Horoscope Today 26 December 2022: ಸೋಮವಾರ: ದ್ವಾದಶ ರಾಶಿಗಳ ದಿನದ ರಾಶಿಫಲ ಹೇಗಿದೆ?

ಶುಭೋದಯ..... ಸೋಮವಾರ ಶಿವನ ಕೃಪೆ ನಿಮ್ಮ ಮೇಲಿರಲಿ, ಇಷ್ಟದೈವವನ್ನು ಮನದಲ್ಲಿ ನೆನೆಯುತ್ತಾ ಈ ದಿನದ ಭವಿಷ್ಯ ನೋಡೋಣ...

ಸಂವತ್ಸರ: ಶುಭಕೃತ್
ಆಯನ: ದಕ್ಷಿಣಾಯಣ
ಋತು: ಹೇಮಂತ
ಮಾಸ: ಮಾರ್ಗಶಿರ
ಪಕ್ಷ: ಶುಕ್ಲ ಪಕ್ಷ
ತಿಥಿ: ಚತುರ್ಥಿ
ನಕ್ಷತ್ರ: ಶ್ರವಣ
ರಾಹುಕಾಲ: ಬೆಳಗ್ಗೆ 08:04ರಿಂದ 09:30ರವರೆಗೆ
ಸೂರ್ಯೋದಯ: ಬೆಳಗ್ಗೆ 6.39
ಸೂರ್ಯಾಸ್ತ: 06:01

 ಮೇಷ ರಾಶಿ

ಮೇಷ ರಾಶಿ

ನೀವು ವ್ಯಾಪಾರಸ್ಥರಾಗಿದ್ದರೆ ಈ ದಿನ ಲಾಭದಾಯವಾಗಿರುತ್ತದೆ. ನಿಮ್ಮ ಸ್ಥಗಿತಗೊಂಡ ಯೋಜನೆಯು ಮುಂದುವರಿಯಬಹುದು ಮತ್ತು ನಿಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶಗಳನ್ನು ನೀವು ಪಡೆಯಬಹುದು. ಉದ್ಯೋಗಳಿಗೂ ಈ ದಿನ ಅನುಕೂಲಕರವಾಗಿದೆ. ಹಣದ ಪರಿಸ್ಥಿತಿ ಸುಧಾರಿಸಬಹುದು. ಕೌಟುಂಬಿಕ ಜೀವನದಲ್ಲಿ ಖುಷಿ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಬೇಡಿ.

ಅದೃಷ್ಟದ ಬಣ್ಣ: ಹಸಿರು

ಅದೃಷ್ಟದ ಸಂಖ್ಯೆ: 11

ಅದೃಷ್ಟದ ಸಮಯ: ಬೆಳಗ್ಗೆ 4:30 ರಿಂದ 11 ರವರೆಗೆ

 ವೃಷಭ ರಾಶಿ

ವೃಷಭ ರಾಶಿ

ಯಾರನ್ನೂ ಕುರುಡಾಗಿ ನಂಬಬೇಡಿ. ಇದಲ್ಲದೆ, ನಿಮಗೆ ಸಂಬಂಧಿಸಿದ ರಹಸ್ಯ ವಿಷಯಗಳ ಬಗ್ಗೆ ಇತರರ ಜೊತೆ ಹೇಳಬೇಡಿ. ಮನೆಯ ಯಾವುದೇ ಸದಸ್ಯರ ಆರೋಗ್ಯವು ಸರಿಯಾಗಿಲ್ಲದಿದ್ದರೆ, ಇಂದು ಅವರ ಆರೋಗ್ಯವು ಸುಧಾರಿಸಬಹುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ.ಕೆಲಸದ ದೃಷ್ಟಿಯಿಂದ ಇಂದು ನಿಮಗೆ ಮಿಶ್ರಫಲ. ಉದ್ಯಮಿಗಳು ತಮ್ಮದೇ ಆದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇತರರ ಮೇಲೆ ಹೆಚ್ಚು ಅವಲಂಬಿತರಾಗಬೇಡಿ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ಕಿವಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರಬಹುದು.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 19

ಅದೃಷ್ಟದ ಸಮಯ: 10:45 ರಿಂದ 12:25 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಕಚೇರಿಯಲ್ಲಿಈ ದಿನ ಸಕಾರಾತ್ಮಕತೆ ಅನುಭವಿಸುವಿರಿ. ವ್ಯಾಪಾರಸ್ಥರು ಇಂದು ಉತ್ತಮ ಲಾಭವನ್ನು ಪಡೆಯಬಹುದು. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಹಣದ ವಿಷಯದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗಬಹುದು. ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಆದರೆ, ಹಣಕಾಸಿನ ವಿಷಯಗಳಲ್ಲಿ ಆತುರಪಡಬೇಡಿ. ನಾವು ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಬದಲಾಗುತ್ತಿರುವ ಋತುವಿನಲ್ಲಿ ನಿಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಲಹೆ ನೀಡಲಾಗಿದೆ.

ಅದೃಷ್ಟದ ಬಣ್ಣ: ತಿಳಿ ಗುಲಾಬಿ

ಅದೃಷ್ಟದ ಸಂಖ್ಯೆ: 26

ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 6 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ಸಣ್ಣ ಉದ್ಯಮಿಗಳು ಇಂದು ಉತ್ತಮ ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಹೆಚ್ಚು ತಮಾಷೆ ಮಾಡುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ. ಒಂದು ಸಣ್ಣ ವಿಷಯವು ದೊಡ್ಡದಾಗಬಹುದು, ಆದ್ದರಿಂದ ಎಚ್ಚರ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ವಿಷಯಕ್ಕೆ ಬಂದಾಗ, ನೀವು ನಿಮ್ಮ ಅಹಂಕಾರವನ್ನು ತ್ಯಜಿಸಬೇಕು. ಆರೋಗ್ಯ ಸುಧಾರಿಸಬಹುದು.

ಅದೃಷ್ಟದ ಬಣ್ಣ: ಆಕಾಶ ನೀಲಿ

ಅದೃಷ್ಟದ ಸಂಖ್ಯೆ: 6

ಅದೃಷ್ಟದ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ

 ಸಿಂಹ ರಾಶಿ

ಸಿಂಹ ರಾಶಿ

ಇಂದು ನಿಮಗೆ ತುಂಬಾ ಶುಭದಿನ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ಉದ್ಯಮಿಗಳ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ಕರ್ಷದ ಲಕ್ಷಣಗಳು ಕಂಡುಬರುತ್ತವೆ. ನೀವು ಹಿಂದೆ ಮಾಡಿದ ಹೂಡಿಕೆಗಳ ದುಪ್ಪಟ್ಟು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮವಾಗುತ್ತೀರಿ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 22

ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 7 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಇಂದು ನಿಮ್ಮ ದಿನದ ಯೋಜನೆಗಳಲ್ಲಿ ಅಡೆತಡೆಗಳು ಉಂಟಾಗಬಹುದು. ನಿಮ್ಮ ಯೋಜನೆಯ ಪ್ರಕಾರ ನಿಮ್ಮ ಕೆಲಸ ಪೂರ್ಣಗೊಳ್ಳದ ಕಾರಣ ನೀವು ತುಂಬಾ ಕಿರಿಕಿರಿ ಅನುಭವಿಸುವಿರಿ. ವ್ಯಾಪಾರಸ್ಥರು ದೊಡ್ಡ ಹೂಡಿಕೆಯನ್ನು ಮಾಡಲು ಹೊರಟಿದ್ದರೆ, ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಚೆನ್ನಾಗಿ ಪಡೆಯಿರಿ, ಇಲ್ಲದಿದ್ದರೆ ನೀವು ನಷ್ಟಕ್ಕೆ ಒಳಗಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮನೆಯ ಹಿರಿಯರೊಂದಿಗೆ ನಿಮ್ಮ ಸಂಬಂಧವು ಗಟ್ಟಿಯಾಗಿರುತ್ತದೆ. ನಾವು ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದನ್ನು ನೀವು ತಪ್ಪಿಸಬೇಕು.

ಅದೃಷ್ಟದ ಬಣ್ಣ: ಗುಲಾಬಿ

ಅದೃಷ್ಟದ ಸಂಖ್ಯೆ: 8

ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:20 ರವರೆಗೆ

 ತುಲಾ ರಾಶಿ

ತುಲಾ ರಾಶಿ

ಇಂದು ಉದ್ಯಮಿಗಳಿಗೆ ಬಹಳ ಮುಖ್ಯವಾದ ದಿನದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನಿಮ್ಮ ಯೋಜನೆಯಲ್ಲಿ ಮುಂದುವರಿಯಬಹುದು. ನಿಮ್ಮ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವವರು ವರ್ಗಾವಣೆಯನ್ನು ಪಡೆಯಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಆದಾಯದಲ್ಲಿ ಹೆಚ್ಚಳದ ಬಲವಾದ ಸಾಧ್ಯತೆಯಿದೆ. ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ.

ಅದೃಷ್ಟದ ಬಣ್ಣ: ಕಂದು

ಅದೃಷ್ಟದ ಸಂಖ್ಯೆ: 19

ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 4 ರವರೆಗೆ

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಕುಟುಂಬದ ವಿಷಯದಲ್ಲಿ ಇಂದು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ನಿಮಗೆ ಕಡಿಮೆ ಅನುಭವವಿರುವ ಕೆಲವು ಕೆಲಸವನ್ನು ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ, ಉನ್ನತ ಅಧಿಕಾರಿಗಳ ಸಹಕಾರದಿಂದ, ನಿಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಬಹುದು. ಉದ್ಯಮಿಗಳಿಗೆ ಲಾಭದ ಸಾಧ್ಯತೆಯಿದೆ, ವಿಶೇಷವಾಗಿ ನೀವು ಕಬ್ಬಿಣದ ವ್ಯಾಪಾರಿಯಾಗಿದ್ದರೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ನಿಮಗೆ ಸರ್ವಿಕಲ್ ಸ್ಪಾಂಡಿಲೈಟಿಸ್ ಸಮಸ್ಯೆ ಇದ್ದರೆ, ಜಾಗರೂಕರಾಗಿರಿ.

ಅದೃಷ್ಟದ ಬಣ್ಣ: ನೀಲಿ

ಅದೃಷ್ಟದ ಸಂಖ್ಯೆ: 10

ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ

 ಧನು ರಾಶಿ

ಧನು ರಾಶಿ

ವ್ಯಾಪಾರಸ್ಥರು ಇಂದು ದೊಡ್ಡ ವ್ಯವಹಾರವನ್ನು ಮಾಡಲಿದ್ದರೆ, ನಿಮ್ಮ ಮಾತಿನ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಉದ್ಯೋಗಸ್ಥರು ತಮ್ಮ ಕೆಲಸ ಉತ್ತಮವಾಗಿ ಮಾಡಲು ಪ್ರಯತ್ನಿಸಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗುವುದಿಲ್ಲ. ಹಣದ ವಿಷಯದಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ. ನೀವು ಆಸ್ತಮಾದ ಸಮಸ್ಯೆ ಹೊಂದಿದ್ದರೆ ಎಚ್ಚರವಹಿಸಿ.

ಅದೃಷ್ಟದ ಬಣ್ಣ: ಹಳದಿ

ಅದೃಷ್ಟದ ಸಂಖ್ಯೆ: 29

ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ

ಮಕರ ರಾಶಿ

ಮಕರ ರಾಶಿ

ಇಂದು ನೀವು ತುಂಬಾ ಧನಾತ್ಮಕವಾಗಿರುತ್ತೀರಿ. ಮಾನಸಿಕ ನೆಮ್ಮದಿಯನ್ನು ಅನುಭವಿಸುವಿರಿ. ವ್ಯಾಪಾರಸ್ಥರು ತರಾತುರಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು, ಉದ್ಯೋಗಸ್ಥರಿಗೆ ಇಂದು ಹೊಸ ಸವಾಲು ಎದುರಾಗಬಹುದು. ಕೆಲವು ಅಸೂಯೆ ಪಟ್ಟ ಸಹೋದ್ಯೋಗಿಗಳು ನಿಮ್ಮ ಇಮೇಜ್ ಅನ್ನು ಹಾಳುಮಾಡಲು ಪ್ರಯತ್ನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಮನೆಯ ವಾತಾವರಣ ಚೆನ್ನಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ.

ಅದೃಷ್ಟದ ಬಣ್ಣ: ಕಿತ್ತಳೆ

ಅದೃಷ್ಟದ ಸಂಖ್ಯೆ: 22

ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 1:30 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ನೀವು ಕೆಲಸ ಮಾಡಿದರೆ, ಕಚೇರಿಯಲ್ಲಿ ನಿಮ್ಮ ಜವಾಬ್ದಾರಿಗಳ ಹೊರೆ ಹೆಚ್ಚಾಗಬಹುದು. ಉದ್ಯಮಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯಬಹುದು. ಕೌಟುಂಬಿಕ ವಿಷಯ ನೋಡುವುದಾದರೆ ಅನಗತ್ಯ ಭಿನ್ನಾಭಿಪ್ರಾಯಗಳು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸಬಹುದು. ಹಣದ ವಿಷಯದಲ್ಲಿ ದಿನವು ಉತ್ತಮವಾಗಿಲ್ಲ. ಅನಗತ್ಯ ವೆಚ್ಚಗಳಿಂದಾಗಿ ನಿಮ್ಮ ಬಜೆಟ್ ಅಸಮತೋಲನವಾಗಬಹುದು. ಆರೋಗ್ಯವಾಗಿರಲು, ನೀವು ಪ್ರತಿದಿನ ವ್ಯಾಯಾಮ ಮಾಡಬೇಕಾಗುತ್ತದೆ.

ಅದೃಷ್ಟದ ಬಣ್ಣ: ನೇರಳೆ

ಅದೃಷ್ಟದ ಸಂಖ್ಯೆ: 7

ಅದೃಷ್ಟದ ಸಮಯ: ಸಂಜೆ 5:25 ರಿಂದ ರಾತ್ರಿ 9 ರವರೆಗೆ

 ಮೀನ ರಾಶಿ

ಮೀನ ರಾಶಿ

ದಿನದ ಆರಂಭವು ಉತ್ತಮವಾಗಿರುವುದಿಲ್ಲ. ಅನಗತ್ಯವಾಗಿ ಚಿಂತೆ ಮಾಡುವುದು ಬಿಡಿ. ಕಚೇರಿಯಲ್ಲಿ ಬಾಕಿ ಉಳಿದಿರುವ ಕೆಲಸಗಳ ಪಟ್ಟಿ ಹೆಚ್ಚಾಗುವುದರಿಂದ ನೀವು ಮೇಲಧಿಕಾರಿಯ ಕೋಪವನ್ನು ಎದುರಿಸಬೇಕಾಗಬಹುದು. ಚಿಲ್ಲರೆ ವ್ಯಾಪಾರಸ್ಥರಿಗೆ ಲಾಭವಾಗುತ್ತಿದೆ. ಇಂದು ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಮನೆಯ ಸದಸ್ಯರ ಬೆಂಬಲ ಸಿಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಮಾನಸಿಕ ಒತ್ತಡ ಹೆಚ್ಚಬಹುದು.

ಅದೃಷ್ಟದ ಬಣ್ಣ: ಬಿಳಿ

ಅದೃಷ್ಟದ ಸಂಖ್ಯೆ: 20

ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 7 ರವರೆಗೆ

English summary

Dina Bhavishya -26 December 2022 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 26 December 2022 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Monday, December 26, 2022, 3:30 [IST]
X
Desktop Bottom Promotion