Latest Updates
-
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ
ಸೋಮವಾರದ ದಿನ ಭವಿಷ್ಯ: ಮಿಥುನ ರಾಶಿಯವರೇ ಇಂದು ನಿಮಗೆ ತಾಳ್ಮೆ ಪರೀಕ್ಷೆ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಕಾರ್ತಿಕಾ
ತಿಥಿ: ಷಷ್ಠಿ
ನಕ್ಷತ್ರ: 8.43ರವರೆಗೆ ನಕ್ಷತ್ರ ಅಶ್ಲೇಷ ನಂತರ ಮಘಾ
ಪಕ್ಷ: ಕೃಷ್ಣ ಪಕ್ಷ
ರಾಹುಕಾಲ: ಬೆಳಗ್ಗೆ07:32ರಿಂದ 08:59ರವರೆಗೆ
ಗುಳಿಕಕಾಲ: ಮಧ್ಯಾಹ್ನ 01:19ರಿಂದ02:46ರವರೆಗೆ
ಯಮಗಂಡಕಾಲ: ಬೆಳಗ್ಗೆ10:26 ರಿಂದ 11:53ರವರೆಗೆ
ದುರ್ಮುಹೂರ್ತ: ಮಧ್ಯಾಹ್ನ 12:16 ರಿಂದ01:02ರವರೆಗೆ
ಮಧ್ಯಾಹ್ನ02:35 ರಿಂದ 03:21ರವರೆಗೆ
ಸೂರ್ಯೋದಯ: ಬೆಳಗ್ಗೆ 06:05ಕ್ಕೆ
ಸೂರ್ಯಾಸ್ತ: ಸಂಜೆ 05:40ಕ್ಕೆದಕ್ಷಿಣ ಕನ್ನಡದ ಪ್ರಸಿದ್ಧ ಜ್ಯೋತಿಷ್ಯರು,
ಆಚಾರ್ಯ ಶ್ರೀ ರಾಘವೇಂದ್ರ ಭಟ್ ಕುಡ್ಲ.
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಉಪಾಸಕರು
ಪ್ರೀತಿ- ಪ್ರೇಮ ವಿಚಾರ, ಸತಿ- ಪತಿ ಕಲಹ, ಮದುವೆ ವಿಳಂಬ, ಸಂತಾನ, ಉದ್ಯೋಗ, ವ್ಯಾಪಾರ ಸಮಸ್ಯೆ, ದೃಷ್ಟಿ ದೋಷ, ಕುಜ ದೋಷ, ವಾಮಾಚಾರ ಬಾಧಿತರಿಗೆ ಪರಿಹಾರ ನಿಶ್ಚಿತ. ಹಣಕಾಸು ಸಮಸ್ಯೆ, ಅನಾರೋ ಗ್ಯ, ಶತ್ರು ಬಾಧೆ, ಗೃಹ ನಿರ್ಮಾಣದಲ್ಲಿ ಅಡೆ-ತಡೆಗಳಿದ್ದಲ್ಲಿ ಸುಲಭ ಪರಿಹಾರ ಒದಗಿಸಲಿದ್ದಾರೆ. ನಿಮ್ಮ ಯಾವುದೇ ಸಮಸ್ಯೆಗೆ ಒಮ್ಮೆ ಭೇಟಿ ನೀಡಿ.
ದುರ್ಗಾ ಅನುಗ್ರಹ ಜ್ಯೋತಿಷ್ಯ ಕೇಂದ್ರ ಮೊಬೈಲ್ ಫೋನ್ ಸಂಖ್ಯೆ 9945699005

ಮೇಷ ರಾಶಿ:
ಈ ದಿನ ನೀವು ಜಾಗರೂಕರಾಗಿರಲು ಸೂಚಿಸಲಾಗಿದೆ. ನಿಮ್ಮ ಕೆಲವು ಪ್ರಮುಖ ಕೆಲಸಗಳನ್ನು ನಿಮ್ಮ ವಿರೋಧಿಗಳು ತಡೆಯಬಹುದು. ಆದಾಗ್ಯೂ, ನಿಮ್ಮ ಪ್ರಯತ್ನ ಮುಂದುವರೆಸಿ ಮತ್ತು ನಿಮ್ಮ ಸುತ್ತ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ಇರಿಸಿ. ನೀವು ವ್ಯಾಪಾರ ಮಾಡಿದರೆ ಇಂದು ನೀವು ಹಣಕಾಸಿನ ಸಮಸ್ಯೆಗಳಿಂದ ತುಂಬಾ ಅಸಮಾಧಾನಗೊಳ್ಳುತ್ತೀರಿ. ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನೀವು ಆರ್ಥಿಕವಾಗಿ ಸದೃಢರಾಗಿರಬೇಕು, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.
ಮನೆಯ ವಾತಾವರಣ ಚೆನ್ನಾಗಿರುತ್ತದೆ. ಸಂಗಾತಿಗೆ ಯಾವುದೋ ಕಾರಣಕ್ಕೆ ಅತೃಪ್ತಿ ಇದ್ದರೆ ಪ್ರೀತಿಯಿಂದ ಮನವೊಲಿಸಲು ಪ್ರಯತ್ನಿಸುವುದು ಉತ್ತಮ. ಆರೋಗ್ಯದ ಬಗ್ಗೆ ಹೇಳುವುದಾದರೆ ನಿಮಗೆ ಉಸಿರಾಟದ ತೊಂದರೆ ಇದ್ದರೆ, ನೀವು ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನೀವು ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸುತ್ತಲೇ ಇರಬೇಕು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 8
ಒಳ್ಳೆಯ ಸಮಯ: ಮಧ್ಯಾಹ್ನ 12 ರಿಂದ ಸಂಜೆ 7:00 ರವರೆಗೆ

ವೃಷಭ ರಾಶಿ
ಕಾರ್ಯ ಕ್ಷೇತ್ರದಲ್ಲಿ ನೀವು ಇಂದು ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ಗುರಿ ಆಧಾರಿತ ಕೆಲಸವನ್ನು ಮಾಡಿದರೆ ಇಂದು ನಿಮ್ಮ ಗುರಿಯನ್ನು ಸುಲಭವಾಗಿ ಪೂರೈಸಲು ನಿಮಗೆ ಸಾಧ್ಯವಾಗುತ್ತದೆ. ಹಣಕಾಸು ಕೆಲಸ ಮಾಡುವ ಜನರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕವಾಗಿ ಉತ್ತಮವಾಗಿರಲು ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರಿಯಾಗಿ ಬಳಸಬೇಕಾಗುತ್ತದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳಿ. ವೈವಾಹಿಕ ಜೀವನದಲ್ಲಿ
ಸಂಗಾತಿಯೊಂದಿಗೆ ಪ್ರೀತಿ, ಮಾಧುರ್ಯ ಹೆಚ್ಚುವುದು. ಮತ್ತೊಂದೆಡೆ, ನೀವು ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅವರು ನಿಮಗೆ ದೊಡ್ಡ ಸುಳ್ಳನ್ನು ಹೇಳಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನಿಮ್ಮ ಆರೋಗ್ಯದ ಕಡೆ ಗಮನ ನೀಡಿ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 28
ಶುಭ ಸಮಯ: ಬೆಳಿಗ್ಗೆ 9:20 ರಿಂದ ಮಧ್ಯಾಹ್ನ 3 ರವರೆಗೆ

ಮಿಥುನ ರಾಶಿ
ಇಂದು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುವ ಘಟನೆ ನಡೆಯುವುದು, ಆದರೆ ನೀವು ಕೋಪಗೊಳ್ಳದೆ ಇದ್ದರೆ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಕೌಟಂಬಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಇನ್ನು ಕೆಲಸದ ಜಾಗದಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ನೀವು ತೊಂದರೆಗೆ ಸಿಲುಕಬಹುದು. ವ್ಯಾಪಾರಿಗಳಿಗೆ ಇಂದು ದೊಡ್ಡ ಲಾಭ ಸಿಗುವುದಿಲ್ಲ. ಇದಲ್ಲದೆ, ನೀವು ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಆ ಯೋಜನೆಯಲ್ಲಿ ಮುಂದುವರೆಯಬಹುದು. ಹಣದ ವಿಷಯದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 29
ಶುಭ ಸಮಯ: ಬೆಳಿಗ್ಗೆ 7:25 ರಿಂದ ಸಂಜೆ 6 ರವರೆಗೆ

ಕರ್ಕ ರಾಶಿ
ವ್ಯವಹಾರ ಅಥವಾ ಉದ್ಯೋಗವಾಗಿರಲಿ ನೀವು ದೊಡ್ಡ ಲಾಭವನ್ನು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಹಣದ ವಿಷಯದಲ್ಲಿ ಅದೃಷ್ಟ ನಿಮ್ಮ ಜೊತೆಗಿದೆ. ನಿಮ್ಮ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗಬಹುದು. ವ್ಯಾಪಾರಸ್ಥರಿಗೆ ದೊಡ್ಡ ವ್ಯವಹಾರ ವಹಿವಾಟು ನಡೆಸಲು ಅವಕಾಶ ಸಿಗುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಸಮಯ ಕಳೆಯುವಿರಿ.
ಪ್ರೇಮಿಗಳಿಗೆ ಪ್ರಣಯ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ. ನಿಮ್ಮ ಗೆಳೆಯ / ಗೆಳತಿಯೊಂದಿಗಿನ ಘರ್ಷಣೆಗಳು ದೊಡ್ಡ ಜಗಳಗಳಾಗಿ ಬದಲಾಗಬಹುದು.ನಿಮ್ಮನ್ನು ಸಮರ್ಥಿಸಲು ಸುಳ್ಳು ಹೇಳಬೇಡಿ. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 38
ಒಳ್ಳೆಯ ಸಮಯ: ಮಧ್ಯಾಹ್ನ 2:15 ರಿಂದ 7:20 ರವರೆಗೆ

ಸಿಂಹ ರಾಶಿ
ಈ ದಿನ ಬಜೆಟ್ ಪ್ರಕಾರ ನೀವು ಖರ್ಚು ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಕೆಲಸದ ಬಗ್ಗೆ ಹೇಳುವುದಾದರೆ ಕಚೇರಿಯಲ್ಲಿ ನೀವು ಹೆಚ್ಚು ಗಮನ ಹರಿಸಬೇಕು, ಇಲ್ಲದಿದ್ದರೆ ನಿಮ್ಮ ಅನೇಕ ಕೆಲಸಗಳು ಇಂದು ಅಪೂರ್ಣವಾಗುತ್ತವೆ. ವ್ಯಾಪಾರಸ್ಥರು ಇಂದು ಸಣ್ಣ ಪ್ರಯಾಣವನ್ನು ಮಾಡಬೇಕಾಗಬಹುದು.
ನಿಮ್ಮ ಪ್ರಯಾಣವು ತುಂಬಾ ಶುಭವಾಗಿರುತ್ತದೆ. ಆದಾಗ್ಯೂ, ಪ್ರಯಾಣ ಮಾಡುವಾಗ ಸಂಪೂರ್ಣ ಕಾಳಜಿ ವಹಿಸಲು ನಿಮಗೆ ಸೂಚಿಸಲಾಗಿದೆ. ಈ ಕರೋನಾದಂತಹ ಜಾಗತಿಕ ಸಾಂಕ್ರಾಮಿಕ ರೋಗದ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ ಮತ್ತು ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸಂಗಾತಿಯು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 31
ಶುಭ ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 4:00 ರವರೆಗೆ

ಕನ್ಯಾ ರಾಶಿ
ಇಂದು ಕಚೇರಿಯಲ್ಲಿ ಕೆಲಸವು ಹೆಚ್ಚು ಇರುತ್ತದೆ ಇದು ಸ್ವಲ್ಪ ಕಿರಿಕಿರಿ ತರಬಹುದು ಆದರೆ ಇಂದು ನಿಮ್ಮ ಈ ಕಠಿಣ ಪರಿಶ್ರಮವು ಮುಂಬರುವ ಕಾಲದಲ್ಲಿ ನಿಮಗೆ ಪ್ರಗತಿಯ ಬಾಗಿಲುಗಳನ್ನು ತೆರೆಯುತ್ತದೆ, ಆದ್ದರಿಂದ ಉತ್ಸಾಹದಿಂದ ಕೆಲಸ ಮಾಡಿ. ಅನೇಕ ಜವಾಬ್ದಾರಿಗಳನ್ನು ಪೂರೈಸಲು ನೀವು ಒತ್ತಡಕ್ಕೆ ಒಳಗಾಗುತ್ತೀರಿ. ಆರ್ಥಿಕ ರಂಗದಲ್ಲಿ, ದಿನವು ತುಂಬಾ ಉತ್ತಮವಾಗಿರುತ್ತದೆ. ಇಂದು ನೀವು ಹೊಸ ಬಟ್ಟೆ ಮತ್ತು ಆಭರಣಗಳಿಗಾಗಿ ಶಾಪಿಂಗ್ ಮಾಡಬಹುದು. ಇಂದು ನೀವೇ ಆರ್ಥಿಕವಾಗಿ ಯಾರಿಗಾದರೂ ಸಹಾಯ ಮಾಡಲು ಸಾಧ್ಯವಿದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ಸನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಮತ್ತಷ್ಟು ಸಮೀಪವಾಗುವಿರಿ. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಬೇಡಿ ಇಂದು ನೀವು ನಿಮ್ಮ ನೆಚ್ಚಿನ ಭಕ್ಷ್ಯಗಳನ್ನು ಪೂರ್ಣವಾಗಿ ಆನಂದಿಸುವಿರಿ.
ಅದೃಷ್ಟದ ಉತ್ತಮ ಬಣ್ಣ: ತಿಳಿ ಗುಲಾಬಿ
ಅದೃಷ್ಟದ ಸಂಖ್ಯೆ: 20
ಶುಭ ಸಮಯ: ಬೆಳಿಗ್ಗೆ 6:30 ರಿಂದ ಸಂಜೆ 4 ರವರೆಗೆ

ತುಲಾ ರಾಶಿ
ದೀರ್ಘಕಾಲದವರೆಗೆ ಸಿಲುಕಿಕೊಂಡಿದ್ದ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮಗೆ ಇಂದು ರಿಲೀಪ್ ಅನಿಸುವುದು. ನಿಮ್ಮ ದಾರಿಯಲ್ಲಿ ಬರುತ್ತಿದ್ದ ಅಡಚಣೆಯನ್ನು ಇಂದು ನೀವು ನಿವಾರಿಸುವಿರಿ. ನೀವು ವೈವಾಹಿಕ ಜೀವನವನ್ನು ಪೂರ್ಣವಾಗಿ ಆನಂದಿಸುವಿರಿ. ಹಣವು ಆದಾಯಕ್ಕಿಂತ ಹೆಚ್ಚು ವೆಚ್ಚವಾಗುವ ಸಾಧ್ಯತೆಯಿದೆ. ನೀವು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಯೋಚಿಸದೆ ಹಣವನ್ನು ಖರ್ಚು ಮಾಡುವುದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಆರೋಗ್ಯದ ದೃಷ್ಟಿಯಿಂದ ಇಂದು ಸಾಮಾನ್ಯವಾಗಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 12
ಒಳ್ಳೆಯ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 12:55

ವೃಶ್ಚಿಕ ರಾಶಿ
ಇಂದು ಆರ್ಥಿಕ ರಂಗದಲ್ಲಿ ದುಬಾರಿಯಾಗಲಿದೆ. ಅಲ್ಲದೆ, ಹಣದ ಬಗ್ಗೆ ಯಾರೊಂದಿಗೂ ಮಾತುಕತೆ ಉಂಟಾಗುವುದು. ನೀವು ಕೋಪದಿಂದ ಯಾವುದೇ ಕೆಲಸವನ್ನು ಮಾಡಬಾರದು. ಕಚೇರಿಯಲ್ಲಿ ನಿಮ್ಮ ಉನ್ನತ ಅಧಿಕಾರಿಗಳು ನಿಮ್ಮ ಕೆಲಸದಲ್ಲಿ ಅನೇಕ ನ್ಯೂನತೆಗಳನ್ನು ಕಾಣಬಹುದು. ಅಲ್ಲದೆ ಇಂದು ನೀವೂ ಸಹ ನಿಮ್ಮ ಕೆಲಸದಿಂದ ತೃಪ್ತರಾಗುವುದಿಲ್ಲ.
ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಮತ್ತು ಕೆಲಸದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುವುದು ಉತ್ತಮ. ಸಣ್ಣ ವಿಚಾರಕ್ಕೆ ಸಂಗಾತಿಯೊಂದಿಗೆ ವಾದಿಸುವುದನ್ನು ತಪ್ಪಿಸಿ. ನಿಮ್ಮ ಮೊಂಡುತನದ ಸ್ವಭಾವವು ನಿಮ್ಮ ಸಂಬಂಧದಲ್ಲಿ ದೂರವನ್ನು ಹೆಚ್ಚಿಸುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಮನಸ್ಸು ಇಂದು ಚಂಚಲವಾಗಿರುತ್ತದೆ ಮತ್ತು ದೈಹಿಕವಾಗಿ ಕೆಲ ತೊಮದರೆಗಳು ಕಾಣಬಹುದು.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 9
ಒಳ್ಳೆಯ ಸಮಯ: ಮಧ್ಯಾಹ್ನ 2 ರಿಂದ 7 ರವರೆಗೆ

ಧನು ರಾಶಿ
ಇಂದು ನಿಮ್ಮ ವೈವಾಹಿಕ ಜೀವನದ ಅತ್ಯಂತ ರೋಮ್ಯಾಂಟಿಕ್ ದಿನಗಳಲ್ಲಿ ಒಂದಾಗಬಹುದು. ಅದೃಷ್ಟ ನಿಮ್ಮ ಜೊತೆಗೆ ಇರುವುದರಿಂದ ಕೆಲಸದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ
ವ್ಯಾಪಾರಿಗಳಿಗೆ ಇಂದು ಬಿಡುವು ಸಿಗಿವಿದಿಲ್ಲ, ಅಲ್ಲದೆ ಒಳ್ಳೆಯ ಲಾಭ ಸಿಗುವುದು. ಮನೆಯ ವಾತಾವರಣ ಸಾಮಾನ್ಯವಾಗಿ ಇರಲಿದೆ. ಆರೋಗ್ಯವಾಗಿರಲು, ನಿಮ್ಮ ದಿನಚರಿಯನ್ನು ನಿಯಮಿತವಾಗಿ ಮಾಡಿ, ಇದರಿಂದಾಗಿ ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಮತ್ತು ನಿಮ್ಮ ಆರೋಗ್ಯ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 6
ಒಳ್ಳೆಯ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 2:15 ರವರೆಗೆ

ಮಕರ ರಾಶಿ
ಆರೋಗ್ಯದ ಬಗ್ಗೆಹೇಳುವುದಾದರೆ ಹೆಚ್ಚುತ್ತಿರುವ ತೂಕದ ಕಡೆ ಗಮನ ನೀಡಿ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕೆಲವು ಗಂಭೀರ ಕಾಯಿಲೆಗಳು ಉಂಟಾಗಬಹುದು. ಇಂದು ಹಣದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಉನ್ನತ ಅಧಿಕಾರಿಗಳ ಸಹಾಯದಿಂದ ಕೆಲವು ಪ್ರಮುಖ ಕಾರ್ಯಗಳು ಇಂದು ಪೂರ್ಣಗೊಳಿಸುವಿರಿ.
ಇದಲ್ಲದೆ, ನೀವು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ವ್ಯಾಪಾರಸ್ಥರು ಇಂದು ಯಾವುದೇ ಹೊಸ ಕೆಲಸ ಮಾಡದಿರುವುದು ಒಳ್ಳೆಯದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ನೀವು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನೀವು ಪೋಷಕರ ಪ್ರೀತಿ ಮತ್ತು ಆಶೀರ್ವಾದವನ್ನು ಪಡೆಯುತ್ತೀರಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 2
ಒಳ್ಳೆಯ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 1:30

ಕುಂಭ ರಾಶಿ
ಅನಗತ್ಯವಾದ ಖರ್ಚುಗಳನ್ನು ನಿಯಂತ್ರಿಸಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ಭಾರಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಕುಂಭ ರಾಶಿಯವರೇ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಒಳ್ಳೆಯ ಫಲವನ್ನು ಪಡೆಯಬಹುದು. ವ್ಯಾಪಾರಿಗಳು ಇಂದು ಹೆಚ್ಚಿನ ಪರಿಹಾರವನ್ನು ಪಡೆಯಬಹುದು. ಕುಟುಂಬ ಜೀವನವು ಏರಿಳಿತದಿಂದ ಉಳಿಯುತ್ತದೆ. ಮನೆಯಲ್ಲಿ ನಿಮ್ಮ ನಡವಳಿಕೆಯನ್ನು ನೀವು ಸಮತೋಲನದಲ್ಲಿರಿಸಿಕೊಳ್ಳಬೇಕು. ಕೋಪದಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ, ಅದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇಂದು ನಿಮ್ಮ ಒತ್ತಡ ಗಮನಾರ್ಹವಾಗಿ ಹೆಚ್ಚಾಗುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 21
ಶುಭ ಸಮಯ: ಬೆಳಗ್ಗೆ 8:30 ರಿಂದ ಮಧ್ಯಾಹ್ನ 3 ರವರೆಗೆ

ಮೀನ ರಾಶಿ
ಬೆಳಗ್ಗೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವ ಮೂಲಕ ದಿನದ ಆರಂಭವಾಗಲಿದೆ. ಕಚೇರಿಯಲ್ಲಿ ತೊಂದರೆ ತಪ್ಪಿಸಲು ನಿಮ್ಮ ಕೆಲಸ ಪ್ರಾಂಆನಿಕವಾಗಿ ಮಾಡಿ.
ಕೋಪಗೊಳ್ಳುವುದನ್ನು ತಪ್ಪಿಸಿ. ಡ್ರೈವ್ ಮಾಡುವಾಗ ಕಾನೂನು ನಿಯಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ವಿವಾಹಿತರಿಗೆ ಈ ದಿನ ರೋಮ್ಯಾಂಟಿಕ್ ಆಗಿರುತ್ತದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಇಂದು ನೀವು ಮನೆಯ ಸೌಕರ್ಯಗಳಿಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ಆರೋಗ್ಯದ ದೃಷ್ಟಿಯಿಂದ ದಿನ ಅನುಕೂಲಕರವಾಗಿರುತ್ತದೆ.
ಅದೃಷ್ಟದಬಣ್ಣ: ಗಾಢ ನೀಲಿ
ಅದೃಷ್ಟದ ಸಂಖ್ಯೆ: 10
ಒಳ್ಳೆಯ ಸಮಯ: ಸಂಜೆ 4:30 ರಿಂದ ರಾತ್ರಿ 9:05 ರವರೆಗೆ



Click it and Unblock the Notifications











