Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಮಂಗಳವಾರದ ದಿನ ಭವಿಷ್ಯ: ಸಿಂಹ ರಾಶಿಯವರೇ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: 2:57ರವರೆಗೆ ಭರಣಿ, ನಂತರ ಕೃತಿಕಾ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಬೆಳಗ್ಗೆ 7:44ರಿಂದ 09:12ರವರೆಗೆ
ಗುಳಿಕಕಾಲ: ಮಧ್ಯಾಹ್ನ 01:27ರಿಂದ 02:06ರವರೆಗೆ
ಯಮಗಂಡಕಾಲ: ಬೆಳಗ್ಗೆ 10:41ರಿಂದ 12:09ರವರೆಗೆ
ದುರ್ಮುಹೂರ್ತ: ಮಧ್ಯಾಹ್ನ 12:33ರಿಂದ 01:20ರವರೆಗೆ
ಮಧ್ಯಾಹ್ನ 02:54ರಿಂದ 03:41ರವರೆಗೆ
ಸೂರ್ಯೋದಯ: ಬೆಳಿಗ್ಗೆ 06:16ಕ್ಕೆ
ಸೂರ್ಯಾಸ್ತ: ಸಂಜೆ 06:02ಕ್ಕೆ
ಶುಭೋದಯ..ಈ ದಿನ ಎಲ್ಲರಿಗೂ ಒಳ್ಳೆಯದಾಗಲಿ. ನಮ್ಮ ದಿನವು, ಈ ದಿನ ಹೀಗಿರಬಹುದು ಎಂದು ನಮ್ಮ ಗ್ರಹಗತಿಗಳ ಆಧಾರದ ಮೇಲೆ ಹೇಳಲಾಗುತ್ತದೆ. ಆ ನಂಬಿಕೆಯ ಮೇಲೆ ಸಾಕಷ್ಟು ಜನರು ಮಾಡುವ ಕಾರ್ಯಗಳು ಅವಲಂಬಿತವಾಗಿರುತ್ತದೆ. ಹಾಗಾದರೆ ಬನ್ನಿ, ಇವತ್ತಿನ ನಿಮ್ಮ ರಾಶಿ ಭವಿಷ್ಯನಿಮಗೆ ಯಾವ ಸುದ್ಧಿಯನ್ನು ಕೊಡಲಿದೆ ನೋಡೋಣ.

ಮೇಷ ರಾಶಿ:
ನೀವು ನಿಮ್ಮ ಅಭಿಪ್ರಾಯಗಳನ್ನು ನೀವು ಬಹಿರಂಗವಾಗಿ ವ್ಯಕ್ತಪಡಿಸಬೇಕಾಗುತ್ತದೆ. ಯಾವುದಾದರೂ ವಿಷಯ ತಪ್ಪು ಎಂದು ಅನ್ನಿಸಿದರೆ ತಪ್ಪು ಎಂದು ಹೇಳಲು ಹಿಂಜರಿಯಬೇಡಿ. ಕೆಲಸದ ಸಮಯದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯದಿದ್ದರೆ, ನೀವು ನಿಮ್ಮ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಅರ್ಥ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ನಿರಾಶೆಗೊಳ್ಳುವ ಸಾಧ್ಯತೆಯಿದೆ, ಈ ಕಾರಣದಿಂದಾಗಿ ವಾತಾವರಣವು ತುಂಬಾ ಉದ್ವಿಗ್ನವಾಗಿರುತ್ತದೆ. ಈ ರೀತಿಯ ಪರಿಸ್ಥಿತಿಯಲ್ಲಿ, ನೀವು ಆತುರದಿಂದಲ್ಲ ಬದಲಿಗೆ ಪ್ರಜ್ಞೆಯೊಂದಿಗೆ ಕೆಲಸ ಮಾಡಲು ಸಲಹೆ ನೀಡಲಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಹಿರಿಯರ ಸಲಹೆಯಂತೆ ನೀವು ನಡೆದರೆ ಅದು ನಿಮಗೆ ಮಾತ್ರ ಉತ್ತಮ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಸಂಗಾತಿಯಿಂದ ನೀವು ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಂಬಂಧವು ಬಲಗೊಳ್ಳುತ್ತದೆ. ಹಠಾತ್ ಆರೋಗ್ಯ ಕ್ಷೀಣಿಸುವ ಸಾಧ್ಯತೆಯಿದೆ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 5
ಶುಭ ಸಮಯ: ಸಂಜೆ 6:45 ರಿಂದ 10 ರವರೆಗೆ.

ವೃಷಭ ರಾಶಿ :
ಸಂಕೀರ್ಣವಾದ ವಿಷಯವನ್ನು ಪರಿಹರಿಸಲು ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ವಿವಾದ ನಡೆಯುತ್ತಿದ್ದರೆ, ಇಂದು ಅದು ಕೊನೆಗೊಳ್ಳಬಹುದು. ನೀವು ಪೋಷಕರ ಪ್ರೀತಿಯನ್ನು ಪಡೆಯುತ್ತೀರಿ. ಇದಲ್ಲದೆ, ಮನೆಯ ಇತರ ಸದಸ್ಯರೊಂದಿಗಿನ ಸಂಬಂಧವು ಸುಧಾರಿಸುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ, ಕೆಲವು ಹೊಸ ತಂತ್ರಗಳನ್ನು, ಯೋಜನೆಗಳನ್ನು ರೂಪಿಸಬೇಕಾಗಿದೆ. ಅಲ್ಲದೆ, ನಿಮ್ಮ ಬಾಸ್ ಅಥವಾ ಇತರ ಹಿರಿಯ ಅಧಿಕಾರಿಗಳ ಯಾವುದೇ ಸಣ್ಣ ವಿಷಯವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ವ್ಯಾಪಾರಿಗಳಿಗೆ ಲಾಭದ ಮೊತ್ತ ಸಿಗಲಿದೆ. ನೀವು ಚಿನ್ನ ಮತ್ತು ಬೆಳ್ಳಿಯ ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಶುಭವಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಲಭವಾಗುವ ಸಂಭವವಿದೆ. ನಿಮ್ಮ ಆರೋಗ್ಯದ ಮಟ್ಟಿಗೆ, ಇಂದು ನೀವು ಮಾನಸಿಕವಾಗಿ ತುಂಬಾ ಆರಾಮವಾಗಿರುತ್ತೀರಿ ಮತ್ತು ದೈಹಿಕವಾಗಿಯೂ ಕೂಡ ತುಂಬಾ ಚುರುಕಾಗಿರುತ್ತೀರಿ.
ಉತ್ತಮ ಬಣ್ಣ: ಕಡು ಹಳದಿ
ಶುಭ ಸಂಖ್ಯೆ: 18
ಶುಭ ಸಮಯ: ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ

ಮಿಥುನ ರಾಶಿ:
ನೀವು ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ತುಂಬಾ ಜಾಗರೂಕರಾಗಿರಲು ಸೂಚಿಸಲಾಗಿದೆ. ಕಚೇರಿಯಲ್ಲಿ ನಿಮ್ಮ ಸುತ್ತ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ನಿಮಗೆ ಸಂಪೂರ್ಣ ಗಮನವಿರಲಿ. ಇಂದು ನಿಮ್ಮ ಕಠಿಣ ಪರಿಶ್ರಮಕ್ಕೆ ಬೇರೊಬ್ಬರು ಹೊಗಳುವಿಕೆಯನ್ನು ಪಡೆಯಲು ಪ್ರಯತ್ನಿಸುತ್ತಿರಬಹುದು. ನೀವು ಮಾರ್ಕೆಟಿಂಗ್ ಕೆಲಸದೊಂದಿಗೆ ಸಂಬಂಧ ಹೊಂದಿದ್ದರೆ ಇಂದು ನಿಮಗೆ ಶುಭವಾಗುತ್ತದೆ. ಕಬ್ಬಿಣದ ವ್ಯಾಪಾರಿಗಳು ಇಂದು ಉತ್ತಮ ಲಾಭ ಪಡೆಯಬಹುದು. ಆದಾಗ್ಯೂ, ಈ ಸಮಯದಲ್ಲಿ ನೀವು ಹಣದ ವಿಷಯದಲ್ಲಿ ಜಾಗರೂಕರಾಗಿರುವುದು ಅತ್ಯಂತ ಅಗತ್ಯ. ಇಂದು ಕುಟುಂಬದೊಂದಿಗೆ ಹೆಚ್ಚುವರಿ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಕೆಲವು ಹಳೆಯ ನೆನಪುಗಳು ಇಂದು ರಿಫ್ರೆಶ್ ಆಗುತ್ತವೆ ಮತ್ತು ನೀವು ಆ ನೆನಪುಗಳಿಂದ ತುಂಬಾ ಸಂತೋಷಗೊಳ್ಳುತ್ತೀರಿ. ಇನ್ನು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ದಿನವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಹಾಗಾಗಿ ಹೆಚ್ಚು ದೇಹಕ್ಕೆ ಆಯಾಸವನ್ನು ನೀಡಲು ಹೋಗಬೇಡಿ.
ಉತ್ತಮ ಬಣ್ಣ: ಆಕಾಶ ನೀಲಿ
ಶುಭ ಸಂಖ್ಯೆ: 44
ಶುಭ ಸಮಯ: ಸಂಜೆ 6 ರಿಂದ 9 ರವರೆಗೆ

ಕರ್ಕಾಟಕ ರಾಶಿ:
ಸೋಮಾರಿತನ ಇಂದು ನಿಮಗೆ ಹಾನಿಕಾರಕವೆಂದು ನಿಮಗೆ ತಿಳಿದಿರಲಿ. ನಿಮ್ಮ ಕೆಲಸವನ್ನು ನೀವು ವೇಗವಾಗಿ ಮತ್ತು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಿದರೆ, ನಿಮ್ಮ ಬಾಸ್ ಖಂಡಿತವಾಗಿಯೂ ನಿಮ್ಮ ಕಠಿಣ ಪರಿಶ್ರಮವನ್ನು ಗಮನಿಸುತ್ತಾರೆ. ಹಾಗೂ ನೀವು ಪ್ರಶಂಸೆಗೆ ಪಾತ್ರರಾಗುತ್ತೀರಾ. ವ್ಯಾಪಾರಿಗಳಿಗೆ ಇಂದು ಮಿಶ್ರ ಫಲ ದೊರೆಯಲಿದೆ. ನೀವು ಕೆಲವು ಹೊಸ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಮುಂಬರುವ ದಿನಗಳಲ್ಲಿ ನೀವು ಖಂಡಿತವಾಗಿಯೂ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ಮತ್ತೊಂದೆಡೆ, ಇಂದು ನೀವು ಯಾರೊಂದಿಗಾದರೂ ವಿವಾದವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ವ್ಯವಹಾರ ವಿಷಯಗಳಲ್ಲಿ, ನೀವು ಕೋಪಕ್ಕಿಂತ ಹೆಚ್ಚಾಗಿ ಶಾಂತಿಯಿಂದ ಕೆಲಸ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಲಾಭದ ಸ್ಥಳದಲ್ಲಿ ನಷ್ಟವಾಗಬಹುದು. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ವೆಚ್ಚಗಳು ಕಡಿಮೆ ಇರುತ್ತದೆ ಮತ್ತು ನೀವು ಇಂದು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 36
ಶುಭ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ಸಿಂಹ ರಾಶಿ:
ಕೆಲಸದ ದಿನದಂದು ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನೀವು ಎಲ್ಲಿಯಾದರೂ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೆ, ನೀವು ಇಂದು ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ನೀವು ಬ್ಯಾಂಕ್ ವಲಯದೊಂದಿಗೆ ಸಂಬಂಧ ಹೊಂದಿದ್ದರೆ, ನಿಮಗಾಗಿ ಅಭಿವೃದ್ಧಿಯ ಮಾರ್ಗಗಳು ತೆರೆದುಕೊಳ್ಳುವ ಬಲವಾದ ಸಾಧ್ಯತೆಯಿದೆ. ಇಂದು ವ್ಯಾಪಾರಿಗಳಿಗೆ ಆಯ್ಕೆಯ ದಿನವಾಗಿದೆ, ವಿಶೇಷವಾಗಿ ನಿಮ್ಮ ಕೆಲಸವು ಸಾರಿಗೆಗೆ ಸಂಬಂಧಿಸಿದ್ದರೆ, ಇಂದು ನೀವು ಯಾರೊಂದಿಗೂ ಯಾವುದೇ ಚರ್ಚೆಯನ್ನು ಮಾಡದೆ ದೂರವಿರುವುದೇ ಲೇಸು, ಇಲ್ಲದಿದ್ದರೆ ನೀವು ದೊಡ್ಡ ಕಾನೂನು ವ್ಯವಹಾರದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ಇಂದು ಸಂಗಾತಿಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಪ್ರಿಯಪಾತ್ರರ ಬಗ್ಗೆ ನೀವು ಹೆಚ್ಚು ಗಮನ ಹರಿಸುವುದು ಉತ್ತಮ. ಸಿಲುಇಹಾಕಿಕೊಂಡಿರುವ ಹಣ ಸಿಗದ ಕಾರಣ ನೀವು ತುಂಬಾ ಅಸಮಾಧಾನಗೊಳ್ಳುತ್ತೀರಿ.
ಉತ್ತಮ ಬಣ್ಣ: ಗುಲಾಬಿ
ಶುಭ ಸಂಖ್ಯೆ: 16
ಶುಭ ಸಮಯ: ಬೆಳಿಗ್ಗೆ 4 ರಿಂದ ಮಧ್ಯಾಹ್ನ 2 ರವರೆಗೆ

ಕನ್ಯಾರಾಶಿ:
ಇಂದು ನಿಮ್ಮ ದಿನವು ಶುಭವಾಗಿಯೇ ಆರಂಭವಾಗಲಿದೆ. ಮನಸ್ಸು ತುಂಬಾ ಸಂತೋಷವಾಗುತ್ತದೆ ಮತ್ತು ನೀವು ಸಕಾರಾತ್ಮಕತೆಯಿಂದ ಇರುವಿರಿ. ಕುಟುಂಬ ಸದಸ್ಯರೊಂದಿಗಿನ ಸಂಬಂಧವು ಸಾಮರಸ್ಯದಿಂದ ಕೂಡಿರುತ್ತದೆ. ಯಾವುದೇ ಜವಾಬ್ದಾರಿಯುತ ಕೆಲಸಗಳಲ್ಲಿ ನೀವು ತುಂಬಾ ಕಾರ್ಯನಿರತರಾಗಿರುವ ಸಾಧ್ಯತೆ ಇದೆ. ಪೋಷಕರು ನಿಮ್ಮ ಮೇಲೆ ಯಾವುದೇ ದೂರನ್ನೂ ಇಟ್ಟುಕೊಳ್ಳುವುದಿಲ್ಲ. ಕೆಲಸದ ಬಗ್ಗೆ ಮಾತನಾಡುವುದಾದರೆ, ಇಂದು ನಿಮ್ಮ ಪ್ರಮುಖ ಕೆಲಸವನ್ನು ಪೂರ್ಣಗೊಳಿಸುವ ಮೂಲಕ ನೀವು ಆರ್ಥಿಕವಾಗಿ ಬಲಗೊಳ್ಳುತ್ತೀರಿ. ನೀವು ಸರಿಯಾಗಿ ಕೆಲಸ ಮಾಡಿದರೆ ಹಿರಿಯ ಅಧಿಕಾರಿಗಳು ಇಂದು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ. ಅವರ ಕೃಪೆಯಿಂದ ನೀವು ನೀವು ದೊಡ್ಡ ಲಾಭವನ್ನು ಪಡೆಯುವುದರಲ್ಲಿ ಆಶ್ವರ್ಯವಿಲ್ಲ!. ನೀವು ಆಹಾರ ಪದಾರ್ಥಗಳು ಅಥವಾ ಕೀಟನಾಶಕಗಳಿಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರೆ, ಇಂದು ನೀವು ಪ್ರಯೋಜನ ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ಇಂದು ಅನುಕೂಲಕರವಾಗಲಿದೆ. ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.
ಉತ್ತಮ ಬಣ್ಣ: ಹಸಿರು
ಶುಭ ಸಂಖ್ಯೆ: 14
ಶುಭ ಸಮಯ: ಸಂಜೆ 5:25 ರಿಂದ 9 ರವರೆಗೆ

ತುಲಾ ರಾಶಿ:
ಇಂದು ಆರ್ಥಿಕ ರಂಗದಲ್ಲಿ ನಿಮಗೆ ಸವಾಲಿನ ದಿನವಾಗಲಿದೆ. ಹೆಚ್ಚುವರಿ ಆದಾಯದ ಕಾರಣ ನಿಮ್ಮ ಬಜೆಟ್ ಅಸಮತೋಲನಗೊಳ್ಳಬಹುದು. ಇದಲ್ಲದೆ, ನೀವು ನಿರೀಕ್ಷಿಸಿದ ಆರ್ಥಿಕ ಲಾಭವನ್ನು ಪಡೆಯದ ಕಾರಣ ನೀವು ತುಂಬಾ ನಿರಾಶೆಗೊಳ್ಳುವಿರಿ. ಕುಟುಂಬದಲ್ಲಿ ಅಪಶ್ರುತಿ ಹೆಚ್ಚಾಗುವ ಸಾಧ್ಯತೆಯಿದೆ. ಹೆಚ್ಚಿನ ಒತ್ತಡದಿಂದಾಗಿ ಸಂಗಾತಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಪ್ರಿಯಪಾತ್ರರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದು ಅತ್ಯಗತ್ಯ. ಕೆಲಸದ ಬಗ್ಗೆ ಮಾತನಾಡುವುದಾದರೆ, ಈ ದಿನವು ನಿಮಗೆ ಸಾಮಾನ್ಯವಾಗಲಿದೆ. ನೀವು ಈಗ ವ್ಯಾಪಾರ ಮಾಡಿದರೆ, ನೀವು ಉತ್ತಮ ಲಾಭ ಪಡೆಯಬಹುದು. ಅದೇ ರೀತಿ, ದುಡಿಯುವ ಜನರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮತ್ತು ಎಚ್ಚರಿಕೆಯಿಂದ ಮಾಡಬೇಕಾಗಿದೆ. ನಿಮ್ಮ ಆರೋಗ್ಯ ದುರ್ಬಲವಾಗಿರುತ್ತದೆ. ನೀವು ನಿರ್ಲಕ್ಷ್ಯ ವಹಿಸಿದರೆ ಹೆಚ್ಚು ಸಮಸ್ಯೆಗಳು ಉಂಟಾಗಬಹುದು.
ಉತ್ತಮ ಬಣ್ಣ: ತಿಳಿ ಕೆಂಪು
ಶುಭ ಸಂಖ್ಯೆ: 45
ಶುಭ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ

ವೃಶ್ಚಿಕ ರಾಶಿ:
ಈ ರಾಶಿಚಕ್ರದ ವ್ಯಾಪಾರಿಗಳಿಗೆ ಇಂದು ಸಾಕಷ್ಟು ಹೋರಾಟದ ಸವಾಲು ಎದುರಾಗಲಿದೆ. ಇದ್ದಕ್ಕಿದ್ದಂತೆ ನಿಮ್ಮ ಮುಂದೆ ಒಂದು ದೊಡ್ಡ ಸಮಸ್ಯೆ ಉದ್ಭವಿಸಬಹುದು. ನೀವು ಬುದ್ಧಿವಂತಿಕೆಯಿಂದ ವರ್ತಿಸದಿದ್ದರೆ, ನಿಮಗೆ ನಷ್ಟವಾಗಬಹುದು. ನಿಮ್ಮ ಪ್ರಮುಖ ದಾಖಲೆಗಳನ್ನು ಕಚೇರಿಯಲ್ಲಿಯೇ ಇರಿಸಿ. ಅವುಗಳನ್ನು ಏನಾದರೂ ಕಳೆದುಕೊಂಡಲ್ಲಿ ನೀವು ದೊಡ್ಡ ತೊಂದರೆಗೆ ಸಿಲುಕಿಕೊಳ್ಳಬಹುದು ಹಣದ ಹರಿವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ಕೆಲವು ಪ್ರಮುಖ ಖರ್ಚುಗಳನ್ನು ಮಾಡಬಹುದು. ನೀವು ಕುಟುಂಬ ಸದಸ್ಯರೊಂದಿಗೆ ಶಾಂತವಾಗಿರಬೇಕು. ನಿಮ್ಮ ಕುಟುಂಬದ ಸದಸ್ಯರ ಮೇಲೆ ಅನಗತ್ಯ ಕೋಪ ತೋರಿಸುವುದನ್ನು ತಪ್ಪಿಸಿ. ಇದು ನಿಮ್ಮ ಸಂಬಂಧಗಳಲ್ಲಿ ಸ್ವಲ್ವ ಕಹಿಯೇ. ಸಂಗಾತಿಯ ನಿಗೂಢ ವರ್ತನೆಯು ನಿಮ್ಮನ್ನು ಕಾಡಬಹುದು. ಆರೋಗ್ಯದ ಬಗ್ಗೆ ಮಾತನಾಡುವುದಾದಲ್ಲಿ, ನೀವು ಮೊದಲೇ ರಕ್ತದೊತ್ತಡದ ರೋಗಿಯಾಗಿದ್ದರೆ, ಇಂದು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅತ್ಯಗತ್ಯ.
ಉತ್ತಮ ಬಣ್ಣ: ನೇರಳೆ
ಶುಭ ಸಂಖ್ಯೆ: 26
ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

ಧನು ರಾಶಿ:
ನಿಮ್ಮ ಗುರಿಯತ್ತ ನೀವು ಹೆಚ್ಚು ಗಮನ ಹರಿಸಬೇಕು ಮತ್ತು ಹೆಚ್ಚು ಶ್ರಮಿಸಬೇಕು. ನೀವು ಹೆಚ್ಚು ಹೆಚ್ಚು ಕೆಲಸ ಮಾಡಿದರೆ ಉತ್ತಮ ಫಲಿತಾಂಶಗಳೂ ಸಿಗುತ್ತವೆ. ನಿಮ್ಮ ಅಸ್ತವ್ಯಸ್ತಗೊಂಡ ದಿನಚರಿಯನ್ನು ಸಂಘಟಿಸಲು ಮೊದಲು ಪ್ರಯತ್ನಿಸಿ. ಕೆಲಸದ ಜೊತೆಗೆ, ನಿಮ್ಮ ಆರೋಗ್ಯವು ನಿಮಗೆ ಅಷ್ಟೇ ಮುಖ್ಯವಾಗಿದೆ ಎಂಬುದನ್ನು ಮರೆಯಬೇಡಿ. ಇನ್ನು ಕೆಲಸದ ವಿಷಯದ ಬಗ್ಗೆ ಮಾತನಾಡುವುದಾದರೆ, ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಇದಲ್ಲದೆ, ನೀವು ಈಗಾಗಲೇ ಕೆಲಸ ಮಾಡುತ್ತಿದ್ದರೆ ಮತ್ತು ಅಪೇಕ್ಷಿತ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದರೆ, ನಿಮ್ಮ ಆಶಯವು ಶೀಘ್ರದಲ್ಲೇ ಈಡೇರಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕುಟುಂಬದೊಂದಿಗೆ ನಿಮ್ಮ ಸಂಬಂಧಗಳು ಬಲವಾಗುತ್ತವೆ. ಹಣದ ಬಗ್ಗೆ ನೀವು ಇಂದು ತಂದೆಯೊಂದಿಗೆ ಪ್ರಮುಖ ಚರ್ಚೆ ನಡೆಸುವ ಸಾಧ್ಯತೆ ಇದೆ.
ಉತ್ತಮ ಬಣ್ಣ: ಬಿಳಿ
ಶುಭ ಸಂಖ್ಯೆ: 11
ಶುಭ ಸಮಯ: ಸಂಜೆ 5 ರಿಂದ 9 ರವರೆಗೆ

ಮಕರ ರಾಶಿ:
ನಿಮ್ಮ ಯಾವುದೇ ಗೊಂದಲಮಯ ಕೆಲಸವನ್ನು ಇಂದು ನಿಮ್ಮ ಸೌಮ್ಯ ವರ್ತನೆಯು ನಿಮಗೆ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಸಕಾರಾತ್ಮಕತೆಯಿಂದ ನಿಮ್ಮ ಸುತ್ತಲಿನ ಜನರು ಹೆಚ್ಚು ಪ್ರಭಾವಿತರಾಗುತ್ತಾರೆ. ವ್ಯವಹಾರ ವಿಷಯಗಳಲ್ಲಿ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂಬುದು ನೆನಪಿರಲಿ. ಇಲ್ಲದಿದ್ದರೆ ನೀವು ನಿಮಗಾಗಿ ತೆಗೆದುಕೊಂಡ ನಿರ್ಧಾರಗಳಿಗೆ ಮುಂದೆ ನೀವೇ ವಿಷಾದಿಸಬೇಕಾಗಬಹುದು. ಇಂದು ಉದ್ಯೋಗದಾತರಿಗೆ ಸಾಮಾನ್ಯಕ್ಕಿಂತ ಉತ್ತಮ ದಿನವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಸಹೋದ್ಯೋಗಿಗಳೊಂದಿಗೆ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನೂ ನೀವು ಪಡೆಯುತ್ತೀರಿ. ಆರ್ಥಿಕ ರಂಗದಲ್ಲಿ, ದಿನವು ಲಾಭದಾಯಕವಾಗಿರುತ್ತದೆ. ಯಾವುದೋ ಬರಬೇಕಾದ ಸಂಪತ್ತನ್ನು ನೀವು ಸ್ವಾಧೀನಪಡಿಸಿಕೊಳ್ಳುತ್ತೀರಿ. ಇನ್ನು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ನಿಮಗೆ ತುಂಬಾ ಒಳ್ಳೆಯ ದಿನ.
ಉತ್ತಮ ಬಣ್ಣ: ಕಂದು
ಶುಭ ಸಂಖ್ಯೆ: 30
ಶುಭ ಸಮಯ: ಮಧ್ಯಾಹ್ನ 1 ರಿಂದ 7 ರವರೆಗೆ

ಕುಂಭ ರಾಶಿ:
ಬೌತಿಕ ಸುಖ ನಿಮ್ಮನ್ನು ಹೆಚ್ಚು ಆಕರ್ಷಿಸಬಲ್ಲದು. ಇಂದು ನೀವು ದೊಡ್ಡ ಖರೀದಿ ಮಾಡುವ ಸಾಧ್ಯತೆ ಇದೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಹಣಕಾಸಿನ ಪರಿಸ್ಥಿತಿಯ ಮೇಲೆ ನಿಮಗೆ ಅರಿವಿರಬೇಕು. ಅದನ್ನು ಖುಲಂ ಖುಲ್ಲಾ ಖರ್ಚು ಮಾಡುವುದರಿಂದ ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆಗಳು ಉಂಟಾಗಬಹುದು. ನೀವು ಇಂದು ಕಚೇರಿಯಲ್ಲಿ ನಡೆಯುವ ಪ್ರಮುಖ ಸಭೆಯ ಪ್ರಮುಖ ಭಾಗವಾಗಬಹುದು. ನಿಮ್ಮ ಬಾಸ್ ಮಾತುಗಳನ್ನು ನೀವು ಗಂಭೀರವಾಗಿ ಪರಿಗಣಿಸುವುದು ಉತ್ತಮ. ಮತ್ತೊಂದೆಡೆ, ನೀವು ವ್ಯಾಪಾರ ಮಾಡಿದರೆ ಇಂದು ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗುತ್ತವೆ. ನಿಮ್ಮ ತಂದೆಯು ಕೆಲವು ದಿನಗಳಿಂದ ತೊಂದರೆಗೀಡಾಗಿದ್ದರೆ, ಇಂದು ಅವರ ಸಮಸ್ಯೆಯನ್ನು ಪರಿಹರಿಸಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ. ನೀವು ತುಂಬಾ ಆರೋಗ್ಯವಾಗಿರುತ್ತೀರಿ.
ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)
ಶುಭ ಸಂಖ್ಯೆ: 35
ಶುಭ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 2 ರವರೆಗೆ

ಮೀನ ರಾಶಿ:
ಇಂದಿನ ದಿನ ನಿಮಗೆ ಮಿಶ್ರ ಫಲ. ನಿಮ್ಮ ಇಂದಿನ ಕೆಲಸದ ಬಗ್ಗೆ ಮಾತನಾಡುವುದಾದರೆ, ಇಂದು ನೀವು ಅದೃಷ್ಟದಿಂದ ಏನನ್ನಾದರೂ ಪಡೆಯುತ್ತೀರಿ. ಆದರೂ ನೀವು ಕೆಲಸ ಮಾಡುವಲ್ಲಿ, ಕಠಿಣ ಪರಿಶ್ರಮದ ಹೊರತಾಗಿಯೂ ನಿಮಗೆ ಉತ್ತಮ ಫಲಿತಾಂಶ ದೊರೆಯುವುದಿಲ್ಲ. ನೀವು ಮಾಡುವ ಕೆಲಸದಲ್ಲಿ ಹಿರಿಯ ಅಧಿಕಾರಿಗಳು ಅನೇಕ ನ್ಯೂನತೆಗಳನ್ನು ಹುಡುಕುವ ಸಾಧ್ಯತೆಯಿದೆ. ನಿಮ್ಮ ಕೆಲಸವನ್ನು ನೀವು ಎಚ್ಚರಿಕೆಯಿಂದ ಮಾಡುವುದು ಉತ್ತಮ. ನೀವು ಆಹಾರ ಮತ್ತು ಪಾನೀಯವನ್ನು ವ್ಯಾಪಾರ ಮಾಡುತ್ತಿದ್ದರೆ ನೀವು ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಣ್ಣ ಲೋಪಗಳು ಸಹ ಭಾರೀ ನಷ್ಟಕ್ಕೆ ಕಾರಣವಾಗಬಹುದು. ಕುಟುಂಬ ಜೀವನದ ಬಗ್ಗೆ ಮಾತನಾಡುವುದಾದರೆ, ಮನೆಯಲ್ಲಿ ಉದ್ವಿಗ್ನತೆ ಇದ್ದರೆ, ನಿಮ್ಮ ಪರವಾಗಿ ವಿಷಯವನ್ನು ಬಗೆಹರಿಸಲು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಿ ಇಲ್ಲದಿದ್ದರೆ ಸಂಬಂಧದಲ್ಲಿನ ಕಹಿ ಹೆಚ್ಚಾಗಬಹುದು. ಹಣದ ಪರಿಸ್ಥಿತಿ ಸಾಮಾನ್ಯವಾಗಲಿದೆ. ನೀವು ಹಣಕಾಸಿನ ತೃಪ್ತಿಯನ್ನು ಬಯಸಿದರೆ, ಹಣದ ದೃಷ್ಟಿಯಿಂದ ನಿಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಸದೃಢವಾಗಿ ಮತ್ತು ಸಕ್ರಿಯವಾಗಿರಲು ಪ್ರತಿದಿನ ವ್ಯಾಯಾಮ ಮಾಡಿ.
ಉತ್ತಮ ಬಣ್ಣ: ಕೆಂಪು
ಶುಭ ಸಂಖ್ಯೆ: 28
ಶುಭ ಸಮಯ: ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ



Click it and Unblock the Notifications











