February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?

ವರ್ಷದಲ್ಲಿ ಅತೀ ಕಡಿಮೆ ದಿನಾಂಕಗಳನ್ನು ಹೊಂದಿರುವ ತಿಂಗಳೆಂದರೆ ಅದು ಫೆಬ್ರವರಿ. ಈ ಫೆಬ್ರವರಿ ತಿಂಗಳಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ

ಮೇಷ ರಾಶಿ

ಆರೋಗ್ಯದ ವಿಷಯದಲ್ಲಿ, ಈ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ದೈನಂದಿನ ದಿನಚರಿಯನ್ನು ನೀವು ವ್ಯವಸ್ಥಿತವಾಗಿರಿಸಿಕೊಳ್ಳುವುದು ಉತ್ತಮ. ಅಲ್ಲದೆ, ಊಟೋಪಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಈ ತಿಂಗಳು ಬಹಳ ಮಹತ್ವದ್ದಾಗಿದೆ. ನೀವು ಬಯಸಿದ ಉದ್ಯೋಗವನ್ನು ಪಡೆಯಬಹುದು. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಯೋಚಿಸುತ್ತಿದ್ದರೆ ಅದು ಕೂಡ ಸಾಧ್ಯವಾಗುವುದು. ಆರ್ಥಿಕ ದೃಷ್ಟಿಯಿಂದ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ. ನೀವು ನೋಡಿಕೊಂಡು ಖರ್ಚು ಮಾಡಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ.

ರಾಶಿಚಕ್ರದ ಅಂಶ: ಬೆಂಕಿ

ರಾಶಿ ಅಧಿಪತಿ: ಮಂಗಳ

ಅದೃಷ್ಟದ ಸಂಖ್ಯೆಗಳು: 7, 10, 29, 34, 47, 58

ಅದೃಷ್ಟದ ದಿನಗಳು: ಸೋಮವಾರ, ಭಾನುವಾರ, ಮಂಗಳವಾರ, ಶನಿವಾರ

ಅದೃಷ್ಟದ ಬಣ್ಣಗಳು: ಗುಲಾಬಿ, ಗಾಢ ಹಳದಿ, ಕೆಂಪು, ಆಕಾಶ ನೀಲಿ

ವೃಷಭ ರಾಶಿ

ವೃಷಭ ರಾಶಿ

ಕೆಲಸದ ವಿಷಯದಲ್ಲಿ ನೋಡುವುದಾದರೆ ಫೆಬ್ರವರಿ ತಿಂಗಳು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನೀವು ಕೆಲಸ ಮಾಡಿದರೆ, ಕಚೇರಿಯಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ವ್ಯಾಪಾರಿಗಳು ಅನೇಕ ಸಣ್ಣ ಪ್ರಯೋಜನಗಳನ್ನು ಹೊಂದಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಈ ಅವಧಿಯಲ್ಲಿ, ನಿಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮವನ್ನು ಆಯೋಜಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ತಿಂಗಳ ಕೊನೆಯಲ್ಲಿ ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ರಾಶಿಚಕ್ರದ ಅಂಶ: ಭೂಮಿ

ರಾಶಿ ಅಧಿಪತಿ: ಶುಕ್ರ

ಅದೃಷ್ಟದ ಸಂಖ್ಯೆಗಳು: 9, 11, 25, 36, 44, 53

ಅದೃಷ್ಟದ ದಿನಗಳು: ಮಂಗಳವಾರ, ಸೋಮವಾರ, ಬುಧವಾರ, ಭಾನುವಾರ

ಅದೃಷ್ಟದ ಬಣ್ಣಗಳು: ಹಸಿರು, ಗುಲಾಬಿ, ಕಿತ್ತಳೆ, ಕೆಂಪು, ಮರೂನ್

ಮಿಥುನ ರಾಶಿ

ಮಿಥುನ ರಾಶಿ

ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ, ಈ ಸಮಯದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ಶಿಕ್ಷಕರ ಮಾರ್ಗದರ್ಶನವೂ ಸಿಗಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಕಂಡುಬರಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ಬಗೆಹರಿಯುವ ಸಾಧ್ಯತೆಯಿದೆ. ನೀವು ಉದ್ಯೋಗದಲ್ಲಿದ್ದರೆ ಮತ್ತು ನಿಮ್ಮ ಪ್ರಸ್ತುತ ಕೆಲಸದ ಬಗ್ಗೆ ಅತೃಪ್ತರಾಗಿದ್ದರೆ, ಹೊಸ ಉದ್ಯೋಗವನ್ನು ಹುಡುಕಲು ಇದು ಸರಿಯಾದ ಸಮಯ. ಈ ಅವಧಿಯಲ್ಲಿ ವ್ಯಾಪಾರಸ್ಥರು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು, ನಿಮ್ಮ ಪ್ರಮುಖ ಕೆಲಸಗಳಿಗೆ ಅಡ್ಡಿ ಉಂಟಾಗಬಹುದು. ತಿಂಗಳ ಕೊನೆಯಲ್ಲಿ ನೀವು ಆರ್ಥಿಕ ನಷ್ಟವನ್ನು ಸಹ ಎದುರಿಸಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಹಳೆಯ ರೋಗವು ಕಾಣಿಸಿಕೊಳ್ಳಬಹುದು.

ರಾಶಿಚಕ್ರದ ಅಂಶ: ವಾಯು

ರಾಶಿ ಅಧಿಪತಿ: ಬುಧ

ಅದೃಷ್ಟದ ಸಂಖ್ಯೆಗಳು: 4, 8, 23, 30, 49, 52

ಅದೃಷ್ಟದ ದಿನಗಳು: ಶುಕ್ರವಾರ, ಬುಧವಾರ, ಶನಿವಾರ, ಸೋಮವಾರ

ಅದೃಷ್ಟದ ಬಣ್ಣಗಳು: ಕಿತ್ತಳೆ, ಹಳದಿ, ಗುಲಾಬಿ, ನೇರಳೆ, ಕೆನೆ

ಕರ್ಕ ರಾಶಿ

ಕರ್ಕ ರಾಶಿ

ನೀವು ವಿವಾಹಿತರಾಗಿದ್ದರೆ, ನಿಮ್ಮ ವೈವಾಹಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ನಿಮ್ಮ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಹಣದ ವಿಷಯದಲ್ಲಿ, ಈ ತಿಂಗಳು ನಿಮಗೆ ತುಂಬಾ ದುಬಾರಿಯಾಗಲಿದೆ.

ಈ ಅವಧಿಯಲ್ಲಿ ವೃತ್ತಿಪರರು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಆದರೆ ನೀವು ಎಲ್ಲಾ ಕಷ್ಟಗಳನ್ನು ಪೂರ್ಣ ಧೈರ್ಯದಿಂದ ಎದುರಿಸುತ್ತೀರಿ. ಈ ಅವಧಿಯಲ್ಲಿ ವ್ಯಾಪಾರಿಗಳು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ನೀವು ಈಗಾಗಲೇ ಕಾಯಿಲೆ ಹೊಂದಿದ್ದರೆ, ಈ ಅವಧಿಯಲ್ಲಿ ನಿಮ್ಮ ಸಮಸ್ಯೆಗಳು ಹೆಚ್ಚಾಗಬಹುದು. ನೀವು ಜಾಗರೂಕರಾಗಿರಿ.

ರಾಶಿಚಕ್ರದ ಅಂಶ: ನೀರು

ರಾಶಿ ಅಧಿಪತಿ: ಚಂದ್ರ

ಅದೃಷ್ಟದ ಸಂಖ್ಯೆಗಳು: 7, 14, 23, 34, 48, 55

ಅದೃಷ್ಟದ ದಿನಗಳು: ಸೋಮವಾರ, ಶನಿವಾರ, ಬುಧವಾರ, ಶುಕ್ರವಾರ

ಅದೃಷ್ಟದ ಬಣ್ಣಗಳು: ಬಿಳಿ, ಹಳದಿ, ಆಕಾಶ ನೀಲಿ, ಕಡು ಹಸಿರು, ಕೆಂಪು

ಸಿಂಹ ರಾಶಿ

ಸಿಂಹ ರಾಶಿ

ವ್ಯಾಪಾರಸ್ಥರು ಈ ತಿಂಗಳು ತಮ್ಮ ಪ್ರತಿ ಹೆಜ್ಜೆಯನ್ನು ಬಹಳ ಎಚ್ಚರಿಕೆಯಿಂದ ಇಡಬೇಕು. ಇಲ್ಲದಿದ್ದರೆ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಹೊಂದಾಣಿಕೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ. ನಿಮ್ಮ ಕಷ್ಟಗಳನ್ನು ಹೆಚ್ಚಿಸುವಂತಹ ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಸಾಲ ತೆಗೆದುಕೊಳ್ಳಲು ಅಥವಾ ಎರವಲು ಪಡೆಯಲು ಯೋಚಿಸುತ್ತಿದ್ದರೆ, ಅದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ವೈಯಕ್ತಿಕ ಜೀವನದಲ್ಲಿ ಪರಿಸ್ಥಿತಿಗಳು ಅಷ್ಟು ಸರಿಯಿರಲ್ಲ. ಈ ಸಮಯದಲ್ಲಿ, ಮನೆಯ ಸದಸ್ಯರ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿ ಗಣನೀಯವಾಗಿ ಹೆಚ್ಚಾಗಬಹುದು. ಕೆಲಸದ ಒತ್ತಡ ಮತ್ತು ಮನೆಯ ಜವಾಬ್ದಾರಿಗಳ ಹೊರೆಯು ನಿಮ್ಮ ಆಯಾಸ ಹೆಚ್ಚಿಸುವುದು.

ರಾಶಿಚಕ್ರದ ಅಂಶ: ಬೆಂಕಿ

ರಾಶಿ ಅಧಿಪತಿ: ಸೂರ್ಯ

ಅದೃಷ್ಟದ ಸಂಖ್ಯೆಗಳು: 5 , 10, 17, 24, 30, 49, 57

ಅದೃಷ್ಟದ ದಿನಗಳು: ಭಾನುವಾರ, ಶುಕ್ರವಾರ, ಬುಧವಾರ, ಮಂಗಳವಾರ

ಅದೃಷ್ಟದ ಬಣ್ಣಗಳು: ಕಂದು, ಹಸಿರು, ಕೆಂಪು, ಕಿತ್ತಳೆ

ಕನ್ಯಾ ರಾಶಿ

ಕನ್ಯಾ ರಾಶಿ

ಉದ್ಯೋಗಸ್ಥರು ಈ ಅವಧಿಯಲ್ಲಿ ತಮ್ಮ ಕೆಲಸವನ್ನು ಸಂಪೂರ್ಣ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಮಾಡಲು ಸಲಹೆ ನೀಡಲಾಗಿದೆ. ಸಹೋದ್ಯೋಗಿಗಳ ಮೇಲೆ ಅತಿಯಾಗಿ ಅವಲಂಬಿಸುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ನಿರಾಶೆ ಅನುಭವಿಸುವಿರಿ. ಮತ್ತೊಂದೆಡೆ, ಉದ್ಯಮಿಗಳು ಹೊಸ ಜನರೊಂದಿಗೆ ವ್ಯಾಪಾರ ಮಾಡುವುದಾದರೆ ನೀವು ತುಂಬಾ ಜಾಗರೂಕರಾಗಿರಬೇಕು. ಹಣದ ವಿಷಯದಲ್ಲಿ, ಈ ವಾರ ನಿಮಗೆ ಉತ್ತಮವಾಗಿದೆ. ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೆ, ನೀವು ಹಳೆಯ ಸಾಲದಿಂದ ಮುಕ್ತರಾಗಬಹುದು. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳಲು, ನೀವು ಪರಸ್ಪರ ಸಾಕಷ್ಟು ಸಮಯವನ್ನು ನೀಡಬೇಕು. ಆರೋಗ್ಯದ ವಿಷಯದಲ್ಲಿ, ಈ ತಿಂಗಳು ನಿಮಗೆ ಏರಿಳಿತಗಳಿಂದ ಕೂಡಿರುತ್ತದೆ.

ರಾಶಿಚಕ್ರದ ಅಂಶ: ಭೂಮಿ

ರಾಶಿ ಅಧಿಪತಿ: ಬುಧ

ಅದೃಷ್ಟದ ಸಂಖ್ಯೆಗಳು: 4, 16, 27, 33, 41, 50

ಅದೃಷ್ಟದ ದಿನಗಳು: ಭಾನುವಾರ, ಗುರುವಾರ, ಶನಿವಾರ, ಬುಧವಾರ

ಅದೃಷ್ಟದ ಬಣ್ಣಗಳು: ನೀಲಿ, ನೇರಳೆ, ಗುಲಾಬಿ, ಬಿಳಿ

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಿಗೆ ತಿಂಗಳ ಆರಂಭವು ಅದ್ಭುತವಾಗಿರಲಿದೆ. ಹಣದ ಸಮಸ್ಯೆ ಬಗೆಹರಿಯಲಿದೆ. ಉದ್ಯೋಗಸ್ಥರು ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅನಗತ್ಯ ವಿಷಯಗಳಲ್ಲಿ ಘರ್ಷಣೆಯನ್ನು ತಪ್ಪಿಸಿ. ಈ ತಿಂಗಳು ಉದ್ಯಮಿಗಳಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಯಾವುದೇ ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸುಂದರವಾದ ತಿರುವು ಕೂಡ ಬರಬಹುದು. ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ.

ರಾಶಿಚಕ್ರದ ಅಂಶ: ವಾಯು

ರಾಶಿ ಅಧಿಪತಿ: ಶುಕ್ರ

ಅದೃಷ್ಟದ ಸಂಖ್ಯೆಗಳು: 4 12, 23, 37, 44, 59

ಅದೃಷ್ಟದ ದಿನಗಳು: ಬುಧವಾರ, ಶನಿವಾರ, ಗುರುವಾರ, ಭಾನುವಾರ

ಅದೃಷ್ಟದ ಬಣ್ಣಗಳು: ಕೆಂಪು, ಕಿತ್ತಳೆ, ಹಳದಿ, ಮರೂನ್

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಅನಾವಶ್ಯಕ ವಿಷಯಗಳಿಗೆ ಗಮನ ಕೊಡದೆ ನಿಮ್ಮ ಕೆಲಸದ ಬಗ್ಗೆ ಸಂಪೂರ್ಣ ಗಮನ ಹರಿಸಿದರೆ ಅದು ನಿಮಗೆ ಉತ್ತಮವಾಗಿರುತ್ತದೆ. ಈ ಸಮಯವು ನಿಮಗೆ ಬಹಳ ಮುಖ್ಯವಾಗಿದೆ. ಅದರ ಸದುಪಯೋಗ ಮಾಡಿಕೊಳ್ಳಿ. ಈ ಅವಧಿಯಲ್ಲಿ ಉದ್ಯಮಿಗಳು ಅನೇಕ ಸಣ್ಣ ಪ್ರಯಾಣಗಳನ್ನು ಕೈಗೊಳ್ಳಬೇಕಾಗಬಹುದು. ಆದರೆ, ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಈ ತಿಂಗಳು ನಿಮ್ಮ ವ್ಯವಹಾರದಲ್ಲಿ ದೊಡ್ಡ ಧನಾತ್ಮಕ ಬದಲಾವಣೆ ಕಂಡುಬರಬಹುದು. ಹಣದ ವಿಷಯದಲ್ಲಿ, ಈ ತಿಂಗಳು ನಿಮಗೆ ತುಂಬಾ ದುಬಾರಿಯಾಗಲಿದೆ. ವೆಚ್ಚಗಳ ಪಟ್ಟಿ ಹೆಚ್ಚಾಗಬಹುದು. ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬಹುದು. ಜೀವನ ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸಿಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರಬಹುದು.

ರಾಶಿಚಕ್ರದ ಅಂಶ: ನೀರು

ರಾಶಿಚಕ್ರದ ಅಧಿಪತಿ: ಮಂಗಳ ಮತ್ತು ಪ್ಲುಟೊ

ಅದೃಷ್ಟದ ಸಂಖ್ಯೆಗಳು: 7, 11, 20, 33, 45, 54

ಅದೃಷ್ಟದ ದಿನಗಳು: ಮಂಗಳವಾರ, ಸೋಮವಾರ, ಭಾನುವಾರ, ಬುಧವಾರ

ಅದೃಷ್ಟದ ಬಣ್ಣಗಳು: ಬಿಳಿ, ಕಿತ್ತಳೆ, ಗುಲಾಬಿ, ನೀಲಿ, ಕೆನೆ

ಧನು ರಾಶಿ

ಧನು ರಾಶಿ

ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿಗಳು ಅಷ್ಟು ಸರಿಯಿರಲ್ಲ. ಕುಟುಂಬ ಸದಸ್ಯರ ನಡುವೆ ಮನಸ್ತಾಪ ಉಂಟಾಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ನೀವು ಖರ್ಚು ಮಾಡಬೇಕಾಗುತ್ತದೆ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಆದರೆ ನಿಮ್ಮ ದಾರಿಯಲ್ಲಿ ದೊಡ್ಡ ಅಡಚಣೆಯಿದ್ದರೆ, ಈ ತಿಂಗಳು ನಿಮ್ಮ ಆ ಸಮಸ್ಯೆ ಬಗೆಹರಿಯಲಿದೆ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಈ ತಿಂಗಳು ತುಂಬಾ ಅದೃಷ್ಟಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ, ಈ ಅವಧಿಯಲ್ಲಿ ನೀವು ಸಣ್ಣ ಆರೋಗ್ಯ ಸಮಸ್ಯೆ ಬಂದರೂ ಅದನ್ನು ನಿರ್ಲಕ್ಷ್ಯ ಮಾಡದಂತೆ ಸಲಹೆ ನೀಡಲಾಗಿದೆ.

ರಾಶಿಚಕ್ರದ ಅಂಶ: ಬೆಂಕಿ

ರಾಶಿ ಅಧಿಪತಿ: ಗುರು

ಅದೃಷ್ಟದ ಸಂಖ್ಯೆಗಳು: 3, 5, 10, 27, 31, 44, 56

ಅದೃಷ್ಟದ ದಿನಗಳು: ಶುಕ್ರವಾರ, ಶನಿವಾರ, ಗುರುವಾರ, ಬುಧವಾರ

ಅದೃಷ್ಟದ ಬಣ್ಣಗಳು: ಕೆಂಪು, ಹಸಿರು, ಗುಲಾಬಿ, ಹಳದಿ

ಮಕರ ರಾಶಿ

ಮಕರ ರಾಶಿ

ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಬಯಸಿದ ನಿಮ್ಮ ಪ್ರಯತ್ನಗಳು ಯಶಸ್ವಿಯಾಗಬಹುದು. ಮತ್ತೊಂದೆಡೆ, ಉದ್ಯೋಗಿಗಳಿಗೆ ದೊಡ್ಡ ಪ್ರಗತಿಯ ಬಲವಾದ ಸಾಧ್ಯತೆಯಿದೆ. ಹಣದ ವಿಷಯದಲ್ಲಿ, ಈ ತಿಂಗಳು ನಿಮಗೆ ಉತ್ತಮವಾಗಿದೆ. ಈ ಸಮಯದಲ್ಲಿ ನೀವು ಹೆಚ್ಚು ಉಳಿಸಲು ಸಾಧ್ಯವಾಗುತ್ತದೆ. ನೀವು ಯಾವುದೇ ಹಳೆಯ ಸಾಲವನ್ನು ಮರುಪಾವತಿಸಲು ಸಹ ಸಾಧ್ಯವಾಗುತ್ತದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಂಡರೆ, ಶೀಘ್ರದಲ್ಲೇ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಬಹುದು. ಆರೋಗ್ಯದ ವಿಷಯದಲ್ಲಿ ಈ ತಿಂಗಳು ನಿಮಗೆ ಸಾಮಾನ್ಯವಾಗಿರುತ್ತದೆ.

ರಾಶಿಚಕ್ರದ ಅಂಶ: ಭೂಮಿ

ರಾಶಿ ಅಧಿಪತಿ: ಶನಿ

ಅದೃಷ್ಟಸ ಸಂಖ್ಯೆಗಳು: 4, 8, 18, 30, 45, 59

ಅದೃಷ್ಟದ ದಿನಗಳು: ಸೋಮವಾರ, ಬುಧವಾರ, ಭಾನುವಾರ, ಗುರುವಾರ

ಅದೃಷ್ಟದ ಬಣ್ಣಗಳು: ಹಸಿರು, ಹಳದಿ, ಕೆಂಪು, ನೇರಳೆ, ಕಿತ್ತಳೆ

ಕುಂಭ ರಾಶಿ

ಕುಂಭ ರಾಶಿ

ನಿಮಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ, ಈ ಅವಧಿಯಲ್ಲಿ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಆರೋಗ್ಯದಲ್ಲಿ ದಿಢೀರ್ ಕ್ಷೀಣಿಸುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ, ಈ ತಿಂಗಳು ನಿಮಗೆ ತುಂಬಾ ಸವಾಲಾಗಿದೆ. ಹಣಕಾಸಿನ ಅಡೆತಡೆಗಳಿಂದಾಗಿ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ಜವಾಬ್ದಾರಿಗಳ ಹೊರೆ ನಿಮ್ಮ ಮೇಲೆ ಹೆಚ್ಚು ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಕಷ್ಟು ಕೆಲಸದ ಒತ್ತಡವನ್ನು ಅನುಭವಿಸಬಹುದು. ವ್ಯಾಪಾರಸ್ಥರು ಲಾಭ ಗಳಿಸಲು ಕಷ್ಟಪಡಬೇಕಾಗಬಹುದು. ಸುಲಭವಾಗಿ ಮುಗಿಸುವ ಕೆಲಸಗಳಲ್ಲೂ ಅಡೆತಡೆಗಳು ಎದುರಾಗುತ್ತವೆ. ಹಣದ ವಿಷಯದಲ್ಲಿ ಈ ತಿಂಗಳು ಉತ್ತಮವಾಗಿರುತ್ತದೆ.

ರಾಶಿಚಕ್ರದ ಅಂಶ: ಭೂಮಿ

ರಾಶಿ ಅಧಿಪತಿ: ಶನಿ

ಅದೃಷ್ಟದ ಸಂಖ್ಯೆಗಳು: 5, 10, 28, 34, 47, 58

ಅದೃಷ್ಟದ ದಿನಗಳು: ಶನಿವಾರ, ಸೋಮವಾರ, ಬುಧವಾರ, ಮಂಗಳವಾರ

ಅದೃಷ್ಟದ ಬಣ್ಣಗಳು: ನೇರಳೆ, ಹಳದಿ, ಮರೂನ್, ಬಿಳಿ, ಕಿತ್ತಳೆ

ಮೀನ ರಾಶಿ

ಮೀನ ರಾಶಿ

ನೀವು ಉದ್ಯಮಿಯಾಗಿದ್ದರೆ ಮತ್ತು ಹೊಸ ವ್ಯವಹಾರದಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ. ಆತುರವು ನಿಮಗೆ ಹಾನಿಕಾರಕ. ಉದ್ಯೋಗಸ್ಥರಿಗೆ ಈ ತಿಂಗಳು ಏರಿಳಿತದಿಂದ ಕೂಡಿರುತ್ತದೆ. ಈ ಸಮಯದಲ್ಲಿ, ಉನ್ನತ ಅಧಿಕಾರಿಗಳ ವರ್ತನೆಯು ನಿಮಗೆ ಬಹಳಷ್ಟು ತಲೆನೋವಾಗಬಹುದು. ಇದಲ್ಲದೇ ಕೆಲಸದ ಒತ್ತಡವೂ ಹೆಚ್ಚಾಗುವ ನಿರೀಕ್ಷೆ ಇದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ತಿಂಗಳ ಮಧ್ಯದಲ್ಲಿ ನೀವು ಇದ್ದಕ್ಕಿದ್ದಂತೆ ಹಣವನ್ನು ಪಡೆಯಬಹುದು. ನಿಮ್ಮ ಮನೆಯ ವಾತಾವರಣ ಸ್ವಲ್ಪ ಸಮಯದದಿಂದ ಸರಿಯಾಗಿ ಇಲ್ಲದಿದ್ದರೆ ಈ ಸಮಯದಲ್ಲಿ ನೀವು ಸುಧಾರಣೆಯನ್ನು ಕಾಣುತ್ತೀರಿ. ಆರೋಗ್ಯದ ದೃಷ್ಟಿಯಿಂದ, ಫೆಬ್ರವರಿ ತಿಂಗಳು ನಿಮಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ, ಆರೋಗ್ಯದ ಕಡೆ ಗಮನಹರಿಸಿ.

ರಾಶಿಚಕ್ರದ ಅಂಶ: ನೀರು

ರಾಶಿಚಕ್ರದ ಅಧಿಪತಿ: ನೆಪ್ಚೂನ್, ಗುರು

ಅದೃಷ್ಟದ ಸಂಖ್ಯೆಗಳು: 7, 15, 26, 34, 41, 58

ಅದೃಷ್ಟದ ದಿನಗಳು: ಶನಿವಾರ, ಸೋಮವಾರ, ಮಂಗಳವಾರ, ಭಾನುವಾರ

ಅದೃಷ್ಟದ ಬಣ್ಣಗಳು: ಹಸಿರು, ಗುಲಾಬಿ, ಆಕಾಶ ನೀಲಿ, ಬಿಳಿ, ಹಳದಿ

English summary

February 2023 Monthly Horoscope in Kannada

February 2023 Monthly Horoscope in Kannada Masika Rashi Bhavishya: Check February monthly horoscope for Aries to Pisces zodiac signs in kannada. Know your February monthly astrology predictions for on Boldsky Kannada.
X
Desktop Bottom Promotion