For Quick Alerts
ALLOW NOTIFICATIONS  
For Daily Alerts

ಗುರುವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

ಶ್ರೀ ಶ್ರೀನಿವಾಸ್ ಗುರೂಜಿ

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ-

ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.

ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು

M. 9986623344

web: www.sadguru-sai.com

ಸಂವತ್ಸರ: ಶಾರ್ವರಿ

ಆಯನ: ದಕ್ಷಿಣಾಯನ

ಋತು: ಶರದ್

ಮಾಸ: ಕಾರ್ತಿಕಾ

ನಕ್ಷತ್ರ: ರಾತ್ರಿ 09:21ರ ವರೆಗೆ ರೇವತಿ, ನಂತರ ಅಶ್ವಿನಿ

ಶುಕ್ಲ ಪಕ್ಷ

ರಾಹುಕಾಲ: ಮಧ್ಯಾಹ್ನ 01:27ರಿಂದ 02:46ರವರೆಗೆ

ಗುಳಿಕಕಾಲ: ಬೆಳಗ್ಗೆ 09:31ರಿಂದ 10:50ರವರೆಗೆ

ಯಮಗಂಡಕಾಲ: ಬೆಳಗ್ಗೆ 06:53ರಿಂದ 08:12ರವರೆಗೆ

ದುರ್ಮುಹೂರ್ತ: ಬೆಳಗ್ಗೆ 10:23ರಿಂದ 11:05ರವರೆಗೆ

ಮಧ್ಯಾಹ್ನ 02:36ರಿಂದ 03:18ರವರೆಗೆ

ಸೂರ್ಯೋದಯ: ಬೆಳಗ್ಗೆ 06:53ಕ್ಕೆ

ಸೂರ್ಯಾಸ್ತ: ಸಂಜೆ 05:24ಕ್ಕ

ಮೇಷ ರಾಶಿ:

ಮೇಷ ರಾಶಿ:

ಇಂದು ನಿಮ್ಮ ಬುದ್ಧಿವಂತಿಕೆ ಮತ್ತು ತಿಳುವಳಿಕೆಯ ಬಲದ ಮೇಲೆ ನೀವು ಯಾವುದೇ ದೊಡ್ಡ ಸಮಸ್ಯೆಯನ್ನು ಕೂಡ ಪರಿಹಾರ ಮಾಡೀಕೊಳ್ಳಬಹುದು. ನಿಮ್ಮ ಸಕಾರಾತ್ಮಕ ಮನೋಭಾವದಿಂದ ಇತರರೂ ಪ್ರಭಾವಿತರಾಗುತ್ತಾರೆ. ಕೆಲಸದ ಬಗ್ಗೆ ಮಾತನಾಡುತ್ತಾ, ಇಂದು ಉದ್ಯೋಗಿಗಳಿಗೆ ಬಹಳ ಮುಖ್ಯ ದಿನವಾಗಿರುತ್ತದೆ. ಕಚೇರಿಯಲ್ಲಿ ನೀವು ದೊಡ್ಡ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶವನ್ನು ಪಡೆಯಬಹುದು. ನೀವು ಕಷ್ಟಪಟ್ಟು ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ, ಮುಂದಿನ ದಿನಗಳಲ್ಲಿ ನೀವು ಪ್ರಗತಿ ಹೊಂದಬಹುದು. ವ್ಯಾಪಾರಸ್ಥರು ಇಂದು ಯಾವುದೇ ಹೊಸ ವ್ಯವಹಾರವನ್ನು ಮಾಡದಿರುವುದು ಉತ್ತಮ. ನಿಮ್ಮ ಯಾವುದೇ ವ್ಯವಹಾರ ನಿರ್ಧಾರಗಳನ್ನು ನೀವು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ಕುಟುಂಬ ಜೀವನದಲ್ಲಿ ಒತ್ತಡ ಉಂಟಾಗಬಹುದು. ಮನೆಯ ಸದಸ್ಯರೊಂದಿಗೆ ಮನಸ್ತಾಪ ಉಂಟಾಗಬಹುದು. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಕುಟುಂಬದ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ತಂಪಾದ ಆಹಾರಗಳ ಸೇವನೆಯನ್ನು ತಪ್ಪಿಸಬೇಕು.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 39

ಶುಭ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ನೀವು ವಿದ್ಯಾರ್ಥಿಯಾಗಿದ್ದರೆ, ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನೀವು ಇತ್ತೀಚಿಗೆ ಒತ್ತಡವನ್ನು ಅನುಭವಿಸುತ್ತಿದ್ದರೆ, ನಿಮ್ಮ ಎಲ್ಲಾ ಒತ್ತಡಗಳನ್ನು ನೀವು ಮರೆತು ನಿಮ್ಮ ಆಸಕ್ತಿಗಳ ಮೇಲೆ ನಿಮ್ಮ ಗಮನವನ್ನು ಇಂದು ಕೇಂದ್ರೀಕರಿಸಿ. ಕಚೇರಿಯಲ್ಲಿ ಎಲ್ಲಾ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವ ಬದಲು, ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಇಂದು, ನಿಮ್ಮ ಬಾಸ್ ಮನಸ್ಥಿತಿ ಸರಿಯಾಗಿರುವುದಿಲ್ಲ. ವ್ಯಾಪಾರಸ್ಥರು ಇಂದು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು. ಹಾಗೆಯೇ ತಿಳುವಳಿಕೆ ಮತ್ತು ಪ್ರಾಮಾಣಿಕತೆಯಿಂದ ನಿಮ್ಮ ಕೆಲಸವನ್ನು ನೀವು ಮುಂದುವರಿಸಿದರೆ, ಶೀಘ್ರದಲ್ಲೇ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಇಂದು ಸಂಗಾತಿಯೊಂದಿಗೆ ಸ್ವಲ್ಪ ಮಾತಿನ ಗುದ್ದಾಟವಾಗಬಹುದು. ಪರಿಸ್ಥಿತಿ ಏನೇ ಇರಲಿ, ನೀವು ಅಹಿತಕರ ಪದಗಳನ್ನು ಬಳಸುವುದನ್ನು ತಪ್ಪಿಸಬೇಕು. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ತಲೆನೋವಿನ ಸಮಸ್ಯೆ ಇರಬಹುದು.

ಉತ್ತಮ ಬಣ್ಣ: ಆಕಾಶ ನೀಲಿ

ಅದೃಷ್ಟ ಸಂಖ್ಯೆ: 20

ಒಳ್ಳೆಯ ಸಮಯ: ಬೆಳಗ್ಗೆ 7:55 ರಿಂದ 11:30 ರವರೆಗೆ

ಮಿಥುನ ರಾಶಿ:

ಮಿಥುನ ರಾಶಿ:

ಕುಟುಂಬ ಜೀವನದಲ್ಲಿ ಸ್ವಲ್ಪ ಕೋಲಾಹಲ ಉಂಟಾಗಬಹುದು. ನಿಮ್ಮ ಮನೆಯಲ್ಲಿ ವಯಸ್ಸಾದ ಸದಸ್ಯರು ಇದ್ದರೆ, ಅವರ ಆರೋಗ್ಯದ ಕ್ಷೀಣತೆಯಿಂದಾಗಿ ನೀವು ಇಂದು ತುಂಬಾ ಚಿಂತೆ ಮಾಡುತ್ತೀರಿ. ಇದಲ್ಲದೆ, ನಿಮ್ಮ ಸಂಗಾತಿಯು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಎಲ್ಲರ ಬಗ್ಗೆ ಕಾಳಜಿವಹಿಸುವುದು ಉತ್ತಮ. ಹಣದ ದೃಷ್ಟಿಯಿಂದ ದಿನ ದುಬಾರಿಯಾಗಲಿದೆ. ಇಂದು ಕೆಲವು ಅನಗತ್ಯ ವೆಚ್ಚಗಳು ಇರಬಹುದು. ಕೆಲಸದ ಬಗ್ಗೆ ಮಾತನಾಡುತ್ತಾ, ನೀವು ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ಸರಿಯಾದ ನಿರ್ಧಾರವಲ್ಲ. ಇದರಿಂದ ಮುಂದೆ ನೀವು ವಿಷಾದಿಸಬೇಕಾಗಬಹುದು, ಆದ್ದರಿಂದ ನೀವು ಏನೇ ಇರ್ಧಾರ ಮಾಡಿದರೂ ಅದನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಿ. ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನ. ನೀವು ಯಾವುದೇ ವಿಶೇಷ ಪ್ರಯೋಜನವನ್ನು ಪಡೆಯುವುದಿಲ್ಲ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ವೈಯಕ್ತಿಕ ಜೀವನದ ಸಮಸ್ಯೆಗಳು ಮತ್ತು ಕೆಲಸದ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 13

ಶುಭ ಸಮಯ: ಬೆಳಗ್ಗೆ 10:10 ರಿಂದ ಮಧ್ಯಾಹ್ನ 12:25

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಉದ್ಯೋಗಸ್ಥರಿಗೆ ಇಂದು ಶುಭ ಪಲ ದೊರೆಯುತ್ತದೆ. ನೌಕರಸ್ಥರು ಪ್ರಗತಿಯನ್ನು ಪಡೆಯುತ್ತಾರೆ. ಕಚೇರಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ನೀವು ಬಲಪಡಿಸಬೇಕು. ನಿಮ್ಮ ಬಾಸ್ ನೀಡಿದ ಸಣ್ಣ ಕೆಲಸವನ್ನು ಸಹ ಎಚ್ಚರಿಕೆಯಿಂದ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಿಗಳು ಇಂದು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯಬಹುದು. ನೀವು ಪ್ಲಾಸ್ಟಿಕ್, ಮರ, ಕಬ್ಬಿಣ ಇತ್ಯಾದಿಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿದ್ದರೆ ಇಂದು ನೀವು ನಿರೀಕ್ಷೆಯಂತೆ ಫಲಿತಾಂಶಗಳನ್ನು ಪಡೆಯಬಹುದು.

ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ಕೆಲಸದಲ್ಲಿ ನಿರತರಾಗಿರುವುದರಿಂದ, ಇಂದು ನಿಮ್ಮ ಕುಟುಂಬ ಸದಸ್ಯರಿಗೆ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಸಂಗಾತಿಯೊಂದಿಗಿನ ಸಂಬಂಧದದಲ್ಲಿ ಸಾಮರಸ್ಯ ಇರುತ್ತದೆ. ಹಣದ ಬಗ್ಗೆ ಮಾತನಾಡುತ್ತಾ, ಈ ಸಮಯವನ್ನು ಯೋಚನೆ ಮಾಡಿ ಕಳೆಯಬೇಕು. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕಡು ಕೆಂಪು

ಶುಭ ಸಂಖ್ಯೆ: 2

ಶುಭ ಸಮಯ: ಸಂಜೆ 4:30 ರಿಂದ 10 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ಇಂದು ಕಚೇರಿಯಲ್ಲಿ ಜಾಗರೂಕರಾಗಿರಿ. ಮೊದಲು ನಿಮ್ಮ ಬಾಸ್ ನೀಡಿದ ಜವಾಬ್ದಾರಿಗಳನ್ನು ಪೂರೈಸಲು ಪ್ರಯತ್ನಿಸಿ. ಇಂದು ನಿಮ್ಮಿಂದ ಯಾವುದೇ ತಪ್ಪಾಗದಂತೆ ಎಚ್ಚರವಹಿಸಿ. ವ್ಯಾಪಾರಿಗಳು ಇಂದು ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ನೀವು ಚಿನ್ನ ಮತ್ತು ಬೆಳ್ಳಿಯನ್ನು ವ್ಯಾಪಾರ ಮಾಡುತ್ತಿದ್ದರೆ, ಇಂದು ನೀವು ಉತ್ತಮ ಲಾಭ ಪಡೆಯಬಹುದು.

ನಿಮ್ಮ ವೃತ್ತಿಜೀವನದ ಬಗ್ಗೆ ನಿಮಗೆ ಯಾವುದೇ ರೀತಿಯ ಸಂದಿಗ್ಧತೆ ಇದ್ದರೆ, ಅನುಭವಿ ಜನರ ಸಲಹೆ ಪಡೆದ ನಂತರವೇ ನಿಮ್ಮ ಮುಂದಿನ ಹೆಜ್ಜೆಯನ್ನಿಡಬೇಕು. ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನಿಮ್ಮ ಬಜೆಟ್ ಪ್ರಕಾರ ನೀವು ಖರ್ಚು ಮಾಡುತ್ತೀರಿ. ಕುಟುಂಬ ಜೀವನದ ಬಗ್ಗೆ ಮಾತನಾಡುತ್ತಾ, ಮನೆಯಲ್ಲಿ ವಾತಾವರಣವು ಶಾಂತವಾಗಿರುತ್ತದೆ. ಮನೆಯ ಯಾವುದೇ ಸದಸ್ಯರು ನಿಮ್ಮ ಮೇಲೆ ಕೋಪಗೊಂಡಿದ್ದರೆ, ಇಂದು ನೀವು ಅವರ ಅಸಮಾಧಾನವನ್ನು ದೂರಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಮಾತನಾಡುವುದಾದರೆ, ಹೊರಗಿನ ಆಹಾರವನ್ನು ತಿನ್ನಬೇಡಿ.

ಉತ್ತಮ ಬಣ್ಣ: ತಿಳಿ ಹಳದಿ

ಶುಭ ಸಂಖ್ಯೆ: 9

ಶುಭ ಸಮಯ: ಬೆಳಗ್ಗೆ 4:40 ರಿಂದ ಮಧ್ಯಾಹ್ನ 3 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಉದ್ಯೋಗಸ್ಥರ ದೀರ್ಘಕಾಲದ ಪ್ರಯತ್ನವು ಇಂದು ಫಲಿಸಲಿದೆ. ಮತ್ತೊಂದೆಡೆ, ನಿರುದ್ಯೋಗಿಗಳಿಗೆ ಸಹ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಸ್ಥಳೀಯರು ಉತ್ತಮ ಲಾಭವನ್ನು ಗಳಿಸಬಹುದು. ಆದಾಗ್ಯೂ, ಈ ಸಮಯದಲ್ಲಿ ಪ್ರತಿ ಹಣಕಾಸಿನ ವಹಿವಾಟನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ವಿವಾಹಿತರಿಗೆ ದಿನವು ಉತ್ತಮವಾಗಿರುವುದಿಲ್ಲ. ನಿಮ್ಮ ವೈವಾಹಿಕ ಜೀವನದಲ್ಲಿ ಅಪಶ್ರುತಿ ಹೆಚ್ಚಾಗುತ್ತದೆ. ಕೋಪಗೊಳ್ಳದಿರುವುದು ಒಳ್ಳೆಯದು. ಬದಲಿಗೆ ಶಾಂತಿಯಿಂದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ. ತಾಯಿ, ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ನೀವು ಅವರನ್ನು ನೋಡಿಕೊಳ್ಳಬೇಕು. ಆರ್ಥಿಕವಾಗಿ, ದಿನವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಆದಾಯಕ್ಕಿಂತ ಹೆಚ್ಚಿನದನ್ನು ಖರ್ಚು ಮಾಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ತೊಂದರೆಗೆ ಸಿಲುಕಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ಹೊಟ್ಟೆಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆ ಇರಬಹುದು.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 9

ಶುಭ ಸಮಯ: ಬೆಳಗ್ಗೆ 11:30 ರಿಂದ ಮಧ್ಯಾಹ್ನ 2 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ನಿಮಗೆ ಮೂತ್ರಪಿಂಡ ಕಾಯಿಲೆ ಇದ್ದರೆ, ನಿರ್ಲಕ್ಷ್ಯ ವಹಿಸಬೇಡಿ. ಆರ್ಥಿಕವಾಗಿ ದಿನವು ಅಷ್ಟು ಉತ್ತಮವಾಗಿಲ್ಲ. ಹಣ ನಷ್ಟವಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರು ಶಾರ್ಟ್ಕಟ್ ಮಾರ್ಗವನ್ನು ಬಳಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು. ಉದ್ಯೋಗಿಗಳಿಗೆ ಇಂದು ಸಾಮಾನ್ಯ ದಿನವಾಗಲಿದೆ. ಆದರೂ, ನಿಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಉಂಟಾಗುವುದನ್ನು ನೀವು ತಪ್ಪಿಸಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತವೆ. ಮನೆಯ ಸದಸ್ಯರೊಂದಿಗಿನ ಸಂಬಂಧವು ಸಾಮರಸ್ಯದಿಂದ ಕೂಡಿರುತ್ತದೆ. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ, ವಿಶೇಷವಾಗಿ ಪೋಷಕರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 12

ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 4:25 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ಅವರು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ಅನಗತ್ಯ ವಿಷಯಗಳಿಂದ ದೂರವಿರಿ. ಇಲ್ಲದಿದ್ದರೆ ನಿಮ್ಮ ಮಾನಸಿಕ ಶಾಂತಿಗೆ ಭಂಗವಾಗಬಹುದು. ಕಚೇರಿಯಲ್ಲಿ ಕೆಲಸ ಮಾಡುವಾಗ, ನಿಮ್ಮ ನಡವಳಿಕೆಯನ್ನು ಸಹ ನೀವು ಗಮನದಲ್ಲಿಟ್ಟುಕೊಳ್ಳಬೇಕು. ಸಹೋದ್ಯೋಗಿಗಳೊಂದಿಗೆ ಅನಗತ್ಯವಾಗಿ ಮಾತಿಗಿಳಿಯುವುದು ನಿಮ್ಮ ಕೆಲಸ ಮತ್ತು ವ್ಯಕ್ತಿತ್ವ ಎರಡರ ಮೇಲೂ ಪರಿಣಾಮ ಬೀರುತ್ತದೆ. ವ್ಯಾಪಾರಸ್ಥರು ಇಂದು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು, ವಿಶೇಷವಾಗಿ ನಿಮ್ಮ ಕೆಲಸವು ಆಸ್ತಿಗೆ ಸಂಬಂಧಿಸಿದ್ದರೆ ನೀವು ಉತ್ತಮ ಪ್ರಯೋಜನಗಳನ್ನು ನಿರೀಕ್ಷಿಸಬಹುದು.

ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ಹಣದ ಬಗ್ಗೆ ಮಾತನಾಡುತ್ತಾ, ನಿಮ್ಮ ಯಾವುದೇ ದೀರ್ಘಕಾಲೀನ ಆರ್ಥಿಕ ಪ್ರಯತ್ನಗಳು ಇಂದು ಯಶಸ್ವಿಯಾಗಬಹುದು. ಇಂದು ಆರೋಗ್ಯದ ದೃಷ್ಟಿಯಿಂದ ಮಿಶ್ರ ದಿನ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 6

ಶುಭ ಸಮಯ: ಮಧ್ಯಾಹ್ನ 2 ರಿಂದ 10: 45 ರವರೆಗೆ

ಧನು ರಾಶಿ:

ಧನು ರಾಶಿ:

ಬೇರೆಯವರ ವಿಷಯದಲ್ಲಿ ಅನಗತ್ಯವಾಗಿ ಮೂಗು ತೂರಿಸಬೇಡಿ, ಇದು ನಿಮಗೇ ತೊಂದರೆಯನ್ನುಂಟು ಮಾಡಬಹುದು. ಅಗತ್ಯವಿರುವಷ್ಟು ಮಾತ್ರ ಮಾತನಾಡಿ. ಕೆಲಸದ ಬಗ್ಗೆ ಮಾತನಾಡುವುದಾದರೆ, ಕಚೇರಿ ವಾತಾವರಣವು ತುಂಬಾ ಚೆನ್ನಾಗಿರುತ್ತದೆ. ಇಂದು ಕೆಲಸ ಮಾಡುವುದರಲ್ಲಿ ನೀವು ವಿಭಿನ್ನ ಆನಂದವನ್ನು ಅನುಭವಿಸುವಿರಿ. ಸಹೋದ್ಯೋಗಿಗಳ ಸಹಕಾರವೂ ದೂರೆಯುತ್ತದೆ. ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಬಹುದು. ನೀವು ಔಷಧಿಗಳ ವ್ಯಾಪಾರ ಮಾಡುವವರಾಗಿದ್ದರೆ, ಇಂದು ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಇಂದು ಕುಟುಂಬ ಸದಸ್ಯರೊಂದಿಗೆ ಮೋಜಿನಿಂದ ದಿನ ಕಳೆಯುತ್ತೀರಿ. ಸಂಗಾತಿಯ ಸಹಾಯದಿಂದ, ನೀವು ಇಂದು ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಬಹುದು. ಇದಲ್ಲದೆ ಆರ್ಥಿಕ ಲಾಭದ ಸಾಧ್ಯತೆಯೂ ಇದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಆರಾಮವಾಗಿರುತ್ತೀರಿ.

ಉತ್ತಮ ಬಣ್ಣ: ಆಕಾಶ ನೀಲಿ

ಶುಭ ಸಂಖ್ಯೆ: 17

ಶುಭ ಸಮಯ: ಮಧ್ಯಾಹ್ನ 12:20 ರಿಂದ 9:05 ರವರೆಗೆ

ಮಕರ ರಾಶಿ:

ಮಕರ ರಾಶಿ:

ನೀವು ವಿದ್ಯಾರ್ಥಿಯಾಗಿದ್ದರೆ, ಇಂದು ನಿಮ್ಮ ಅಧ್ಯಯನದಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು. ಆದಾಗ್ಯೂ, ನೀವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ನಿಮ್ಮ ಸಮಸ್ಯೆ ತಾತ್ಕಾಲಿಕ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಈ ಸಮಯದಲ್ಲಿ ನೀವು ಹೆಚ್ಚು ಶ್ರಮಿಸಬೇಕು. ಹಣದ ವಿಷಯದಲ್ಲಿ ದೊಡ್ಡ ಲಾಭ ಉಂಟಾಗಬಹುದು. ಇಂದು ಇದ್ದಕ್ಕಿದ್ದಂತೆ ಸಂಪತ್ತು ಪಡೆಯುವ ಸಾಧ್ಯತೆಯಿದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಚಿಂತನಶೀಲವಾಗಿ ಬಳಸಿದರೆ, ಮುಂದಿನ ದಿನಗಳಲ್ಲಿ ನೀವು ಖಂಡಿತವಾಗಿಯೂ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.

ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಮನೆಯ ಸದಸ್ಯರಲ್ಲಿ ಪ್ರೀತಿ ಮತ್ತು ವಿಶ್ವಾಸ ಇರುತ್ತದೆ. ಇಂದು ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಜಾಸ್ತಿ. ನೀವು ಕೆಲಸ ಮಾಡುತ್ತಿರಲಿ ಅಥವಾ ನಿಮ್ಮ ವ್ಯವಹಾರವಾಗಲಿ, ನೀವು ಇಂದು ತುಂಬಾ ಕಾರ್ಯನಿರತರಾಗಿರುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ನಿಮಗೆ ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ನಿರ್ಲಕ್ಷ್ಯ ಮಾಡಬೇಡಿ.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 7

ಶುಭ ಸಮಯ: ಸಂಜೆ 7 ರಿಂದ 9:25

ಕುಂಭ ರಾಶಿ:

ಕುಂಭ ರಾಶಿ:

ಇಂದು ನಿಮ್ಮ ಜೀವನದಲ್ಲಿ ಅನಗತ್ಯ ಒತ್ತಡ ಸೃಷ್ಟಿಯಾಗಬಹುದು. ಮೊದಲನೆಯದಾಗಿ, ನಿಮ್ಮ ಕುಟುಂಬ ಜೀವನದ ಬಗ್ಗೆ ಮಾತನಾಡುವುದಾದಲ್ಲಿ, ಇಂದು ಸಣ್ಣ ವಿಷಯಗಳನ್ನು ಕೂಡ ಕುಟುಂಬ ಸದಸ್ಯರಲ್ಲಿ ಚರ್ಚಿಸಬಹುದು. ಮನೆಯಲ್ಲಿ ಅಪಶ್ರುತಿ ಹೆಚ್ಚುತ್ತಿದೆ ಎಂದು ನೀವು ಭಾವಿಸಬಹುದು, ನಿಮ್ಮ ಅನೇಕ ಪ್ರಯತ್ನಗಳ ನಂತರವೂ, ಇಂದಿನ ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮಾನಸಿಕ ಒತ್ತಡ ಉಂಟಾಗಿ ಯಾವುದೇ ಕೆಲಸವನ್ನೂ ಮನಸ್ಸಿಟ್ಟು ಮಾಡಲು ಸಾಧ್ಯವಾಗುವುದಿಲ್ಲ. ನೀವು ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ನೀವು ಆತುರದಲ್ಲಿ ನಿರ್ಧಾರವನ್ನು ತೆಗೆದುಕೊಂಡರೆ, ಭವಿಷ್ಯದಲ್ಲಿ ಅದು ನಿಮಗೆ ತೊಂದರೆಯನ್ನುಂಟು ಮಾಡುತ್ತದೆ. ಆರ್ಥಿಕವಾಗಿಯೂ ದಿನ ಅಷ್ಟು ಉತ್ತಮವಾಗಿಲ್ಲ. ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಉತ್ತಮ ಬಣ್ಣ: ಕಂದು

ಶುಭ ಸಂಖ್ಯೆ: 12

ಶುಭ ಸಮಯ: ಸಂಜೆ 6:20 ರಿಂದ 8:20 ರವರೆಗೆ

ಮೀನ ರಾಶಿ:

ಮೀನ ರಾಶಿ:

ಇತ್ತೀಚಿಗೆ ನಿಮ್ಮ ವೈಯಕ್ತಿಕ ಜೀವನ ಮತ್ತು ಕೆಲಸ ಎರಡನ್ನೂ ಸಮತೋಲನಗೊಳಿಸುವಲ್ಲಿ ನಿಮಗೆ ಸಾಧ್ಯವಾಗದೇ ಇದ್ದರೆ ಇಂದು ಆ ಸಮಸ್ಯೆಗೆ ಪರಿಹಾರ ದೊರೆಯಬಹುದು. ನೀವು ಕೆಲಸಕ್ಕಾಗಿ ಮತ್ತು ಕುಟುಂಬಕ್ಕೆ ಸಾಕಷ್ಟು ಸಮಯವನ್ನು ಒದಗಿಸಲು ಸಾಧ್ಯವಾಗುತ್ತದೆ. ವಿವಾಹಿತರಿಗೆ ಇಂದು ಉತ್ತಮ ದಿನ. ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅವರು ತಮ್ಮ ಗುರಿಯಿಂದ ವಿಮುಖರಾಗಬಹುದು. ಕಚೇರಿಯಲ್ಲಿನ ಮೇಲಧಿಕಾರಿಗಳಿಂದ ನಿಮ್ಮ ಹೊಗಳಿಕೆಯನ್ನು ಕೇಳಿ ನಿಮಗೆ ತುಂಬಾ ಸಂತೋಷವಾಗುತ್ತದೆ. ಆರ್ಥಿಕವಾಗಿ ದಿನವು ಉತ್ತಮವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ ಮತ್ತು ಯಾವುದೇ ದೊಡ್ಡ ಆರ್ಥಿಕ ಲಾಭವನ್ನು ಪಡೆಯುವ ಮೂಲಕ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು. ಇಂದು ನೀವು ಪ್ರಯಾಣಿಸಲಿದ್ದರೆ, ನಿಮ್ಮ ಯೋಜನೆಯನ್ನು ಕೊನೆಯ ಕ್ಷಣಗಳಲ್ಲಿ ಬದಲಾಯಿಸುವ ಸಾಧ್ಯವಿದೆ.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 21

ಶುಭ ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ

ಶ್ರೀ ಶ್ರೀನಿವಾಸ್ ಗುರೂಜಿ

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ-

ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.

ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು

M. 9986623344

web: www.sadguru-sai.com

ಶ್ರೀ ಸಾಶ್ರೀ ಶ್ರೀನಿವಾಸ್ ಗುರೂಜಿ

ಶ್ರೀ ಸಾಯಿ ಅನುಗ್ರಹ ಜ್ಯೋತಿಷ್ಯ ಪೀಠ

ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ

ಕರಾವಳಿ ವಂಶಪರಂಪರೆ ಮನೆತನದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಾದ-

ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ, ಅತ್ತೆ-ಸೊಸೆ ಕಲಹ, ಹಣಕಾಸಿನ ತೊಂದರೆ, ಮದುವೆಯಲ್ಲಿ ಅಡೆತಡೆ, ಸತಿ ಪತಿ ಕಲಹ, ಸಂತಾನ ಸಮಸ್ಯೆ, ಆರೋಗ್ಯ, ಉದ್ಯೋಗ, ಸಾಲ ಭಾದೆ, ಲವ್ ಪ್ರಾಬ್ಲಮ್ ಇನ್ನು ಯಾವುದೇ ಜಟಿಲ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ ಶ್ರೀ ಸಾಯಿ ಬಾಬಾ ಪೂಜೆ ಶಕ್ತಿಯಿಂದ ಯಾವುದೇ ಸಮಸ್ಯೆ ಇದ್ದರೂ( 5) ದಿನದಲ್ಲಿಶಾಶ್ವತ ಪರಿಹಾರ ತಿಳಿಸುತ್ತಾರೆ.

ಮನೆ ವಿಳಾಸ- #37/17 27th cross 12 th main 4th block ಜಯನಗರ ಬೆಂಗಳೂರು

M. 9986623344ಯಿ ಅನುಗ್ರಹ ಜ್ಯೋತಿಷ್ಯ ಪೀಠ

web: www.sadguru-sai.com

English summary

Dina Bhavishya 26 November 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Thursday, November 26, 2020, 4:00 [IST]
X