For Quick Alerts
ALLOW NOTIFICATIONS  
For Daily Alerts

ಶನಿವಾರದ ದಿನ ಭವಿಷ್ಯ: ವೃಶ್ವಿಕ ರಾಶಿಯವರೇ ಈ ದಿನ ತುಂಬಾ ಅನುಕೂಲಕರವಾಗಿದೆ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರತ್
ಮಾಸ: ಅಧಿಕ ಅಶ್ವಿನಿ
ನಕ್ಷತ್ರ: ಹಸ್ತಾ
ತಿಥಿ: ಕೃಷ್ಣ ಪಕ್ಷ
ರಾಹುಕಾಲ: ಬೆಳಗ್ಗೆ8:58ರಿಂದ ಮಧ್ಯಾಹ್ನ 01:28ರವರೆಗೆ
ಗುಳಿಕಕಾಲ: ಬೆಳಿಗ್ಗೆ10:28ರಿಂದ 11:58ರವರೆಗೆ
ಯಮಗಂಡಕಾಲ: ಬೆಳಿಗ್ಗೆ 5:58 ರಿಂದ07:28 ರವರೆಗೆ
ದುರ್ಮುಹೂರ್ತ: ಬೆಳಿಗ್ಗೆ05:58ರಿಂದ 07:34ರವರೆಗೆ
ಸೂರ್ಯೋದಯ: ಬೆಳಿಗ್ಗೆ 5:58ಕ್ಕೆ
ಸೂರ್ಯಾಸ್ತ: ಸಂಜೆ 5:5:57ಕ್ಕೆ

ಮೇಷ ರಾಶಿ:

ಮೇಷ ರಾಶಿ:

ನೀವು ವಿದ್ಯಾರ್ಥಿಯಾಗಿದ್ದರೆ, ನಿಮ್ಮ ಅಧ್ಯಯನದ ಬಗ್ಗೆ ಅಸಡ್ಡೆ ಮಾಡಬೇಡಿ. ಮೊಬೈಲ್ ಮತ್ತು ಟಿವಿಯಿಂದ ದೂರವಿರಿ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಲು ಪ್ರಯತ್ನಿಸಿ. ಕೆಲಸದ ಬಗ್ಗೆ ಹೇಳುವುದಾದರೆ, ಈ ಸಮಯದಲ್ಲಿ ಉದ್ಯೋಗಿಗಳಿಗೆ ಏರಿಳಿತಗಳು ಸಾಮಾನ್ಯ. ನಿಮ್ಮ ಸಾಮರ್ಥ್ಯಗಳ ಆಧಾರದ ಮೇಲೆ ನೀವು ಶ್ರಮಿಸಬೇಕು. ನೀವು ಸಹಭಾಗಿತ್ವದಲ್ಲಿ ವ್ಯವಹಾರ ಮಾಡಿದರೆ, ನಿಮ್ಮ ಪಾಲುದಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ನೀವು ಗೌರವಿಸಬೇಕು. ಅಹಂಕಾರ ಮತ್ತು ಕೋಪವು ನಿಮ್ಮ ವ್ಯವಹಾರಕ್ಕೆ ಹಾನಿಕಾರಕವಾಗಬಹುದು ಎಂಬುದನ್ನು ನೆನಪಿಡಿ. ಹಣದ ವಿಷಯದಲ್ಲಿ ದಿನ ಸಾಮಾನ್ಯವಾಗಿರುತ್ತದೆ. ಇಂದು ನೀವು ಹಣಕಾಸಿನ ವಹಿವಾಟುಗಳನ್ನು ಮಾಡದೇ ಇರುವುದು ಒಳ್ಳೆಯದು. ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ ಇಂದು ಪರಿಹಾರ ಪಡೆಯುತ್ತೀರಿ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 28

ಶುಭ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ

ವೃಷಭ ರಾಶಿ:

ವೃಷಭ ರಾಶಿ:

ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ದಿನ ನೀವು ನಿರಾಶೆ ಅನುಭವಿಸುವಿರಿ. ಈ ಸಮಯದಲ್ಲಿ ನೀವು ಹೆಚ್ಚು ಶ್ರಮ ಪಡಬೇಕು. ನೀವು ಕೆಲಸ ಮಾಡುತ್ತಿರುವವರಾಗಿದ್ದರೆ, ಸೋಮಾರಿತನವನ್ನು ಬಿಟ್ಟು ಕೆಲಸ ಮಾಡುವ ಅಗತ್ಯವಿದೆ. ನೀವು ಹೆಚ್ಚು ಶ್ರಮವಹಿಸಿದಷ್ಟು ಹೆಚ್ಚು ಉತ್ತಮ ಫಲ ಸಿಗುತ್ತದೆ. ಭೂಮಿಗೆ ಸಂಬಂಧಿಸಿದ ಕೆಲಸ ಮಾಡುವ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ. ನಿಮ್ಮ ಕೈಯಲ್ಲಿ ದೊಡ್ಡ ಅವಕಾಶವಿದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನೀವು ಹಿರಿಯ ಸಹೋದರರಿಂದ ಯಾವುದೇ ಪ್ರಮುಖ ಸಲಹೆಯನ್ನು ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಸಬಲರಾಗುವ ಬಲವಾದ ಸಾಧ್ಯತೆಗಳು ಇವೆ. ಹಠಾತ್ ಸಂಪತ್ತನ್ನು ಪಡೆಯಬಹುದು. ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ, ನಿಮ್ಮನ್ನು ಆರೋಗ್ಯವಾಗಿ ಮತ್ತು ಚಟುವಟಿಕೆಯಿಂದ ಇಟ್ಟುಕೊಳ್ಳಲು ನೀವು ಕ್ರೀಡೆಗಳಲ್ಲಿ ಭಾಗವಹಿಸಬೇಕು.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 20

ಶುಭ ಸಮಯ: ಬೆಳಿಗ್ಗೆ 9:40 ರಿಂದ ಮಧ್ಯಾಹ್ನ 12:30 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ನೀವು ವ್ಯಾಪಾರ ಮಾಡುತ್ತಿದ್ದರೆ ಮತ್ತು ನೀವು ಇತ್ತೀಚೆಗೆ ದೊಡ್ಡ ವ್ಯವಹಾರವನ್ನು ಆರಂಭಿಸಿದ್ದರೆ, ನಿರೀಕ್ಷಿತ ಲಾಭವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ನೀವು ಮರದ ವ್ಯಾಪಾರ ಮಾಡುವವರಾಗಿದ್ದರೆ, ನೀವು ಇಂದು ಲಾಭ ಗಳಿಸಲು ಉತ್ತಮ ಅವಕಾಶವಿದೆ. ಮತ್ತೊಂದೆಡೆ, ನಿರುದ್ಯೋಗಿಗಳು ಇಂದು ಪ್ರತಿಕೂಲ ಸಂದರ್ಭಗಳನ್ನು/ ಕಷ್ಟವನ್ನು ಎದುರಿಸಬೇಕಾಗುತ್ತದೆ. ನೀವು ಕಚೇರಿಯಲ್ಲಿ ತುಂಬಾ ಸಮತೋಲನದಲ್ಲಿ ಕೆಲಸ ಮಾಡಬೇಕು. ಯಾವುದೋ ವಿಷಯಕ್ಕೆ ನಿಮ್ಮ ಕೋಪದಿಂದಾಗಿ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯಿದೆ. ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಮಾಡಿಕೊಳ್ಳುವ ಸಾಧ್ಯತೆಯಿದೆ. ಇನ್ನು ಹಣಕಾಸಿನ ವಿಷಯಕ್ಕೆ ಬರುವುದಾದರೆ, ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ನೀವು ಒಟ್ಟುಗೂಡಿಸಿಟ್ಟ ಬಂಡವಾಳವನ್ನು ಖರ್ಚು ಮಾಡಬೇಡಿ. ಮನೆಯ ವಾತಾವರಣ ಶಾಂತವಾಗಿ ಇರುತ್ತದೆ. ನೀವು ಮನೆಯ ಹಿರಿಯರಿಂದ ಬೆಂಬಲ ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 22

ಶುಭ ಸಮಯ: ಸಂಜೆ 5 ರಿಂದ 9 ಗಂಟೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ವೈವಾಹಿಕ ಜೀವನದಲ್ಲಿ ಅಪಶ್ರುತಿ ಉಂಟಾಗುತ್ತದೆ. ನಿಮ್ಮ ಸಂಗಾತಿಯನ್ನು ಅನಗತ್ಯವಾಗಿ ಅನುಮಾನಿಸುವ ಅಭ್ಯಾಸದಿಂದಾಗಿ ನಿಮ್ಮಿಬ್ಬರ ನಡುವೆ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಸಂಬಂಧವನ್ನು ಬಲಪಡಿಸಲು, ನೀವು ಎಲ್ಲಾ ತಪ್ಪು ಕಲ್ಪನೆಗಳನ್ನು ತೊಡೆದುಹಾಕಲು ಪ್ರಯತ್ನಿಸಬೇಕು. ಕಚೇರಿ ಕೆಲಸದಿಂದಾಗಿ ನೀವು ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ನೀವು ಶ್ರಮವಹಿಸಿ ಕೆಲಸ ಮಾಡಿದರೆ, ಇಂದು ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಇತ್ತೀಚೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ಇಂದು ನಿಮಗೆ ದೊಡ್ಡ ಆಘಾತವಾಗಬಹುದು. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಓದುವುದಕ್ಕೆ, ಬರೆಯುವುದಕ್ಕೆ ಸಂಬಂಧಿಸಿದ ಯಾವುದೇ ಖರ್ಚುಗಳನ್ನು ಇಂದು ಮಾಡಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ, ನಿಮ್ಮ ನಿರ್ಲಕ್ಷ್ಯವು ಕೆಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಇದರಿಂದಾಗಿ ನಿಮ್ಮ ಆರೋಗ್ಯವನ್ನು ನೀವು ನಿರ್ಲಕ್ಷಿಸಬಾರದು.

ಉತ್ತಮ ಬಣ್ಣ: ಆಕಾಶ ನೀಲಿ

ಶುಭ ಸಂಖ್ಯೆ: 11

ಶುಭ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ

 ಸಿಂಹ ರಾಶಿ:

ಸಿಂಹ ರಾಶಿ:

ನಿಮ್ಮ ಕುಟುಂಬ ಜೀವನವು ಇಂದು ಉತ್ತಮವಾಗಿರಲಿದೆ. ಕುಟುಂಬ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಲು ನೀವು ನಿಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೀರಿ ಮತ್ತು ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಮನೆಯ ಸದಸ್ಯರಲ್ಲಿ ಯಾರಿಗಾದರೂ ಉತ್ತಮ ಲಾಭವಾಗಬಹುದು, ಅದು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ನೀವು ಮದುವೆಯಾಗಿದ್ದರೆ, ಸಂಗಾತಿಯ ಮೊಂಡುತನವನ್ನು ನಿವಿಂದು ಎದುರಿಸಬೇಕಾಗುತ್ತದೆ. ನೀವು ಶಾಂತಿಯಿಂದ ವರ್ತಿಸಿದರೆ ನಿಮ್ಮ ನಡುವೆ ಯಾವುದೇ ಸಮಸ್ಯೆ ಇರುವುದಿಲ್ಲ. ವ್ಯಾಪಾರಿಗಳು ಪ್ರಮುಖ ವ್ಯಕ್ತಿಯ ಸಹಾಯದಿಂದ ಇಂದು ದೊಡ್ಡ ವ್ಯವಹಾರವನ್ನು ಮಾಡಲು ಅವಕಾಶವನ್ನು ಪಡೆಯಬಹುದು. ಇಂದು ನೀವು ನಿಮ್ಮ ಕೆಲಸದಲ್ಲಿ ಹೆಚ್ಚು ಕಾರ್ಯನಿರತರಾಗಿರುತ್ತೀರಿ. ಆದಾಗ್ಯೂ ತರಾತುರಿ ಮತ್ತು ಆತಂಕಕ್ಕೆ ಒಳಗಾಗದೇ ಇರುವುದು ಉತ್ತಮ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ನೀವು ವಿಶ್ರಾಂತಿಯ ಕಡೆಗೂ ಸಹ ಗಮನ ಹರಿಸಬೇಕು.

ಉತ್ತಮ ಬಣ್ಣ: ಕೆಂಪು

ಶುಭ ಸಂಖ್ಯೆ: 12

ಶುಭ ಸಮಯ: ಮಧ್ಯಾಹ್ನ 1:55 ರಿಂದ 7 ಗಂಟೆ

ಕನ್ಯಾರಾಶಿ:

ಕನ್ಯಾರಾಶಿ:

ಈ ದಿನ, ನೀವು ಅತಿಯಾದ ಕೋಪ ಮತ್ತು ದುರಹಂಕಾರದಿಂದ ದೂರ ಉಳಿಯಿರಿ. ಅನಗತ್ಯ ಚಿಂತೆಯಿಂದಾಗಿ ನಿಮ್ಮ ಮಾನಸಿಕ ಒತ್ತಡ ಮಾತ್ರ ಹೆಚ್ಚಾಗುತ್ತದೆ. ನೀವು ಕಚೇರಿಯಲ್ಲಿ ತುಂಬಾ ಸಕ್ರಿಯರಾಗಿರಬೇಕು. ಹೆಚ್ಚಿನ ಕೆಲಸದ ಹೊರೆಯಿಂದಾಗಿ, ನೀವು ಇಂದು ತುಂಬಾ ಶ್ರಮಿಸಬೇಕಾಗಬಹುದು. ನಿಮ್ಮ ಬಾಸ್ ನಿಮಗೆ ಯಾವುದೇ ಪ್ರಮುಖ ಕೆಲಸವನ್ನು ನಿಯೋಜಿಸಿದರೆ, ಅದನ್ನು ಗಂಭೀರವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ನೀವು ವ್ಯಾಪಾರ ಮಾಡುವವರಾಗಿದ್ದರೆ ಮತ್ತು ಇಂದು ನೀವು ಹೊಸ ವ್ಯವಹಾರ ಪ್ರಸ್ತಾಪವನ್ನು ಪಡೆದರೆ, ನೀವು ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಆತುರದ ನಿರ್ಧಾರ ಮಾಡಬೇಡಿ ಯಾಕೆಂದರೆ ನಂತರ ನೀವು ನಿಮ್ಮ ನಿರ್ಧಾರದಿಂದ ವಿಷಾದಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹಣದ ಪರಿಸ್ಥಿತಿ ಬಲವಾಗಿರುತ್ತದೆ. ಇನ್ನು ನಿಮ್ಮ ಆರೋಗ್ಯದ ಬಗ್ಗೆ ಹೇಳಬೇಕೆಂದರೆ, ನಿಮಗೆ ಅಲರ್ಜಿ ಅಥವಾ ಸೋಂಕು ಬರುವ ಸಾಧ್ಯತೆಯಿದೆ, ಆದ್ದರಿಂದ ನೀವು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 9

ಶುಭ ಸಮಯ: ಮಧ್ಯಾಹ್ನ 12:20 ರಿಂದ ಸಂಜೆ 4 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ನೀವು ಕೆಲಸ ಮಾಡುತ್ತಿದ್ದರೆ ಇಂದು ನೀವು ಒತ್ತಡದ ದೈನಂದಿನ ದಿನಚರಿಯಿಂದ ಪರಿಹಾರ ಪಡೆಯುತ್ತೀರಿ. ಇಂದು ಕೆಲಸದ ಹೊರೆ ಹಗುರವಾಗಿರುತ್ತದೆ ಮತ್ತು ನಿಮಗಾಗಿ ಸಾಕಷ್ಟು ಸಮಯವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮನ್ನು ಉಲ್ಲಾಸದಿಂದಿರಿಸಲು ಇಂದು ಉತ್ತಮ ದಿನವಾಗಿದೆ, ಆದ್ದರಿಂದ ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಒಳ್ಳೆಯ ಮಾತುಗಳನ್ನಾಡುತ್ತೀರಿ ಹಾಗೂ ನೀವು ಸಾಕಷ್ಟು ಮನರಂಜನೆಯನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ, ಈ ಕ್ಷಣಗಳು ನಿಮಗೆ ಸ್ಮರಣೀಯವಾಗಿರುತ್ತವೆ. ವ್ಯಾಪಾರಿಗಳಿಗೆ ದಿನವು ತುಂಬಾ ಕಾರ್ಯನಿರತವಾಗಿದೆ, ನಿಮ್ಮ ವ್ಯವಹಾರವನ್ನು ಹೆಚ್ಚಿಸಲು ನೀವು ಶ್ರಮಿಸುತ್ತೀರಿ. ಅಂತೆಯೇ, ನೀವು ನಿರಂತರವಾಗಿ ಪ್ರಯತ್ನಿಸುತ್ತಲೇ ಇರಬೇಕು, ಶೀಘ್ರದಲ್ಲೇ ನಿಮಗೆ ಉತ್ತಮ ಫಲ ಸಿಗುತ್ತದೆ.ನಿಮ್ಮ ಆರ್ಥಿಕ ಪರಿಸ್ಥಿತಿಯ ವಿಷಯದಲ್ಲಿ ಈ ದಿನವು ಸಾಮಾನ್ಯವಾಗಿರುತ್ತದೆ. ಇಂದು ನೀವು ಚೆನ್ನಾಗಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಉತ್ತಮ ಬಣ್ಣ: ಕಡು ಹಳದಿ

ಶುಭ ಸಂಖ್ಯೆ: 17

ಶುಭ ಸಮಯ: ಸಂಜೆ 6 ರಿಂದ 10:20

ವೃಶ್ವಿಕ ರಾಶಿ:

ವೃಶ್ವಿಕ ರಾಶಿ:

ಇಂದು ನಿಮಗೆ ಉತ್ತಮವಾದ ದಿನವಾಗಿದೆ. ಹೊಸ ಯೋಜನೆಗಳನ್ನು ರೂಪಿಸಲು ಸಮಯ ಅನುಕೂಲಕರವಾಗಿದೆ. ನೀವು ಬಲವಾದ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಮಾಡಿದರೆ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಹಣದ ದೃಷ್ಟಿಯಿಂದ ದಿನ ಪ್ರಯೋಜನಕಾರಿಯಾಗಲಿದೆ. ಇಂದು ನೀವು ಹೆಚ್ಚುವರಿ ಹಣವನ್ನು ಗಳಿಸುವ ಅವಕಾಶವಿದೆ. ನೀವು ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದಿರುತ್ತೀರಿ, ಅದು ನಿಮಗೆ ಪೂರ್ಣ ಸಹಕಾರಿಯಾಗುತ್ತದೆ. ನಿಮ್ಮ ಕೆಲಸವನ್ನು ನೀವು ಎರಡು ಪಟ್ಟು ವೇಗವಾಗಿ ಮಾಡುತ್ತೀರಿ. ವ್ಯಾಪಾರಿಗಳಿಗೆ ಸ್ವಲ್ಪ ಸಮಾಧಾನ ಸಿಗಬಹುದು. ಚಿಕ್ಕ ಕೆಲಸವೇ ಆಗಿದ್ದರೂ ಸಹ ನೀವು ಆರ್ಥಿಕ ಲಾಭವನ್ನು ಪಡೆಯಬಹುದು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಇಂದಿನ ದಿನವನ್ನು ನೀವು ಆನಂದಿಸುವಿರಿ. ವಿದ್ಯಾರ್ಥಿಗಳಿಗೆ ಸಮಯ ಸ್ವಲ್ಪ ಕಷ್ಟವಾಗಬಹುದು.ನಿಮ್ಮ ಅಧ್ಯಯನದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ, ನಿಮ್ಮ ಆರೋಗ್ಯವು ತುಂಬಾ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 8

ಶುಭ ಸಮಯ: ಸಂಜೆ 4:35 ರಿಂದ 7:20 ರವರೆಗೆ

ಧನು ರಾಶಿ:

ಧನು ರಾಶಿ:

ಕುಟುಂಬ ಜೀವನದಲ್ಲಿ ಕೆಲವು ಒತ್ತಡ ಸಂಭವಿಸುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ನಿಮ್ಮ ಮನಸ್ತಾಪದಿಂದಾಗಿ ಮನೆಯ ವಾತಾವರಣ ಹಾಳಾಗಬಹುದು. ಕುಟುಂಬವು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ ಎಂದು ನೀವು ಭಾವಿಸುವಿರಿ. ನಿಮ್ಮ ವಿಷಯವನ್ನು ನೀವು ಬುದ್ಧಿವಂತಿಕೆಯಿಂದ ಪ್ರಸ್ತುತಪಡಿಸಿದರೆ, ಅವರು ನಿಮ್ಮನ್ನು ಅರ್ಥಮಾಡಿಕೊಳ್ಳಬಹುದು. ಮತ್ತೊಂದೆಡೆ, ಸಂಗಾತಿಯ ಆರೋಗ್ಯದಲ್ಲಿ ಇಂದು ಕ್ಷೀಣಿಸುತ್ತಿರುವುದು ನಿಮ್ಮಲ್ಲಿ ಆತಂಕವನ್ನು ಹೆಚ್ಚಿಸುತ್ತದೆ. ನೀವು ಅವರೊಂದಿಗೆ ಹೆಚ್ಚು ಸಮಯ ಕಳೆಯುವುದು ಮತ್ತು ಅವರನ್ನು ನೋಡಿಕೊಳ್ಳುವುದು ಉತ್ತಮ. ಮಕ್ಕಳ ಕಡೆಯಿಂದ ಸಂತೋಷ ಉಂಟಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ಶ್ಲಾಘನೀಯ. ನೀವು ಅವರ ಬಗ್ಗೆ ಹೆಮ್ಮೆಪಡುವಿರಿ. ಆರ್ಥಿಕ ಕೆಲಸಕಾರ್ಯಗಳಲ್ಲಿ ನೀವು ಮಗ್ನರಾಗಿರಿತ್ತೀರಿ. ವೆಚ್ಚಗಳು ಇಂದು ಹೆಚ್ಚಾಗಬಹುದು, ಆದರೆ ಇಂದು ಆದಾಯವನ್ನು ಹೆಚ್ಚು ಗಳಿಸುವ ಸಾಧ್ಯತೆಯೂ ಇದೆ. ಕೆಲಸ ಮಾಡುವ ಸ್ಥಳಗಳಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದು, ಕೆಲಸದ ಹೊರೆ ಸಹ ಕಡಿಮೆ ಇರುತ್ತದೆ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 36

ಶುಭ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 2:55

ಮಕರ ರಾಶಿ:

ಮಕರ ರಾಶಿ:

ನೀವು ನೌಕರಿ ಮಾಡುವವರಾಗಿದ್ದರೆ, ಇಂದು ನಿಮಗೆ ಶುಭವಾಗುತ್ತದೆ. ನಿಮ್ಮ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೆ, ನೀವು ಬೇರೆ ಯಾವುದೇ ದೊಡ್ಡ ಕಂಪನಿಯಿಂದ ಉತ್ತಮ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ವ್ಯವಹಾರದಲಿ ತೊಡಗಿರುವವರಾಗಿದ್ದರೆ ಇಂದು ಹೂಡಿಕೆ ಮಾಡಲು ಅವಕಾಶ ಸಿಕ್ಕರೆ ಆತುರಪಡಬೇಡಿ. ನೀವು ಮುಂಬರುವ ದಿನಗಳಲ್ಲಿ ದೊಡ್ಡ ಲಾಭವನ್ನು ಪಡೆಯಬಹುದಾದಂತಹ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ವೈಯಕ್ತಿಕ ಜೀವನದಲ್ಲಿ ಹಠಾತ್ ಸಮಸ್ಯೆ ಇಂದು ಉದ್ಭವಿಸಬಹುದು. ನೀವು ಸ್ನೇಹಿತ ಅಥವಾ ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಹಣವು ಉತ್ತಮ ಸ್ಥಿತಿಯಲ್ಲಿರುತ್ತದೆ. ಇಂದು ವೆಚ್ಚಗಳು ಕಡಿಮೆ ಇರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹೆಚ್ಚು ನೀರನ್ನು ಕುಡಿಯಿರಿ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 22

ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ

 ಕುಂಭ:

ಕುಂಭ:

ಉದ್ಯೋಗದಲ್ಲಿರುವವರು ಕಚೇರಿಯಲ್ಲಿರುವ ತಮ್ಮ ಉನ್ನತ ಅಧಿಕಾರಿಗಳಿಗೆ ಸಂಪೂರ್ಣ ಗೌರವ ನೀಡಬೇಕಾಗುತ್ತದೆ. ನೀವು ತಪ್ಪು ಮಾಡಿದರೆ, ಅದನ್ನು ಮುಕ್ತ ಹೃದಯದಿಂದ ಒಪ್ಪಿಕೊಳ್ಳಿ. ನಿಮ್ಮ ಕೆಲಸಕ್ಕೆ ಅಪಾಯವಾಗುವ ಹಾಗೆ ನೀವು ಅಹಂಕಾರದಲ್ಲಿ ಯಾವುದೇ ಹೆಜ್ಜೆಯನ್ನು ಇಡಬೇಡಿ. ನೀವು ಸರ್ಕಾರಿ ಕೆಲಸ ಮಾಡುತ್ತಿದ್ದರೆ, ಇಂದು ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ಇಂದು, ಫ್ಯಾಷನ್‌ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಹೆಚ್ಚು ಪ್ರಯೋಜನ ಪಡೆಯಬಹುದು. ಹೊಸ ಯೋಜನೆಗಳನ್ನು ಮುಂದುವರಿಸಲು ದಿನವು ಅನುಕೂಲಕರವಾಗಿದೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧವು ಸಾಮರಸ್ಯದಿಂದ ಕೂಡಿರುತ್ತದೆ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 4

ಶುಭ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 2: 30 ರವರೆಗೆ

ಮೀನ ರಾಶಿ:

ಮೀನ ರಾಶಿ:

ನೀವು ಕೆಲಸದ ಹೊರೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಯೋಜನೆಯ ಪ್ರಕಾರವೇ ಮಾಡಬೇಕು. ನಿಮ್ಮ ಮೇಲೆ ನೀವು ಹೆಚ್ಚು ಒತ್ತಡ ಹೇರಬೇಡಿ. ನಿಮ್ಮ ಕೆಲಸವನ್ನು ನಿಧಾನಗತಿಯಲ್ಲಿ ಪೂರ್ಣಗೊಳಿಸಲು ನೀವು ಪ್ರಯತ್ನಿಸುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ತೊಂದರೆ ಅನುಭವಿಸುತ್ತಿದ್ದರೆ, ಇಂದು ಅವರು ಪ್ರೀತಿಯಿಂದ ನಿಮ್ಮ ಕಡೆಗೆ ಕೈ ಚಾಚಬಹುದು. ನಿಮ್ಮ ಕೋಪವನ್ನು ಬಿಟ್ಟು ನಿಮ್ಮ ಪರವಾಗಿ ನೀವೇ ಸಂಪೂರ್ಣ ಬೆಂಬಲ ನೀಡುವುದು ಉತ್ತಮ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಹೆಚ್ಚು ಖರ್ಚು ಮಾಡುವ ಮನಸ್ಥಿತಿಯಲ್ಲಿದ್ದರೆ ಅದನ್ನು ತಪ್ಪಿಸಿ. ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ತಲೆನೋವು ಕಾಣಿಸಿಕೊಳ್ಳಬಹುದು.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 23

ಶುಭ ಸಮಯ: ಮಧ್ಯಾಹ್ನ 3 ರಿಂದ 10 ರವರೆಗೆ

English summary

Dina Bhavishya O3 October 2020

Here are dina bhavishya of 3 october 2020, read on,
Story first published: Friday, October 2, 2020, 20:09 [IST]
X
Desktop Bottom Promotion