚ್ಚು ಮಹತ್ವ ಹೊಂದಿದ್ದು, ಹಿಂದೂಗಳ ಬಹುಮುಖ್ಯ ಹಬ್ಬ ದೀಪಾವಳಿ ಸಹಿತ ಅನೇಕ ಹಬ್ಬಗಳನ್ನು ಹೊಂದಿದೆ. ಹಾಗಾದರೆ, ಬನ್ನಿ ಅಕ್ಟೋಬರ್ ತಿಂಗಳಲ್ಲಿ ಇರುವ ಹಬ್ಬಗಳು ಹಾಗೂ ವೃತಗಳು ಯಾವುವು ಎಂಬುದನ್ನು ನೋಡೋಣ.

2022ರ ಅಕ್ಟೋಬರ್‌ನಲ್ಲಿರುವ ಹಬ್ಬಗಳು ಹಾಗೂ ವ್ರತಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅಕ್ಟೋಬರ್ 3 ದುರ್ಗಾಷ್ಟಮಿ :
ಪ್ರತಿ ತಿಂಗಳು ಬರುವ ಅಷ್ಟಮಿ ತಿಥಿ ಬಹಳ ವಿಶೇಷವಾಗಿದ್ದರೂ ನವರಾತ್ರಿಯಲ್ಲಿ ಬರುವ ದುರ್ಗಾ ಅಷ್ಟಮಿ ತಿಥಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಈ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ ಮತ್ತು ಕನ್ಯಾ ಪೂಜೆಯನ್ನು ಸಹ ಮಾಡಲಾಗುತ್ತದೆ. ಇದಲ್ಲದೆ, ಈ ದಿನ, ತಾಯಿ ದುರ್ಗೆಗೆ ಸಿಹಿತಿಂಡಿಗಳನ್ನು ನೀಡಲಾಗುತ್ತದೆ.

ಅಕ್ಟೋಬರ್ 4 ಮಹಾನವಮಿ ಪೂಜೆ:
ಮಹಾನವಮಿಯಂದು ದುರ್ಗೆಯ ಸಿದ್ಧಿದಾತ್ರಿ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಹೆಣ್ಣು ಮಗುವಿಗೆ ಪೂಜೆ ಸಲ್ಲಿಸಿ ಉಪವಾಸ ಆಚರಿಸುತ್ತಾರೆ. ಹೆಣ್ಣು ಮಗು ದೇವಿಯ ಸ್ವರೂಪ. ಆಕೆಯನ್ನು ಪೂಜಿಸಿ, ಭಾಗಿನ ಕೊಡುವುದರಿಂದ ಒಳ್ಳೆಯದಾಗುವುದು ಎಂಬ ನಂಬಿಕೆ.

ಅಕ್ಟೋಬರ್ 5 ವಿಜಯದಶಮಿ:
ಒಂಬತ್ತು ದಿನಗಳ ನವರಾತ್ರಿ ಹಬ್ಬವೂ, ವಿಜಯದಶಮಿಯ ಮೂಲಕ ಅಂತ್ಯಗೊಳ್ಳುವುದು. ನಂಬಿಕೆಗಳ ಪ್ರಕಾರ, ಈ ದಿನ ರಾಮನು ರಾವಣನನ್ನು ಕೊಂದು ಲಂಕೆಯನ್ನು ವಶಪಡಿಸಿಕೊಂಡನು. ಈ ಕಾರಣಕ್ಕಾಗಿ ಈ ದಿನವನ್ನು ವಿಜಯದಶಮಿ ಎಂದು ಕರೆಯುತ್ತಾರೆ. ಜೊತೆಗೆ ಇದೇ ದಿನ ದುರ್ಗಾ ಮಾತೆ ಮಹಿಷಾಸುರನನ್ನು ಕೊಂದಳು ಎಂಬ ಇನ್ನೊಂದು ಕಥೆಯೂ ಇದೆ.

ಅಕ್ಟೋಬರ್ 6 ಪಾಪಾಂಕುಶ ಏಕಾದಶಿ:
ವಿಷ್ಣುವಿಗೆ ಮೀಸಲಾಗಿರುವ ಏಕಾದಶಿ ದಿನದಂದು ಉಪವಾಸ ಆಚರಿಸಿ, ಆರಾಧಿಸಿದರೆ ನಿಮ್ಮ ಪಾಪಾಗಳೆಲ್ಲವೂ ಕಳೆದು, ಮೋಕ್ಷ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ. ಇದಕ್ಕಾಗಿ ಹೆಚ್ಚಿನವರು ಈ ದಿನ ಉಪವಾಸವಿದ್ದು, ಮರುದಿನ ಬೆಳಗ್ಗೆ ತಮ್ಮ ಉಪವಾಸವನ್ನು ಮುರಿಯುತ್ತಾರೆ.

ಅಕ್ಟೋಬರ್ 9 ಶರದ್ ಪೂರ್ಣಿಮಾ:
ಹಿಂದೂ ಕ್ಯಾಲೆಂಡರ್ ಪ್ರಕಾರ, ಶರದ್ ಪೂರ್ಣಿಮಾವನ್ನು ಅಶ್ವಿನಿ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಚಂದ್ರ ದೇವರನ್ನು ಪೂಜಿಸುವುದರಿಂದ ವಿಶೇಷ ಲಾಭಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಜೊತೆಗೆ ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನವು ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಕಾರ್ತಿಕ ಮಾಸದ ಪ್ರಾರಂಭವೂ ಆಗಲಿದೆ.

13 ಅಕ್ಟೋಬರ್ ಕರ್ವಾ ಚೌತ್:
ನಮ್ಮಲ್ಲಿ ಈ ಹಬ್ಬದ ಆಚರಣೆಯು ಇಲ್ಲದೇ ಇದ್ದರೂ, ಉತ್ತರ ಭಾರತದ ಕಡೆಗೆ ಹೆಚ್ಚಾಗಿ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ವರ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಈ ಉಪವಾಸವನ್ನು ಆಚರಿಸುತ್ತಾರೆ. ಈ ಬಾರಿ ಕರ್ವಾ ಚೌತ್ ಉಪವಾಸವನ್ನು ಅಕ್ಟೋಬರ್ 13 ರಂದು ಆಚರಿಸಲಾಗುತ್ತದೆ. ಸಂಜೆ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರವೇ ಈ ಉಪವಾಸವನ್ನು ಮುರಿಯುತ್ತಾರೆ.

17 ಅಕ್ಟೋಬರ್ ಅಹೋಯಿ ಅಷ್ಟಮಿ:
ಈ ಬಾರಿಯ ಅಹೋಯಿ ಉಪವಾಸವನ್ನು ಅಕ್ಟೋಬರ್ 17 ರಂದು ನಡೆಸಲಾಗುತ್ತದೆ. ಈ ಉಪವಾಸವನ್ನು ಕಾರ್ತಿಕ ಮಾಸದ ಅಷ್ಟಮಿಯಂದು ಆಚರಿಸಲಾಗುತ್ತದೆ. ಮಹಿಳೆಯರು ತಮ್ಮ ಮಕ್ಕಳ ಸಂತೋಷ, ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ಈ ಉಪವಾಸವನ್ನು ಆಚರಿಸುತ್ತಾರೆ. ಈ ದಿನ ಮಾತಾ ಅಹೋಯಿಯನ್ನು ಪೂಜಿಸಲಾಗುತ್ತದೆ. ತುಲಾ ಸಂಕ್ರಾಂತಿಯೂ ಸಹ ಇದೇ ದಿನ ಬರಲಿದೆ.

ಅಕ್ಟೋಬರ್ 23 ಧನ್ತೇರಸ್:
ಧನತ್ರಯೋದಶಿಯನ್ನು ಧನ್ತೇರಸ್ ಎಂದೂ ಕರೆಯುತ್ತಾರೆ. ಐದು ದಿನಗಳ ದೀಪಾವಳಿ ಹಬ್ಬದ ಮೊದಲ ದಿನ. ಧನತ್ರಯೋದಶಿಯ ದಿನದಂದು ಲಕ್ಷ್ಮಿ ದೇವಿಯು ಕ್ಷೀರ ಸಮುದ್ರ ಮಂಥನದ ಸಮಯದಲ್ಲಿ ಸಾಗರದಿಂದ ಹೊರಬಂದಳು. ಆದ್ದರಿಂದ, ಸಂಪತ್ತಿನ ದೇವರಾಗಿರುವ ಭಗವಾನ್ ಕುಬೇರನ ಜೊತೆಗೆ ಲಕ್ಷ್ಮಿ ದೇವಿಯನ್ನು ತ್ರಯೋದಶಿಯ ಶುಭ ದಿನದಂದು ಪೂಜಿಸಲಾಗುತ್ತದೆ. ಆದಾಗ್ಯೂ, ಧನತ್ರಯೋದಶಿಯ ಎರಡು ದಿನಗಳ ನಂತರ ಅಮವಾಸ್ಯೆಯಂದು ಲಕ್ಷ್ಮಿ ಪೂಜೆ ಹೆಚ್ಚು ಮಹತ್ವದ್ದಾಗಿದೆ.

ಅಕ್ಟೋಬರ್ 24 ದೀಪಾವಳಿ, ಲಕ್ಷ್ಮೀ ಪೂಜೆ:
ದೀಪಾವಳಿ ದೀಪಗಳ ಹಬ್ಬ. ದೀಪಾವಳಿಯು ಕತ್ತಲೆಯ ವಿರುದ್ಧ ಬೆಳಕಿನ ವಿಜಯದ ಸಂಕೇತ. ನಂಬಿಕೆಗಳ ಪ್ರಕಾರ, ದೀಪಾವಳಿಯ ದಿನದಂದು ರಾಮನು ರಾವಣನನ್ನು ಕೊಂದು, 14 ವರ್ಷಗಳ ವನವಾಸದ ನಂತರ ತಾಯಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಯನ್ನು ತಲುಪಿದನು ಎನ್ನಲಾಗುತ್ತದೆ. ಜೊತೆಗೆ ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ.

ಅಕ್ಟೋಬರ್ 26 ಗೋವರ್ಧನ ಪೂಜೆ :
ಈ ಬಾರಿ ಗೋವರ್ಧನ ಪೂಜೆ ಅಕ್ಟೋಬರ್ 26 ರಂದು ಬಂದಿದ್ದು, ಈ ದಿನ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಭಗವಾನ್ ಕೃಷ್ಣನು ಇಂದ್ರದೇವನನ್ನು ಸೋಲಿಸಿದನು ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದು ದೀಪಾವಳಿಯ ಕೊನೆಯ ದಿನದಂದು ಬರುವುದು.



Click it and Unblock the Notifications