Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಗುರುವಾರದ ದಿನ ಭವಿಷ್ಯ: ವೃಶ್ಚಿಕ ರಾಶಿಯವರೇ ಈ ದಿನ ಧನ ಲಾಭವಿದೆ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: 10:50ರವರೆಗೆ ಮೃಗಶಿರಾ, ನಂತರ ಆರ್ದ್ರ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಮಧ್ಯಾಹ್ನ 01:36ರಿಂದ 03:04ರವರೆಗೆ
ಗುಳಿಕಕಾಲ: ಬೆಳಗ್ಗೆ 09:13ರಿಂದ 10:41ರವರೆಗೆ
ಯಮಗಂಡಕಾಲ: ಬೆಳಗ್ಗೆ 06:18ರಿಂದ 07:45ರವರೆಗೆ
ದುರ್ಮುಹೂರ್ತ: ಬೆಳಗ್ಗೆ 10:12ರಿಂದ 10:58ರವರೆಗೆ
ಮಧ್ಯಾಹ್ನ 02:52 ರಿಂದ 03:39ರವರೆಗೆ
ಸೂರ್ಯೋದಯ: ಬೆಳಿಗ್ಗೆ 06:18ಕ್ಕೆ
ಸೂರ್ಯಾಸ್ತ: ಸಂಜೆ 05:59ಕ್ಕೆ

ಮೇಷ ರಾಶಿ:
ಈ ರಾಶಿಯವರಿಗೆ ಇಂದು ದಿನ ಅಷ್ಟು ಲಾಭದಾಯಕವಾಗಿಲ್ಲ. ಹಣದ ದೃಷ್ಟಿಯಿಂದ ದಿನವು ಉತ್ತಮವಾಗಿಲ್ಲ. ನೀವು ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ನಿಮ್ಮ ನಿರ್ಧಾರವನ್ನು ಎಚ್ಚರಿಕೆಯಿಂದಲೇ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಮುಂಬರುವ ಸಮಯದಲ್ಲಿ, ಹಣಕಾಸಿನ ಹೊರೆ ನಿಮ್ಮ ಮೇಲೆ ಹೆಚ್ಚಾಗಬಹುದು. ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ನಿಮ್ಮ ಸಂಬಂಧಗಳ ಬಗ್ಗೆ ನೀವು ಹೆಚ್ಚು ಮುತುವರ್ಜಿ ವಹಿಸಬೇಕು. ಈಗಾಗಲೇ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸಲು ಪ್ರಯತ್ನಿಸಿ. ಕಚೇರಿಯಲ್ಲಿ ಅನಗತ್ಯ ಮಾತುಗಳನ್ನಾಡುವುದು ಬೇಡ. ಅದರ ಬದಲಿ ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ. ಉದ್ಯಾದಲ್ಲಿ ಯಾರೊಂದಿಗಾದದೂ ಸಹಭಾಗಿತ್ವ ಹೊಂದಿದ್ದರೆ ಅಂತಹ ಉದ್ಯಮಿಗಳು ಇಂದು ಲಾಭವನ್ನು ಗಳಿಸುತ್ತಾರೆ. ಇಂದು ನೀವು ದೊಡ್ಡ ವ್ಯವಹಾರವನ್ನು ಮಾಡಬಹುದು. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ಭಾವನಾತ್ಮಕ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಮಟ್ಟಿಗೆ, ಅಷ್ಟು ಒಳ್ಳೆಯ ದಿನವಲ್ಲದ್ದರಿಂದ ನಿಮಗೆ ಕಿರಿಕಿರಿ ಉಂಟಾಗಬಹುದು.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 30
ಶುಭ ಸಮಯ: ಬೆಳಿಗ್ಗೆ 4:15 ರಿಂದ 1:20 ರವರೆಗೆ

ವೃಷಭ ರಾಶಿ:
ಈ ದಿನ ನೀವು ಯಾವುದೇ ತಲೆಬಿಸಿಯನ್ನೂ ಮಾಡದೆ ನಿಮ್ಮನ್ನು ನೀವು ನಿರಾಳವಾಗಿಡಲು ಪ್ರಯತ್ನಿಸಿ. ನೀವು ಚೆನ್ನಾಗಿ ಯೋಚಿಸಿದರೆ, ಅದು ನಿಮಗೆ ಎಂದಿಗೂ ಒಳ್ಳೆಯದು. ಈ ಸಮಯದಲ್ಲಿ, ನೀವು ಪ್ರತಿ ನಿರ್ಧಾರವನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಕಚೇರಿಯಲ್ಲಿ ನಿಮ್ಮ ಸಣ್ಣ ಕೆಲಸವನ್ನು ಸಹ ಜವಾಬ್ದಾರಿಯಿಂದ ಪೂರ್ಣಗೊಳಿಸಲು ಪ್ರಯತ್ನಿಸಿ. ಹಿರಿಯ ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಿ. ನೀವು ದೊಡ್ಡ ಉದ್ಯಮಿಗಳಾಗಿದ್ದರೆ ಜಾಗರೂಕರಾಗಿರಿ. ಈ ದಿನದಂದು ಒಂದು ಸಣ್ಣ ನಷ್ಟವು ಸಹ ದೊಡ್ಡ ನಷ್ಟವನ್ನು ಉಂಟುಮಾಡಬಹುದು ಜೋಪಾನ. ಹಣದ ಹರಿವು ಎಂದಿನಂತೆ ಸಾಮಾನ್ಯವಾಗಲಿದೆ. ಇಂದು ಹಣದ ಬಗ್ಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ನೀವು ಮನೆಯ ಸದಸ್ಯರಿಂದ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ.
ಉತ್ತಮ ಬಣ್ಣ: ಕೆಂಪು
ಶುಭ ಸಂಖ್ಯೆ: 19
ಶುಭ ಸಮಯ: ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ

ಮಿಥುನ ರಾಶಿ:
ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮತ್ತು ನೀವು ಸಕಾರಾತ್ಮಕತೆಯಿಂದ ಕೆಲಸಗಳನ್ನು ಮಾಡುವಿರಿ. ಅಲ್ಲದೇ ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯ ಮಟ್ಟ ತುಸು ಹೆಚ್ಚಾಗಿಯೇ ಇರುತ್ತದೆ. ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ಇಂದು ದೊಡ್ಡ ವ್ಯವಹಾರವನ್ನು ಮಾಡಲು ಹೊರಟಿದ್ದರೆ, ಅಗತ್ಯ ದಾಖಲೆಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆಹಾರ ಮತ್ತು ಪಾನೀಯ ವ್ಯವಹಾರ ಮಾಡುವವರು ಬರಬೇಕಿರುವ ನಿರೀಕ್ಷಿತ ಲಾಭಕ್ಕಾಗಿ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಮತ್ತೊಂದೆಡೆ, ಉದ್ಯೋಗಾಕಾಂಕ್ಷಿಗಳು ಇಂದು ಕಚೇರಿಯಲ್ಲಿ ಕೆಲವು ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಧೈರ್ಯ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ. ಮನೆಯ ವಾತಾವರಣ ಹರ್ಷಚಿತ್ತದಿಂದ ಕೂಡಿರುತ್ತದೆ. ನೀವು ಪೋಷಕರ ಆಶೀರ್ವಾದ ಪಡೆಯುತ್ತೀರಿ. ಒಡಹುಟ್ಟಿದವರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕೆಂಗಂದು (ಮರೂನ್)
ಶುಭ ಸಂಖ್ಯೆ: 4
ಶುಭ ಸಮಯ: ಸಂಜೆ 4:15 ರಿಂದ 8:25 ರವರೆಗೆ

ಕರ್ಕಾಟಕ ರಾಶಿ:
ನೀವು ನೌಕರಿ ಮಾಡುತ್ತಿದ್ದರೆ ಮತ್ತು ನಿಮಗೆ ಕಚೇರಿಯಲ್ಲಿ ತೊಂದರೆ ಇದ್ದರೆ, ನೀವು ನಿಮ್ಮ ಬಾಸ್‌ನೊಂದಿಗೆ ಮಾತನಾಡಬೇಕು. ಈ ರೀತಿಯಾಗಿ, ಒತ್ತಡದಲ್ಲಿ ಕೆಲಸ ಮಾಡುವುದು ನಿಮ್ಮ ಕಾರ್ಯಕ್ಷಮತೆಯನ್ನು ಕುಂದುವಂತೆ ಮಾಡುತ್ತದೆ ಮತ್ತು ನಿಮ್ಮ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಇಂದು ನಿಮಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಟ್ಟರೆ, ನೀವು ಅದನ್ನು ಮುಕ್ತ ಹೃದಯದಿಂದ ಸ್ವೀಕರಿಸುತ್ತೀರಿ. ನಿಮ್ಮ ವೃತ್ತಿಜೀವನವನ್ನು ಮುಂದುವರಿಸಲು ನೀವು ಅಂತಹ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಣ್ಣ ವ್ಯಾಪಾರಿಗಳಿಗೆ ಇಂದು ಮಿಶ್ರಫಲ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ತಂದೆಯಿಂದ ಆರ್ಥಿಕ ಲಾಭ ಸಾಧ್ಯ. ಸಾಧ್ಯವಾದರೆ, ನಿಮ್ಮ ಮಕ್ಕಳಿಗೂ ಇಂದು ನಿಮ್ಮ ಸ್ವಲ್ಪ ಸಮಯವನ್ನು ನೀಡಿರಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಹೊರಗಿನ ಆಹಾರವನ್ನು ತಿನ್ನುವುದನ್ನು ಖಡಾಖಂಡಿತವಾಗಿ ನಿರಾಕರಿಸಿ,ಇಲ್ಲದಿದ್ದರೆ ನಿಮ್ಮ ಆರೋಗ್ಯವು ಕುಸಿಯಬಹುದು.
ಉತ್ತಮ ಬಣ್ಣ: ಕಡು ನೀಲಿ
ಶುಭ ಸಂಖ್ಯೆ: 27
ಶುಭ ಸಮಯ: ಬೆಳಿಗ್ಗೆ 9:45 ರಿಂದ ಮಧ್ಯಾಹ್ನ 12 ರವರೆಗೆ

ಸಿಂಹ:
ಇಂದು ನೀವು ಮಾನಸಿಕವಾಗಿ ನೋವಿಗೊಳಗಾಗಿದ್ದರೆ ಮತ್ತು ದೈಕಿಹವಾಗಿ ದಣಿದಿದ್ದರೆ ನೀವು ನಿಮ್ಮ ಬಗ್ಗೆ ಗಮನ ಹರಿಸಬೇಕು. ಕೆಲಸವನ್ನು ಬದಿಗಿಟ್ಟು ಕೆಲವು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಉತ್ತಮ. ಆಯಾಸ ಮತ್ತು ಒತ್ತಡದಿಂದಾಗಿ ನಿಮಗೆ ಮಾನಸಿಕವಾಗಿ ಆಗಿರುವ ತೊಡಕುಗಳನ್ನು ನಿವಾರಿಸಿಕೊಳ್ಳಲು ಇಂದು ಉತ್ತಮವಾದ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಹೆಚ್ಚು ಮಾತನಾಡುವುದು ಅಥವಾ ಹರಟುವುದನ್ನು ತಪ್ಪಿಸಿ. ಈ ಸಮಯವು ನಿಮಗೆ ಬಹಳ ಮುಖ್ಯ, ಆದ್ದರಿಂದ ನೀವು ನಿಮ್ಮ ಕೆಲಸದ ಮೇಲೆ ಗಮನ ಹರಿಸಬೇಕು. ಅದೇ ರೀತಿ ವ್ಯಾಪಾರಿಗಳು ಇಂದು ಹೆಚ್ಚು ಚೌಕಾಶಿ ಮಾಡದೇ ಇರುವುದು ಉತ್ತಮ. ಇಲ್ಲದಿದ್ದರೆ ನೀವು ಪಡೇದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗುತ್ತವೆ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 5
ಶುಭ ಸಮಯ: ಸಂಜೆ 5 ರಿಂದ 10 ರವರೆಗೆ

ಕನ್ಯಾರಾಶಿ:
ಕೆಲಸದ ಆರಂಭದಲ್ಲಿ, ನೀವು ಇಂದು ನಿರೀಕ್ಷಿಸಿದಂತೆ ಫಲ ಸಿಗದಿದ್ದರೆ,ನೀವು ನಿರಾಶೆಗೊಳ್ಳುವ ಅಗತ್ಯವಿಲ್ಲ ಏಕೆಂದರೆ ಶೀಘ್ರದಲ್ಲೇ ವಿಷಯಗಳು ನಿಮ್ಮ ಪರವಾಗಿ ಪರಿವರ್ತನೆಯಾಗಬಹುದು ಹಾಗಾಗಿ ನೀವು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನೀವು ವ್ಯಾಪಾರ ಮಾಡುವವರಾಗಿದ್ದರೆ ಮತ್ತು ನೀವು ಯಾರೊಂದಿಗಾದರೂ ಬಹಳ ಸಮಯದಿಂದ ವಿವಾದಗಳನ್ನು ಮಾಡಿಕೊಳ್ಳುತ್ತಿದ್ದರೆ, ಅದನ್ನು ಇಂದು ಸರಿಪಡಿಸಿಕೊಳ್ಳುವ ಬಲವಾದ ಸಾಧ್ಯತೆಯಿದೆ. ಕೆಲವು ಒಪ್ಪಂದದ ಪ್ರಸ್ತಾಪಕ್ಕೆ ನೀವು ಮುತುವರ್ಜಿ ವಹಿಸಬೇಕಾಗುತ್ತದೆ. ಇನ್ನು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ನೀವು ಮನೆಯ ಸದಸ್ಯರಿಂದ ಯಾವುದಾದರೂ ವಿಷಯಕ್ಕೆ ಸಲಹೆ ಪಡೆಯಬಹುದು. ಮನೆಯ ಕೆಲವು ಸದಸ್ಯರ ಮನಸ್ಥಿತಿ ಸರಿಯಾಗಿ ಇರದೇ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕೋಪಗೊಳ್ಳುವುದನ್ನು ತಡೆಯಿರಿ. ಹಣದ ವಿಷಯಕ್ಕೆ ಬಂದರೆ, ನೀವು ಇಂದು ಹೆಚ್ಚು ಹಣ ಖರ್ಚು ಮಾಡದಿದ್ದರೆ ಉತ್ತಮ. ಆರೋಗ್ಯದ ವಿಷಯದಲ್ಲಿ, ನಿಮಗೆ ಇಂದು ಮಿಶ್ರಫಲ.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 18
ಶುಭ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ

ತುಲಾ ರಾಶಿ:
ಇಂದು ನೀವು ಕೆಲವು ಸವಾಲಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಇದರ ಹೊರತಾಗಿಯೂ, ನೀವು ಸಕಾರಾತ್ಮಕ ಫಲವನ್ನು ಪಡೆಯಲಿದ್ದೀರಿ. ಇಂದು ಧೈರ್ಯದಿಂದ ಪ್ರತಿಯೊಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ಬಾಂಧವ್ಯ ವೈವಾಹಿಕ ಜೀವನದ ಬಂಡಿಯನ್ನು ಸರಾಗವಾಗಿ ಸಾಗಿಸುತ್ತದೆ. ಹಣದ ಪರಿಸ್ಥಿತಿ ಇಂದು ಅಷ್ಟು ಉತ್ತಮವಾಗಿಲ್ಲ.ಹಾಗಾಗಿ ಇವತ್ತಿನ ಖರ್ಚಿನ ಮೇಲೆ ನಿಮಗೆ ಗಮನವಿರಲಿ. ನೀವು ಅನಗತ್ಯವಾಗಿ ಹೆಚ್ಚು ಖರ್ಚು ಮಾಡದಿರುವುದೇ ಒಳ್ಳೆಯದು. ನೀವು ಕೆಲಸ ಮಾಡುತ್ತಿದ್ದರೆ, ನೀವು ಕಚೇರಿಯ ಹಿರಿಯ ಅಧಿಕಾರಿಗಳೊಂದಿಗೆ ಯಾವುದರ ಬಗ್ಗೆಯೂ ಕೋಪಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಿಕೊಳ್ಳಿ. ಅಲ್ಲದೇ ಯಾವುದೇ ಬೇಜವಾಬ್ದಾರಿ ಕಾರ್ಯವನ್ನೂ ಮಾಡಬೇಡಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕಡು ಹಳದಿ
ಶುಭ ಸಂಖ್ಯೆ: 18
ಶುಭ ಸಮಯ: ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ

ವೃಶ್ಚಿಕ ರಾಶಿ:
ಕೆಲಸದಲ್ಲಿ ನೀವು ಇಂದು ಹೆಚ್ಚಿನ ಲಾಭವನ್ನು ಪಡೆಯಬಹುದು. ದೀರ್ಘಕಾಲದವರೆಗೆ, ಸಮಸ್ಯೆಯಾಗಿಯೇ ಉಳಿದ ವಿಷಯಕ್ಕೆ ಇಂದು ಪರಿಹಾರ ಸಿಗಲಿದೆ. ನಿಮ್ಮ ಕೆಲಸವು ಸ್ವಲ್ಪ ಪ್ರಗತಿಯಾಗುತ್ತದೆ. ಆಮದು ರಫ್ತಿಗೆ ಸಂಬಂಧಿಸಿದಂತೆ ನೀವು ಕೆಲಸವನ್ನು ಮಾಡುತ್ತಿದ್ದರೆ ಈ ಸಮಯವು ನಿಮಗೆ ತುಂಬಾ ಒಳ್ಳೆಯದು. ಕಚೇರಿಯಲ್ಲಿ ನಿಮ್ಮ ಕೆಲಸವು ಸುಗಮವಾಗಿ ನಡೆಯುತ್ತದೆ ಮತ್ತು ನಿಮ್ಮ ಮುಖ್ಯಸ್ಥರು ನಿಮ್ಮ ಕಾರ್ಯಕ್ಷಮತೆಗೆ ತೃಪ್ತರಾಗುತ್ತಾರೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪೋಷಕರ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ. ಇಂದು ನೀವು ನಿಮ್ಮ ಸಂಗಾತಿಯ ನಡವಳಿಕೆಯಲ್ಲಿ ದೊಡ್ಡ ಬದಲಾವಣೆಯನ್ನು ನೋಡಬಹುದು. ನಿಮ್ಮ ಪ್ರೀತಿಪಾತ್ರರ ವರ್ತನೆಯು ನಿಮ್ಮಲ್ಲಿ ವಿಶೇಷ ಭಾವನೆಯನ್ನು ಮೂಡಿಸುತ್ತದೆ. ಹಣದ ಹರಿವು ಎಂದಿಗಿಂತ ಉತ್ತಮವಾಗಿರುತ್ತದೆ. ಆದರೆ ಅದನ್ನು ಮುತುವರ್ಜಿಯಿಂದ ಖರ್ಚು ಮಾಡಿ. ನಿಮ್ಮ ಆರೋಗ್ಯವು ಇಂದು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಆಕಾಶ ನೀಲಿ
ಶುಭ ಸಂಖ್ಯೆ: 44
ಶುಭ ಸಮಯ: ಸಂಜೆ 6 ರಿಂದ 9 ರವರೆಗೆ

ಧನು ರಾಶಿ:
ಇದು ಒಂದು ಸವಾಲಿನ ದಿನ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಈ ಸಮಯದಲ್ಲಿ ನೀವು ಹೆಚ್ಚು ಶ್ರದ್ಧೆಯಿಂದ ಅಧ್ಯಯನ ಮಾಡಬೇಕಾಗುತ್ತದೆ. ಆದರೆ, ನಿಮ್ಮ ಮೇಲೆ ಹೆಚ್ಚು ಒತ್ತಡವನ್ನು ಹೇರಬೇಡಿ ಮತ್ತು ಶಾಂತ ಮನಸ್ಸಿನಿಂದ ಅಧ್ಯಯನ ಮಾಡಲು ಪ್ರಯತ್ನಿಸಿ. ವ್ಯಾಪಾರಸ್ಥರಿಗೆ ಇಂದು ಬಹಳ ಒಳ್ಳೆಯ ದಿನ. ಯಾವುದೋ ಕಾಗದ ಪತ್ರದ ಸಮಸ್ಯೆಯಿಂದಾಗಿ ನಿಮ್ಮ ಯಾವುದೇ ಕೆಲಸವನ್ನು ತಡೆಹಿಡಿಯಲಾಗಿದ್ದರೆ, ಅದು ಇಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗಸ್ಥರು ಪ್ರತಿಕೂಲತೆಯನ್ನು ಎದುರಿಸಬೇಕಾಗುತ್ತದೆ. ಸಂಬಳ ಪಡೆಯುವಲ್ಲಿ ವಿಳಂಬವಾಗುವುದರಿಂದ ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಇಂದು ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಮಯವಿರುವುದಿಲ್ಲ.ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವನ್ನು ಕಾಪಾಡಿಕೊಳ್ಳಲು, ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಗೌರವಿಸಬೇಕು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನೀವು ತುಂಬಾ ದಣಿವನ್ನು ಅನುಭವಿಸುತ್ತೀರಿ.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 36
ಶುಭ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ಮಕರ ರಾಶಿ:
ನೀವು ಆರೋಗ್ಯದ ವಿಷಯದಲ್ಲಿ ಇಂದು ಯಾವುದೇ ನಿರ್ಲಕ್ಷ ಮಾಡುವುದೂ ಸರಿಯಲ್ಲ. ಯಾಕೆಂದರೆ ಇಂದು ಆರೋಗ್ಯದ ದೃಷ್ಟಿಯಿಂದ ನಿಮಗೆ ಅಷ್ಟು ಒಳ್ಳೆಯದಲ್ಲ. ಗಂಟಲು ಅಥವಾ ಮೂಗಿನ ಸಮಸ್ಯೆ ಇರಬಹುದು. ಕಚೇರಿಯಲ್ಲಿ ಸಾಕಷ್ಟು ಕೆಲಸ ಇರುತ್ತದೆ ಮತ್ತು ಇಂದು ನೀವು ತುಂಬಾ ಕಾರ್ಯನಿರತರಾಗಿರುತ್ತೀರಿ. ವ್ಯಾಪಾರ ಮಾಡುವವರು ಇಂದು ಮಿಶ್ರಫಲವನ್ನು ಕಾಣುತ್ತಾರೆ. ಇಂದು ನಿಮ್ಮ ಕೆಲವು ಪ್ರಮುಖ ಕೆಲಸಗಳು ಪೂರ್ಣವಾಗದೇ ಉಳಿಯುವುದರಿಂದ ನೀವು ಒತ್ತಡಕ್ಕೆ ಒಳಗಾಗುತ್ತೀರಿ. ಮನೆಯ ಶಾಂತಿಯನ್ನು ಕಾಪಾಡಿಕೊಳ್ಳಲು, ನೀವು ಹೊರಗಿನ ತೊಂದರೆಗಳನ್ನು ನಿಮ್ಮ ಮನೆಗೆ ತರದಿದ್ದರೆ ಉತ್ತಮ. ಇದಲ್ಲದೆ, ಸಣ್ಣ ವಿಷಯಗಳಲ್ಲಿಯೂ ಕೂಡ ಸಂಗಾತಿಯೊಂದಿಗೆ ವಾದ ಮಾಡುವ ನಿಮ್ಮ ಅಭ್ಯಾಸವು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತದೆ, ಆದ್ದರಿಂದ ನೀವು ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಹಣದ ಪರಿಸ್ಥಿತಿ ಸಾಮಾನ್ಯವಾಗಿ ಇರಲಿದೆ. ಇಂದು ವೆಚ್ಚಗಳು ಕಡಿಮೆ ಇರುತ್ತದೆ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 16
ಶುಭ ಸಮಯ: ಬೆಳಿಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

ಕುಂಭ ರಾಶಿ:
ವ್ಯಾಪಾರಸ್ಥರು ಇಂದು ಯಾವುದೇ ವಿಷಯದಲ್ಲೂ ಅಸಡ್ಡೆ ಮಾಡುವಂತಿಲ್ಲ. ಎಲ್ಲದರಲ್ಲೂ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಶತ್ರುಗಳು ಅಥವಾ ವಿರೋಧಿಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ನೀವು ಎಚ್ಚರಿಕೆಯಿಂದ ವರ್ತಿಸದಿದ್ದರೆ ನಷ್ಟವನ್ನು ಅನುಭವಿಸಬೇಕಾಗಬಹುದು. ಉದ್ಯೋಗದ ಜನರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಕೆಲಸವನ್ನು ನೀವು ಶ್ರದ್ಧೆಯಿಂದ ಮತ್ತು ಪ್ರಾಮಾಣಿಕವಾಗಿ ಪೂರ್ಣಗೊಳಿಸುತ್ತೀರಿ. ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಅಗತ್ಯವಿದ್ದರೆ ಅವರಿಂದ ಸಂಪೂರ್ಣ ಬೆಂಬಲ ನಿಮಗೆ ಸಿಗುತ್ತದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ಇಂದು ಯಾವುದಾದರೂ ಪ್ರಮುಖ ಶಾಪಿಂಗ್ ಮಾಡಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿ ಇರಲಿ. ನಿಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರತಿದಿನ ಧ್ಯಾನ ಮಾಡಿ.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 14
ಶುಭ ಸಮಯ: ಸಂಜೆ 5:25 ರಿಂದ 9 ರವರೆಗೆ

ಮೀನ ರಾಶಿ:
ಇಂದು ಕಹಿ-ಸಿಹಿ ಬೆರೆಸಿದ ದಿನ. ಹೆಚ್ಚುತ್ತಿರುವ ಕೆಲಸದ ಹೊರೆ ನಿಮ್ಮನ್ನು ಕಾಡುತ್ತಿದ್ದರೆ, ನಿಮ್ಮ ಎಲ್ಲಾ ಕೆಲಸಗಳನ್ನು ಇಂದು ಮನೆಯಿಂದಲೇ ಮಾಡಿ. ಇದು ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ಜನರಿಗೆ, ಈ ದಿನವು ಮಿಶ್ರಫಲವನ್ನು ನೀಡಲಿದೆ. ನೀವು ಚಿಲ್ಲರೆ ವ್ಯಾಪಾರಿ ಆಗಿದ್ದರೆ ಇಂದು ನಿಮಗೆ ಪ್ರಯೋಜನವಾಗಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬಹುದು. ಹಠಾತ್ ಹಣವನ್ನು ಪಡೆಯುವ ಸಾಧ್ಯತೆಯಿದೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದಲ್ಲಿ, ಇಂದು, ಸಂಗಾತಿಯೊಂದಿಗಿನ ವಿವಾದದಿಂದಾಗಿ, ಮನೆಯ ವಾತಾವರಣವು ಹಾಳಾಗಬಹುದು. ನಿಮ್ಮ ಸಂಬಂಧವನ್ನು ಸುಧಾರಿಸಲು ನೀವು ಒಬ್ಬರ ಮೇಲೆ ಒಬ್ಬರಿಗಿರುವ ನಂಬಿಕೆಯನ್ನು ಬಲಪಡಿಸಬೇಕು.
ಉತ್ತಮ ಬಣ್ಣ: ನೀಲಿ
ಶುಭ ಸಂಖ್ಯೆ: 9
ಶುಭ ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ



Click it and Unblock the Notifications











