Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
ಭಾನುವಾರದ ದಿನ ಭವಿಷ್ಯ: 26 ಏಪ್ರಿಲ್ 2020
ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ ಜೊತೆಗೆ ಒಂದಿಷ್ಟು ಖುಷಿಯನ್ನು ನೀಡುವುದೇ ಎಂದು ತಿಳಿದುಕೊಳ್ಳಲು ಈ ಮುಂದೆ ವಿವರಿಸಲಾದ ರಾಶಿ ಭವಿಷ್ಯವನ್ನು ಅರಿಯಿರಿ...

ಸಂವತ್ಸರ: ಶ್ರೀ ಶಾರ್ವರಿ
ಆಯನ: ಉತ್ತರಾಯನ
ಋತು: ಗ್ರೀಷ್ಮ
ಮಾಸ: ಚೈತ್ರ
ಪಕ್ಷ: ಶುಕ್ಲ
ತಿಥಿ: ತೃತೀಯ
ನಕ್ಷತ್ರ: ರೋಹಿಣಿ
ರಾಹುಕಾಲ: ಸಂಜೆ 5.15 ರಿಂದ 6.54 ರವರೆಗೆ
ಗುಳಿಕಕಾಲ: ಸಂಜೆ 3.36 ರಿಂದ 5.15 ರವರೆಗೆ
ಯಮಗಂಡಕಾಲ: ಮಧ್ಯಾಹ್ನ 12.19 ರಿಂದ 1.58 ರವರೆಗೆ
ದುರ್ಮುಹೂರ್ತ: ಸಂಜೆ 5.08 ರಿಂದ 6.01 ರವರೆಗೆ
ಸೂರ್ಯೋದಯ: ಬೆಳಿಗ್ಗೆ 5.45
ಸೂರ್ಯಾಸ್ತ: ಸಂಜೆ 6.54

ಮೇಷ ರಾಶಿ
ಇಂದು ವೈವಾಹಿಕ ಜೀವನದಲ್ಲಿ ವಿವಾದಗಳು ಉದ್ಭವಿಸಬಹುದು. ನಿಮ್ಮ ಸಂಗಾತಿಯೊಂದಿಗಿನ ವ್ಯತ್ಯಾಸಗಳು ಗಾಢವಾಗಬಹುದು. ಕೆಲಸದಲ್ಲಿ ದಿನವು ಉತ್ತಮವಾಗಿದೆ, ಆದರೆ ತರ್ಕಬದ್ಧವಲ್ಲದ ವಿಷಯಗಳಿಂದ ದೂರವಿರುವುದು ಉತ್ತಮ. ಕಚೇರಿಯಲ್ಲಿನ ಬುದ್ಧಿವಂತ ಸಹೋದ್ಯೋಗಿಗಳ ಬಗ್ಗೆ ಜಾಗರೂಕರಾಗಿರಿ ಏಕೆಂದರೆ ಅವರು ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು. ಇಂದು ಉದ್ಯಮಿಗಳಿಗೆ ಭಾರಿ ಲಾಭ ದೊರೆಯುವ ಸಾಧ್ಯತೆಯಿದೆ. ಆದರೂ, ವೆಚ್ಚಗಳು ಹೆಚ್ಚಾಗಬಹುದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ದಿನವು ಶುಭವಾಗಿದೆ. ಇಂದು ಅಧ್ಯಯನಗಳಿಗೆ ಸಂಬಂಧಿಸಿದ ಯಾವುದೇ ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುವ ಮೂಲಕ ನೀವು ಹೆಚ್ಚಿನ ವಿಶ್ವಾಸವನ್ನು ಪಡೆಯುತ್ತೀರಿ. ಆರೋಗ್ಯದ ವಿಚಾರದಲ್ಲಿ ಕಾಲೋಚಿತ ಕಾಯಿಲೆಯಿಂದ ನೀವು ತೊಂದರೆಗೊಳಗಾಗಬಹುದು.
ಅದೃಷ್ಟ ಬಣ್ಣ: ಕಿತ್ತಳೆ
ಅದೃಷ್ಟ ಸಂಖ್ಯೆ: 15
ಅದೃಷ್ಟ ಸಮಯ: ಸಂಜೆ 5:00 ರಿಂದ 9:00 ರವರೆಗೆ

ವೃಷಭ ರಾಶಿ
ದಿನವು ನಿಮಗೆ ವಿಶ್ರಾಂತಿ ನೀಡುತ್ತದೆ. ನಿಮ್ಮ ಮನಸ್ಸು ಶಾಂತ ಮತ್ತು ವಿನಮ್ರವಾಗಿರುತ್ತದೆ. ಇದು ಮಾತ್ರವಲ್ ಇಂದು ಹೊಸದನ್ನು ಮಾಡಲು ನಿಮಗೆ ಸ್ಫೂರ್ತಿ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ನಿಮ್ಮ ಅಹಂ ಹೋಗಲಿ ಮತ್ತು ನಿಮ್ಮ ಸಂಗಾತಿಯ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದನ್ನು ತಪ್ಪಿಸಿ. ರೋಮ್ಯಾಂಟಿಕ್ ಜೀವನವು ಹೊಂದಿಕೊಳ್ಳುತ್ತದೆ. ನಿಮ್ಮಿಬ್ಬರ ನಡುವಿನ ಸಂಬಂಧವು ಬಲವಾಗಿರುತ್ತದೆ ಮತ್ತು ನೀವಿಬ್ಬರೂ ಒಬ್ಬರಿಗೊಬ್ಬರು ಎಷ್ಟು ಪರಿಪೂರ್ಣರು ಎಂದು ನೀವು ಭಾವಿಸುವಿರಿ. ಆರ್ಥಿಕ ರಂಗದಲ್ಲೂ ನೀವು ಯಶಸ್ವಿಯಾಗುತ್ತೀರಿ. ಆದಾಯದ ಬೆಳವಣಿಗೆ ಸಾಧ್ಯ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯವಿಲ್ಲ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 12
ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 3:15 ರವರೆಗೆ

ಮಿಥುನ ರಾಶಿ
ದಿನವು ನಿಮಗೆ ಕಷ್ಟಕರವಾಗಿರುತ್ತದೆ. ಹಣಕಾಸಿನ ನಷ್ಟ, ದೈಹಿಕ ತೊಂದರೆಗಳು ಇತ್ಯಾದಿಗಳಿಂದ ನೀವು ತೊಂದರೆಗೊಳಗಾಗುತ್ತೀರಿ. ಇದು ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರಬಹುದು ಎಂದು ಖರ್ಚು ಮಾಡುವುದಕ್ಕೆ ಹಿಂದೇಟು ಹಾಕಬೇಡಿ. ವೈವಾಹಿಕ ಜೀವನದಲ್ಲಿ ವಿಷಯಗಳು ನಿಮ್ಮ ಪರವಾಗಿಯೇ ಸಾಗುತ್ತಿವೆ. ಕೆಲವು ಸಮಯದಿಂದ, ನೀವಿಬ್ಬರೂ ಸಾಕಷ್ಟು ಏರಿಳಿತಗಳನ್ನು ನೋಡಿದ್ದೀರಿ, ಆದರೆ ನಿಮ್ಮ ಸಂಬಂಧವನ್ನು ಸುಧಾರಿಸುವ ನಿಮ್ಮ ಪ್ರಯತ್ನಗಳು ನಿಧಾನವಾಗಿ ಫಲ ನೀಡುತ್ತಿವೆ. ಕಚೇರಿಯಲ್ಲಿ ಪರಿಸರ ಇಂದು ಉತ್ತಮವಾಗಿಲ್ಲದಿರಬಹುದು. ನಿಮ್ಮ ಆರೋಗ್ಯದಲ್ಲಿ ನಿರ್ಲಕ್ಷ್ಯ ವಹಿಸಬೇಡಿ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 21
ಅದೃಷ್ಟ ಸಮಯ: ಮಧ್ಯಾಹ್ನ 1:05 ರಿಂದ ರಾತ್ರಿ 8:00 ರವರೆಗೆ

ಕರ್ಕ ರಾಶಿ
ಇಂದು ನಿಮಗೆ ಬಿಡುವಿಲ್ಲದ ದಿನವಾಗಿರುತ್ತದೆ, ಆದರೆ ನಿಮ್ಮ ಕುಟುಂಬಕ್ಕೂ ನೀವು ಸ್ವಲ್ಪ ಸಮಯವನ್ನು ನೀಡಬೇಕು. ಇದು ಅವರಿಗೆ ಸಂತೋಷವನ್ನು ನೀಡುವುದಲ್ಲದೆ ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಣಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ. ದಿನವು ನಿಮ್ಮ ಸಂಗಾತಿಯೊಂದಿಗೆ ಬಹಳ ಮನರಂಜನೀಯವಾಗಿರುತ್ತದೆ. ದಂಪತಿಗಳು ಸಹ ಸ್ವಲ್ಪ ಸಮಯವನ್ನು ಶಾಂತಿಯುತವಾಗಿ ಕಳೆಯಲು ಸಾಧ್ಯವಾಗುತ್ತದೆ. ಇಂದು ನೀವು ಸಕಾರಾತ್ಮಕ ಶಕ್ತಿಯಿಂದ ಸುತ್ತುವರೆದಿರುವಿರಿ. ನಿಮ್ಮ ಉದ್ದೇಶಗಳು ಮತ್ತು ಆತ್ಮವಿಶ್ವಾಸ ಎರಡೂ ಉನ್ನತ ಮಟ್ಟದಲ್ಲಿರುತ್ತದೆ, ಅದು ನಿಮಗೆ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ. ಇಂದು ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಭವಿಷ್ಯದಲ್ಲಿ ನಿಮಗೆ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ಹಣದ ವಿಷಯದಲ್ಲಿ ಜಾಗರೂಕರಾಗಿರಿ. ಉತ್ತಮ ಆರೋಗ್ಯದಿಂದಾಗಿ ನೀವು ತುಂಬಾ ಶಕ್ತಿಯುತವಾಗಿರುತ್ತೀರಿ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 31
ಅದೃಷ್ಟ ಸಮಯ: ಸಂಜೆ 5:00 ರಿಂದ 9:00 ರವರೆಗೆ

ಸಿಂಹ ರಾಶಿ
ಪ್ರಣಯ ಜೀವನದಲ್ಲಿ ದಿನವು ಬಹಳ ಮುಖ್ಯವಾಗಲಿದೆ. ನೀವು ಮತ್ತು ಸಂಗಾತಿ ಎಲ್ಲಾ ಹಳೆಯ ಕುಂದುಕೊರತೆಗಳನ್ನು ಮರೆತು ಹೊಸ ಆರಂಭವನ್ನು ಪ್ರಾರಂಭಿಸುತ್ತೀರಿ. ಕುಟುಂಬದಲ್ಲಿ ಸಂತೋಷ ಇರುತ್ತದೆ ಮತ್ತು ಅವರೊಂದಿಗಿನ ನಿಮ್ಮ ಸಂಬಂಧವೂ ಆಹ್ಲಾದಕರವಾಗಿರುತ್ತದೆ. ಜೀವನ ಸಂಗಾತಿಯೊಂದಿಗೆ ಪರಸ್ಪರ ಹೊಂದಾಣಿಕೆ ಹೆಚ್ಚುವುದರಿಂದ ದಿನ ಇನ್ನಷ್ಟು ಸಂತೋಷವಾಗಿರುತ್ತದೆ. ಸಮಯವು ಪ್ರಯಾಣಕ್ಕೆ ಅನುಕೂಲಕರವಾಗಿಲ್ಲ. ನೀವು ಪ್ರಯಾಣದಲ್ಲಿ ಅನಗತ್ಯವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಇತರರ ಕೆಲಸದ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರುವುದು ಮತ್ತು ಅನಗತ್ಯವಾಗಿ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡದಿರುವುದು ಒಳಿತು. ಆರೋಗ್ಯದ ಬಗ್ಗೆ ಗಮನಹರಿಸಿ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 26
ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಸಂಜೆ 6:15 ರವರೆಗೆ

ಕನ್ಯಾ ರಾಶಿ
ಇಂದು ನೀವು ವಿನೋದದ ಮನಸ್ಥಿತಿಯಲ್ಲಿರುತ್ತೀರಿ. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಮತ್ತು ಬಹಳ ಸಮಯದ ನಂತರ ನಿಮ್ಮ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ಪ್ರಣಯ ಜೀವನದಲ್ಲಿ ದಿನವು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಬಂಧವು ಸದೃಢವಾಗಿರುತ್ತದೆ ಮತ್ತು ಪ್ರೀತಿ ಕೂಡ ಹೆಚ್ಚಾಗುತ್ತದೆ. ವಿವಾಹಿತ ದಂಪತಿಗಳ ನಡುವಿನ ಪ್ರೀತಿಯೂ ಗಾಢವಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ದಿನ ಉತ್ತಮವಾಗಿದೆ. ಹಣಕಾಸಿನ ಲಾಭದ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆರೋಗ್ಯ ವಿಷಯಗಳು ಇಂದು ಉತ್ತಮವಾಗಿರುತ್ತವೆ.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 37
ಅದೃಷ್ಟ ಸಮಯ: ಬೆಳಿಗ್ಗೆ 6:25 ರಿಂದ 10:00 ರವರೆಗೆ

ತುಲಾ ರಾಶಿ
ಇಂದು ನೀವು ನಕಾರಾತ್ಮಕ ಭಾವನೆಗಳಿಂದ ಸುತ್ತುವರಿಯುತ್ತೀರಿ. ಹಣಕಾಸಿನ ತೊಂದರೆ, ಸಾಲಗಳ ಹೊರೆಯಿಂದ ನಿಮ್ಮ ಮನಸ್ಸು ತೊಂದರೆಗೀಡಾಗುತ್ತದೆ. ಸಂಗಾತಿಯೊಂದಿಗೆ ಕೆಲವು ವ್ಯತ್ಯಾಸಗಳು ಇರಬಹುದು. ಮಾನಸಿಕ ಒತ್ತಡದಿಂದಾಗಿ ನಿಮ್ಮ ಕೆಲಸದಲ್ಲಿ ಇಂದು ಗಮನಹರಿಸುವುದಿಲ್ಲ. ನಿಮ್ಮ ಉದಾರ ಸ್ವಭಾವದ ಲಾಭ ಪಡೆಯಲು ಜನರು ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ. ಅಂತಹ ಜನರನ್ನು ತಪ್ಪಿಸುವುದು ಉತ್ತಮ. ನೀವು ವಿವಾದದಲ್ಲಿ ಸಿಲುಕಿಕೊಂಡಾಗ ತಪ್ಪು ಪದಗಳನ್ನು ಬಳಸಬೇಡಿ, ಇಲ್ಲವಾದಲ್ಲಿ ನೀವು ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಳ್ಳಬಹುದು. ನಿರುದ್ಯೋಗಿಗಳಿಗೆ ಇಂದು ಕೆಲಸ ಪಡೆಯುವ ಶುಭ ಸೂಚನೆ ಇದೆ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 3
ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 8:15 ರವರೆಗೆ

ವೃಶ್ಚಿಕ ರಾಶಿ
ಪ್ರಣಯಕ್ಕೆ ದಿನ ಒಳ್ಳೆಯದು. ನಿಮ್ಮ ಜೀವನ ಸಂಗಾತಿಯಿಂದ ನೀವು ಸಂಪೂರ್ಣ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಪ್ರೇಮಿಗಳಿಗೆ ಮೋಜಿನ ದಿನವಾಗಿದೆ. ಪೋಷಕರ ಸಹಾಯದಿಂದ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಇತ್ಯರ್ಥಪಡಿಸಲಾಗುತ್ತದೆ. ಹಣದ ವಿಷಯದಲ್ಲಿ ದಿನ ಸಾಮಾನ್ಯವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಕೆಲವು ಹೊಸ ಯೋಜನೆಗಳನ್ನು ಮಾಡಬಹುದು. ನಿಮ್ಮ ಹೊಸ ಕಾರ್ಯದಿಂದಾಗಿ ಖರ್ಚು ದೊಡ್ಡದಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಸಕಾರಾತ್ಮಕ ಸಂಗತಿಗಳು ಸಂಭವಿಸಬಹುದು. ನೀವು ಕಷ್ಟಪಟ್ಟು ಕೆಲಸ ಮಾಡಿ ವೇಗವಾಗಿ ಯಶಸ್ಸನ್ನು ಪಡೆಯುತ್ತೀರಿ. ಅಲ್ಲದೆ ಇಂದು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಆರೋಗ್ಯದ ವಿಚಾರದಲ್ಲಿ ದಿನವು ಅನುಕೂಲಕರವಾಗಿರುತ್ತದೆ. ಎಲ್ಲಾ ಮಾನಸಿಕ ಚಿಂತೆಗಳಿಂದ ದೂರವಾಗಿ ನೀವು ಸಾಕಷ್ಟು ಸಂತೋಷವಾಗಿರುತ್ತೀರಿ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 31
ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ 7:00 ರವರೆಗೆ

ಧನು ರಾಶಿ
ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮ ದಿನವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಇಂದು ನಿಮ್ಮ ಸ್ವಂತ ಸಮಸ್ಯೆಗಳಲ್ಲಿ ಹೆಚ್ಚು ನಿರತರಾಗಿರುತ್ತೀರಿ ಮತ್ತು ಕುಟುಂಬದ ಜವಾಬ್ದಾರಿಗಳು ಹೆಚ್ಚಿರುವುದರಿಂದ ಒತ್ತಡ ಅನುಭವಿಸುವಿರಿ. ಕುಟುಂಬ ಸದಸ್ಯರ ಬೆಂಬಲದ ಕೊರತೆಯಿಂದಾಗಿ ನೀವು ಸ್ವಲ್ಪ ನಿರಾಶೆ ಅನುಭವಿಸಬಹುದು. ವೈವಾಹಿಕ ಜೀವನ ಸಾಮಾನ್ಯವಾಗಿರಲಿದೆ. ಇಂದು ನೀವು ಸ್ನೇಹಿತರೊಂದಿಗೆ ವಿವಾದಕ್ಕೆ ಸಿಲುಕಬಹುದು. ಕೋಪದಲ್ಲಿ ಏನನ್ನೂ ಮಾಡದಿರುವುದು ಉತ್ತಮ ಏಕೆಂದರೆ ಅದು ನಿಮ್ಮನ್ನು ಕಠಿಣ ಪರಿಸ್ಥಿತಿಯಲ್ಲಿ ತಳ್ಳಬಹುದು. ಇಂದು ಕೆಲಸದಲ್ಲಿ ನೀವು ಗಮನಹರಿಸುವುದಿಲ್ಲ. ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಾಯೋಗಿಕವಾಗಿ ನಿರ್ವಹಿಸಲು ಪ್ರಯತ್ನಿಸಿ. ಅಲ್ಲದೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ.
ಅದೃಷ್ಟ ಬಣ್ಣ: ತಿಳಿನೀಲಿ
ಅದೃಷ್ಟ ಸಂಖ್ಯೆ: 9
ಅದೃಷ್ಟ ಸಮಯ: ಸಂಜೆ 4:00 ರಿಂದ 9:30 ರವರೆಗೆ

ಮಕರ ರಾಶಿ
ಇಂದು ನಿಮ್ಮ ಪದಗಳನ್ನು ಬಹಳ ಚಿಂತನಶೀಲವಾಗಿ ಬಳಸಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳ ಬಳಿ ಸರಿಯಾಗಿ ವರ್ತಿಸಿ. ಅಲ್ಲದೆ, ನಿಮ್ಮ ಎಲ್ಲಾ ಕೆಲಸಗಳನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸಲು ಪ್ರಯತ್ನಿಸಿ. ಉದ್ಯಮಿಗಳಿಗೆ ದಿನವು ಹೆಚ್ಚು ಪ್ರಯೋಜನಕಾರಿಯಲ್ಲ. ಇಂದು ನೀವು ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಪೋಷಕರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ ಮತ್ತು ಅವರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳಲು ನಿಮಗೆ ಅವಕಾಶ ಸಿಗಬಹುದು. ಸಂಗಾತಿಯ ಕೆಟ್ಟ ಮನಸ್ಥಿತಿಯ ಕಾರಣ ನೀವು ಅವರೊಂದಿಗೆ ವಾಗ್ವಾದಕ್ಕೆ ಇಳಿಯಬಹುದು. ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 10
ಅದೃಷ್ಟ ಸಮಯ: ಬೆಳಿಗ್ಗೆ 7:00 ರಿಂದ ಸಂಜೆ 6:20 ರವರೆಗೆ

ಕುಂಭ ರಾಶಿ
ದಂಪತಿಗಳಿಗೆ ದಿನ ಸ್ವಲ್ಪ ಬೇಸರ ತರುತ್ತದೆ. ನೀವಿಬ್ಬರೂ ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ ಮತ್ತು ಇಬ್ಬರೂ ಸಮಯ ಕಳೆಯಲು ಸಾಕಷ್ಟು ಸಮಯ ಸಿಗದಿರಬಹುದು. ಪ್ರೀತಿಯ ವಿಷಯಗಳಲ್ಲಿ ದಿನವು ಸ್ವಲ್ಪ ವಿವಾದಾಸ್ಪದವಾಗಿರುತ್ತದೆ. ನಿಮ್ಮ ಸಂಗಾತಿಯ ಮೇಲಿನ ನಂಬಿಕೆ ಕಡಿಮೆಯಾಗುವುದರಿಂದ ಇಬ್ಬರ ನಡುವಿನ ಸಂಬಂಧದಲ್ಲಿ ಕಹಿ ಉಂಟಾಗುತ್ತದೆ. ನೀವು ಗೊಂದಲದ ಸ್ಥಿತಿಯಲ್ಲಿದ್ದರೆ, ವಿಷಯವು ನಿಮ್ಮ ಕೈಮೀರಿಹೋಗುವ ಮೊದಲು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸಿ. ಗ್ರಹಗಳ ಶುಭ ಸ್ಥಾನದಿಂದಾಗಿ ಆರ್ಥಿಕ ಲಾಭಗಳು ಇಂದು ಸಾಧ್ಯ. ಇಂದು ನಿಮಗೆ ಆಯಾಸವಾಗಬಹುದು.
ಅದೃಷ್ಟ ಬಣ್ಣ: ಕಂದು
ಅದೃಷ್ಟ ಸಂಖ್ಯೆ: 23
ಅದೃಷ್ಟ ಸಮಯ: ಬೆಳಿಗ್ಗೆ 11:30 ರಿಂದ ಸಂಜೆ 6:30 ರವರೆಗೆ

ಮೀನ ರಾಶಿ
ಆತುರ ಮತ್ತು ನಿರ್ಲಕ್ಷ್ಯದಿಂದ ಇಂದು ನಿಮಗೆ ದೊಡ್ಡ ನಷ್ಟವಾಗಬಹುದು. ಜಾಗರೂಕರಾಗಿರಿ ಮತ್ತು ನಿಮ್ಮ ಪ್ರಮುಖ ನಿರ್ಧಾರಗಳನ್ನು ಚಿಂತನಶೀಲವಾಗಿ ತೆಗೆದುಕೊಳ್ಳಿ. ಆರ್ಥಿಕವಾಗಿ ದಿನವು ಸಾಮಾನ್ಯವಾಗಿರುತ್ತದೆ. ಉಳಿತಾಯದ ಬಗ್ಗೆ ನೀವು ಹೆಚ್ಚು ಗಮನ ಹರಿಸಿ, ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ. ಕುಟುಂಬದಲ್ಲಿ ಬಹಳಷ್ಟು ವಿವಾದಗಳು ಉಂಟಾಗುತ್ತವೆ, ವಿಶೇಷವಾಗಿ ಕೆಲವು ವಿಷಯಗಳಲ್ಲಿ ಸಹೋದರರೊಂದಿಗೆ. ಇಂದು ನಿಮ್ಮ ಸಂಗಾತಿಯಿಂದ ಅಪೇಕ್ಷಿತ ಸಹಕಾರವನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ ಅದು ನಿಮ್ಮನ್ನು ನಿರಾಶೆಗೊಳಿಸುತ್ತದೆ. ಹೆಚ್ಚುತ್ತಿರುವ ಕೆಲಸದ ಹೊರೆಯಿಂದಾಗಿ ನಿಮ್ಮ ಒತ್ತಡವೂ ಹೆಚ್ಚಾಗುತ್ತದೆ. ನಿಮ್ಮ ಮನಸ್ಸು ಚಂಚಲವಾಗಿರುತ್ತದೆ ಮತ್ತು ಒಂಟಿತನವನ್ನು ಅನುಭವಿಸುವಿರಿ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 32
ಅದೃಷ್ಟ ಸಮಯ: ಮಧ್ಯಾಹ್ನ 12:30 ರಿಂದ 6:00 ರವರೆಗೆ



Click it and Unblock the Notifications











