Latest Updates
-
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ
ಶುಕ್ರವಾರದ ದಿನ ಭವಿಷ್ಯ: ಮಕರ ರಾಶಿಯವರಿಗೆ ಈ ದಿನ ಉತ್ತಮವಾಗಿದೆ
ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:
ಸಂವತ್ಸರ: ಶಾರ್ವರಿ
ಆಯನ: ದಕ್ಷಿಣಾಯನ
ಋತು: ಶರದ್
ಮಾಸ: ಆಶ್ವಿಜ
ನಕ್ಷತ್ರ: ಮಧ್ಯಾಹ್ನ 02:57ರವರೆಗೆ ರೇವತಿ, ನಂತರ ಅಶ್ವಿನಿ
ಶುಕ್ಲ ಪಕ್ಷ
ರಾಹುಕಾಲ: ಬೆಳಗ್ಗೆ 10:41ರಿಂದ 12:05ರವರೆಗೆ
ಗುಳಿಕಕಾಲ: ಬೆಳಗ್ಗೆ 07:55ರಿಂದ 09:18ರವರೆಗೆ
ಯಮಗಂಡಕಾಲ: ಮಧ್ಯಾಹ್ನ 02:51ರಿಂದ 08:14ರವರೆಗೆ
ದುರ್ಮುಹೂರ್ತ: ಬೆಳಗ್ಗೆ 08:45ರಿಂದ 09:29ರವರೆಗೆ
ಮಧ್ಯಾಹ್ನ 12:27ರಿಂದ 01:11ರವರೆಗೆ
ಸೂರ್ಯೋದಯ: ಬೆಳಗ್ಗೆ 06:32ಕ್ಕೆ
ಸೂರ್ಯಾಸ್ತ: ಸಂಜೆ 05:37ಕ್ಕೆ

ಮೇಷ ರಾಶಿ:
ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ಅಗತ್ಯ. ನೀವು ಆರೋಗ್ಯವನ್ನು ನಿರ್ಲಕ್ಷಿಸಿದರೆ ಇನ್ನಷ್ಟು ಹದಗೆಡಬಹುದು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಮನ್ವಯವನ್ನು ಸುಧಾರಿಸಲು ಪ್ರಯತ್ನಿಸಿ ಮತ್ತು ಮುಖಾಮುಖಿಯಾಗಿ ವಾದ ಮಾಡುವುದನ್ನು ತಪ್ಪಿಸಿ. ವ್ಯಾಪಾರಸ್ಥರು, ಹೊಸ ಒಪ್ಪಂದ ಮಾಡಿಕೊಳ್ಳಲು ಹೊರಟಿದ್ದರೆ, ನಿಮ್ಮ ಅಂತಿಮ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಯಾವುದೇ ರೀತಿಯಲ್ಲೂ ಆತುರ ಪಡಬೇಡಿ. ನೀವು ಹಣದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ನೀವು ಗೌರವಿಸಬೇಕು. ನೀವು ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಯಾವುದೇ ಪ್ರಯತ್ನ ಮಾಡುತ್ತಿದ್ದರೆ, ನೀವು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಆದಾಯ ಹೆಚ್ಚಾಗಬಹುದು.
ಉತ್ತಮ ಬಣ್ಣ: ಮರೂನ್
ಶುಭ ಸಂಖ್ಯೆ: 21
ಶುಭ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ

ವೃಷಭ ರಾಶಿ:
ನಿಮ್ಮ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು, ನಿಮಗೆ ಅಗತ್ಯ ವಿಲ್ಲದ ವಿಷಯಕ್ಕೆ ತಲೆಹಾಕುವುದನ್ನು ಬಿಡಿ. ಇತರರ ಬಗ್ಗೆ ಮಾತನಾಡುವುದನ್ನು ತಪ್ಪಿಸಿ ಮತ್ತು ನಿಮ್ಮ ಕೆಲಸದ ಬಗ್ಗೆ ಮಾತ್ರ ನೀವು ಗಮನಹರಿಸಿ. ನೀವು ಕಚೇರಿಯಲ್ಲಿ ಪರಿಸ್ಥಿತಿ ನಿಮಗೆ ವಿರುದ್ಧವಾಗಿರಬಹುದು. ನಿಮ್ಮ ಬಾಸ್ ನಿಮಗೆ ವಹಿಸುವ ಯಾವುದೇ ಕೆಲಸವನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ ಬಾಸ್‌ನ ಕೋಪಕ್ಕೆ ನೀವು ಗುರಿಯಾಗಬೇಕಾಗಬಹುದು. ಮತ್ತೊಂದೆಡೆ, ನೀವು ಎಲೆಕ್ಟ್ರಾನಿಕ್ಸ್ ವ್ಯವಹಾರವನ್ನು ಮಾಡುವುದಾದರೆ, ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಹಣದ ಪರಿಸ್ಥಿತಿ ಸುಧಾರಣೆ ಸಾಧ್ಯ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ ನೀವು ಶೀಘ್ರದಲ್ಲೇ ಯಶಸ್ಸನ್ನು ಪಡೆಯಬಹುದು. ದೈಹಿಕವಾಗಿ ನೀವು ಸದೃಢವಾಗಿರುತ್ತೀರಿ ಮತ್ತು ಶಕ್ತಿಯುತರಾಗಿರುತ್ತೀರಿ.
ಉತ್ತಮ ಬಣ್ಣ: ಕಡುಗೆಂಪು
ಶುಭ ಸಂಖ್ಯೆ: 12
ಶುಭ ಸಮಯ: ಮಧ್ಯಾಹ್ನ 12:45 ರಿಂದ 6 ರವರೆಗೆ

ಮಿಥುನ ರಾಶಿ:
ಇಂದು ಮನಸ್ಸಿಗೆ ಶಾಂತಿ. ಉಲ್ಲಾಸದಿಂದ ಈ ದಿನವನ್ನು ಕಳೆಯುವಿರಿ. ವ್ಯಾಪಾರಿ ವರ್ಗವು ಇಂದು ಸ್ವಲ್ಪ ಸಮಾಧಾಣವನ್ನು ಹೊಂದಬಹುದು. ಅರ್ಧದಲ್ಲಿ ನಿಂತ ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ ಮತ್ತು ನಿಮಗೆ ಆರ್ಥಿಕ ಲಾಭ ಸಿಗುತ್ತದೆ. ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ ಜೊತೆಗೆ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಕುಟುಂಬದ ನಡುವೆ ಹೊಂದಾಣಿಕೆ ಕೂಡ ಇರುತ್ತದೆ. ಇಂದು ನೀವು ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಸಾಕಷ್ಟು ವಿನೋದದ ಸಮಯವನ್ನೂ ಕಳೆಯುವಿರಿ. ಹಣದ ಬಗ್ಗೆ ಹೆಚ್ಚು ಚಿಂತಿಸಬೇಡಿ. ಅದೃಷ್ಟದ ನಕ್ಷತ್ರಗಳು ಕೆಲವು ಉತ್ತಮ ಚಿಹ್ನೆಗಳನ್ನು ನೀಡುತ್ತಿವೆ. ಇದ್ದಕ್ಕಿದ್ದಂತೆ ಕೆಲವು ಒಳ್ಳೆಯ ಸುದ್ದಿಗಳನ್ನು ದಿನದ ಎರಡನೇ ಭಾಗದಲ್ಲಿ ಕಾಣಬಹುದು. ಮಗುವು ಕೆಲವು ಉತ್ತಮ ಯಶಸ್ಸನ್ನು ಪಡೆಯಬಹುದು. ಆರೋಗ್ಯ ವಿಷಯಗಳು ಉತ್ತಮವಾಗಿರುತ್ತವೆ. ಇಂದು ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 4
ಶುಭ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3: 45 ರವರೆಗೆ

ಕರ್ಕಾಟಕ ರಾಶಿ:
ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾರುತ್ತದೆ. ಹೊಟ್ಟೆಯ ಅಸ್ವಸ್ಥತೆಯಿಂದ ನೀವು ತೊಂದರೆಗೀಡಾಗಿದ್ದರೆ ಇಂದು ನಿಮಗೆ ಪರಿಹಾರ ಸಿಗುತ್ತದೆ. ಹಲವು ದಿನಗಳ ನಂತರ ನಿಮ್ಮ ನೆಚ್ಚಿನ ಆಹಾರವನ್ನು ಸೇವಿಸಿ ಆನಂದಿಸುತ್ತೀರಿ. ಆದಾಗ್ಯೂ, ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕಾಗಿದೆ. ಮನೆಯ ವಾತಾವರಣ ಸ್ವಲ್ಪ ಬದಲಾಗುತ್ತದೆ. ಕುಟುಂಬ ಸದಸ್ಯರ ನಡುವಿನ ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದರೆ, ನಿಮ್ಮ ಪ್ರಯತ್ನಗಳು ಇಂದು ಯಶಸ್ವಿಯಾಗುತ್ತವೆ ಮತ್ತು ನಿಮ್ಮವರ ನಡುವಿನ ಅಂತರವೂ ಕಡಿಮೆಯಾಗುತ್ತದೆ. ನಿಮ್ಮ ಸಾಧನೆಗಳ ಬಗ್ಗೆ ಪೋಷಕರು ಹೆಮ್ಮೆ ಪಡುತ್ತಾರೆ. ಅವರ ಆಶೀರ್ವಾದವೂ ನಿಮಗಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯ ಇರುತ್ತದೆ. ಹಣದ ಬಗ್ಗೆ ಮಾತನಾಡುವುದಾದರೆ, ನಿಮ್ಮ ಆದಾಯ ಹೆಚ್ಚಾಗಬಹುದು. ಕೆಲಸದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಕೆಲಸವಾಗಲಿ, ವ್ಯವಹಾರವಾಗಲಿ, ನಿಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶವನ್ನು ನೀವು ಪಡೆಯುತ್ತೀರಿ.
ಉತ್ತಮ ಬಣ್ಣ: ಕಿತ್ತಳೆ
ಶುಭ ಸಂಖ್ಯೆ: 20
ಶುಭ ಸಮಯ: ಮಧ್ಯಾಹ್ನ 2 ರಿಂದ 9 ರವರೆಗೆ

ಸಿಂಹ ರಾಶಿ:
ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾದರೆ, ನೀವು ಚಿಂತೆ ಮಾಡಬೇಡಿ.ಒತ್ತಡ ತೆಗೆದುಕೊಳ್ಳಬೇಡಿ. ಬದಲಿಗೆ ನಿಮ್ಮ ಪ್ರತಿಯೊಂದು ಜವಾಬ್ದಾರಿಗಳನ್ನು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಪೂರೈಸಲು ಪ್ರಯತ್ನಿಸಿ. ನಿಮ್ಮ ಕಠಿಣ ಪರಿಶ್ರಮ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಉತ್ತಮ ಫಲ ನೀಡುತ್ತದೆ. ನೀವು ಸರ್ಕಾರಿ ಕೆಲಸದಲ್ಲಿದ್ದರೆ, ಇಂದು ನಿಮಗೆ ತುಂಬಾ ಕೆಲಸ. ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ನೀವು ಶ್ರಮಿಸಬೇಕಾಗಬಹುದು. ಆಮದು-ರಫ್ತು ವ್ಯವಹಾರಸ್ಥರು ಉತ್ತಮ ಲಾಭ ಪಡೆಯಬಹುದು. ಹಣದ ಬಗ್ಗೆ ಮಾತನಾಡುವುದಾದರೆ, ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ಬಾಕಿ ಇರುವ ಕೆಲವು ಬಿಲ್‌ಗಳನ್ನು ಪಾವತಿಸಲು ನಿಮಗೆ ಕಷ್ಟವಾಗಬಹುದು. ಮನೆಯ ವಾತಾವರಣ ಶಾಂತವಾಗಿರುತ್ತದೆ. ಸಂಗಾತಿಯ ಅಸಡ್ಡೆ ವರ್ತನೆ ನಿಮಗೆ ಅಸಮಾಧಾನವನ್ನುಂಟು ಮಾಡಬಹುದು. ಅವರೊಂದಿಗೆ ಮುಕ್ತ ಸಂಭಾಷಣೆ ನಡೆಸುವುದು ಉತ್ತಮ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ನೀವು ತುಸು ದೌರ್ಬಲ್ಯವನ್ನು ಅನುಭವಿಸಬಹುದು. ತಿನ್ನುವುದು ಮತ್ತು ಕುಡಿಯುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ ಮತ್ತು ಸಾಕಷ್ಟು ವಿಶ್ರಾಂತಿ ಪಡೆಯಿರಿ.
ಉತ್ತಮ ಬಣ್ಣ: ಹಳದಿ
ಶುಭ ಸಂಖ್ಯೆ: 17
ಶುಭ ಸಮಯ: ಬೆಳಗ್ಗೆ 9:45 ರಿಂದ ಮಧ್ಯಾಹ್ನ 12 ರವರೆಗೆ

ಕನ್ಯಾರಾಶಿ:
ಇಂದು ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಆದರೆ ಸಂಜೆಯ ಹೊತ್ತಿಗೆ ಎಲ್ಲವೂ ಸರಿಯಾಗುತ್ತದೆ. ಅವರ ಅಸಮಾಧಾನ ದೂರವಾಗುತ್ತದೆ ಮತ್ತು ನೀವು ಪರಸ್ಪರ ಸಮಯವನ್ನು ಕಳೆಯುತ್ತೀರಿ. ಹಣದ ವಿಷಯದಲ್ಲಿ ಜಾಗರೂಕರಾಗಿರಿ. ವೆಚ್ಚ ಹೆಚ್ಚಾಗುವ ಸಾಧ್ಯತೆ. ಅನಗತ್ಯ ವಿಷಯಗಳಿಗೆ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಈ ಖರ್ಚು ಮಾಡುವ ಗುಣದಿಂದ ಭವಿಷ್ಯದ ಯೋಜನೆಗಳಿಗೆ ತೊಂದರೆಯಾಗಬಹುದು. ಇಂದು ಕೆಲಸದಲ್ಲಿ ಉತ್ತಮ ದಿನವಾಗಿರುತ್ತದೆ. ಕಚೇರಿಯಲ್ಲಿ ನಿಮ್ಮ ಕೆಲಸವು ಮೆಚ್ಚುಗೆ ಪಡೆಯುತ್ತದೆ. ನೀವು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಮತ್ತೊಂದೆಡೆ, ಚಿನ್ನ ಮತ್ತು ಬೆಳ್ಳಿಯನ್ನು ವ್ಯಾಪಾರ ಮಾಡುವ ಜನರು ಇಂದು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಆರೋಗ್ಯದಲ್ಲಿ ಸಮಸ್ಯೆ ಇಲ್ಲ. ನೀವು ತುಂಬಾ ಆರೋಗ್ಯವಾಗಿರುತ್ತೀರಿ.
ಉತ್ತಮ ಬಣ್ಣ: ಕ್ರೀಮ್
ಶುಭ ಸಂಖ್ಯೆ: 29
ಶುಭ ಸಮಯ: ಬೆಳಗ್ಗೆ 4:30 ರಿಂದ ಮಧ್ಯಾಹ್ನ 3 ರವರೆಗೆ

ತುಲಾ ರಾಶಿ:
ನೌಕರಸ್ಥರಿಗಿಂದು ಶುಭ ದಿನ. ಕಚೇರಿಯಲ್ಲಿ ನಿಮ್ಮ ಸೃಜನಶೀಲತೆಯಿಂದ ಹಿರಿಯರು ಹೆಚ್ಚು ಪ್ರಭಾವಿತರಾಗುತ್ತಾರೆ. ನೀವು ಇದೇ ರೀತಿ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಪ್ರಗತಿಯ ಕನಸು ಶೀಘ್ರದಲ್ಲೇ ಈಡೇರಬಹುದು. ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ, ಉದ್ಯೋಗವನ್ನು ಹುಡುಕುತ್ತಿದ್ದರೆ, ನೀವು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಹಾಗೆಯೇ ವ್ಯಾಪಾರಿಗಳಿಗಿಂದು ಮಿಶ್ರ ಫಲ. ನಿಮ್ಮ ಕೆಲಸ ಪೂರ್ಣಗೊಳಿಸಲು ನೀವು ತುಂಬಾ ಶ್ರಮಿಸಬೇಕು. ಸ್ನೇಹಿತರೊಂದಿಗೆ ಸಮಯ ಕಳೆಯಲು ಇಂದು ಸಾಧ್ಯ. ಬಹುಶಃ ಇಂದು ಹೆಚ್ಚು ಖರ್ಚು ಮಾಡಬೇಕಾಗಬಹುದು. ಆದರೆ ನಿಮ್ಮ ಬಜೆಟ್ ಬಗ್ಗೆ ನಿಮಗೆ ಗಮನವಿರಲಿ. ಪೋಷಕರ ವಾತ್ಸಲ್ಯ ಮತ್ತು ಬೆಂಬಲವನ್ನು ಪಡೆಯಲಾಗುವುದು. ಯಾವುದೇ ಯೋಚನೆಯನ್ನೂ ಎಚ್ಚರಿಕೆಯಿಂದ ಮಾಡಿ. ಆರೋಗ್ಯದ ವಿಷಯಕ್ಕೆ ಬಂದರೆ, ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ, ಇಲ್ಲದಿದ್ದರೆ ಮಾನಸಿಕ ಒತ್ತಡವು ನಿಮ್ಮ ದೈಹಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಉತ್ತಮ ಬಣ್ಣ: ಆಕಾಶ
ಶುಭ ಸಂಖ್ಯೆ: 6
ಶುಭ ಸಮಯ: ಸಂಜೆ 7 ರಿಂದ 10 ರವರೆಗೆ

ವೃಶ್ಚಿಕ ರಾಶಿ:
ಇಂದು ನೀವು ಸ್ವಲ್ಪ ಒಂಟಿತನ ಮತ್ತು ದುಃಖವನ್ನು ಅನುಭವಿಸಬಹುದು. ನಿಮ್ಮ ಮನಸ್ಸಿನಲ್ಲಿ ಅನೇಕ ರೀತಿಯ ಚಿಂತೆಗಳು ಮೂಡಿ, ಅದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ನಿಮ್ಮ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಮಗೆ ತುಂಬಾ ಕಷ್ಟವಾಗುತ್ತದೆ. ಇಂದು ಯಾವುದೇ ಹೊಸ ಕೆಲಸದ ಆರಂಭ ಬೇಡ. ವೈವಾಹಿಕ ಜೀವನದಲ್ಲಿ ವಿಚಿತ್ರ ಸನ್ನಿವೇಶಗಳು ಉದ್ಭವಿಸಬಹುದು. ನಿಮ್ಮ ಸಂಗಾತಿಗೆ ಸುಳ್ಳು ಹೇಳಬೇಡಿ. ನಿಮ್ಮ ಮನಸ್ಸನ್ನು ನಿಮ್ಮ ಪ್ರೀತಿಪಾತ್ರರ ಮುಂದೆ ಸ್ಪಷ್ಟ ರೀತಿಯಲ್ಲಿ ಇಟ್ಟುಕೊಂಡರೆ ಉತ್ತಮ. ಹಳೆಯ ಆಸ್ತಿಯ ಮಾರಾಟ ಆಗಬಹುದು. ಅದು ಹಣದ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆಗೆ ಕಾರಣವಾಗಬಹುದು. ಕೆಲಸದ ಆರಂಭ ಸಾಮಾನ್ಯವಾಗಲಿದೆ. ಉದ್ಯೋಗಸ್ಥರು ಜಾಗರೀಕರಾಗಿರಿ. ಇಂದು, ನಿಮ್ಮ ಆರೋಗ್ಯವು ನಿಮ್ಮ ಮೊದಲ ಆದ್ಯತೆಯಾಗಿರಬೇಕು, ನಿರ್ಲಕ್ಷ್ಯ ಮಾಡಬೇಡಿ.
ಉತ್ತಮ ಬಣ್ಣ: ಹಳದಿ
ಶುಭ ಸಂಖ್ಯೆ: 15
ಶುಭ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 2:20

ಧನು ರಾಶಿ:
ಈ ದಿನವು ನಿಮ್ಮ ಪರವಾಗಿದೆ ಎನ್ನಬಹುದು. ನೀವು ತುಂಬಾ ಆರಾಮವನ್ನು ಅನುಭವಿಸುವಿರಿ. ನಿಮ್ಮ ಯೋಜನೆಯ ಪ್ರಕಾರ ಬಹುತೇಕ ಎಲ್ಲ ಕೆಲಸಗಳೂ ನೆರವೇರುತ್ತವೆ. ಕೆಲಸದ ಆರಂಭದಲ್ಲಿ, ನಿಮ್ಮ ನಿರಂತರ ಪರಿಶ್ರಮ ಮತ್ತು ಶ್ರಮವು ಫಲ ನೀಡುತ್ತದೆ. ನೌಕರಸ್ಥರಿಗೆ ಕಚೇರಿಯಲ್ಲಿ ಕೆಲವು ಒಳ್ಳೆಯ ಸುದ್ದಿ ಸಿಗಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ನೀವು ವಿದೇಶ ಪ್ರವಾಸ ಮಾಡುವ ಸಾಧ್ಯತೆಯಿದೆ. ಹಾಗೆಯೇ ವ್ಯಾಪಾರಸ್ಥರಿಗೆ ಇಂದು ಲಾಭದಾಯಕ ದಿನ. ವ್ಯವಹಾರದಲ್ಲಿ ಹೊಸ ತಿರುವು. ವೈಯಕ್ತಿಕ ಜೀವನದ ಸಮಸ್ಯೆಗಳು ಪರಿಹಾರವಾಗುತ್ತವೆ. ಇಂದು ನೀವು ಚಿಂತೆಯಿಲ್ಲದ ಮತ್ತು ಉತ್ತಮ ಮನಸ್ಥಿತಿಯಲ್ಲಿ ಇರುತ್ತೀರಿ. ಹಣದ ಹರಿವು ಚೆನ್ನಾಗಿರುತ್ತದೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಯಾವುದಾದರೂ ದೊಡ್ಡ ಕೆಲಸವನ್ನು ಮಾಡಬಹುದು.
ಉತ್ತಮ ಬಣ್ಣ: ನೀಲಿ
ಶುಭ ಸಂಖ್ಯೆ: 7
ಶುಭ ಸಮಯ: ಸಂಜೆ 5 ರಿಂದ 9:45 ರವರೆಗೆ

ಮಕರ ರಾಶಿ:
ನಿಮ್ಮ ಮಾನಸಿಕ ಒತ್ತಡ ನಿವಾರಣೆಯಾಗುವ ಸಾಧ್ಯತೆ. ಹಾಗಾಗಿ ಇಂದು ಆರಾಮವಾಗಿರುತ್ತೀರಿ. ಆರ್ಥಿಕ ಸಮಸ್ಯೆ ಬಗೆಹರಿಯಲಿದೆ. ಹಣದ ಕೊರತೆಯಿಂದಾಗಿ, ನೀವು ನಿಲ್ಲಿಸಿದ ಯಾವುದೇ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಕಡೆಗೆ ನಿಮ್ಮ ಗಮನ ನೀಡಲು ಸಮಯ ಸಿಗುತ್ತದೆ. ಇದಲ್ಲದೆ, ನೀವು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಹ ಇಷ್ಟಪಡುತ್ತೀರಿ. ಹಿರಿಯರ ಸಂಪೂರ್ಣ ಬೆಂಬಲ ನಿಮಗಿದೆ. ಕೆಲಸವನ್ನು ಮಾಡಿದರೆ ನಿಮಗೆ ಹಿರಿಯರ ಸಂಪೂರ್ಣ ಬೆಂಬಲ ಸಿಗುತ್ತದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಉತ್ತಮ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ವ್ಯಾಪಾರಿಗಳು ಹಣದಿಂದ ಲಾಭ ಪಡೆಯಬಹುದು. ನೀವು ಚಿಲ್ಲರೆ ವ್ಯಾಪಾರಿ ಆಗಿದ್ದರೆ, ನೀವು ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಬೇಡಿ ನಿಮ್ಮ ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕಡುಗೆಂಪು
ಶುಭ ಸಂಖ್ಯೆ: 34
ಶುಭ ಸಮಯ: ಬೆಳಗ್ಗೆ 4:05 ರಿಂದ ಮಧ್ಯಾಹ್ನ 1:30 ರವರೆಗೆ

ಕುಂಭ ರಾಶಿ:
ನಿಮ್ಮ ಧೈರ್ಯ ಮತ್ತು ಶೌರ್ಯದ ಶಕ್ತಿ ಹೆಚ್ಚಾಗುತ್ತದೆ ಇಂದು ಹೀಗಾಗಿ ನಿಮ್ಮ ಶತ್ರುಗಳ ಮೇಲೆ ನೀವು ಪ್ರಾಬಲ್ಯ ಸಾಧಿಸುವಿರಿ. ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಳ್ಳಬಹುದು. ಇಂದು, ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ನಿಮ್ಮ ಪ್ರಿಯತಮೆಗೆ ಸರಿಯಾದ ಕಾಳಜಿ ನೀಡಬೇಕು. ನೀವು ನೌಕರಿ ಮಾಡುತ್ತಿದ್ದರೆ ಇಂದು ಬಾಕಿ ಇರುವ ಕೆಲಸದ ಹೊರೆಯಿಂದಾಗಿ ನಿಮಗೆ ಒತ್ತಡ ಉಂಟಾಗಬಹುದು. ನಿಮ್ಮ ಬಾಸ್ ನಿಮ್ಮ ಮೇಲೆ ತುಂಬಾ ಕೋಪಗೊಳ್ಳಬಹುದು. ಕೆಲಸದ ಬಗ್ಗೆ ನಿರ್ಲಕ್ಷ್ಯ ವಹಿಸುಸಬೇಡಿ. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ನಿಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಹಣಕಾಸಿನ ವಹಿವಾಟಿಗೆ ಇದು ಉತ್ತಮ ಸಮಯವಲ್ಲ. ಇಂದು ಸಂಬಂಧಿ ಅಥವಾ ಸ್ನೇಹಿತನೊಂದಿಗೆ ಮನಸ್ತಾಪ ಉಂಟಾಗಬಹುದು. ಕಠಿಣ ಪದಗಳನ್ನು ಬಳಸದಿರುವುದು ಉತ್ತಮ. ಆರೋಗ್ಯದ ದೃಷ್ಟಿಯಿಂದ ಮಿಶ್ರ ದಿನ.
ಉತ್ತಮ ಬಣ್ಣ: ಕೇಸರಿ
ಶುಭ ಸಂಖ್ಯೆ: 47
ಶುಭ ಸಮಯ: ಬೆಳಗ್ಗೆ 10:20 ರಿಂದ ಮಧ್ಯಾಹ್ನ 3:30 ರವರೆಗೆ

ಮೀನ ರಾಶಿ:
ನೌಕರಸ್ಥತಿಗಿಂದು ಶುಭ ದಿನ. ವ್ಯಾಪಾರಿಗಳು ಇಂದು ಹೊಸ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದಾಗ್ಯೂ, ತ್ವರಿತ ಲಾಭ ಗಳಿಸಲು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನೀವು ಉದ್ಯೋಗ ಮಾಡುವವರಾಗಿದ್ದರೆ, ನಿಮ್ಮ ಕಾರ್ಯಗಳ ಬಗ್ಗೆ ನೀವು ತುಂಬಾ ಗಂಭೀರವಾಗಿರಬೇಕು. ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಸಂಪೂರ್ಣ ಜವಾಬ್ದಾರಿಯಿಂದ ನಿರ್ವಹಿಸುತ್ತೀರಿ. ಇನ್ನು ಹಣದ ಬಗ್ಗೆ ಮಾತನಾಡುವುದಾದರೆ, ನೀವು ಸಾಲವನ್ನು ತೆಗೆದುಕೊಂಡಿದ್ದರೆ ಅದನ್ನು ಮರುಪಾವತಿಸಲು ನಿಮ್ಮ ಮೇಲೆ ಒತ್ತಡ ಬೀಳಬಹುದು. ಇಂದು, ಹಣದ ಬಗ್ಗೆ ವಿವಾದಗಳೂ ಉಂಟಾಗಬಹುದು. ಈ ಸಮಯದಲ್ಲಿ ಕೋಪ ತೋರಿಸದೆ ಬುದ್ಧಿವಂತಿಕೆಯಿಂದ ವ್ಯವಹರಿಸುವುದು ಉತ್ತಮ. ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಸಂಗಾತಿ ಇಂದು ಪ್ರೀತಿಯಿಂದ ನಿಮ್ಮ ಕಡೆಗೆ಼ ಕೈ ಚಾಚುತ್ತಾರೆ. ಹಾಗಾಗಿ ನಿಮ್ಮ ಪ್ರೀತಿಯನ್ನು ಬಲಪಡಿಸಲು ಪ್ರಯತ್ನಿಸಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಉತ್ತಮ ಬಣ್ಣ: ಕಡು ನೀಲಿ
ಶುಭ ಸಂಖ್ಯೆ: 8
ಒಳ್ಳೆಯ ಸಮಯ: ಬೆಳಗ್ಗೆ 8:00 ರಿಂದ ಸಂಜೆ 5:30 ರವರೆಗೆ



Click it and Unblock the Notifications











