ಭಾನುವಾರದ ದಿನ ಭವಿಷ್ಯ: ಕನ್ಯಾ ರಾಶಿಯವರೇ ಈ ದಿನ ವಿಶೇಷವಾಗಿರಲಿದೆ

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya O4 October 2020

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: ಹಸ್ತಾ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಸಂಜೆ 04:27ರಿಂದ 05:57ರವರೆಗೆ
ಗುಳಿಕಕಾಲ: ಮಧ್ಯಾಹ್ನ 02:57ರಿಂದ ಸಂಜೆ 4:27ರವರೆಗೆ
ಯಮಗಂಡಕಾಲ: ಬೆಳಗ್ಗೆ 11:57ರಿಂದ ಮಧ್ಯಾಹ್ನ01:27 ರವರೆಗೆ
ದುರ್ಮುಹೂರ್ತ: ಬೆಳಿಗ್ಗೆ05:58ರಿಂದ 07:34ರವರೆಗೆ
ಸೂರ್ಯೋದಯ: ಬೆಳಿಗ್ಗೆ 5:58ಕ್ಕೆ
ಸೂರ್ಯಾಸ್ತ: ಸಂಜೆ 5:5:57ಕ್ಕೆ

ಮೇಷ ರಾಶಿ:

ಮೇಷ ರಾಶಿ:

ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ಸಮಾಜದಲ್ಲಿ ನಿಮ್ಮ ಕಾರ್ಯಗಳು ಮೆಚ್ಚುಗೆ ಪಡೆಯುತ್ತವೆ. ನೀವು ಒಂಟಿಯಾಗಿದ್ದರೆ ಮತ್ತು ಪ್ರೇಮ ವಿವಾಹವನ್ನು ಬಯಸಿದರೆ, ಇಂದು ನೀವು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಮತ್ತೊಂದೆಡೆ, ವಿವಾಹಿತರು ಜೀವನ ಸಂಗಾತಿಯ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತಾರೆ ಮತ್ತು ನಿಮ್ಮ ಪ್ರೀತಿ ಪಾತ್ರರೊಂದಿಗೆಗೆ ನೀವು ಉತ್ತಮ ಪ್ರಣಯ ದಿನವನ್ನು ಕಳೆಯುತ್ತೀರಿ. ಎಲ್ಲಾ ಜವಾಬ್ದಾರಿಗಳನ್ನು ನೀವು ಒಟ್ಟಾಗಿ ನಿರ್ವಹಿಸುವಿರಿ. ಹಣದ ದೃಷ್ಟಿಯಿಂದ ದಿನ ದುಬಾರಿಯಾಗಲಿದೆ. ವೆಚ್ಚಗಳು ಹೆಚ್ಚಾಗಬಹುದು. ನೀವು ಸ್ವಲ್ಪ ಹೆಚ್ಚು ಕೆಲಸ ಮಾಡಿದರೆ, ಹೊಸ ಆದಾಯದ ಮೂಲವನ್ನು ಪಡೆಯಬಹುದು. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಬಹಳ ಶ್ರಮಿಸಬೇಕಾಗುತ್ತದೆ. ಕಚೇರಿಯಲ್ಲಿ ನೀವು ಕೆಲವು ಪ್ರಮುಖ ಕೆಲಸಗಳಲ್ಲಿ ನಿರತರಾಗಿರುತ್ತೀರಿ. ನೀವು ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ ವ್ಯವಹಾರವನ್ನು ಮಾಡುವವರಾಗಿದ್ದರೆ, ನಿಮ್ಮ ಆತಂಕ ಹೆಚ್ಚಾಗಬಹುದು. ನೀವು ಈ ದಿನ ಉತ್ಸಾಹ ಮತ್ತು ಸಂತೋಷದಿಂದ ಇರುತ್ತೀರಿ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 12

ಶುಭ ಸಮಯ: ಮಧ್ಯಾಹ್ನ 1:55 ರಿಂದ 7 ಗಂಟೆ

ವೃಷಭ ರಾಶಿ:

ವೃಷಭ ರಾಶಿ:

ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇ ಆದಲ್ಲಿ, ನೀವು ಖಂಡಿತವಾಗಿಯೂ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ. ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ ನೀವು ಸಾಕಷ್ಟು ಸುಧಾರಣೆಯನ್ನು ನೋಡುತ್ತೀರಿ. ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವನ್ನು ದೃಡವಾಗಿಡಲು ನೀವು ಬಯಸಿದರೆ, ನೀವು ನಿಮ್ಮ ನಡವಳಿಕೆಯನ್ನು ಸಮತೋಲನದಲ್ಲಿರಿಸಿಕೊಳ್ಳಿ. ಇಂದು ತಾಯಿ ಅಥವಾ ತಂದೆಯಿಂದ ತುಸು ಲಾಭ ಉಂಟಾಗಬಹುದು. ಮತ್ತೊಂದೆಡೆ, ನೀವು ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಸಮಯದಲ್ಲಿ ಅವರಿಗೆ ನಿಮ್ಮ ಮಾರ್ಗದರ್ಶನ ಬೇಕು ಇಲ್ಲದಿದ್ದರೆ ಅವರು ತಮ್ಮ ಗುರಿಯನ್ನು ತಲುಪುವಲ್ಲಿ ಸೋಲಬಹುದು. ಕೆಲಸ ಮಾಡುವ ಕ್ಷೇತ್ರದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಮತ್ತು ಉನ್ನತ ಅಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮವನ್ನೂ ಪರಿಗಣಿಸುತ್ತಾರೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಗಳಿಸಬಹುದು. ಇನ್ನು ಹಣದ ಬಗ್ಗೆ ಮಾತನಾಡುವುದಾದರೆ ಇಂದು ಶುಭವಾಗುತ್ತದೆ. ನೀವು ಕೆಲವು ತುರ್ತು ವೆಚ್ಚಗಳನ್ನು ಮಾಡಬೇಕಾಗುತ್ತದೆ, ಆದರೆ ಯಾವುದೇ ಹಣಕಾಸಿನ ಸಮಸ್ಯೆ ಇರುವುದಿಲ್ಲ.

ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)

ಶುಭ ಸಂಖ್ಯೆ: 18

ಶುಭ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 2:40

ಮಿಥುನ ರಾಶಿ:

ಮಿಥುನ ರಾಶಿ:

ಇದ್ದಕ್ಕಿದ್ದಂತೆ ನೀವು ಹಳೆಯ ಸ್ನೇಹಿತನನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನಿಮ್ಮ ಸ್ನೇಹಿತನೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ಇಂದು ನಿಮ್ಮ ಪ್ರವೃತ್ತಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸಗಳಲ್ಲಿ ಹೆಚ್ಚಾಗಿರುತ್ತದೆ. ನೀವು ಮನೆಯಲ್ಲಿ ಪೂಜೆ ಅಥವಾ ಹವನಗಳನ್ನು ಹಮ್ಮಿಕೊಳ್ಳಬಹುದು. ಇದು ನಿಮಗೆ ಮಾನಸಿಕವಾಗಿ ಶಾಂತಿಯಯನ್ನು ನೀಡುತ್ತದೆ. ನೀವು ವ್ಯಾಪಾರ ಮಾಡುವವರಾಗಿದ್ದರೆ ಇಂದು ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನಿಮ್ಮ ಮಾತಿನಲ್ಲಿನ ದಕ್ಷತೆಯು ನಿಮ್ಮ ಬಲವಾದ ಭಾಗವೆಂದು ಹೇಳಬಹುದು. ಕಚೇರಿಯಲ್ಲಿ ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ. ಕೋಪಗೊಳ್ಳುವುದನ್ನು ತಪ್ಪಿಸಿ ಮತ್ತು ಯಾವುದೇ ತಪ್ಪನ್ನೂ ಮಾಡಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇಂದು ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ, ತಡರಾತ್ರಿಯವರೆಗೆ ಮಲಗದೇ ಎಚ್ಚರಿರುವ ನಿಮ್ಮ ಅಭ್ಯಾಸವು ನಿಮ್ಮ ಆರೋಗ್ಯ ಕ್ಷೀಣಿಸಲು ಕಾರಣವಾಗಬಹುದು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 9

ಶುಭ ಸಮಯ: ಮಧ್ಯಾಹ್ನ 12:20 ರಿಂದ ಸಂಜೆ 4 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ನಿಮ್ಮ ಆದಾಯ ಮತ್ತು ವೆಚ್ಚಗಳನ್ನು ನೀವು ಸಮತೋಲನವಾಗಿ ತೂಗಿಸಬೇಕು. ನೀವು ಹಣವನ್ನು ಹೆಚ್ಚಾಗಿ ಖರ್ಚು ಮಾಡಿದರೆ, ನಿಮ್ಮ ಹಣಕಾಸಿನ ಪರಿಸ್ಥಿತಿ ತೀವ್ರವಾಗಿ ಕುಸಿಯಬಹುದು. ನೀವು ಮನೆಯಿಂದ ದೂರವಿದ್ದರೆ, ನೀವು ಕುಟುಂಬವನ್ನು ಕಳೆದುಕೊಳ್ಳುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಅಥವಾ ಇಂಟರ್ನೆಟ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸಿ. ದಿನದ ಎರಡನೇ ಭಾಗದಲ್ಲಿಯೂ ನೀವು ಭಾರಿ ನಷ್ಟವನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ. ನೀವು ನಿಮ್ಮ ಅಮೂಲ್ಯವಾದ ವಸ್ತುವನ್ನು ಕಳೆದುಕೊಳ್ಳಬಹುದು ಅಥವಾ ಕಳ್ಳತನವಾಗಬಹುದು. ಹಾಗಾಗಿ ನೀವು ಹೆಚ್ಚು ಜಾಗರೂಕರಾಗಿರಬೇಕು. ನೀವು ಸ್ವಲ್ಪ ಸಮಯದಿಂದ ಕೆಲಸ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದರೆ, ಇಂದು ನಿಮಗಾಗಿ ಸ್ವಲ್ವ ಬಿಡುವು ಮಾಡಿಕೊಳ್ಳಿ. ನಿಮ್ಮನ್ನು ಹರುಷದಿಂದ ಇರಿಸಿಕೊಳ್ಳಲು ಸ್ವಲ್ಪ ಮನರಂಜನೆ ಸಹ ಅಗತ್ಯ. ಭವಿಷ್ಯದ ಯೋಜನೆಗಳನ್ನು ಸಂಗಾತಿಯೊಂದಿಗೆ ಚರ್ಚಿಸಲು ಒಳ್ಳೆಯ ದಿನ. ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 22

ಶುಭ ಸಮಯ: ಸಂಜೆ 5 ರಿಂದ 9 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಬಹಳ ಶುಭವಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ನಿಮ್ಮ ನಿರಂತರ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇದಲ್ಲದೆ, ನೀವು ಇತ್ತೀಚೆಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿದ್ದರೆ, ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡುವುದಾದರೆ, ಇಂದು ಹಣದ ಮಳೆಯೇ ಸುರಿಯುತ್ತದೆ. ತಾಯಿ ಲಕ್ಷ್ಮಿಯ ದಯೆ ನಿಮ್ಮ ಮೇಲಿದೆ. ಅಲ್ಲದೇ ಯಾವುದೋ ದೊಡ್ಡ ಆರ್ಥಿಕ ಲಾಭ ಬರುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಸಂತೋಷ ತುಂಬಿರುತ್ತದೆ. ಮನೆಯಲ್ಲಿ ಯಾವುದೇ ಶುಭ ಕೆಲಸಗಳನ್ನು ಮಾಡಬಹುದು. ನಿಮ್ಮ ಮಗು ಮದುವೆ ವಯಸ್ಸಿಗೆ ಬಂದಿದ್ದರೆ, ಇಂದು ಅವರಿಗೆ ಉತ್ತಮ ವಿವಾಹ ಪ್ರಸ್ತಾಪ ಬರಬಹುದು. ಕೆಲಸದ ಬಗ್ಗೆ ಹೇಳುವುದಾದರೆ, ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಕಚೇರಿಯಲ್ಲಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಮಾಡುತ್ತೀರಿ. ಮರದ ದಿಮ್ಮಿ ವ್ಯಾಪಾರಿಗಳಿಗೆ ಇಂದು ಲಾಭದಾಯಕ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 20

ಶುಭ ಸಮಯ: ಬೆಳಿಗ್ಗೆ 9:40 ರಿಂದ ಮಧ್ಯಾಹ್ನ 12:30 ರವರೆಗೆ

ಕನ್ಯಾರಾಶಿ :

ಕನ್ಯಾರಾಶಿ :

ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮತ್ತು ನಿಮ್ಮ ದಿನವನ್ನು ವಿಶೇಷವಾಗಿಸಲು ನೀವು ಕೆಲವು ಉತ್ತಮ ಯೋಜನೆಗಳನ್ನು ಮಾಡಬಹುದು. ನಿಮ್ಮ ಸಂಗಾತಿಯೊಂದಿಗಿನ ಮನಸ್ತಾಪ ದೂರವಾಗುತ್ತದೆ. ಹಾಗೂ ಭವಿಷ್ಯದಲ್ಲಿ ನೀವು ಅಂತಹ ವಿಷಯಗಳನ್ನು ಪುನರಾವರ್ತಿಸದಿದ್ದರೆ ಉತ್ತಮ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ತುಂಬಿರುತ್ತದೆ. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ತಂದೆಯಿಂದ ಯಾವುದೇ ಸಲಹೆ ನಿಮಗೆ ಪ್ರಯೋಜನಕಾರಿಯಾಗಬಹುದು. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಕೆಲಸ ಮಾಡಲು ನಿಮ್ಮ ನಿರಂತರ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ನೀವು ಪ್ರಗತಿಯನ್ನು ಕಾಣುತ್ತೀರಿ. ನಿಮಗೆ ಬೇಕಾದ ವರ್ಗಾವಣೆಯನ್ನು ನೀವು ಪಡೆಯಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವ್ಯಾಪಾರಿಗಳು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ, ನಿಮ್ಮ ಆಹಾರ ಪದ್ಧತಿಯಿಂದ ನಿಮಗೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉಂಟಾಗಬಹುದು.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 36

ಶುಭ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 2:55

ತುಲಾ ರಾಶಿ:

ತುಲಾ ರಾಶಿ:

ವೈಯಕ್ತಿಕ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧಗಳಲ್ಲಿ ಕಹಿ ಹೆಚ್ಚಿದ್ದರೆ, ಎಲ್ಲಾ ತಪ್ಪುಗ್ರಹಿಕೆಗಳನ್ನು ಇಂದು ನೀಗಿಸಬಹುದು. ಕುಟುಂಬ ಸದಸ್ಯರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುವ ಮೂಲಕ ನೀವು ಸಮಾಧಾನಗೊಳ್ಳುವಿರಿ. ನಿಮ್ಮ ಕೆಲಸದ ಬಗ್ಗೆ ಹೇಳುವುದಾದರೆ, ನಿಮ್ಮ ಸಕಾರಾತ್ಮಕ ಚಿಂತನೆಯು ನಿಮಗೆ ದೊಡ್ಡ ಗೆಲುವು ನೀಡುತ್ತದೆ. ವ್ಯಾಪಾರಿಗಳು ತಮ್ಮ ಎದುರಾಳಿಗಳನ್ನು ವ್ಯವಹಾರದಲ್ಲಿ ಮೀರಿಸುತ್ತಾರೆ. ನಿಮ್ಮ ಯಾವುದೇ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು ಮತ್ತು ನಿಮ್ಮ ವ್ಯವಹಾರವು ವೇಗವಾಗಿ ಬೆಳೆಯುತ್ತದೆ. ಕೆಲಸದಲ್ಲಿರುವವರು ಇದ್ದಕ್ಕಿದ್ದಂತೆ ಬೇರೆಡೆಗೆ ಪ್ರಯಾಣಿಸಬೇಕಾಗಬಹುದು. ಹಣದ ಬಗ್ಗೆ ಮಾತನಾಡುವುದಾದರೆ, ಇಂದು ಆರ್ಥಿಕ ಲಾಭವಾಗಬಹುದು. ಇಂದು, ನೀವು ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು, ಹಾಗಿದ್ದಲ್ಲಿ ನಿಮ್ಮ ನಿರ್ಧಾರವನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳಿ ಏಕೆಂದರೆ ನಿಮ್ಮ ನಿರ್ಧಾರವು ನಿಮ್ಮ ಜೀವನವನ್ನೇ ಬದಲಾಯಿಸಬಹುದು. ಹೆಚ್ಚು ಆತುರ ಒಳ್ಳೆಯದಲ್ಲ, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಇಂದು ಹದಗೆಡಬಹುದು.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 27

ಶುಭ ಸಮಯ: ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಕುಟುಂಬ ಜೀವನದ ಸಂತೋಷಗಳು ಹೆಚ್ಚಾಗುತ್ತವೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧಗಳು ಉತ್ತಮಗೊಳ್ಳುತ್ತದೆ. ಮನೆಯ ಯಾವುದೇ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳಬಹುದು. ನಿಮ್ಮ ಸಂಗಾತಿಯೊಂದಿಗಿನ ಪ್ರೀತಿ ಹೆಚ್ಚಾಗುತ್ತದೆ. ಸವಾಲುಗಳನ್ನು ಎದುರಿಸುವ ಸಂದರ್ಭಗಳಲ್ಲಿ ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಕೆಲಸದ ಬಗ್ಗೆ ಮಾತನಾಡುವುದಾದರೆ, ಕಚೇರಿಯಲ್ಲಿ ನಿಮ್ಮ ಉತ್ತಮ ಪ್ರದರ್ಶನದೊಂದಿಗೆ ನೀವು ಇನ್ನಷ್ಟು ಉನ್ನತ ಸ್ಥಾನಕ್ಕೇರುತ್ತೀರಿ. ಉನ್ನತ ಅಧಿಕಾರಿಗಳು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ ಮತ್ತು ಮುಂಬರುವ ಸಮಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ವ್ಯಾಪಾರ ಮಾಡುವವರಾಗಿದ್ದರೆ ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆಗಳಿವೆ. ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಮುಂದುವರೆದರೆ, ಮುಂದಿನ ದಿನಗಳಲ್ಲಿ ನೀವು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಇಂದು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇರುವುದಿಲ್ಲ. ಇಂದು ನೀವು ನಿಮ್ಮ ದಿನವನ್ನು ಪೂರ್ಣವಾಗಿ ಆನಂದಿಸುತ್ತೀರಿ. ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ದಿನ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 32

ಶುಭ ಸಮಯ: ಬೆಳಿಗ್ಗೆ 4:15 ರಿಂದ ಮಧ್ಯಾಹ್ನ 12 ರವರೆಗೆ

ಧನು ರಾಶಿ:

ಧನು ರಾಶಿ:

ಹಣಕ್ಕೆ ಸಂಬಂಧಿಸಿದ ಆತಂಕವು ದೂರವಾಗುತ್ತದೆ. ನೀವು ಬಹಳ ಸಮಯದಿಂದ ಕಾಯುತ್ತಿದ್ದ ಆರ್ಥಿಕ ಲಾಭ ಇಂದು ಸಿಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗಿರುತ್ತದೆ ಮತ್ತು ಪರಸ್ಪರ ಅರಿತುಕೊಳ್ಳುವುದು ಕೂಡ ಸುಧಾರಿಸುತ್ತದೆ. ದಿನದ ಎರಡನೇ ಭಾಗದಲ್ಲಿ ಕೆಲವು ಒತ್ತಡ ಉಂಟಾಗುವ ಸಾಧ್ಯತೆ ಇದೆ. ನೀವು ಯಾರೊಂದಿಗಾದರೂ ವಿವಾದವನ್ನು ಮಾಡಿಕೊಳ್ಳಬಹುದು. ನೀವು ಅಂತಹ ಘಟನೆಗಳಿಂದ ದೂರವಿದ್ದರೆ, ಅದು ನಿಮಗೆ ಉತ್ತಮ. ಇಲ್ಲದಿದ್ದರೆ ನೀವು ಕೋರ್ಟ್ ಕಚೇರಿ ಎಂದು ಅಲೆದಾಡುವ ಪರಿಸ್ಥಿತಿ ಎದುರಿಸಬೇಕಾಗಬಹುದು. ನೀವು ಕಚೇರಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಮೇಲಧಿಕಾರಿಗಳ ನಿರೀಕ್ಷೆಗಳನ್ನು ಪೂರೈಸಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡಬೇಕು. ಬಹುಶಃ ನಿಮ್ಮ ಪ್ರಗತಿಯ ಕನಸು ಶೀಘ್ರದಲ್ಲೇ ಈಡೇರಬಹುದು. ನೀವು ಆಹಾರ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದರೆ, ನೀವು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಇಂದಿನ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ನಿಮ್ಮ ಗುರಿಯತ್ತ ನೀವು ಗಮನ ಹರಿಸುತ್ತೀರಿ ಮತ್ತು ನೀವು ಗುರುಗಳ ಬೆಂಬಲವನ್ನೂ ಪಡೆಯುತ್ತೀರಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಆಕಾಶ

ಶುಭ ಸಂಖ್ಯೆ: 8

ಶುಭ ಸಮಯ: ಬೆಳಿಗ್ಗೆ 11:15 ರಿಂದ ರಾತ್ರಿ 8 ರವರೆಗೆ

ಮಕರ ರಾಶಿ:

ಮಕರ ರಾಶಿ:

ಹಳೆಯ ವಿಷಯಗಳನ್ನು ಮರೆತು, ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕಾಗಿದೆ. ಹಿಂದಿನ ಕಹಿ ನೆನಪುಗಳ ಬಗ್ಗೆ ನೀವು ಅಸಮಾಧಾನಗೊಂಡರೆ, ಅದು ನಿಮ್ಮ ವರ್ತಮಾನ ಮತ್ತು ನಿಮ್ಮ ಭವಿಷ್ಯವನ್ನು ಹಾಳುಮಾಡುತ್ತದೆ. ನಿಮ್ಮನ್ನು ಒತ್ತಡರಹಿತವಾಗಿಡಲು ಪ್ರಯತ್ನಿಸಿ ಮತ್ತು ನಿಮ್ಮ ಗುರಿಯತ್ತ ಹೆಚ್ಚು ಗಮನ ಹರಿಸಿ. ಹಣದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ. ನಿಶ್ಚಲವಾದ ಹಣವನ್ನು ಸ್ವೀಕರಿಸುವ ಮೂಲಕ ನಿಮ್ಮ ಹಣಕಾಸಿನ ಸ್ಥಿತಿಯನ್ನು ಬಲಪಡಿಸಿಕೊಳ್ಳಲಿದ್ದೀರಿ. ನೀವು ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಮಹತ್ವದ ನಿರ್ಣಯವನ್ನು ಇವತ್ತು ಕೈಗೊಳ್ಳಲಿದ್ದೀರಿ. ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ನೀವು ತಡಮಾಡದೆ ಸಮಯಕ್ಕೆ ಸರಿಯಾಗಿ ಅದಕ್ಕೆ ಪರಿಹಾರವನ್ನು ಕಂಡುಹಿಡಿಯಬೇಕಾಗುತ್ತದೆ. ನಿರ್ಲಕ್ಷ್ಯದಿಂದ ನೀವು ನಿಮ್ಮ ಆರೋಗ್ಯವನ್ನು ಇನ್ನಷ್ಟು ದುರ್ಬಲಗೊಳಿಸಿಕೊಳ್ಳುತ್ತೀರಿ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಉತ್ತಮ.

ಉತ್ತಮ ಬಣ್ಣ: ಕ್ರೀಮ್ (ತಿಳಿ ಬಿಳಿ)

ಶುಭ ಸಂಖ್ಯೆ: 12

ಶುಭ ಸಮಯ: ಸಂಜೆ 5 ರಿಂದ 8:45 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ಇಂದು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು. ಮಾನಸಿಕ ಒತ್ತಡ ಹೆಚ್ಚಾಗಬಹುದು ಮತ್ತು ನೀವು ಸಾಕಷ್ಟು ತೊಡಕನ್ನು ಅನುಭವಿಸುವಿರಿ. ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಕೆಲಸದ ಆರಂಭದಲ್ಲಿ, ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೆ, ನೀವು ನಿರಾಶೆಗೊಳ್ಳಬೇಕಾಗಿಲ್ಲ. ಕಠಿಣ ಪರಿಶ್ರಮವೇ ಯಶಸ್ಸಿನ ಏಕೈಕ ಮಂತ್ರ ಎಂಬುದನ್ನು ನೆನಪಿಡಿ. ನೀವು ಕಷ್ಟಪಟ್ಟು ಮತ್ತು ಉತ್ತಮವಾಗಿ ಕೆಲಸ ಮಾಡುತ್ತೀರಿ, ಶೀಘ್ರದಲ್ಲೇ ನೀವು ಸರಿಯಾದ ಫಲವನ್ನು ಪಡೆಯುತ್ತೀರಿ. ಇಂದು ವ್ಯಾಪಾರಿಗಳಿಗೆ ಮಹತ್ವದ ದಿನವಾಗಲಿದೆ. ಹಳೆಯ ಸಂಪರ್ಕಗಳ ಲಾಭವನ್ನು ನೀವು ಪಡೆಯಬಹುದು. ಇದಲ್ಲದೆ, ಆರ್ಥಿಕ ಸವಾಲುಗಳನ್ನು ಎದುರಿಸಲು ನೀವು ಕೆಲವು ಹೊಸ ಯೋಜನೆಗಳನ್ನು ಮಾಡಬಹುದು. ಕುಟುಂಬ ಜೀವನದಲ್ಲಿ ಅಪಶ್ರುತಿ ಏಳಬಹುದು. ಮನೆಯ ಸದಸ್ಯರ ನಡುವೆ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ತೊಂದರೆಗೊಳಗಾಗಬಹುದು. ಹಣದ ಪರಿಸ್ಥಿತಿ ಸಾಮಾನ್ಯವಾಗಿ ಇರಲಿದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 3

ಶುಭ ಸಮಯ: ಮಧ್ಯಾಹ್ನ 2:30 ರಿಂದ 6 ರವರೆಗೆ

ಮೀನ ರಾಶಿ:

ಮೀನ ರಾಶಿ:

ಕೆಲಸದ ಆರಂಭದಲ್ಲಿ ನೀವು ಇಂದು ಹೆಚ್ಚು ಸುಸ್ತನ್ನು ಅನುಭವಿಸಬಹುದು. ನಿರಂತರವಾಗಿ ಕೆಲಸ ಮಾಡುವುದನ್ನು ತಪ್ಪಿಸಿ ಮತ್ತು ನಿಮ್ಮ ಮೇಲೆ ನಿಮಗೆ ಗಮನವಿರಲಿ. ವ್ಯಾಪಾರಿಗಳು ಹಣವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ ಇಲ್ಲದಿದ್ದರೆ ನಿಮಗೆ ನಷ್ಟವಾಗಬಹುದು. ವೈಯಕ್ತಿಕ ಜೀವನದಲ್ಲಿ ತೊಂದರೆಗಳು ಹೆಚ್ಚಾಗುತ್ತಿವೆ. ಯಾವುದಾದರೂ ವಿಷಯದಲ್ಲಿ ಸಂಗಾತಿಯೊಂದಿಗೆ ಮನಸ್ತಾಪಗಳಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಅನಿಯಂತ್ರಿತ ಕೋಪವು ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ನಿಮ್ಮ ಖರ್ಚುಮಾಡುವ ಸ್ವಭಾವದಿಂದಾಗಿ ಹಣದ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ, ಮನಸ್ಸು ತೊಂದರೆಗೊಳಗಾಗುತ್ತದೆ, ಅದು ನಿಮ್ಮ ದೈಹಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ, ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಿ, ವಿಷಯಗಳು ನಿಮ್ಮ ಪರವಾಗಿಯೇ ಇವೆ ಎಂದು ನೀವು ಭಾವಿಸುವಿರಿ. ನೀವು ಒಬ್ಬಂಟಿಯಾಗಿದ್ದರೆ, ಇಂದು ನೀವು ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 7

ಒಳ್ಳೆಯ ಸಮಯ: ಮಧ್ಯಾಹ್ನ 12:15 ರಿಂದ 3:30 ರವರೆಗೆ

English summary

Dina Bhavishya O4 October 2020

Here are dina bhavishya of 4 october 2020, read on,
Story first published: Sunday, October 4, 2020, 4:00 [IST]
X
Desktop Bottom Promotion