ಬುಧವಾರದ ದಿನ ಭವಿಷ್ಯ: ಕರ್ಕರಾಶಿಯವರೇ ಈ ದಿನ ಆಹ್ಲಾದಕರವಾಗಿರಲಿದೆ

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya O7 October 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: 08:36ರವರೆಗೆ ರೋಹಿಣಿ, ನಂತರ ಮೃಗಶಿರಾ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಮಧ್ಯಾಹ್ನ 12:09ರಿಂದ 01:36ರವರೆಗೆ
ಗುಳಿಕಕಾಲ: ಬೆಳಗ್ಗೆ 10:41ರಿಂದ 12:09ರವರೆಗೆ
ಯಮಗಂಡಕಾಲ: ಬೆಳಗ್ಗೆ 07:45ರಿಂದ 09:13ರವರೆಗೆ
ದುರ್ಮುಹೂರ್ತ: ಬೆಳಗ್ಗೆ 11:45ರಿಂದ 12:32ರವರೆಗೆ
ಸೂರ್ಯೋದಯ: ಬೆಳಿಗ್ಗೆ 06:17ಕ್ಕೆ
ಸೂರ್ಯಾಸ್ತ: ಸಂಜೆ 06:00ಕ್ಕೆ

ಮೇಷ ರಾಶಿ:

ಮೇಷ ರಾಶಿ:

ಇಂದು ನಿಮಗೆ ಸವಾಲಿನ ದಿನ. ಕಾರ್ಯನಿರ್ವಹಣೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ನಿಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ನೀವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನಿಸಬೇಕು. ನಿಮಗೆ ಅಗತ್ಯವಿದ್ದರೆ, ನೀವು ಕೆಲವು ಅನುಭವಿ ಜನರ ಸಹಾಯವನ್ನು ಪಡೆಯಬಹುದು. ನೀವು ನೌಕರಿ ಮಾಡುವಲ್ಲಿ ಅಂದರೆ ನಿಮ್ಮ ಕಚೇರಿಯಲ್ಲಿ ಇಂದು ಕೆಲಸದ ಹೊರೆ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಹಣದ ಪರಿಸ್ಥಿತಿ ಬಲವಾಗಿರುತ್ತದೆ. ನಿಮಗಾಗಿ ಸ್ವಲ್ಪ ಶಾಪಿಂಗ್ ಮಾಡಲು ನೀವು ಬಯಸಿದ್ದರೆ ಇಂದು ಇದಕ್ಕಾಗಿ ಅನುಕೂಲಕರ ದಿನವಾಗಿದೆ. ಪೋಷಕರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ನಿಮ್ಮ ಕಷ್ಟದ ಸಂದರ್ಭಗಳಲ್ಲಿ ನೀವು ನಿಮ್ಮ ಪೋಷಕರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕೆಲವು ಕಾರಣಗಳಿಗಾಗಿ, ಸಂಗಾತಿಯು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ. ಸಾಧ್ಯವಾದರೆ, ಇಂದು ನಿಮ್ಮ ಪ್ರೀತಿಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 27

ಶುಭ ಸಮಯ: ಬೆಳಿಗ್ಗೆ 7:00 ರಿಂದ ಸಂಜೆ 4:30 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ನಿಮ್ಮ ರಾಶಿಚಕ್ರದ ಪ್ರಕಾರ ನಿಮಗಿಂದು ಕೊಂಚ ಸಮಾಧಾನಕರ ದಿನ. ನೀವು ಹಣದ ವಿಷಯದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಒಳ್ಳೆಯದು. ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ತಪ್ಪನ್ನು ಮಾಡಬೇಡಿ. ನಿಮ್ಮ ಬಜೆಟ್ ಪ್ರಕಾರ ನೀವು ಯೋಜನೆಗಳನ್ನು ಹಾಕಿಕೊಂಡರೆ, ನೀವು ಉಳಿತಾಯದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ಈ ದಿನ ಉದ್ಯೋಗಿಗಳಿಗೆ ಬಹಳ ಶುಭ. ನಿಮ್ಮ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿ ಮತ್ತು ನಿಮ್ಮ ಮೇಲಧಿಕಾರಿಗಳ ಸಲಹೆಯಂತೆ ನಡೆದುಕೊಳ್ಳಿ. ವ್ಯಾಪಾರಸ್ಥರು ಉತ್ತಮ ಲಾಭ ಪಡೆಯಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಸ್ಪರ್ಧೆಗಳಿಂದ ದೂರವಿರುವುದು ಅತ್ಯಂತ ಮುಖ್ಯ. ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯುತ್ತೀರಿ. ನಿಮ್ಮ ವೈವಾಹಿಕ ಜೀವನದಲ್ಲಿ ಉತ್ಸಾಹ ಮತ್ತು ಸಂತೋಷದ ಕೊರತೆಯನ್ನು ನೀವು ಅನುಭವಿಸುತ್ತಿದ್ದರೆ, ನಿಮ್ಮ ಸಂಗಾತಿಗೆ ಏನಾದರೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿ. ಅಮರು ನಿಮಗೆ ಎಷ್ಟು ವಿಶೇಷ ಮತ್ತು ಎಷ್ಟು ಪ್ರಮುಖವಾದವರು ಎಂಬುದನ್ನು ಅವರಿಗೆ ಅರಿವು ಮಾಡಿಸಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿದೆ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 3

ಶುಭ ಸಮಯ: ಸಂಜೆ 6 ರಿಂದ 11:05

ಮಿಥುನ ರಾಶಿ:

ಮಿಥುನ ರಾಶಿ:

ಇಂದು ಯಾವುದೇ ಕೆಲಸವನ್ನು ಆತುರದಿಂದ ಮಾಡುವುದನ್ನು ಮೊದಲು ತಪ್ಪಿಸಿ, ಇಲ್ಲದಿದ್ದರೆ ಈ ಕೆಲಸದಿಂದಾಗಿ ನಿಮಗೇ ನೋವುಂಟಾಗಬಹುದು. ಇಂದು ಹಣದ ದೃಷ್ಟಿಯಿಂದ ಬಹಳ ಶುಭವಾಗಲಿದೆ. ಬರಬೇಕಾಗಿದ್ದ ಲಾಭ ಇಂದು ನಿಮ್ಮ ಕೈಸೇರಲಿದೆ, ಅದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿದೆ. ನೀವು ದೀರ್ಘಕಾಲದಿಂದ ಅಮೂಲ್ಯವಾದದ್ದನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಈ ಆಸೆ ಇಂದು ಈಡೇರಬಹುದು. ಕೆಲಸದ ಬಗ್ಗೆ ಮಾತನಾಡುದಾದಲ್ಲಿ, ನೀವು ಕಚೇರಿಯಲ್ಲಿ ಎಲ್ಲರೊಂದಿಗೆ ಒಟ್ಟಾಗಿ ಸೇರಿಕೊಂಡು ಕೆಲಸ ಮಾಡಿದರೆ ಉತ್ತಮ. ಈ ಸಮಯದಲ್ಲಿ ನೀವು ಪೂರ್ಣ ಉತ್ಸಾಹ ಹಾಗೂ ಚಟುವಟಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇದಲ್ಲದೆ ಸಹೋದ್ಯೋಗಿಗಳೊಂದಿಗೆ ವಾಗ್ವಾದಗಳು ಆಗದಂತೆಯೂ ಇಂದು ಎಚ್ಚರವಹಿಸಿ. ನೀವು ವ್ಯಾಪಾರ ಮಾಡುವವರಾಗಿದ್ದಲ್ಲಿ, ನಿಮ್ಮ ವ್ಯವಹಾರ ಯೋಜನೆಗಳ ಬಗ್ಗೆ ನೀವು ನಿರಾಳರಾಗಿರುತ್ತೀರಿ. ಸಕಾರಾತ್ಮಕ ಚಿಂತನೆಯೊಂದಿಗೆ ಶ್ರಮಿಸುತ್ತೀರಿ ಮತ್ತು ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.

ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)

ಶುಭ ಸಂಖ್ಯೆ: 15

ಶುಭ ಸಮಯ: ಬೆಳಿಗ್ಗೆ 10:10 ರಿಂದ ಮಧ್ಯಾಹ್ನ 3:15 ರವರೆಗೆ

ಕರ್ಕಾಟಕ:

ಕರ್ಕಾಟಕ:

ಈ ರಾಶಿಯವರಿಗೆ ಇಂದು ಆಹ್ಲಾದಕರ ದಿನವಾಗಿದೆ. ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ನೀವು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಕಚೇರಿಯಲ್ಲಿ ಕೆಲವು ಹೊಸ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಬಹುದು. ನೀವು ಈ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಪೂರೈಸಿದರೆ, ನೀವು ಶೀಘ್ರದಲ್ಲೇ ದೊಡ್ಡ ಹುದ್ದೆಯನ್ನು ಅಲಂಕರಿಸಬಹುದು. ವ್ಯಾಪಾರಸ್ಥರು ಇಂದು ಯಾವುದೇ ಪ್ರಮುಖ ಹೂಡಿಕೆ ಮಾಡಲು ಅವಕಾಶವಿದೆ. ಆದರೂ, ನೀವು ಸರಿಯಾಗಿ ಚರ್ಚಿಸಿದ ನಂತರವೇ ನಿಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಂಡರೆ ಒಳ್ಳೆಯದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಸಂಗಾತಿಯು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ ಅಲ್ಲದೇ ನೀವು ಅವರಿಂದ ವಿಶೇಷ ಉಡುಗೊರೆಯನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನಿಮ್ಮದೇ ಧನಾತ್ಮಕ ಚಿಂತನೆಯಿಂದ ನೀವು ಲಾಭ ಗಳಿಸುತ್ತೀರಿ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 8

ಶುಭ ಸಮಯ: ಬೆಳಿಗ್ಗೆ 4:50 ರಿಂದ ಮಧ್ಯಾಹ್ನ 12:05

ಸಿಂಹ ರಾಶಿ:

ಸಿಂಹ ರಾಶಿ:

ಇಂದು ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ, ಜೋಪಾನ. ಮಾನಸಿಕ ಒತ್ತಡದಿಂದಾಗಿ ನಿಮ್ಮ ದೈಹಿಕ ಆರೋಗ್ಯವೂ ದುರ್ಬಲವಾಗಬಹುದು. ಹಾಗಾಗಿ ನೀವು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸದಿರಿ. ಬದಲಿಗೆ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಇಂದು, ನೀವು ಹಣದ ಬಗ್ಗೆ ಯಾರೊಂದಿಗಾದರೂ ವಿವಾದವನ್ನು ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು. ಕಚೇರಿಯಲ್ಲಿ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ನಿಮ್ಮ ಉದಾಸೀನದ ಪ್ರವೃತ್ತಿ ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸುತ್ತದೆ. ನೀವು ವ್ಯಾಪಾರ ಮಾಡುವವರಾಗಿದ್ದರೆ ಇದ್ದಕ್ಕಿದ್ದಂತೆ ನೀವು ಬೇರೆಡೆಗೆ ಪ್ರಯಾಣ ಬೆಳೆಸಬೇಕಾಗಬಹುದು. ಸಾಕಷ್ಟು ಅದೃಷ್ಟದ ಹೊರತಾಗಿಯೂ, ನಿರೀಕ್ಷೆಯಂತೆ ಫಲಿತಾಂಶಗಳನ್ನು ಪಡೆಯದ ಕಾರಣ ನೀವು ನಿರಾಶೆಗೊಳ್ಳುವಿರಿ. ಮನೆಯಲ್ಲಿ ವಯಸ್ಸಾದ ಸದಸ್ಯರು ಇದ್ದರೆ, ಈ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಉತ್ತಮ ಬಣ್ಣ: ಕೆಂಗಂದು (ಮರೂನ್)

ಶುಭ ಸಂಖ್ಯೆ: 35

ಶುಭ ಸಮಯ: ಬೆಳಿಗ್ಗೆ 7:05 ರಿಂದ ಮಧ್ಯಾಹ್ನ 3:40

ಕನ್ಯಾರಾಶಿ:

ಕನ್ಯಾರಾಶಿ:

ಇವತ್ತು ನೀವು ಸ್ಪಲ್ಪ ಜಾಗರೂಕತೆಯಿಂದ ವರ್ತಿಸಬೇಕು. ನೀವು ತಂದೆಯೊಂದಿಗೆ ಸಂಘರ್ಷವನ್ನು ಹೊಂದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಾತು ಮತ್ತು ನಿಮ್ಮ ನಡವಳಿಕೆ ಎರಡನ್ನೂ ನಿಯಂತ್ರಿಸ್ಕೊಂಡು ನೀವು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗುತ್ತದೆ. ಹೀಗಿರುವಾಗ, ನೀವು ಅವರ ವಿರುದ್ಧ ಏನಾದರೂ ಮಾಡಿದರೆ, ನೀವು ಕೆಟ್ಟ ಫಲಿತಾಂಶವನ್ನು ಅನುಭವಿಸಬೇಕಾಗಬಹುದು. ಕೆಲಸದಲ್ಲಿ ನೀವು ಶುಭ ಫಲವನ್ನು ಪಡೆಯಬಹುದು. ನೀವು ಉತ್ತಮ ಉದ್ಯೋಗ ಪ್ರಸ್ತಾಪವನ್ನು ಇಂದು ಪಡೆಯಬಹುದು. ನೀವು ವ್ಯಾಪಾಸ್ಥರಾಗಿದ್ದರೆ ಹಾಗೂ ನೀವು ಇಂದು ದೊಡ್ಡ ವ್ಯವಹಾರವನ್ನು ಮಾಡಲು ಹೊರಟಿದ್ದರೆ, ನೀವು ಕಾಗದ ಪತ್ರದ ಕೆಲಸಗಳಲ್ಲಿ ಜಾಗರೂಕರಾಗಿರಬೇಕು. ಎಲೆಕ್ಟ್ರಾನಿಕ್ ವಸ್ತುಗಳನ್ನು ವ್ಯಾಪಾರ ಮಾಡುವವರು ಆರ್ಥಿಕವಾಗಿ ಲಾಭ ಪಡೆಯಬಹುದು. ಹಣಕ್ಕೆ ಸಂಬಂಧಿಸಿದಂತೆ ದಿನವು ಸಾಮಾನ್ಯಕ್ಕಿಂತ ಉತ್ತಮ ಸ್ಥಿತಿಯಲ್ಲಿರುತ್ತದೆ, ನೀವು ಅದನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 20

ಶುಭ ಸಮಯ: ಬೆಳಿಗ್ಗೆ 11:30 ರಿಂದ ರಾತ್ರಿ 9 ರವರೆಗೆ

 ತುಲಾ ರಾಶಿ:

ತುಲಾ ರಾಶಿ:

ಈ ರಾಶಿಯವರು ಇಂದು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ. ನೀವು ಕಚೇರಿ ಕಾರ್ಯಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ನೀವು ಸೋಮಾರಿಯಾಗಿ ಅಥವಾ ಅಸಡ್ಡೆ ಮಾಡಿದರೆ ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಬಾಸ್ ನಿಮ್ಮ ಪರವಾಗಿ ಏನನ್ನೂ ಮಾಡದೇ ಇರುವ ಸಾಧ್ಯತೆ ಇದೆ. ನೀವು ವ್ಯಾಪಾರ ಮಾಡುವವರಾಗಿದ್ದಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿ ಮತ್ತು ಕಾನೂನಿನ ವ್ಯಾಪ್ತಿಯಲ್ಲಿಯೇ ವ್ಯವಹರಿಸಿ. ತ್ವರಿತ ಲಾಭ ಗಳಿಸುವ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪು ಹಾದಿಯನ್ನು ಹಿಡಿಯಬೇಡಿ, ವಿಶೇಷವಾಗಿ ಲಾಟರಿ, ಬೆಟ್ಟಿಂಗ್ ಇತ್ಯಾದಿಗಳಿಂದ ದೂರವಿರುವುದು ಅತ್ಯಂತ ಸೂಕ್ತ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ಮನೆಯ ಸದಸ್ಯರೊಂದಿಗಿನ ಸಂಬಂಧವು ಸಾಮರಸ್ಯದಿಂದ ಕೂಡಿರುತ್ತದೆ. ಮತ್ತೊಂದೆಡೆ, ಸಂಗಾತಿಯ ಆರೋಗ್ಯವು ಅಷ್ಟು ಉತ್ತಮವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ, ನೀವು ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನೀವು ಹಣದ ಬಗ್ಗೆ ಚಿಂತಿಸುತ್ತಲೇ ಇರುತ್ತೀರಿ. ಬರಬೇಕಿದ್ದ ಹಣವು ಕೈಸೇರದೇ ಇರುವುದರಿಂದ ನೀವು ತುಂಬಾ ಖಿನ್ನತೆಗೆ ಒಳಗಾಗುತ್ತೀರಿ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 5

ಶುಭ ಸಮಯ: ಸಂಜೆ 6 ರಿಂದ 9 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಇಂದು ಈ ರಾಶಿಯವರ ಮನಸ್ಸು ತುಂಬಾ ಚಂಚಲವಾಗಿರುತ್ತದೆ ಮತ್ತು ನೀವು ನಕಾರಾತ್ಮಕವಾಗಿ ಚಿಂತನೆಯನ್ನು ಮಾಡುವಿರಿ. ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಗುಪ್ತ ಭಯವಿದ್ದರೆ, ಅದನ್ನು ಹೊರತೆಗೆದು ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನಹರಿಸಿ. ನೀವು ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದ್ದೀರಿ. ನೀವು ಕೆಲಸ ಮಾಡುವ ಕಚೇರಿಯಲ್ಲಿ, ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ತುಂಬಾ ಶ್ರಮಿಸಬೇಕಾಗುತ್ತದೆ. ವ್ಯಾಪಾರಿಗಳಿಗೆ ಪ್ರಯೋಜನಕಾರಿ ದಿನ ಇದಾಗಿದೆ. ನೀವು ಚಿಲ್ಲರೆ ವ್ಯಾಪಾರಿ ಆಗಿದ್ದರೆ ನಿಮಗೆ ಲಾಭವಾಗುತ್ತದೆ. ಹಣ ಕೈಯಲ್ಲಿ ಚೆನ್ನಾಗಿ ಓಡಾಡುತ್ತದೆ. ಯಾವುದೇ ರೀತಿಯ ಮೊಂಡುತನದ ವಾದವನ್ನು ಇಂದು ಯಾರೊಂದಿಗೂ ಮಾಡಬೇಡಿ. ನೀವು ಹೀಗೆ ಮಾಡಿದರೆ ನಿಮಗೆ ನಷ್ಟವು ಸಂಭವಿಸಬಹುದು ಎಚ್ಚರ. ಆರೋಗ್ಯದ ಬಗ್ಗೆ ಮಾತನಾಡುವುದಾರೆ, ಇಂದು ಹಠಾತ್ ಬೆನ್ನುನೋವಿನಿಂದ ನೀವು ಅಸಮಾಧಾನಗೊಳ್ಳಬಹುದು.

ಉತ್ತಮ ಬಣ್ಣ: ಕೇಸರಿ

ಶುಭ ಸಂಖ್ಯೆ: 30

ಶುಭ ಸಮಯ: ಬೆಳಿಗ್ಗೆ 9:35 ರಿಂದ ಸಂಜೆ 5 ರವರೆಗೆ

ಧನು ರಾಶಿ:

ಧನು ರಾಶಿ:

ಈ ರಾಶಿಯವರು ಇಂದು ಅದೃಷ್ಟವಂತರು ಎಂದೇ ಹೇಳಬಹುದು. ಇಂದು ನಿಮಗೆ ತುಂಬಾ ಖುಷಿ ಸಿಗುತ್ತದೆ. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನೀವು ಹೆಚ್ಚು ಗಮನ ಹರಿಸುತ್ತೀರಿ. ನಿಮ್ಮ ಮನೆಯಲ್ಲಿ ನೀವು ಕೆಲವು ಅಗತ್ಯ ಬದಲಾವಣೆಗಳನ್ನು ತರಬಹುದು. ನೀವು ಸ್ವಚ್ಛತೆಯಿಂದ ಹಿಡಿದು ವಸ್ತುಗಳನ್ನು ಒಪ್ಪವಾಗಿ ಜೋಡಿಸುವವರೆಗೆ ಬದಲಾವಣೆಗಳನ್ನು ಮಾಡಬಹುದು. ಬಹಳ ಸಮಯದ ನಂತರ ನೀವು ನಿಮ್ಮ ಹೆತ್ತವರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಬಹುಶಃ ಇಂದು ನೀವು ಅವರಿಂದ ಕೆಲವು ಉತ್ತಮ ಸಲಹೆಗಳನ್ನು ಸಹ ಪಡೆಯಬಹುದು. ಇನ್ನು ನಿಮ್ಮ ಕೆಲಸದ ಬಗ್ಗೆ ಹೇಳುವುದಾದರೆ, ಇಂದು ನಿಮ್ಮ ಬಾಸ್ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ. ನೀವು ತಪ್ಪು ಮಾಡಿದ್ದರೆ, ನೀವು ಅದನ್ನು ಒಪ್ಪಿಕೊಳ್ಳಲು ಸಿದ್ಧರಾಗಬೇಕು. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಉತ್ತಮ. ಡೈರಿ ಉತ್ಪನ್ನಗಳನ್ನು ವ್ಯಾಪಾರ ಮಾಡುವವರು ಇಂದು ಸಾಕಷ್ಟು ಲಾಭವನ್ನು ಗಳಿಸಬಹುದು. ಹಣದ ಹರಿವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ತಿಳಿ ಹಸಿರು

ಶುಭ ಸಂಖ್ಯೆ: 20

ಶುಭ ಸಮಯ: ಮಧ್ಯಾಹ್ನ 2 ರಿಂದ 6 ರವರೆಗೆ

ಮಕರ ರಾಶಿ:

ಮಕರ ರಾಶಿ:

ಇಂದು ನಿಮ್ಮ ಸೋಮಾರಿತನವೆ ನಿಮಗೆ ಮುಳ್ಳಾಗಬಹುದು. ಹೆಚ್ಚು ಉದಾಸೀನ ಮಾಡಿದಷ್ಟು ನಿಮ್ಮ ಆರೊಗ್ಯದಲ್ಲಿ ಏರುಪೇರು ಉಂಟಾಗಬಹುದು. ಉತ್ತಮ ಆಹಾರವನ್ನು ಸೇವಿಸುವುದರೊಂದಿಗೆ ಪ್ರತಿದಿನ ವ್ಯಾಯಾಮ ಮಾಡಿ ಮತ್ತು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಖುಷಿಯಾಗಿ ಇರಿಸಿಕೊಳ್ಳಿ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸುವುದು ಸರಿಯಲ್ಲ. ಸಂಗಾತಿಯ ಹಾಳಾದ ಮನಸ್ಥಿತಿ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಶಾಂತಿಯಿಂದ ವರ್ತಿಸಬೇಕು. ಇಂದು ಕೆಲವು ಸಂದರ್ಭಗಳಲ್ಲಿ, ನೀವು ಜಾಗರೂಕರಾಗಿರುವುದು ಉತ್ತಮ. ಯಾವುದೇ ಕಷ್ಟಕರ ಪರಿಸ್ಥಿತಿ ಬಂದರೆ ಅದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಲು ಪ್ರಯತ್ನಿಸಿ. ನೀವು ನೌಕರಿ ಮಾಡುತ್ತಿದ್ದರೆ, ಇಂದು ನೀವು ಸಮಯಕ್ಕೆ ಸರಿಯಾಗಿ ಕೆಲವು ದೊಡ್ಡ ದೊಡ್ಡ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದು ಕಚೇರಿಯಲ್ಲಿ ನಿಮ್ಮ ಘನತೆ ಮತ್ತು ಗೌರವವು ಹೆಚ್ಚುತ್ತದೆ. ಹಿರಿಯರು ನಿಮ್ಮೊಂದಿಗೆ ತುಂಬಾ ಸಂತೋಷವಾಗುತ್ತಾರೆ. ಆರ್ಥಿಕ ರಂಗದಲ್ಲಿ, ದಿನ ಚೆನ್ನಾಗಿರುತ್ತದೆ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 28

ಶುಭ ಸಮಯ: ಮಧ್ಯಾಹ್ನ 2 ರಿಂದ 5:55 ರವರೆಗೆ

ಕುಂಭ:

ಕುಂಭ:

ಈ ರಾಶಿಯವರಿಗೆ ಇಂದು ಮರೆಯಲಾಗದ ದಿನ. ಇಂದು ನಿಮ್ಮ ಹತ್ತಿರ ಇರುವವರಿಂದ ನೀವು ಸುಂದರವಾದ ಉಡುಗೊರೆಯೊಂದನ್ನು ಪಡೆಯುತ್ತೀರಿ. ಬಹಳ ಸಮಯದ ನಂತರ ನೀವು ಅಂತಹ ಸಂತೋಷವನ್ನು ಅನುಭವಿಸುವಿರಿ. ಹಣದ ದೃಷ್ಟಿಯಿಂದ ಹೇಳುವುದಾದರೆ, ಇಂದು ಸಾಲ ಪಡೆಯುವುದನ್ನು ತಪ್ಪಿಸುವುದು ಒಳ್ಳೆಯದು. ಅಗತ್ಯವಿಲ್ಲದಿದ್ದರೆ ಅನಗತ್ಯವಾಗಿ ಸಾಲ ಮಾಡಬೇಡಿ. ಕೆಲಸದ ವಿಷಯಕ್ಕೆ ಬಂದಾಗ, ಹೆಚ್ಚು ಕೆಲಸದ ಒತ್ತಡವನ್ನು ತೆಗೆದುಕೊಳ್ಳುವುದು ಬೇಡ. ಏಕೆಂದರೆ ಒತ್ತಡ ಜಾಸ್ತಿಯಾದರೆ ನೀವು ಶ್ರದ್ಧೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ನಿಮ್ಮ ಕಾರ್ಯಕ್ಷಮತೆ ಕುಸಿಯುತ್ತದೆ. ಮನೆಯ ವಾತಾವರಣ ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ ಮತ್ತು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ. ಇನ್ನು ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಇಂದು ನಿಮಗೆ ಸಾಮಾನ್ಯ ದಿನ. ಆದರೆ ನೀವು ಅನಗತ್ಯವಾಗಿ ಮನೆಯಿಂದ ಹೊರಹೋಗುವುದು ಒಳ್ಳೆಯದಲ್ಲ, ಆದ್ದರಿಂದ ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಉತ್ತಮ ಬಣ್ಣ: ಕಡು ನೀಲಿ

ಶುಭ ಸಂಖ್ಯೆ: 4

ಶುಭ ಸಮಯ: ಸಂಜೆ 6:30 ರಿಂದ ರಾತ್ರಿ 8 ರವರೆಗೆ

ಮೀನ ರಾಶಿ:

ಮೀನ ರಾಶಿ:

ಇಂದು ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೊಂಚ ಒತ್ತಡವನ್ನು ಅನುಭವಿಸುತ್ತೀರಿ. ಕೆಲಸಮಾಡುವಾಗ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೆಲಸವನ್ನು ಶಾಂತಿಯಿಂದ ಮತ್ತು ಆರಾಮದಾಯಕ ಮನಸ್ಥಿತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಿ. ಈ ದಿನ ನಿಮಗೆ ಅದೃಷ್ಟವೂ ಹೌದು. ಅತೀ ಶೀಘ್ರದಲ್ಲೇ ನಿಮ್ಮ ಕೈಯಲ್ಲಿ ಕೆಲವು ಉತ್ತಮ ಅವಕಾಶಗಳು ಇರಬಹುದು, ಆದ್ದರಿಂದ ಸಕಾರಾತ್ಮಕ ಆಲೋಚನೆಗಳೊಂದಿಗೆ ಮುಂದುವರಿಯಿರಿ. ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ಕುಟುಂಬದೊಂದಿಗೆ ಕುಟುಂಬದ ಸಮಸ್ಯೆಗಳ ಕುರಿತು ನೀವು ಚರ್ಚಿಸಬಹುದು, ವಿಶೇಷವಾಗಿ ಇಂದು ನೀವು ಪೋಷಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಮತ್ತೊಂದೆಡೆ, ಜೀವನ ಸಂಗಾತಿಯೊಂದಿಗೆ ಮನಸ್ತಾಪಗಳು ಉಂಟಾಗಬಹುದು. ನಿಮ್ಮ ಪ್ರೀತಿಪಾತ್ರರ ಕಹಿ ಮಾತುಗಳು ನಿಮ್ಮ ಹೃದಯವನ್ನು ನೋಯಿಸಬಹುದು. ನಿಮ್ಮ ಮಕ್ಕಳ ಹೊಂದಾಣಿಕೆಯ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಆರೋಗ್ಯದ ದೃಷ್ಟಿಯಿಂದ ದಿನವು ಮಿಶ್ರಫಲ ನೀಡಲಿದೆ. ಅನೇಕ ರೀತಿಯ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಬಹುದು. ಈ ಆಲೋಚನೆಗಳು, ನಿಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಚ್ಚರ.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 21

ಶುಭ ಸಮಯ: ಬೆಳಗ್ಗೆ 4:30 ರಿಂದ ಮಧ್ಯಾಹ್ನ 2:20 ರವರೆಗೆ

English summary

Dina Bhavishya O7 October 2020

Here are dina bhavishya of 7 october 2020, read on,
Story first published: Wednesday, October 7, 2020, 4:00 [IST]
X
Desktop Bottom Promotion